ಸ್ನೇಹಿತರೇ ಇದು ಸಾಧ್ಯವಾಗಿದ್ದು ನಿಮ್ಮಿಂದ ಮತ್ತು ನಮ್ಮ ಗ್ರೂಪಿನಿಂದ
ನೀವೆಲ್ಲ ಒಟ್ಟು ಸೇರಿಸಿ ನೀಡಿದ ದುಡ್ಡನ್ನು ನಾನಿಂದು (19.07.2019) ನಮ್ಮ ಕಾಲೇಜಿಗೆ ತೆರಳಿ ಪ್ರಾಂಶುಪಾಲರ ಸಮ್ಮುಖದಲ್ಲಿ ನಿಮ್ಮೆಲ್ಲರ ಪರವಾಗಿ ಆ ದುಡ್ಡಿನ ಅವಶ್ಯಕತೆ ಇದ್ದ (6000 ರು.) ಬಿಎ ವಿಭಾಗದ ನೇಹಾ ಎಂಬ ವಿದ್ಯಾರ್ಥಿನಿಗೆ ಹಸ್ತಾಂತರಿಸಿದ್ದೇನೆ.
ಈ ನೆರವಿನಿಂದ ಆಕೆ ಬಹಳಷ್ಟು ಖುಷಿ ಪಟ್ಟಿದ್ದು, ತಕ್ಷಣ ಬ್ಯಾಂಕಿಗೆ ತೆರಳಿ ತನ್ನ ಫೀಸ್ ಕಟ್ಟಿದ್ದಾಳೆ. ಹಾಗೂ ಎಲ್ಲರ ಆಶೀರ್ವಾದ ಕೇಳಿದ್ದಾಳೆ. ಈ ಮೂಲಕ ಒಬ್ಬಳು ಸಹಾಯದ ಅಗತ್ಯವಿರುವ ನಮ್ಮ ಕಿರಿಯ ವಿದ್ಯಾರ್ಥಿನಿಗೆ ಸಹಾಯ ಮಾಡಿದ ಸಾರ್ಥಕತೆ ನಮ್ಮ ಗ್ರೂಪಿನ ಪ್ರತಿಯೊಬ್ಬರದ್ದೂ ಆಗಿದೆ. ಮುಂದಿನ ದಿನಗಳಲ್ಲಿ ನಮ್ಮ ಗ್ರೂಪಿನ ಮೂಲಕ ನಡೆಯಲಿ. ಅದಕ್ಕೆ ಅಗತ್ಯ ಶಕ್ತಿಯನ್ನು ದೇವರು ನಮಗೆಲ್ಲ ಕರುಣಿಸಲಿ, ಈ ಉತ್ಸಾಹ ಇದೇ ರೀತಿ ಮುಂದುವರಿಯಲಿ ಅಂತ ಆಶಿಸುತ್ತೇನೆ. ಪ್ರಾಂಶುಪಾಲರಲ್ಲಿ ನಿಮ್ಮ ಪರವಾಗಿ ನಾನು ಹೇಳಿದ್ದೇನೆ. ಇಂತಹ ಅಗತ್ಯವಿರುವ ವಿದ್ಯಾರ್ಥಿಗಳಿದ್ದರೆ ಮುಂದೆಯೂ ನಾವು ಸಹಾಯ ನೀಡಲು ಬದ್ಧರಿದ್ದೇವೆ ಅಂತ. ಆಕೆ ಹಣದ ಕೊರತೆಯಿಂದ ಕೋರ್ಸ್ ಡಿಸ್ ಕಂಟಿನ್ಯೂ ಮಾಡುವ ಹಂತದಲ್ಲಿದ್ದಳು. ಇದೀಗ ಸಕಾಲಿಕ ನೆರವಿನಿಂದ ನಿರಾತಂಕವಾಗಿ ಮುಂದುವರಿಯಲು ಸಾಧ್ಯವಾಗಿದೆ. ಆಕೆಯ ಭವಿಷ್ಯ ಉಜ್ವಲವಾಗಲಿ ಅಂತ ಆಶಿಸುತ್ತೇನೆ.
ಎಲ್ಲರಿಗೂ ಧನ್ಯವಾದಗಳು...
-KM
0 Comments