ಸ್ನೇಹಿತರೇ...
ಗ್ರೂಪಿನಲ್ಲಿ ನಾವು ಪ್ರಸ್ತಾಪಿಸಿದಂತೆ ಇಂದು, (ಬುಧವಾರ, 17-07-2019) ನಾವು ಯುಸಿಎಂ ಬಿಕಾಂ 1997 ಗ್ರೂಪಿನ ವತಿಯಿಂದ ವಿ.ವಿ.ಕಾಲೇಜು ಪ್ರಾಂಶುಪಾಲರ ಭೇಟಿಗೆ ತೆರಳಿದೆವು. ನಿಗದಿತ 10.30ರ ಆಸುಪಾಸಿನಿಂದ 15 ನಿಮಿಷ ವಿಳಂಬವಾಗಿ ಎಲ್ಲರೂ ಕಾಲೇಜು ಆವರಣದಲ್ಲಿದ್ದೆವು. ಇಷ್ಟು ದಿನ ನೆನಪಿನ ಅಂಗಳದ ಮೆಲುಕು ಹಾಕುತ್ತಿದ್ದ ನಾವು ಇಂದು ವಾಸ್ತವವಾಗಿ 19 ವರ್ಷಗಳ ಬಳಿಕ ಕಲಿತ ಕಾಲೇಜು ಆವರಣದಲ್ಲಿದ್ದೆವು. ಅಕ್ಷರಶಹ ಆವರಣದೊಳಗೆ ಸುತ್ತಾಡಿದೆವು. ನಮ್ಮ ಕಾಮರ್ಸ್ ಬ್ಲಾಕ್ ನಲ್ಲಿ ಅಡ್ಡಾಡಿದೆವು. ಪ್ರಿನ್ಸಿಪಾಲ್ ಕೊಠಡಿಯಲ್ಲಿ ಕುಳಿತು ಚರ್ಚಿಸಿದೆವು. ಕಾಮರ್ಸ್ ಸ್ಟಾಫ್ ರೂಮಿಗೆ ತೆರಳಿ ಮಾತನಾಡಿದೆವು.
ನಾನು ಕೃಷ್ಣಮೋಹನ, ಸುಶೀಲ್, ನಿತಿನ್, ಪುಷ್ಪಲತಾ, ರೇಶ್ಮಾ, ಧನವಂತಿ ಇಷ್ಟು ಮಂದಿ ಇವತ್ತು ಕಾಲೇಜಿನಲ್ಲಿ ಭೇಟಿಯಾದೆವು. ಕಾಲೇಜಿಗೆ ನಮ್ಮಿಂದ ಯಾವ ಥರ ಸಹಾಯ ಮಾಡಬಹುದು ಎಂಬ ಕುರಿತು ಪ್ರಾಂಶುಪಾಲರಾದ ಡಾ.ಉದಯಕುಮಾರ್ ಅವರೊಂದಿಗೆ ಮಾತನಾಡಿದೆವು. ಮಾತುಕತೆಯ ಬಳಿಕ ಕೆಲವು ನಿರ್ಧಾರಗಳಿಗೆ ದಾರಿ ಕಂಡಿದ್ದು, ನಿಮ್ಮೆಲ್ಲರ ಜೊತೆ ಚರ್ಚಿಸಿ ನಾವು ಅದನ್ನು ಅಂತಿಮಗೊಳಿಸಲು ಸಾಧ್ಯವಿದೆ. ಪ್ರಾಂಶುಪಾಲರು ನಮ್ಮನ್ನು ಆತ್ಮೀಯವಾಗಿ ಮಾತನಾಡಿ ಬನ್ಸ್, ಕಾಫಿ ಕೊಟ್ಟು ಸತ್ಕರಿಸಿದರು. ಕಾಮರ್ಸ್ ಸ್ಟಾಫ್ ರೂಂ ಈಗ ಬೇರೆ ಕಟ್ಟಡಕ್ಕೆ ಶಿಫ್ಟ್ ಆಗಿದ್ದು, ಅಲ್ಲಿ ನಮಗೆ ಮೀನಾ ಮೇಡಂ (ಎಚ್ ಒಡಿ), ಯತೀಶ್ ಕುಮಾರ್, ಅನಸೂಯಾ ರೈ, ಸುಧಾ ಮೇಡಂ, ಸುನಂದಾ ಮೇಡಂ ಸಿಕ್ಕಿದರು (ಹೆಚ್ಚಿನ ಪರಿಚಯಕ್ಕೆ ನಾವು ಪೋಸ್ಟ್ ಮಾಡಿದ ಫೋಟೋಗಳನ್ನು ನೋಡಿ). ಬಹುತೇಕ ಎಲ್ಲರಿಗೂ ನಮ್ಮೆಲ್ಲರ ಮುಖ ಪರಿಚಯ ಇತ್ತು. ಕೆಲವರದ್ದು ಹೆಸರೂ ಸಹಾ ಗೊತ್ತಿತ್ತು ಎಂಬುದು ಸಂತಸದ ವಿಚಾರ.
ಪ್ರಾಂಶುಪಾಲರ ಅನುಮತಿ ಮೇರೆಗೆ ಕಾಲೇಜಿನ ಕಾರಿಡಾರುಗಳಲ್ಲಿ ಅಡ್ಡಾಡಿದೆವು. ಕ್ಲಾಸಿನಲ್ಲಿದ್ದ ಕನ್ನಡ ವಿಭಾಗದ ರತ್ನಾವತಿ ಮೇಡಂ, ಹಿಂದಿ ವಿಭಾಗದ ನಾಗರತ್ನಾ, ಸುಮಾ ರೋಡನ್ನವರ್ ಮಾತಿಗೆ ಸಿಕ್ಕಿದರು. ರತ್ನಾವತಿ ಮೇಡಂಗೆ ಬಹುತೇಕರ ಪರಿಚಯ ಇತ್ತು. ಹಿಂದಿ ಮೇಡಂ ಅವರಿಗೂ ಮುಖ ಪರಿಚಯ ಇತ್ತು. ಎಲ್ಲರೂ ತವರು ಮನೆಗೆ ಹೋದವರಂತೆ ಆತ್ಮೀಯವಾಗಿ ಮಾತನಾಡಿಸಿದರು. ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯನ್ನು ಉದಯಕುಮಾರ್ ಸರ್ ವಿವರಿಸಿದರು.
ಈಗ ಪ್ರತಿ ಕ್ಲಾಸ್ ರೂಂಗೆ ಸಿಸಿ ಟಿವಿ ಅಳವಡಿಸಲಾಗಿದ್ದು, ಎಲ್ಲವನ್ನೂ ಪ್ರಾಂಶುಪಾಲರ ಕೊಠಡಿಯಲ್ಲಿ ಕುಳಿತು ವೀಕ್ಷಿಸಲು ಅವಕಾಶವಿದೆ. ಹೊಸದಾಗಿ ಕಟ್ಟಡಗಳು ಮೇಲೆದ್ದಿವೆ. ಆದರೆ ಕಾಮರ್ಸ್ ಕ್ಲಾಸುಗಳು ಈಗಲೂ ಅಲ್ಲಿಯೇ ಇವೆ. ಸೋಮಾರಿ ಕಟ್ಟೆಯೂ ಇದೆ. ರವೀಂದ್ರ ಕಲಾ ಭವನ ನವೀಕರಣಗೊಂಡಿದೆ. ವಿದ್ಯಾರ್ಥಿಗಳಿಗೆ ಈಗ ಯೂನಿಫಾರಂ ಇದೆ. ಅಲ್ಲಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಕಾಲೇಜಿನ ಎದುರು ಸುಂದರ ಉದ್ಯಾನವನ ಇದೆ. ಅಲ್ಲಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇದೆ. ಕ್ಯಾಂಟೀನ್ ಈಗಿದೆ. ಇನ್ನೂ ಕೆಲವು ವ್ಯವಸ್ಥೆಗಳು ಆಗಬೇಕಿದೆ.
ಪ್ರಾಂಶುಪಾಲರು ನಮ್ಮೊಂದಿಗೆ ಚರ್ಚಿಸಿದ ಮುಖ್ಯಾಂಶಗಳು...
1) ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಕಾರ್ಯಾಚರಿಸುತ್ತಿದ್ದು, ನಾವೆಲ್ಲರೂ ಅದರ ಸದಸ್ಯರಾಗುವಂತೆ ವಿನಂತಿಸಿದ್ದಾರೆ. ನಾವು ಗೆಟ್ ಟುಗೆದರ್ ಮಾಡುವ ದಿವಸ ಸದಸ್ಯರಾಗಬಹುದು ಎಂದು ನಾವು ನಿರ್ಧರಿಸಿದ್ದೇವೆ. ಆಜೀವ ಸದಸ್ಯತ್ವ ಶುಲ್ಕ 1000 ರು.
2) ನಮ್ಮ ಗ್ರೂಪಿನ ಗೆಟ್ ಟುಗೆದರ್ ನ್ನು ಕಾಲೇಜಿನಲ್ಲಿ ಮಾಡಲು ಪ್ರಾಂಶುಪಾಲರು ಒಪ್ಪಿದ್ದು, ನಮ್ಮ ಲೆಕ್ಚರರ್ ಗಳು ಕೂಡಾ ಗೆಟ್ ಟುಗೆದರ್ ನಲ್ಲಿ ಭಾಗಹಿಸಲು ಒಪ್ಪಿದ್ದಾರೆ. ನಾವು ಸಾಧ್ಯವಾದರೆ ನಾವು ಕಲಿತ ಕ್ಲಾಸ್ ರೂಮಿನಲ್ಲೇ ಕುಳಿತು ನಮ್ಮ ಹಳೆ ವಿದ್ಯಾರ್ಥಿಗಳ ಸಮ್ಮಿಲನ ನಡೆಸಬಹುದು..
3) ಕಾಲೇಜಿಗೆ ಸಹಾಯ ಮಾಡುವುದಾದರೆ ಯಾವುದೇ ಪ್ರಾಜೆಕ್ಟ್ ಗೆ (ನಮ್ಮ ಬಜೆಟ್ ಗೆ ಪೂರಕವಾಗಿ) ಸಹಾಯ ನೀಡಬಹುದು. ಉದಾ ಒಂದು ತರಗತಿ ಕೊಠಡಿ ನಿರ್ಮಾಣ, ಅಥವಾ ವೇದಿಕೆ ನಿರ್ಮಾಣ, ಅಥವಾ ಯಾವುದಾದರೂ ಉಪಕರಣದ ಕೊಡುಗೆ... ಹೀಗೆ ನಮ್ಮ ಹಣಕಾಸು ಸಾಧ್ಯತೆಗೆ ಅನುಗುಣವಾಗಿ ನೆರವು ನೀಡುವುದು.
4) ಅಥವಾ ಬಡ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ (ಅಂತಹ ತುಂಬ ಮಂದಿ ಇದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ) ಸಹಾಯ ನೀಡಬಹುದು. ಅಂತಹ ವಿದ್ಯಾರ್ಥಿಗಳಿದ್ದರೆ ತಿಳಿಸಿ, ನಾವು ಗ್ರೂಪಿನ ಮೂಲಕ ಸಹಾಯ ಮಾಡುತ್ತೇವೆ ಎಂದು ನಾವು ತಿಳಿಸಿದ್ದೇವೆ.
5) ಸುಮಾರು 1 ಲಕ್ಷ ರು.ನಷ್ಟು ಫಿಕ್ಸೆಡ್ ಡೆಪಾಸಿಟ್ ಇರಿಸಿ ಅದರ ಬಡ್ಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಗದು ಬಹುಮಾನ ವಾರ್ಷಿಕೋತ್ಸವ ಸಂದರ್ಭ ನೀಡುವುದು.
6) ಬಿಸಿಯೂಟ ಯೋಜನೆಗೆ ನೆರವಾಗುವುದು.
7) ನಮಗೆ ಗುರುತು ಇರುವ ದಾನಿಗಳ ಮೂಲಕ ಕಾಲೇಜಿನ ಕಟ್ಟಡ ಇತ್ಯಾದಿ ನಿರ್ಮಾಣಕ್ಕೆ ಧನಸಹಾಯ ಕೊಡಿಸಲು ಪ್ರಯತ್ನಿಸುವುದು.
8) ಕಾಮರ್ಸ್ ಕ್ಲಬ್ ಮೂಲಕ ನಮ್ಮ ವೃತ್ತಿ ಅನುಭವವನ್ನು ಈಗಿನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವುದು.
9) ಹಳೆ ವಿದ್ಯಾರ್ಥಿಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು, ವಾರ್ಷಿಕ ಮಹಾಸಭೆಗೆ ಅಡೆಂಡ್ ಆಗುವುದು ಇತ್ಯಾದಿ....
🌱🌱🌱🌱🌱
ಕಾಲೇಜು ಭೇಟಿ ಬಳಿಕ ನಾವು ಆರು ಮಂದಿ ಈ ಕೆಳಗಿನ ಅಭಿಪ್ರಾಯ ಹೊಂದಿದ್ದೇವೆ.. ನೀವೆಲ್ಲ ನಿಮ್ಮ ಪ್ರತಿಕ್ರಿಯೆ ನೀಡಿ...
1) ಆದಷ್ಟು ಬೇಗ ಎಲ್ಲರಿಗೂ ಪುರುಸೊತ್ತು ಇರುವ (ಅಥವಾ ಬಹುತೇಕರಿಗೆ ಪುರುಸೊತ್ತು ಇರುವ) ದಿನ ನೋಡಿ ಕಾಲೇಜಿನಲ್ಲಿ ಗೆಟ್ ಟುಗೆದರ್ ಮಾಡುವುದು. ಅಲ್ಲಿ ಹೆಚ್ಚಿನ ಚರ್ಚೆಗಳನ್ನು ಮಾಡುವುದು...
2) ನಿತಿನ್ ನೇತೃತ್ವದಲ್ಲಿ ಒಂದು ಅಕೌಂಟ್ ಓಪನ್ ಮಾಡಿ ನಮ್ಮ ಕೈಲಾದ ಫಂಡ್ ರೈಸ್ ಮಾಡುವುದು. ಎಷ್ಟು ಮೊತ್ತ ಸಂಗ್ರಹವಾಗುತ್ತದೆ ಎಂದು ನೋಡಿ ಅದರ ಆಧಾರದಲ್ಲಿ ನಾವು ಯಾವ ರೀತಿ ಕಾಲೇಜಿಗೆ ನೆರವಾಗಬಹುದು ಎಂದು ನಿರ್ಧರಿಸುವುದು (ವಿಶೇಷಸೂಚನೆ-ಎಲ್ಲರೂ ಇಂದಿಷ್ಟೇ ದುಡ್ಡು ಕೊಡಬೇಕು ಅಥವಾ ದುಡ್ಡು ಕೊಡುವುದು ಕಡ್ಡಾಯ ಎಂಬ ನಿಯಮವಿಲ್ಲ). ನಮ್ಮ ಕೈಲಾದ ಮೊತ್ತವನ್ನು ಕೊಟ್ಟರೆ ನಮ್ಮ ಹೆಸರಿನಲ್ಲಿ ಕಾಲೇಜಿನಲ್ಲೊಂದು ಒಳ್ಳೆ ಕೆಲಸ ಮಾಡಬಹುದು ಅಥವಾ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಬಹುದು.
3) ನಮ್ಮ ಗೆಟ್ ಟುಗೆದರ್ ನ ದಿನ ನಾವೆಲ್ಲ ಹಳೆ ವಿದ್ಯಾರ್ಥಿಗಳ ಸಂಘದ ಅಧಿಕೃತ ಸದಸ್ಯರಾಗುವುದು.
--
ಇವಿಷ್ಟು ನಿರ್ಧಾರಗಳು..
🌿🌿🌿🌿🌿
ಸ್ನೇಹಿತರೆ ನಮ್ಮ ಗ್ರೂಪು ಕೇವಲ ಹತ್ತರಲ್ಲಿ ಹನ್ನೊಂದು ಆಗಬಾರದು. ನಮ್ಮ ಸಾಧನೆ ಬಾಯಿ ಮಾತಿಗೆ ಸೀಮಿತವಾಗಬಾರದು. ಈ ಮೇಲಿನ ಮೂರು ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರಲು ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ಎಲ್ಲರೂ ನಿಮ್ಮ ನಿಮ್ಮ ಸಲಹೆ ನೀಡಿ.... ಮತ್ತೆ ಮುಂದುವರಿಯುವ ಆಗದೇ..?
-ಮುಕ್ತವಾಗಿ ಅನಿಸಿಕೆ ಹಂಚಿಕೊಳ್ಳಿ.
🙏🙏🙏
-ಕೆಎಂ.


0 Comments