ಸ್ನೇಹಿತರೇ,
ಇತ್ತೀಚೆಗೆ, ದುಡ್ಡು ಡೊನೇಟ್ ಮಾಡುವ ವಿಚಾರದ ಕುರಿತು ನಾವು ಅನಿಸಿಕೆಗಳನ್ನು ಹಂಚಿಕೊಂಡಿದ್ದೆವು. ಅದಕ್ಕೆ ಪೂರಕವಾಗಿ ನನ್ನ ಅನಿಸಿಕೆಗಳು...
ಭಾವನಾತ್ಮಕ ಸ್ಪಂದನೆ, ಹಣಕಾಸು ಸ್ಪಂದನೆ, ಭಾವನಾತ್ಮಕ ಸಿದ್ಧಾಂತ, ಬದುಕು ಹಾಗೂ ಹಣಕಾಸಿನ ಸ್ಥಿತಿಗತಿ ಇವು ಬದುಕಿನ ಬೇರೆ ಬೇರೆ ಅಯಾಮಗಳು. ಎಷ್ಟೇ ಬುದ್ಧಿವಂತಿಕೆ, ಹೃದಯವಂತಿಕೆ ಇಧ್ದರೂ ವ್ಯಕ್ತಿಯ ಬದುಕು ಸುಲಲಿತವಾಗಲು ದುಡ್ಡು ಬೇಕು. ಅದನ್ನು ನಾವು ನಿರಾಕರಿಸುವಂತಿಲ್ಲ. ಅದೇ ಕಾರಣಕ್ಕೆ ನಾವು ವೈಯಕ್ತಿಕ ಆಶೋತ್ತರ, ಕುಟುಂಬ ಜೀವನ, ಮನರಂಜನೆ ಎಲ್ಲವನ್ನೂ (ಕೆಲವೊಮ್ಮೆಯಾದರೂ) ತ್ಯಜಿಸಿ ಅಥವಾ ಮರೆತು ಯಾವ್ಯಾವುದೋ ಕೆಲಸ (ವೃತ್ತಿ) ಮಾಡುತ್ತಿರುತ್ತೇವೆ. ಊರು ಬಿಟ್ಟು, ಕುಟುಂಬವನ್ನು ಬಿಟ್ಟು, ಹಬ್ಬ, ಉತ್ಸವಗಳನ್ನು ಮರೆತು, ನಮ್ಮ ಪ್ರೀತಿಯ ಹವ್ಯಾಸಗಳಿಂದ ದೂರವಾಗಿ ಸಂಪಾದನೆಗೋಸ್ಕರ ದುಡಿಯುತ್ತೇವೆ. ಇಲ್ಲಿ ನಮ್ಮ ಆದ್ಯತೆ ದುಡಿಯಬೇಕು, ದುಡಿದು ಒಂದು ಸಂಪಾದನೆ ರೂಢಿಸಿಕೊಂಡು ಮನೆ ಮಂದಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಉತ್ತಮ ಭವಿಷ್ಯ ರೂಪಿಸಬೇಕು ಎಂಬುದೇ ಆಗಿರುತ್ತದೆ. ಸಂಪಾದನೆಗೋಸ್ಕರ ನಾವು ಬಹಳಷ್ಟು ವೈಯಕ್ತಿಕ ಆಸೆಗಳ ಜೊತೆ ಕಾಂಪ್ರಮೈಸ್ ಆಗಬೇಕಾಗುತ್ತದೆ ಎಂಬುದು ಕಠಿಣ ಸತ್ಯ..
....
ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಸಹಾಯ ಮಾಡುವಾಗಲೂ ಅಷ್ಟೇ. ಬಾಯಿಯಲ್ಲಿ ಎಷ್ಟೇ ಸಾಂತ್ವನ ಹೇಳಿದರೂ, ಮಾನಸಿಕವಾಗಿ ಎಷ್ಟೇ ಧೈರ್ಯ ತುಂಬಿದರೂ, ಎಲ್ಲಿ ಹಣಕಾಸು ಸಹಾಯ ಬೇಕೋ ಅಲ್ಲಿ ಹಣಕಾಸು ಸಹಾಯವೇ ಬೇಕಾಗುತ್ತದೆ. ಕೇವಲ ಸಹಾನುಭೂತಿಯಿಂದ ಒಂದು ಹಂತದ ವರೇಗೆ ಸ್ಥೈರ್ಯ ತುಂಬಬಹುದೇ ಹೊರತು ಅದಕ್ಕಿಂತ ಆಚೆಗೆ ಏನೂ ಪ್ರಯೋಜನವಾಗುವುದಿಲ್ಲ. ಬಿ ಪ್ರಾಕ್ಟಿಕಲ್ ಅನ್ನೋ ಮಾತನ್ನೇ ಅಳವಡಿಸುವುದಾದರೆ, ದುಡ್ಡು ಅಥವಾ ದುಡ್ಡನ್ನು ಬಳಸಿ ಮಾಡುವ ಸಹಾಯದಿಂದ ಪರರಿಗೆ ತುಂಬ ಅನುಕೂಲವಾಗುತ್ತದೆ. ಇದೇ ಕಾರಣಕ್ಕೆ ನಾವು, ಕಾಲೇಜಿನಲ್ಲಿ ಸಹಾಯದ ಅಗತ್ಯ ಇರುವವರಿಗೆ ನಮ್ಮ ಸಹಾನುಭೂತಿಯ ಜೊತೆಗೆ ಹಣಕಾಸು ಅಥವಾ ವಸ್ತುರೂಪದ ಸಹಾಯವನ್ನು ಮಾಡುವುದು ಸೂಕ್ತ ಎಂದು ಕಂಡುಕೊಂಡಿರುವುದು ಹಾಗೂ ಅದಕ್ಕೋಸ್ಕರ ಫಂಡ್ ರೈಸ್ ಮಾಡುತ್ತಿರುವುದು. ನಿಮ್ಮಲ್ಲಿ ತುಂಬ ಮಂದಿ ಅದಕ್ಕೆ ತಕ್ಷಣ ಸ್ಪಂದಿಸಿದ್ದು ಮಾತ್ರವಲ್ಲ, ಆಯಾ ಸಮಯಕ್ಕೆ ಪೂರಕವಾಗಿ ದುಡ್ಡು ನೀಡಿ ಬೆಂಬಲಿಸಿದ್ದೀರಿ, ನಮ್ಮ ಗ್ರೂಪು ಪ್ರಾಕ್ಟಿಕಲ್ ಆಗಿಯೂ ತುಂಬ ಸ್ಟ್ರಾಂಗ್ ಇದೆ ಎಂಬುದನ್ನು ನಿರೂಪಿಸಿದ್ದೀರಿ. ವಾಟ್ಸಪ್ ಗ್ರೂಪು ಹರಟೆಗಳಿಗೆ ಸೀಮಿತವಾಗುತ್ತಿರುವ ಕಾಲ ಇದು, ಒಂದು ವಾಸ್ತವಿಕ ಪ್ರಜ್ಞೆ ಹಾಗೂ ಅಡ್ಮಿನ್ ಗಳ ವಿನಂತಿಗಳಿಗೆ ಸ್ಪಂದಿಸುವ ಈ ಸೂಕ್ಷ್ಮತೆಯನ್ನು ಉಳಿಸಿಕೊಳ್ಳಬೇಕಾದ್ದು ಬಹಳ ಅಗತ್ಯವಿರುವ ವಿಚಾರ ಹಾಗೂ ನಮ್ಮೆಲ್ಲರ ಜವಾಬ್ದಾರಿ ಕೂಡಾ ಹೌದು.
.....
ಗ್ರೂಪಿನ ಪ್ರತಿಯೊಬ್ಬರಿಗೂ ದುಡ್ಡು ಕೊಡಲು ಆಗುವುದಿಲ್ಲ ಎಂಬ ಕುರಿತು...
ಹೌದು, ಈ ವಿಚಾರ ನನಗೆ ಹಾಗೂ ಅಡ್ಮಿನ್ ಗ್ರೂಪಿಗೆ ಗೊತ್ತಿದೆ. ನಮ್ಮ ಉದ್ದೇಶವೂ ಗ್ರೂಪಿನ ಪ್ರತಿಯೊಬ್ಬರಿಂದಲೂ ದುಡ್ಡು ಕಲೆಕ್ಟ್ ಮಾಡುವುದಲ್ಲ. ಅಸಲಿಗೆ ಈ ಗ್ರೂಪು ಕಟ್ಟಿದ್ದು, ಹಣ ಕಲೆಕ್ಟ್ ಮಾಡುವ ಎಂಬ ಉದ್ದೇಶದಿಂದ ಅಲ್ಲವೇ ಅಲ್ಲ. ಈ ಗ್ರೂಪು ಇಷ್ಟು ಸ್ಟ್ರಾಂಗ್ ಆದ ಬಳಿಕ, ಹಣ ಕಲೆಕ್ಟ್ ಮಾಡಿ ನಮ್ಮ ಕೈಲಾದ ಸಹಾಯವನ್ನು ನಮ್ಮ ಕಿರಿಯ ವಿದ್ಯಾರ್ಥಿಗಳಿಗೆ ನೀಡುವ ಎಂಬುದು ನಮ್ಮ ವಿವಿಧ ಯೋಜನೆಗಳಲ್ಲಿ ಒಂದು ಅಷ್ಟೇ.... ಈಗ ನಾವು ಉದ್ಯೋಗ ಗಳಿಸಿ ಈ ಹಿಂದಿಗಿಂತ ಹೆಚ್ಚು ಆರ್ಥಿಕವಾಗಿ ಸಶಕ್ತವಾಗಿದ್ದೇವೆ, ಅಥವಾ ದುಡಿಮೆಯ ಒಂದು ಪುಟ್ಟ ಭಾಗವನ್ನು ಈ ಥರ ದೇಣಿಗೆಗೆ ನೀಡಲು ನಮಗೆ ಶಕ್ತಿ ಇದೆ ಎಂದಾದರೆ ಆ ಭಾವವನ್ನು ಬಳಸಿ, ನಮ್ಮ ಸಾಂಸ್ಥಿಕವಾದ, ಗುಂಪಿನ ಹೆಸರಿನಲ್ಲಿ ಸಹಾಯ ಮಾಡಿ ನಮ್ಮ ಗ್ರೂಪಿನ ಹೆಸರನ್ನು ಸ್ಟ್ರಾಂಗ್ ಮಾಡುವ, ಹಾಗೂ ಅಗತ್ಯವಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಸಾರ್ಥಕತೆ ರೂಢಿಸಿಕೊಳ್ಳುವ ಅಂತ ಅಷ್ಟೇ...
ಹೌದು ಇಲ್ಲಿ, ಹೌಸ್ ವೈಫ್ ಆಗಿರುವವರು ತುಂಬ ಮಂದಿ ಇದ್ದೀರಿ, ಅಥವಾ ಈಗಲೂ ಸಣ್ಣ ಪುಟ್ಟ ಕೆಲಸ ಅಥವಾ ಸ್ವಂತ ಉದ್ದಿಮೆ ಮಾಡಿಕೊಂಡಿರುವ ಗೆಳೆಯರಿದ್ದೀರಿ. ಬಹಳಷ್ಟು ಕಮಿಟ್ ಮೆಂಟ್ ಗಳಿರುವ ಸ್ನೇಹಿತರಿದ್ದೀರಿ. ನೀವು ಪ್ರತಿಯೊಬ್ಬರು ಬರ್ಡನ್ ಮಾಡಿಕೊಂಡು ದುಡ್ಡು ಕೊಡಿ ಎಂದು ಖಂಡಿತಾ ಹೇಳುತ್ತಿಲ್ಲ. ಹೌಸ್ ವೈಫ್ ಎಂಬುದು ಹುದ್ದೆಯಲ್ಲ, ಜವಾಬ್ದಾರಿ ಹಾಗೂ ಪ್ರೀತಿ ಮತ್ತು ಕರ್ತವ್ಯಕೂಡಾ ಹೌದು. ಸ್ವಂತ ಸಂಬಳವಿರುವುದಿಲ್ಲ ಎಂಬುದು ಕೂಡಾ ಹೌದು. ಹಾಗಂತ ಹೊರಗಡೆ ಕೆಲಸಕ್ಕೆ ಹೋಗುವ ಮತ್ತು ಹೋಗದಿರುವ ಎರಡೂ ವರ್ಗದ ಗೃಹಿಣಿಯರಿಗೆ ಮನೆಯನ್ನು ನೋಡಿಕೊಳ್ಳುವ, ಮಕ್ಕಳನ್ನು, ಕುಟುಂಬವನ್ನು ಪಾಲಿಸುವ ತುಂಬ ದೊಡ್ಡ ಜವಾಬ್ದಾರಿಯಿದೆ, ಹಾಗೂ ಅದನ್ನು ಅವರು ಅಷ್ಟೇ ಪ್ರೀತಿಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಅದನ್ನು ನಿರುದ್ಯೋಗವೆಂಬ ತಾತ್ಸಾರಿಂದ ನೋಡುವುದು ಖಂಡಿತಾ ಸರಿಯಲ್ಲ. ಅಮ್ಮ ತಾನು ಕೆಲಸಕ್ಕೆ ಹೋದರೂ ಹೋಗದಿದ್ದರೂ ಮಕ್ಕಳಿಗೆ ಅಷ್ಟೇ ಪ್ರೀತಿ ನೀಡಬೇಕಾಗುತ್ತದೆ. ಮನೆ, ಮತ್ತು ಉದ್ಯೋಗ ಎರಡನ್ನೂ ನಿಭಾಯಿಸಿ ಕೆಲಸಕ್ಕೆ ಹೋಗುವುದು ಸಣ್ಣ ವಿಚಾರವಲ್ಲ.
ಯಾರಿಗೆ ನಮ್ಮ ಫಂಡಿಗೆ ದೇಣಿಗೆ ನೀಡಲು ಆಗುವುದಿಲ್ಲವೋ ನೀವ್ಯಾರೂ ಕೀಳರಿಮೆಗೊಳಗಾಗುವುದು, ಬೇಸರ ಮಾಡುವುದು ಬೇಡ. ನಿಮ್ಮಿಂದ ನಮ್ಮ ಗ್ರೂಪಿಗೆ ಏನು ಸಪೋರ್ಟ್ ಮಾಡಲು ಆಗುತ್ತದೋ ಅದನ್ನು ಮಾಡಿದರೆ ಧಾರಾಳ ಆಯಿತು. ಉದಾಹರಣೆಗೆ ನಾಳೆ ನಾವು ಗೆಟ್ ಟುಗೆದರ್ ಮಾಡಿದಾಗಾ ಪುರುಸೊತ್ತು ಮಾಡಿ, ಒಂದು ಪ್ರವಾಸ ಹಮ್ಮಿಕೊಂಡರೇ ನೀವೂ ಬಂದು ಭಾಗವಹಿಸಿ, ಏನಾದರೂ ಬರವಣಿಗೆ ಕೇಳಿದರೆ ಮನೆಯಲ್ಲೇ ಕುಳಿತು ಬರೆದುಕೊಡಿ.... ನಿಮ್ಮ ಸಲಹೆ, ಸೂಚನೆಗಳನ್ನು ನೀಡಿ... ಈ ಥರ ಯಾವತ್ತೂ ನಮ್ಮ ಜೊತೆಗಿರುವ ಮೂಲಕ ಸಹಕರಿಸಿ, ಅಷ್ಟು ಸಾಕು.
ಯಾರಿಗೆ ದುಡ್ಡು ನೀಡುವ ಶಕ್ತಿ ಇದೆ, ಯಾರಿಗೋ ಡೊನೇಟ್ ಮಾಡಲು ಸಾಧ್ಯವಿದೆಯೋ ಅವರು ಅಗತ್ಯ ಬಿದ್ದಾಗ ಸಹಾಯ ನೀಡಿ, ಗ್ರೂಪಿನ ಹಣಕಾಸು ಸ್ಥಿತಿಯನ್ನು ಉತ್ತಮ ಪಡಿಸಿ, ಮುಂದೊಂದು ದಿನ ದೊಡ್ಡ ಮಟ್ಟದಲ್ಲೂ ಪರರಿಗೆ ನಮ್ಮಿಂದ ಸಹಕಾರ ನೀಡಲು ಸಾಧ್ಯವಾಗುವಷ್ಟರ ಮಟ್ಟಿಗೆ ಗ್ರೂಪನ್ನು ಬೆಳೆಸಿ ಎಂಬ ಕಳಕಳಿಯ ಮನವಿ ನನ್ನದು ಹಾಗೂ ಅಡ್ಮಿನ್ ಬಳಗದ್ದು....
...
ದುಡ್ಡಿನಿಂದ ಪ್ರೀತಿ, ಮಮಕಾರ, ಆರೋಗ್ಯ, ಸಂಬಂಧಗಳನ್ನು ಖರೀದಿಸಿ ದೇಹಕ್ಕೆ ಇಂಜೆಕ್ಟ್ ಮಾಡಲು ಆಗುವುದಿಲ್ಲ, ದುಡ್ಡಿದ್ದರೆ ಸಾಯುವ ವ್ಯಕ್ತಿಯನ್ನು ಎಳೆದು ತಂದು ಪುನರ್ಜನ್ಮ ನೀಡಲು ಆಗುವುದಿಲ್ಲ. ಶ್ರೀಮಂತನಾಗಬಹುದು, ದೊಡ್ಡ ದೊಡ್ಡ ಆಸ್ಪತ್ರೆಗೆ ಸೇರಬಹುದು ಆದರೆ ಹಣೆಬರಹವನ್ನು ಬದಲಿಸುಲ ಆಗುವುದಿಲ್ಲ.
ಆದರೆ.... ದುಡ್ಡಿದ್ದರೆ ವ್ಯಕ್ತಿಯ ಸ್ಟೇಟಸ್ ದೊಡ್ಡದು ಎಂದು ಸಮಾಜ ಭಾವಿಸುತ್ತದೆ, ದುಡ್ಡಿದ್ದರೆ ಆತ ಏನೂ ಮಾಡಬಹುದೆಂದು ಜನ ತಿಳ್ಕೊತಾರೆ, ದುಡ್ಡಿದ್ದರೆ ಹಸಿವು ತಗ್ಗುತ್ತದೆ, ಏನನ್ನೂ ಖರೀದಿಸಿ ಜೀವನ ಮಟ್ಟ ಉತ್ತಮ ಪಡಿಸಲು ಆಗುತ್ತದೆ ಎಂಬ ವಾಸ್ತವಿಕ ನೆಲೆಗಟ್ಟಿನ ಚಿಂತನೆ ಚಿಂತೆ..
ಹಾಗಾಗಿ ದುಡ್ಡು... ಮನಶಾಂತಿ... ಸಂಬಂಧ.... ಪ್ರೀತಿ ವಿಶ್ವಾಸ... ನಂಬಿಕೆ... ಇವೆಲ್ಲ ಜೊತೆ ಜೊತೆಗಿದ್ದರೂ ಪ್ರಾಕ್ಟಿಕಲ್ ಆಗಿ ಸಂಪರ್ಕ ಹೊಂದಿರುವ ವಿಚಾರವಾದರೂ ಭಾವುಕತೆ ಮತ್ತು ವಾಸ್ತವಿಕತೆ ಇವೆರಡೂ ತಾಕಲಾಟ ಮಾಡುತ್ತಲೇ ಇರುತ್ತದೆ.... ಏನಂತೀರಿ...
(ನಿಮ್ಮ ಪ್ರತಿಕ್ರಿಯೆಗೆ ಮುಕ್ತ ಸ್ವಾಗತವಿದೆ).
-ಕೆಎಂ (29-08-2019)

0 Comments