ಸ್ನೇಹಿತರೇ
ನಾವು ಗ್ರೂಪಿನಲ್ಲಿ ಚರ್ಚಿಸಿದ ಪ್ರಕಾರ, ಗ್ರೂಪಿನ ಮೂಲಕ ಮಾಡುವ ಚಾರಿಟಿ ಕೆಲಸಗಳಿಗೆ ಹಾಗೂ ಗ್ರೂಪಿನ ಚಟುವಟಿಕೆಗಳ ಖರ್ಚು ನಿರ್ವಹಣೆಗೆ ಫಂಡ್ ರೈಸ್ ಮಾಡಲು ಪ್ರತ್ಯೇಕ ಬ್ಯಾಂಕ್ ಖಾತೆ ಅಗತ್ಯವಿದೆ. ಬ್ಯಾಂಕ್ ಖಾತೆ ತೆರೆಯುವ ಮೊದಲನೇ ಹೆಜ್ಜೆ ಇಂದು (ಜುಲೈ 23, 2019) ಇರಿಸಿ ಆಗಿದೆ. ಹಂಪನಕಟ್ಟೆ ಪಂಜಾಬ್ ನ್ಯಾಶನಲೈಸ್ಡ್ ಬ್ಯಾಂಕ್ ಶಾಖೆಯಲ್ಲಿ ನಾನು ಕೃಷ್ಣಮೋಹನ, ನಿತಿನ್ ಅತ್ತಾವರ ಹಾಗೂ ಪುಷ್ಪಲತಾ ಮೂರು ಜನರು ಸಂಯುಕ್ತ ಖಾತೆದಾರರಾಗಿರುವ ಸೇವಿಂಗ್ಸ್ ಅಕೌಂಟ್ ತೆರೆದಿದ್ದೇವೆ. ಇದಕ್ಕೆ ಅಗತ್ಯವಾದ ದಾಖಲೆಗಳನ್ನು ಇಂದು ನೀಡಿ ಆಗಿದೆ. ನನ್ನ ಹಾಗೂ ನಿತಿನ್ ನೀಡಿದ ದುಡ್ಡು ಹಾಗೂ ಇತ್ತೀಚೆಗೆ ವಿದ್ಯಾರ್ಥಿನಿಯ ಸಹಾಯಕ್ಕೆ ಸಂಗ್ರಹಿಸಿದ 7000 ರು.ಗಳಲ್ಲಿ ಉಳಿದ 1000 ರು.ಗಳನ್ನು ಸೇರಿಸಿ 5000 ರು. ಪ್ರಾಥಮಿಕ ಡೆಪಾಸಿಟ್ ಇರಿಸಿ ಉಳಿತಾಯ ಖಾತೆ ಆರಂಭವಾಗಿದೆ.
ನಿತಿನ್ ಕಚೇರಿಯ ಕಟ್ಟಡದಲ್ಲೇ (ಮಿಲಾಗ್ರಿಸ್) ಇರುವ ಬ್ಯಾಂಕ್ ಆದ ಕಾರಣ ನಮಗೆ ವ್ಯವಹಾರ ಸುಲಭವಾಗುತ್ತದೆ. ಈ ಖಾತೆಯನ್ನು ನಾವು ಮೂವರು ನಿರ್ವಹಿಸುತ್ತೇವೆ. ಈ ಪೈಕಿ ಯಾರದ್ದೇ ಆದರು ಇಬ್ಬರ ಸಹಿ ಇದ್ದರೆ ಚೆಕ್ ವ್ಯವಹಾರ ಆಗುತ್ತದೆ. ಆನ್ ಲೈನ್ ಬ್ಯಾಂಕಿಂಗ್ ಸೌಲಭ್ಯ ಇದೆ. ಎಸ್ಎಂಎಸ್ ಮಾಹಿತಿ ನನ್ನ ಮೊಬೈಲಿಗೆ ಬರುತ್ತದೆ. ಈ ರೀತಿ ಒಪ್ಪಂದ ಮಾಡಿ ಖಾತೆ ತೆರೆದಿದ್ದೇವೆ. ಒಂದೆರಡು ದಿನಗಳಲ್ಲಿ ಖಾತೆಯ ಸಂಖ್ಯೆ ಹಾಗೂ ಐಎಫ್್ ಎಸ್ಸಿ ಸಂಖ್ಯೆ ದೊರಕಿದಾಗ ಅದರ ಮಾಹಿತಿ ಗ್ರೂಪಿನಲ್ಲಿ ಹಂಚಿಕೊಳ್ಳುತ್ತೇವೆ. ಈ ಖಾತೆಗೆ ನಿಮ್ಮ ಕೊಡುಗೆ ನೀಡಬಹುದು....
ಇನ್ನಷ್ಟು ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಅಪ್ಡೇಟ್ ಮಾಡಲಿದ್ದೇವೆ.
ಧನ್ಯವಾದಗಳು.
🙏🙏🙏
-ಅಡ್ಮಿನ್ ಬಳಗ



0 Comments