ಸ್ನೇಹಿತರೇ....
ಅವಳ ಹೆಸರು ಪ್ರಜ್ಞ, ನಮ್ಮ ಕಾಲೇಜಿನ ದ್ವಿತೀಯ ಬಿ.ಎ.ವಿದ್ಯಾರ್ಥಿನಿ. ಹಣಕಾಸು ಮುಗ್ಗಟ್ಟಿನಿಂದ ಆಕೆಗೆ ಈ ವರ್ಷದ ಟ್ಯೂಶನ್ ಫೀ ಕಟ್ಟಲು ಆಗಿರಲಿಲ್ಲ. ಅದನ್ನು ಆಕೆ ಮತ್ತು ಆಕೆಯ ಅಜ್ಜಿ ತಡವಾಗಿ ಬಂದು ಕಾಲೇಜಿನ ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು. ಆಕೆಯ ಒಟ್ಟು ಫೀಸ್ ಹಾಗೂ ಪೆನಾಲ್ಟಿ ಸೇರಿ ಸುಮಾರು 6000 ರು.ಗೂ ಹೆಚ್ಚಿನ ಮೊತ್ತ ಆಗಿತ್ತು. ಈ ಪೈಕಿ ಸುಮಾರು 3000ದಷ್ಟು ದುಡ್ಡನ್ನು ಆಕೆಯ ಮನೆಯವರೇ ಹೊಂದಿಸಿದ್ದರು. ಬಾಕಿ ಮೊತ್ತವನ್ನು ನಮ್ಮಿಂದ ಭರಿಸಲು ಸಾಧ್ಯವೇ ಎಂದು ಪ್ರಾಂಶುಪಾಲರಾದ ಡಾ.ಉದಯಕುಮಾರ್ ಸರ್ ನಮ್ಮ ಗ್ರೂಪಿನಲ್ಲಿ ವಿನಂತಿಸಿದ್ದರು.
ಈ ಪ್ರಕಾರ ನಾನು ಈ ವಿಚಾರವನ್ನು ನಮ್ಮ ಗ್ರೂಪಿನಲ್ಲಿ ಪ್ರಸ್ತಾಪಿಸಿದ್ದೆ. ಈ ಅವಶ್ಯಕತೆಯ ದೊಡ್ಡ ಭಾಗವನ್ನು ಅನಿಲ್ ಚರಣ್ ಅವರು ಭರಿಸಿ ನಮ್ಮ ಗ್ರೂಪಿನ ಬ್ಯಾಂಕ್ ಖಾತೆಗೆ ದೇಣಿಗೆ ನೀಡಿದ್ದರು. ಈ ಮೊತ್ತವನ್ನು (3000 ರು.ಗಳನ್ನು) ನಾನು ಮತ್ತು ಗೆಳೆಯ ನಿತಿನ್ *ಇಂದು (05.09.2019, ಗುರುವಾರ) ನಮ್ಮ ಕಾಲೇಜಿಗೆ ಹೋಗಿ ಪ್ರಾಂಶುಪಾಲರ ಸಮ್ಮುಖದಲ್ಲಿ ಆ ವಿದ್ಯಾರ್ಥಿನಿಗೆ ಹಸ್ತಾಂತರಿಸಿದ್ದೇವೆ. ಹಾಗು ಗ್ರೂಪಿನ ಎಲ್ಲರ ಪರವಾಗಿ ಆಕೆಯ ಉಜ್ವಲ ಭವಿಷ್ಯಕ್ಕೆ ಹಾರೈಸಿದ್ದೇವೆ. ಅಲ್ಲಿ ಹಾಜರಿದ್ದ ಉದಯ ಸರ್, ರಾಜಲಕ್ಷ್ಮೀ ಮೇಡಂ, ಅನಸೂಯಾ ರೈ ಮೇಡಂ ಅವರಿಗೂ ಶಿಕ್ಷಕರ ದಿನದ ಶುಭಾಶಯಗಳನ್ನು ನಿಮ್ಮೆಲ್ಲರ ಪರವಾಗಿ ಕೋರಿದ್ದೇವೆ.
ಈ ಸಹಾಯ ನೀಡಲು ಸಾಧ್ಯವಾಗಿದ್ದು, ನಿಮ್ಮಿಂದ, ನೀವೆಲ್ಲ ದೇಣಿಗೆ ನೀಡಿದ ದುಡ್ಡಿನಿಂದಾಗಿ ನಾವಿಂದು ಒಂದು ಒಳ್ಳೆಯ ಕೆಲಸ ಮಾಡಿದ ಸಾರ್ಥಕತೆ ಅನುಭವಿಸಿದ್ದೇವೆ. ಮುಂದಿನ ದಿನಗಳಲ್ಲೂ ಈ ಥರದ ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ಸಹಾಯ ನೀಡಲು ನಾವು ಸಿದ್ಧರಿರುವುದಾಗಿ ನಾವು ಪ್ರಾಂಶುಪಾಲರಿಗೆ ತಿಳಿಸಿದ್ದೇವೆ. ಮುಂದಿನ ದಿನಗಳಲ್ಲೂ ನಿಮ್ಮೆಲ್ಲರ ಪ್ರೋತ್ಸಾಹ ಈ ಗ್ರೂಪಿನ ಮೇಲಿರಲಿ....
ಮುಂದಿನ ಅಕ್ಟೋಬರ್ ದ್ವಿತೀಯಾರ್ಧದಲ್ಲಿ ನಮ್ಮ ಕಾಲೇಜಿನಲ್ಲಿ ನಮ್ಮ ಮೊದಲ ಗೆಟ್ ಟುಗೆದರ್ ಮಾಡುವ ಐಡಿಯಾ ಇದೆ... ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ಚರ್ಚಿಸೋಣ.
🙏🙏🙏🙏
ವಂದನೆಗಳು.
- ಕೆಎಂ (05.09.2019)

0 Comments