ಆರ್ಥಿಕ ನೆರವು
ನಿಮಗೆಲ್ಲ ಗೊತ್ತಿದ್ದ ಹಾಗೆ, ನಿನ್ನೆ ನಾವು ಆರು ಮಂದಿ ಕಾಲೇಜಿಗೆ ಹೋಗಿ ಪ್ರಾಂಶುಪಾಲರ ಬಳಿ ಚರ್ಚೆ ನಡೆಸಿದ ಸಂದರ್ಭ ಹೇಳಿದ್ದೆವು. ಆರ್ಥಿಕ ಸಂಕಷ್ಟ ಇರುವ ವಿದ್ಯಾರ್ಥಿಗಳಿದ್ದಲ್ಲಿ ನಾವು ಸಹಾಯ ಮಾಡಲು ಸಿದ್ಧ ಎಂಬುದಾಗಿ. ನಾವು ಅಲ್ಲಿಂದ ಬಂದು ಸ್ವಲ್ಪ ಹೊತ್ತಲ್ಲಿ ಪ್ರಾಂಶುಪಾಲರು ಓರ್ವ ವಿದ್ಯಾರ್ಥಿನಿಗೆ ಫೀಸ್ ಕಟ್ಟಲು ಆಗುತ್ತಿಲ್ಲ 6000 ರು. ಅವಶ್ಯಕತೆ ಇದೆ, ಈ ವಾರದೊಳಗೆ ಸಹಾಯ ಮಾಡಬಹುದೇ ಎಂದು ಕೇಳಿದರು.
ನಾವು ಫಂಡ್ ರೈಸ್ ಮಾಡಲು ಹೊಸ ಅಕೌಂಟ್ ಆರಂಭಿಸಿ ಆಗಿಲ್ಲ ಇನ್ನೂ. ಅಕೌಂಟ್ ಓಪನ್ ಮಾಡಿ ಫಂಡ್ ರೈಸ್ ಮಾಡುವಾಗ ತಡವಾಗುತ್ತದೆ. ಹಾಗಾಗಿ ನಾನೇ ನಿರ್ಧಾರ ತಗೊಂಡು ನನ್ನ ಅಕೌಂಟಿಗೆ ದುಡ್ಡು ಹಾಕಲು ವಿನಂತಿ ಮಾಡಿದೆ. ಹರಿಣಾಕ್ಷಿ ಆರಂಭದ ಮೊತ್ತ ಹಾಕಿದರು. ಬಳಿಕ ಒಟ್ಟು ಎಂಟು ಮಂದಿ ಧನಸಹಾಯ ಮಾಡಿದ್ದಾರೆ. ಇನ್ನೂ ಹಲವರು ದುಡ್ಡು ನೀಡುವವರಿದ್ದರು. ಈ ಸಲ ನಮಗಿಷ್ಟೇ ಮೊತ್ತ ಬೇಕಾಗಿರುವ ಕಾರಣ ಸದ್ಯಕ್ಕೆ ಬೇಡ ಎಂದು ವಿನಂತಿಸಿದ್ದೇನೆ. ತಾವೊಬ್ಬರೇ ಅಷ್ಟೂ ಮೊತ್ತವನ್ನು ಭರಿಸುವುದಾಗಿ ಮುಂದೆ ಬಂದ ಸ್ನೇಹಿತರೂ ಇದ್ದಾರೆ. ಆದರೆ, ನಾವೆಲ್ಲ ಶೇರ್ ಮಾಡಿಯೇ ಸಹಾಯ ಮಾಡೋಣ ಎಂಬ ನಮ್ಮ ನಿಲುವಿನ ಪ್ರಕಾರ ನಾವೆಲ್ಲ ಶೇರ್ ಮಾಡಿಯೇ ದುಡ್ಡು ಸಂಗ್ರಹಿಸಿದ್ದೇವೆ. ಈ ದುಡ್ಡನ್ನು ನಾನು ನಾಳೆ ಮಧ್ಯಾಹ್ನ ಪ್ರಾಂಶುಪಾಲರಿಗೆ ಹಸ್ತಾಂತರಿಸಲಿದ್ದೇನೆ. ನಮ್ಮ ನಿಗದಿತ ಮೊತ್ತಕ್ಕಿಂತ 1 ಸಾವಿರ ರು. ಹೆಚ್ಚು ಸಂಗ್ರಹವಾಗಿದ್ದು, ಅದನ್ನು ನಮ್ಮ ಗ್ರೂಪಿನ ಫಂಡ್ ರೈಸ್ ಮಾಡುವ ನಿತಿನ್ ಓಪನ್ ಮಾಡುವ ಅಕೌಂಟಿಗೆ ನಾನು ಹಸ್ತಾಂತರಿಸಲಿದ್ದೇನೆ.
ನಾನು ಮತ್ತು ಸುಶೀಲ್ ಗ್ರೂಪಿನ ಸ್ನೇಹಿತರೊಂದಿಗೆ ಮಾತನಾಡಿದ ಮೇರೆಗೆ ರಿಕ್ವೆಸ್ಟ್ ಮಾಡಿದವರಿಗೆ ಹೊರತಾಗಿ ಯಾರು ಎಷ್ಟು ಸಹಾಯ ಮಾಡಿದ್ದಾರೆ ಎಂಬುದನ್ನು ಇಲ್ಲಿ ನಮೂದಿಸಿದ್ದೇನೆ. ಇದರ ಉದ್ದೇಶ ಅವರಿಗೆ ನಮ್ಮ ಕೃತಜ್ಞೆತ ಸಲ್ಲಿಸುವುದು ಹಾಗೂ ಅವರ ಸಕಾಲಿಕ ನೆರವನ್ನು ಸ್ಮರಿಸುವ ಉದ್ದೇಶ ಅಷ್ಟೇ. ಅವರ ವಿವರ ಈ ಕೆಳಗಿನಂತಿದೆ-
ಶಿವಪ್ರಸಾದ್ 500 ರು.
ಧನವಂತಿ 1000 ರು.
ಅವಿನಾಶ್ 500 ರು.
ಹೆಸರು ಹೇಳಲಿಚ್ಚಿಸದ ಒಬ್ಬರು 2000 ರು.
ನವೀನ್ ಎನ್ ಎಸ್ 500 ರು.
ರೇಶ್ಮಾ 500 ರು.
ಸುಶೀಲ್ ಕುಮಾರ್ 1000 ರು.
ಹರಿಣಾಕ್ಷಿ 1000 ರು.
---
ಸ್ನೇಹಿತರೇ ಅರ್ಜೆಂಟ್ ದುಡ್ಡು ಬೇಕಾದ ಕಾರಣ ನನ್ನ ಅಕೌಂಟ್ ಡಿಟೈಲ್ ಕೊಟ್ಟು ದುಡ್ಡು ಸಂಗ್ರಹಿಸಲಾಗಿದೆ. ಸ್ವತಹ ನಾನು ಕೂಡಾ ಈ ಸಾರಿ ಡೊನೇಟ್ ಮಾಡಿಲ್ಲ. ಶೀಘ್ರದಲ್ಲಿ ನಿತಿನ್ ಹೊಸ ಅಕೌಂಟ್ ತೆರೆಯುತ್ತಾರೆ. ಅದರ ವಿವರ ಗ್ರೂಪಿನಲ್ಲಿ ನೀಡುತ್ತೇವೆ. ಅದಕ್ಕೆ ನಮ್ಮ ಯಥಾಶಕ್ತಿ ಡೊನೇಟ್ ಮಾಡಿದರೆ ತುರ್ತು ಸಂದರ್ಭಗಳ ನೆರವಿಗೆ ಹಾಗೂ ಕಾಲೇಜಿಗೆ ಉಪಕಾರ ಮಾಡುವ ಉದ್ದೇಶ ಎರಡಕ್ಕೂ ಆ ದುಡ್ಡು ಬಳಕೆಯಾಗುತ್ತದೆ. ಯಾರಿಗೆ ಎಷ್ಟು ಸಾಧ್ಯವೋ ಅಷ್ಟು ಕೊಟ್ಟರೆ ಸಾಕು. ಮತ್ತು ಕೊಡಲು ಅಸಾಧ್ಯವಾದವರು ನಮ್ಮ ಜೊತೆಗಿದ್ದರೆ ಸಾಕು... ನಿಮ್ಮೆಲ್ಲರ ಪ್ರೋತ್ಸಾಹ ಜೊತೆಗಿದ್ದರೆ ಸಾಕು....
ಧನ್ಯವಾದಗಳು...
🙏🙏🙏 KM
0 Comments