ಇಂದು ನಾನು ಹೈದರಾಬಾದ್ ಗೆ ಫ್ರೀಮಿಯಮ್ ತತ್ಕಾಲ್ ಟಿಕೆಟ್ ತೆಗೆದು ಏಸಿ ಕೋಚ್ ನಲ್ಲಿ ಹಾಯಾಗಿ ಮಲಗಿ ನಮ್ಮ ಕಾಲೇಜು ವಾಟ್ಸಾಪ್ ಗ್ರೂಪ್ ನಲ್ಲಿ ತಮಾಷೆ ಯ ಸಂದೇಶ ಗಳ ರವಾನೆಯ ಎಡೆಗೆ ನನ್ನ ಮೊದಲ ಜಮ್ಮು ಕಾಶ್ಮೀರ ಯಾತ್ರೆ ನೆನಪಿಗೆ ಬಂತು...ಅದು ಎಂದಿಗೂ ನಾನು ಮರೆಯದ ಇಪ್ಪತ್ತು ರೂಪಾಯಿ ಯ ಯಾತ್ರೆ....
ಓದಿದಾಗ ನಿಮಗೊಂದು ಕಥೆ ಯಾಗಿ ತೋರಬಹುದು.. ಆದರೆ ಅದು ನನ್ನ ಸ್ವಾಭಿಮಾನ, ಛಲ ಮತ್ತು ದೃಡ ನಿರ್ಧಾರ ಗಳ ಸತ್ಯಾಸತ್ಯತೆ....
ಅದು 2003 ರ ಕೊನೆಯ ಘಟ್ಟದಲ್ಲಿ ನಡೆದ ಘಟನೆ... ನಾನು ತಮಿಳು ನಾಡಿನ ಆವಡಿ ಯಲ್ಲಿ ಒಂದು ವರ್ಷಗಳ ಟ್ರೈನಿಂಗ್ ಮುಗಿಸಿ ದ ಕೂಡಲೇ ನೇರ ಜಮ್ಮು ಕಾಶ್ಮೀರ ದಲ್ಲಿ ಕರ್ತವ್ಯ ಕ್ಕೆ ನೇಮಕ ಗೊಂಡಿದ್ದೆ... ಮೊತ್ತಮೊದಲ ಡ್ಯೂಟಿ ಮಾತಾ ವೈಷ್ಣವಿ ದೇವಿಯ ದೇಗುಲದ ಸುರಕ್ಷೆ ಆಗಿತ್ತು... ಆವಡಿಯಿಂದ ಕಟ್ರ ವೈಷ್ಣವಿ ದೇವಿಯ ವರೆಗಿನ ಯಾತ್ರೆ ಎಲ್ಲವೂ CRPF Department ನೋಡಿ ಕೊಂಡಿತ್ತು...ಮನೆ ಬಿಟ್ಟು ಒಂದು ಸಂವತ್ಸರ ದಾಟುವ ಹಾದಿಯಲ್ಲಿತ್ತು... ಆಗ ತಿಂಗಳಿಗೆ 3050/- ಸಂಭಳ ಎಲ್ಲಾ ಖರ್ಚು ಬಹಳ ಸೂಕ್ಷ್ಮ ಮಾಡಿ ಇಡೀ ವರ್ಷ ದ ಉಳಿತಾಯ Rs.15,000/- ಕೈಯಲಿತ್ತು. ನಾನು 30 ದಿನಗಳ ರಜೆ ಪಡೆದು ಮನೆಗೆ ಬಂದೆ. ಜಮ್ಮು ಕಾಶ್ಮೀರದ ದಿಂದ ಮನೆ ತಲುಪುವಾಗ 4 ದಿನ ರಜೆ Train ನಲ್ಲಿ ಕಳೆದಿತ್ತು. ಕೈಯಲ್ಲಿ ನನ್ನ ಮೊದಲ ಸಂಪಾದನೆ ಯ ಹಣವಾದ್ದರಿಂದ ಒಂದೊಂದು ರೂಪಾಯಿ ಲೆಕ್ಕ ಹಾಕಿ ಖರ್ಚು ಮಾಡುತ್ತಿದ್ದೆ. ಆ ಸಮಯದಲ್ಲಿ ನಮ್ಮ ಹಳೆಯ ಬಾವಿಯ ನೀರು ಕುಡಿಯಲು ಅಯೋಗ್ಯ ವಾಗಿದ್ದ ಕಾರಣ ಹೊಸ ಬಾವಿ ತೋಡಲು ನಾವು ತೀರ್ಮಾನಿಸಿದ್ದೆವು. ತಮ್ಮ ಬೊಂಬಾಯಿ ಯಿಂದ ಕಳುಹಿಸಿ ದ ಹಣದಲ್ಲಿ ವಾರದೊಳಗೆ ಬಾವಿತೋಡಿ ನೀರು ಸಿಕ್ಕಿತು. ನಾನು ನನ್ನ ಹಣದಲ್ಲಿ ನಾನು ಬಾವಿಗೆ ರಿಂಗ್ ಹಾಕಲು ತಿರ್ಮಾನಿಸಿದೆ. ನನ್ನ ರಜೆ ಮುಗಿಯುವ ಹಂತದಲ್ಲಿ ಇದ್ದ ಕಾರಣ ವೇಗವಾಗಿ ಕೆಲಸ ಮುಂದುವರಿಯಿತು. ಅಂದಿನ ದಿನಗಳಲ್ಲಿ 22 ರಿಂಗ್ ಗಳಿಗೆ ಕೇವಲ ರೂ.13500/- ಆಗಿತ್ತು. ಆ ಕೆಲಸವೂ ವೇಗದಲ್ಲಿ ಮುಗಿಯಿತು. ನನ್ನ ರಜೆ ಮುಗಿಯುವ ಹಂತದಲ್ಲಿತ್ತು ಆದ್ದರಿಂದ ಕಾಸರಗೋಡಿಗೆ ಹೋಗಿ Railway Warrant ಮೂಲಕ ಯಾವುದೇ ಹಣ ಪಾವತಿ ಆಲ್ಲದೆ ಜಮ್ಮು ವಿಗೆ ಟಿಕೆಟ್ ಬುಕ್ ಮಾಡಿದೆ. ರಜೆ ಯಲ್ಲಿ ಇತರ ಎಲ್ಲಾ ಖರ್ಚು ಕಳೆದು ನನ್ನಲ್ಲಿ ಕೇವಲ ರೂ. 250/- ಉಳಿದಿತ್ತು. ಆದರೆ ಯಾರಿಗೂ ತಿಳಿಯದಂತೆ ಗಂಭೀರ ವಾಗಿ ನಾನಿದ್ದೆ. ನಮ್ಮ ತಂದೆಯವರು ಮೊದಲೇ ತೀರಿಕೊಂಡಿದ್ದರಿಂದ ಆ ಸಮಯಗಳಲ್ಲಿ ನನ್ನ ತಾಯಿ ಒಬ್ಬಂಟಿ ಯಾಗಿರುತ್ತಿದ್ದರು ಅದಕ್ಕಾಗಿ ನಾನು ನೆರೆಮನೆಯ ರಮೇಶ ಮತ್ತು ಜಾಜು ರವರನ್ನು ನಮ್ಮ ಮನೆಯಲ್ಲೆ ಇರುವಂತೆ ಏರ್ಪಾಡು ಮಾಡಿದ್ದೆ.
ನಾನು ಬೇಗ್ ಏರಿಸಿ ಹೊರಡುವ ಸಮಯದಲ್ಲಿ ತಾಯಿಯ ಆಳು ನೋಡಲು ತಾಳಲಾರದೆ ಬೇಗನೆ ಅವರ ಕಾಲಿಗೆ ನಮಸ್ಕರಿಸಿ ಹೊರಗೆ ಬಂದೆ. ನನ್ನನ್ನು ತನ್ನ ಮಗನಂತೆ ನೋಡಿ ಕೊಳ್ಳುವ ನನ್ನ ಪ್ರೀತಿಯ ಅಕ್ಕ ಬಾವನವರೂ ಮನೆಗೆ ಬಂದಿದ್ದರು. ಅಕ್ಕ ತನ್ನ ಕೈಯಾರೆ ಮಾಡಿದ ಅಕ್ಕಿವಡೆ ಹಾಗೂ ಪದಾರ್ಥಗಳನ್ನು ಬುತ್ತಿ ಯಲ್ಲಿ ಹಾಕಿ ನನ್ನ ಕೈಗಿತ್ತಲು. ಅವರಿಗೂ ನಮಸ್ಕರಿಸಿ ಯಾತ್ರೆ ಗೆ ಹೊರಟೆ..ನನ್ನ ಆತ್ಮೀಯ ಮಿತ್ರ ರು ಮಾತ್ರವಲ್ಲ ನನ್ನ ಸಹೋದರರಂತಿದ್ದ ರಮೇಶ ಹಾಗೂ ಜಾಜು ರವರಿಗೆ ತಾಯಿ ಯವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಅವರ ಕೈಗೆ 50 - 50 ರ ನೋಟುಗಳನ್ನಿತ್ತು ನಾನು ಮನದೊಳಗೇ ಅಳುತ್ತಿದ್ದರೂ ಎಲ್ಲರಿಗೂ ಯಾತ್ರೆ ಹೇಳುತ್ತಾ ಹೊರಟೆ...ಹತ್ತಿರ ದ ಮನೆಯವರು ಮುತ್ತಪ್ಪನನ್ನು ನಂಬುವವರು, ಅಲ್ಲಿ ಮುತ್ತಪ್ಪನ ಕಟ್ಟೆಯಿದೆ ..ಅಲ್ಲಿಗೆ ಹೋಗಿ ಪ್ರಾರ್ಥಿಸುವಾಗ ಆ ಮನೆಯ ಸುಗಂಧಿ ಮತ್ತು ಅವರ ಮಗ ಪವಿ ಅಲ್ಲೇ ಇದ್ದರು ...ರಜೆ ಕಳೆದು ಹೋಗುವಾಗ ಅವರನ್ನು ಕಂಡು ಏನೂ ಕೊಡದೆ ಹೋಗುವುದು ಸರಿಯಲ್ಲ ಎಂದನಿಸಿತು.. ಕೈಯಲ್ಲಿದ್ದದ್ದು ಒಂದು 100 ರೂಪಾಯಿ ಹಾಗೂ ಒಂದು 50 ರೂಪಾಯಿ ನೋಟು...ಹೆಚ್ಚು ಚಿಂತಿಸದೆ ಒಂದು ನೂರು ರೂಪಾಯಿ ನೋಟು ತೆಗೆದು ಸುಗಂಧಿ ಯ ಕೈಗಿತ್ತು "ಐವ ನಿಕ್ಕ್ ಐವ ಪವಿ ಗ್ ಆವಾ" (ಐವತ್ತು ನಿನಗೆ ಐವತ್ತು ಪವಿ ಗೆ ಆಯಿತಾ) ಎಂದು ಹೇಳಿ ಅಲ್ಲಿಂದ ಹೊರಟು ರೋಡ್ ಸೈಡ್ ಗೆ ಬಂದಾಗ ಕುಂಬಳೆಯಿಂದ ಕರೆಸಿದ ದೇವದಾಸ ರವರ ಅಟೋ ಬಂದು ತಲುಪಿತು..ಅಟೋ ಹಿಡಿದು ಕುಂಬಳೆಗೆ ಬಂದೆ..ಬಾಡಿಗೆ ರೂ. 25/- ಕೊಟ್ಟೆ , ಕೈಯಲ್ಲಿ ಕೇವಲ 25 ರೂಪಾಯಿ ಬಾಕಿ ಇತ್ತು.. ನಾನು ಬುಕ್ ಮಾಡಿದ ಟ್ರೈನ್ ಗೆ ಕುಂಬಳೆಯಲ್ಲಿ ಸ್ಟಾಪ್ ಇಲ್ಲದ ಕಾರಣ ಕುಂಬಳೆ ಯಿಂದ ಬಸ್ ಹಿಡಿದು ಕಾಸರಗೋಡಿಗೆ ಬಂದೆ ಆಗ ಟಿಕೆಟ್ ಬೆಲೆ ಐದೋ ಏಳೋ ಆಗಿತ್ತು ..ಬಸ್ ಇಳಿದು ಕಾಸರಗೋಡು ಬಸ್ ಸ್ಟಾಂಡ್ ನಿಂದ ರೈಲ್ವೇ ಸ್ಟೇಷನ್ ವರೆಗೆ ನಡೆದು ಹೋದೆ.. ಸ್ವಲ್ಪ ಸಮಯದಲ್ಲೇ ಟ್ರೈನ್ ಬಂತು.. ಹತ್ತಿ ಕುಳಿತೆ.. ಆಗ ಕೈಯಲ್ಲಿ ಕೇವಲ 20 ರೂಪಾಯಿ ಉಳಿದಿತ್ತು...
ನಾಲ್ಕುದಿನದ ಯಾತ್ರೆ ಅದೂ ಮೊದಲ ಬಾರಿ ಒಬ್ಬಂಟಿಯಾಗಿ ಜಮ್ಮು ವಿಗೆ ... ಆದರೂ ಮನೆಯವರಲ್ಲಾಗಲೀ ಅಥವ ಇತರ ಯಾರಲ್ಲಾಗಲೀ ತನ್ನ ಆರ್ಥಿಕ ಸಮಸ್ಯೆ ಯನ್ನು ತೊರ್ಪಡಿಸಿರಲಿಲ್ಲ ಅದು ನನ್ನ ಅಭಿಮಾನದ ಪ್ರಶ್ನೆ ಆಗಿತ್ತು.. ಮಾತ್ರ ವಲ್ಲ ಯಾರಲ್ಲೂ ಸಹಾಯ ಯಾಚಿಸಬಾರದೆಂಬ ದೃಡ ನಿಶ್ಚಯ ಮನಸ್ಸಿನವನಾಗಿದ್ದೆ, ಆದ್ದರಿಂದ ಹೇಗಾದರೂ ಇದ್ದ ಹಣದಲ್ಲಿ ಜಮ್ಮು ತಲುಪಲೇ ಬೇಕೆಂಬ ಛಲವಿತ್ತು....ಅಂತೂ ಒಂದು ದಿನದ ಆಹಾರ ಅಕ್ಕ ಕೊಟ್ಟ ಬುತ್ತಿ ಯಿಂದ ನೆರವೇರಿತು... ಬಾಕಿ ಮೂರುದಿನ ಕೇವಲ ರೈಲ್ವೆ ಸ್ಟೇಷನ್ ನ ನೀರು ಕುಡಿದು ದಿನರಾತ್ರಿ ಮೇಲಿನ ಬರ್ತ್ ನಲ್ಲಿ ಮಲಗಿ ದಿನಕಳೆದೆ...ಹೇಗೋ ಜಮ್ಮು ತಲುಪಿದೆ...ಅಲ್ಲಿಂದ ಕಟ್ರ ವೈಷ್ಣವಿ ದೇವಿ ಡ್ಯೂಟಿ ಕೇಂಪ್ ಗೆ ಒಂದು ಗಂಟೆಯ ಯಾತ್ರೆ ಇದೆ... ನಮಗೆ ಜಮ್ಮು ವಿನಿಂದ police convoy ಯಲ್ಲಿ ಉತ್ತರ ಕ್ಕೆ ಯಾತ್ರೆ ಇರುವುದು ಅದು ಎಲ್ಲಾ ದಿವಸಗಳಲ್ಲಿ ಇರುವುದಿಲ್ಲ convoy ಹೋಗುವ ದಿನಗಳ ವರೆಗೆ ಜಮ್ಮು ಕೇಂಪ್ನಲ್ಲಿ ತಂಗಬೇಕು.. ಸ್ವಲ್ಪ ಯಾತ್ರೆ ಮಾತ್ರ ಇರುವುದಾದರೆ ನಾವು ಬಸ್ ನಲ್ಲಿ ಮುಂದುವರಿಸಬಹುದು ಅದು ನಮ್ಮ ದೇ ರಿಸ್ಕ್ ನಲ್ಲಿ... ನನಗಂತೂ ಹಸಿವು ತಡೆಯುತ್ತಿರಲಿಲ್ಲ ಶರೀರ ತುಂಬಾ ಸುಸ್ತಾಗಿತ್ತು..ಹತ್ತಿರ ದ ಬಸ್ ಸ್ಟಾಪ್ ಗೆ ಹೋಗಿ ವಿಚಾರಿಸಿದಾಗ ಕಟ್ರ ವೈಷ್ಣವಿ ದೇವಿ ಕೇಂಪ್ ವರೆಗೆ ರೂ. 18/- ಎಂದರು ಬೇಗನೆ ಬಸ್ ಏರಿದೆ..ಹೇಗೋ ಕೇಂಪ್ ತಲುಪಿದೆ...
ಸಂಜೆಯ ಸಮಯವಾಗಿತ್ತು ಮೆಸ್ ನಲ್ಲಿ ರಾತ್ರಿ ಯ ಭೋಜನ ರೆಡಿ ಆಗುತ್ತಿತ್ತು... ಮೆಸ್ ಪಿಸಿ ಗೆ ನಾನು ಮದ್ಯಾಹ್ನ ಊಟಮಾಡಿಲ್ಲ ಎಂದಷ್ಟೇ ಹೇಳಿದ್ದೆ, ಕೂಡಲೇ ನನಗೆ ಬಿಸಿಯೂಟ ಚಪಾತಿ ಬಡಿಸಿದರು...ಅವಸರದಲ್ಲಿ ಬಾಯಿಗೆ ತುರುಕಿದೆ ಆದರೆ ಹೊಟ್ಟೆ ಗಂಟಲು ಬತ್ತಿಹೋಗಿದ್ದರಿಂದ ಬಾಯಿ ಯಿಂದ ಕೆಳಗೆ ಇಳಿಯುತ್ತಿರಲಿಲ್ಲ..ಸ್ವಲ್ಪ ನೀರು ಕುಡಿದು ಊಟ ಮುಂದುವರಿಸಿದೆ. ಊಟ ಕಳೆದು ಕಂಬಳಿ ಮೇಲೆ ಬಿದ್ದಾಗ, ಕಷ್ಟ ವೆನಿಸಿದರೂ ಸಾದಿಸಿದೆನೆಂಬ ಸಂತೋಷ ಮನದೊಳಗಿತ್ತು. ಕೆಲವು ಸಮಯಗಳ ನಂತರ ಮತ್ತೊಮ್ಮೆ ಊರಿಗೆ ಬಂದಾಗ ಮನೆಯಲ್ಲಿ ಎಲ್ಲರೂ ಕೂಡಿರುವ ಸಮಯದಲ್ಲಿ ನಗುತ್ತಾ ಹಾಸ್ಯ ರೂಪದಲ್ಲಿ ಎಲ್ಲರ ಎದುರು ಈ ವಿಷಯ ತೆರೆದಿಟ್ಟೆ ಆಗ ಅಕ್ಕ ಮತ್ತು ಅಮ್ಮ ನವರ ಕಣ್ಣುಗಳಲ್ಲಿ ನೀರು ಉಕ್ಕಿ ಹರಿಯುತ್ತಿತ್ತು... ಅಂದಿನಿಂದ ನಾನು ಹೊರಡುವ ಮೊದಲು ಅಮ್ಮ ನನ್ನ ಪರ್ಸ್ ಪರಿಶೋಧಿಸಲು ಶುರುಮಾಡಿದರು..ಅಕ್ಕ ಮಾತ್ರ ಅಂದಿನಿಂದ ನಾನು ಹೊರಡುವಾಗ ನನ್ನ ಕಿಸೆಯಲ್ಲಿ ಹಣ ತುರುಕಿಸಿಯೇ ಬಿಡುತ್ತಾಳೆ....
ಹಾಗೊಂದು ಇಪ್ಪತ್ತು ರೂಪಾಯಿ ಯ ಮರೆಯಲಾಗದ ಜಮ್ಮು ಯಾತ್ರೆ
---- ಕುಂಡಾಪುಗುತ್ತು ದೇರಣ್ಣ ರೈ ಕ್ಲೆನ ಮಗೆ ಪೆರ್ವತ್ತೋಡಿ ಗುತ್ತು ಉಮೇಶ್ ರೈ-----
0 Comments