Ticker

5/recent/ticker-posts

Header Ads Widget

MANGALORE UNIVERSITY

ಧನಸಂಗ್ರಹಕ್ಕೆ ದೇಣಿಗೆ ನೀಡಲು ಮನವಿ....

ಸ್ನೇಹಿತರೇ,




ನಮ್ಮ ಯುಸಿಎಂ ಬಿಕಾಂ ಗ್ರೂಪಿನಲ್ಲಿ ನಾವು ಈಗಾಗಲೇ ಚರ್ಚಿಸಿದ ಹಾಗೆ ನಾವು ನಮ್ಮ ಈ ವಾಟ್ಸಪ್ ಗ್ರೂಪಿನ ವೇದಿಕೆ ಮೂಲಕ ನಾವು ಕಲಿತ ಕಾಲೇಜಿಗೆ ಅಥವಾ ಅಲ್ಲಿನ ಬಡ ವಿದ್ಯಾರ್ಥಿಗಳಿಗೆ ನಮ್ಮ ಕೈಲಾದ ಸಹಾಯ ಮಾಡುವವರಿದ್ದೇವೆ. ಜೊತೆಗೆ ನಮ್ಮ ಗೆಟ್ ಟುಗೆದರ್ ಮತ್ತು ಸಭೆಗಳನ್ನೂ ಇನ್ನು ಮುಂದೆ ನಡೆಸಲಿದ್ದೇವೆ. ಈ ಉದ್ದೇಶಗಳಿಗೆ ನಾವೊಂದು ಪುಟ್ಟದಾದ ಹಣಕಾಸು ನಿಧಿ ಸ್ಥಾಪಿಸಬೇಕಿದೆ. ನಾವೆಲ್ಲರೂ ಕೈಜೋಡಿಸಿ ಒಂದು ಅರ್ಹ ಮೊತ್ತ ಉಳಿತಾಯ ಮಾಡಿಟ್ಟರೆ ಅದರ ಮೂಲಕ ಬಹಳಷ್ಟು ಚಾರಿಟಿ ಕೆಲಸಗಳನ್ನು ಮಾಡಲು ನಮಗೆ ಸಾಧ್ಯವಾಗುತ್ತದೆ. ದಿನಾಂಕ 23ರಂದು ನಾವು ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ ಹಾಗೆ ಈ ಉದ್ದೇಶಕ್ಕೋಸ್ಕರ, ಈ ವ್ಯವಹಾರ ಪಾರದರ್ಶಕವಾಗಿರುವುದಕ್ಕೋಸ್ಕರ ಕೃಷ್ಣಮೋಹನ, ನಿತಿನ್ ಹಾಗೂ ಪುಷ್ಪಲತಾ ಮೂವರೂ ಅಡ್ಮಿನ್ ಗಳು ಖಾತೆದಾರರಾಗಿರುವ ಜಾಯಿಂಟ್ ಎಸ್ ಬಿ ಖಾತೆಯೊಂದನ್ನು ಪಂಜಾಬ್ ನ್ಯಾಶನಲ್ ಬ್ಯಾಂಕಿನ ಹಂಪನಕಟ್ಟೆ ಶಾಖೆಯಲ್ಲಿ ತೆರೆದಿದ್ದೇವೆ. ಇಲ್ಲಿ ನಮಗೆ ಡೆಬಿಟ್ ಕಾರ್ಡ್, ಎಸ್ ಎಂಎಸ್ ಬ್ಯಾಂಕಿಂಗ್, ಇಂಟರ್ ನೆಟ್ ಬ್ಯಾಂಕಿಂಗ್ ಹಾಗೂ ಚೆಕ್ ಪುಸ್ತಕ ಸೇವೆಯೂ ದೊರಕಿದೆ.

ನಾವೀಗ ನಿಮ್ಮಲ್ಲಿ ವಿನಂತಿಸುವುದೇನೆಂದರೆ ನಮ್ಮ ಚಾರಿಟಿ ಕೆಲಸಗಳಿಗೆ ಸಹಾಯ ಮಾಡಲು ಫಂಡ್ ರೈಸ್ ಮಾಡುತ್ತಿದ್ದೇವೆ. ಹಾಗಾಗಿ ನಿಮ್ಮ ಕೈಲಾದಷ್ಟು, ನಿಮಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟು (ಇಷ್ಟೇ ಕೊಡಿ, ಕೊಡಲೇಬೇಕು ಎಂಬ ಕಡ್ಡಾಯವಿಲ್ಲ) ಮೊತ್ತವನ್ನು ದಯವಿಟ್ಟು ನಾನು ನಿಮಗೆ ಕಳುಹಿಸಿದ ಮೆಸೇಜಿನಲ್ಲಿರುವ ಎಸ್ ಬಿ ಅಕೌಂಟಿಗೆ ಟ್ರಾನ್ಸ್ ಫರ್ ಮಾಡಿ ಎಂದು ಕೋರುತ್ತಿದ್ದೇನೆ. ನಾವು ಗ್ರೂಪಿನಲ್ಲಿರುವ ಸುಮಾರು 80 ಮಂದಿಯ ದೇಣಿಗೆಯಿಂದ ನಮಗೊಂದು ಉತ್ತಮ ಮೊತ್ತ ಸಂಗ್ರಹವಾದರೆ ಆ ದುಡ್ಡಿನಿಂದ ಸಾಕಷ್ಟು ಜನೋಪಯೋಗಿ ಕೆಲಸಗಳನ್ನು ಮಾಡಬಹುದು. ನಿಮಗೆ ಒಂದೇ ಬಾರಿಗೆ ದುಡ್ಡು ಹಾಕಲು ಕಷ್ಟವಾದರೆ ಈಗ ನಿಮಗೆ ಸಾಧ್ಯವಿರುವ ಮೊತ್ತ ಹಾಕಿ... ನಂತರ ಮುಂದೆ ನಿಮಗೆ ಅನುಕೂಲವಾದಾಗ ಹಾಕಿ.

ನೆನಪಿಡಿ, ನೀವು ದುಡ್ಡು ಕೊಡಲೇಬೇಕು. ಕಡ್ಡಾಯ, ಇಂತಿಷ್ಟೇ ಕೊಡಿ ಎಂಬ ಯಾವ ಶರತ್ತೂ ಇಲ್ಲ. ನಿಮಗೆ ಸಾಧ್ಯವಾದರೆ, ಅನುಕೂಲ ಇದ್ದರೆ, ಡೊನೇಟ್ ಮಾಡಬಹುದು ಎಂದು ಸ್ವಯಂಪ್ರೇರಣೆಯಿಂದ ಅನಿಸಿದರೆ ಡೊನೇಟ್ ಮಾಡಲು ಇದು ವೇದಿಕೆ ಅಷ್ಟೇ...

ನೀವು ಹೇಗೆ ದುಡ್ಡು ಕಳುಹಿಸಬಹುದು...

1) ಯಾವುದೇ ಮನಿ ಟ್ರಾನ್ಸ್ ಫರ್ ಆಪ್ ಗಳಾದ ಭೀಮ್, ಪೇಟಿಎಂ (ಕೆವೈಸಿ ಕೊಟ್ಟಿರಬೇಕು), ಯುಪಿಐ ಟ್ರಾನ್ಸ್ ಫರ್, ಫೋನ್ ಪೇ, ಗೂಗಲ್ ಪೇ ಮತ್ತಿತರ ಆಪ್ ಗಳ ಸಹಾಯದಿಂದ ಅಥವಾ ನಿಮ್ಮ ಬ್ಯಾಂಕಿನ ಆನ್ ಲೈನ್ ಬ್ಯಾಂಕಿನ ಸಹಾಯದಿಂದ ನಾವು ನೀಡಿದ ಅಕೌಂಟ್ ನಂಬರ್ ಮತ್ತು ಐಎಫ್ ಎಸ್ಸಿ ಸಂಖ್ಯೆ ಬಳಸಿ ನೀವು ದುಡ್ಡು ಹಾಕಬಹುದು.

2) ಅಥವಾ ನಿಮಗೆ ಈ ವಿಧಾನ ಕಷ್ಟ ಅನಿಸಿದರೆ ನಿಮ್ಮ ಅಕೌಂಟ್ ಇರುವ ಬ್ಯಾಂಕಿಗೆ ಹೋಗಿ ಅಲ್ಲಿ ಈ ಅಕೌಂಟ್ ನಂಬರ್ ಮತ್ತು ಐಎಫ್ ಎಸ್ಸಿ ಕೋಡ್ ಕೊಟ್ಟು ದುಡ್ಡು ಕಳುಹಿಸಿ ಎಂದು ಹೇಳಿದರೆ ಅವರೇ ಕಳುಹಿಸುತ್ತಾರೆ.

3) ಇದ್ಯಾವುದೂ ಆಗದಿದ್ದರೆ ನಮ್ಮ ಮೂರು ಮಂದಿ ಅಕೌಂಟ್ ಹೋಲ್ಡರ್ ಗಳ ಪೈಕಿ ಯಾರಿಗಾದರೂ ಒಂದು ಚೆಕ್ ಕಳುಹಿಸಿ ಅದರ ಮೂಲಕವೂ ದುಡ್ಡು ಕಳುಹಿಸಬಹುದು.

ಈ ಯಾವುದಾದರೂ ವಿಧಾನದಲ್ಲಿ ದುಡ್ಡು ಕಳುಹಿಸಿ. ಕಳುಹಿಸಿದ ಬಳಿಕ ಕಡ್ಡಾಯವಾಗಿ ನನಗೊಂದು ವೈಯಕ್ತಿಕ ಮೆಸೇಜ್ ಹಾಕಿ ನೀವು ಕಳುಹಿಸಿದ ಮೊತ್ತವನ್ನು ತಿಳಿಸಿ ಮತ್ತು ದುಡ್ಡು ಅಕೌಂಟಿಂಗೆ ಕ್ರೆಡಿಟ್ ಆಗಿದ್ದನ್ನು ಖಚಿತಪಡಿಸಿ ಪ್ಲೀಸ್....

ಈ ಕುರಿತು ನಿಮಗೆ ಯಾವುದೇ ಸಂಶಯ ಇದ್ದರೆ ನನ್ನನ್ನು ಸಂಪರ್ಕಿಸಬಹುದು..

-ಕೃಷ್ಣಮೋಹನ, ಅಡ್ಮಿನ್. (ಯುಸಿಎಂಬಿಕಾಂ ಗ್ರೂಪ್)

Post a Comment

0 Comments