Ticker

5/recent/ticker-posts

Header Ads Widget

MANGALORE UNIVERSITY

ಎರಡು ದಶಮಾನಗಳ ನಂತರದ ಮಿತ್ರರ ಸಮ್ಮಿಳನ...

ಹೌದು.... 2000 ದಲ್ಲಿ ಡಿಗ್ರಿ ಮುಗಿಸಿ ಬೇರೆಯಾದ ನಾವು ನಮ್ಮ ಜೀವನದ ಬಿಡುವಿಲ್ಲದ ಯಾತ್ರೆಯಲ್ಲಿ ನಮ್ಮ ಕಾಲೇಜು ಮಿತ್ರ ರನ್ನು ನೆನಪಿಸಲೂ ಸಾದ್ಯ ವಾಗದ ಸಂದರ್ಭದಲ್ಲಿ ಕೃಷ್ಣ ಮೋಹನ ಹಾಗೂ ಫಾರೂಖ್ ಸಾಹೇಬರು ಈ ಗ್ರೂಪನ್ನು ಸೃಷ್ಟಿ ಮಾಡಿ ನಮ್ಮೆಲ್ಲರನ್ನೂ ಒಂದುಗೂಡಿಸುವ ಮಹಾತ್ಕಾರ್ಯವನ್ನು ಮಾಡಿ ನಮ್ಮ ಕಾಲೇಜು ಜೀವನದ ಆ ಸುಮಧುರ ಕ್ಷಣ ಗಳನ್ನು ಮತ್ತೊಮ್ಮೆ ಆಸ್ವಾದಿಸಿ ಮಿತೃತ್ವದ ಪುನರ್ಜೋಡನೆಗೆ ಕಾರಣರಾಗಿದ್ದಾರೆ...ಅವರಿಗೆ ಹೃದಯತುಂಬಿದ ಧನ್ಯವಾದಗಳು ಅಭಿನಂದನೆಗಳು...


ಹೈದರಾಬಾದ್ ನಿಂದ ಕೋರ್ಸ್ ಮುಗಿಸಿ ನೇರ ಕೊಚ್ಚಿ ಗೆ ಬಂದು ಕುಂಬಳೆಗೆ ಬರುವ ಮೊದಲೇ ಕಾಲೇಜು ಬಿಟ್ಟು ಭೇಟಿಯಾಗಿರದ ಆಪ್ತ ಮಿತ್ರ ರಾದ ಸಚಿನ್ ಸುಶೀಲ್ ಹಾಗೂ ವಿಕ್ರಂ ರವರನ್ನು ಇಂದು ಭೇಟಿಯಾಗಲು ತೀರ್ಮಾನಿಸಿದ್ದೆ... ಕೃಷ್ಣ ಮೋಹನರವರೂ ಭೇಟಿ ಯಾಗಲು ಬರುವವರಿದ್ದರು..ಬೆಳಗ್ಗೆ ಎದ್ದು ಬೇಗನೆ ಹೊರಟು ಮಂಗಳೂರಿಗೆ ಬಂದೆ.. ರಶ್ಮಿ ಯವರು ನನ್ನ ಸ್ಟಘಟಸ್ ಗೆ ಕಮೆಂಟ್ ಹಾಕಿ ದಾಗ ನಾನು ಮಂಗಳೂರಿಗೆ ಬರುವ ವಿಷಯ ಅವರಿಗೂ ತಿಳಿಸಿದೆ... ಮಂಗಳೂರು ವಿವಿ ಕಾಲೇಜು  ಹತ್ತಿರ ಬಸ್ ಇಳಿದು ಒಳಗಡೆ ಹೋದೆ ಯಾರೂ ಪರಿಚಯದವರಿರಲಿಲ್ಲ....ಸ್ವಲ್ಪವೇ ಸಮಯದಲ್ಲಿ  ಸಚಿನ್ ತನ್ನ ಗಾಡಿ ಯಲ್ಲಿ ಅಲ್ಲಿಗೆ ಬಂದ..ನಾವು ಕಾಲೇಜಿನ ಮೂಲೆ ಮೂಲೆ ಸುತ್ತಿ ಸೆಲ್ಫಿ ತೆಗೆದು ಗ್ರೂಪಿಗೆ ಹಾಕಿದೆವು.. ಸ್ವಲ್ಪ ದರಲ್ಲೆ ಉದಯ್ ಕುಮಾರ್ ಪ್ರಾಂಶುಪಾಲ ರು ಆಗಮಿಸಿದ ವಿವರ ತಿಳಿದು ಅವರನ್ನು ಭೇಟಿಯಾಗಲು ಕೊಠಡಿ ಗೆ ಹೋದೆವು..

ನಾನು ನನ್ನ ಊರುಡುಗೆಯಾದ ಬಿಳಿ ಅಂಗಿ ಬಿಳಿ ಮುಂಡು ಧರಿಸಿದ್ದೆ..ಸಚಿನ್ ಸ್ಮಾರ್ಟ್ ಆಗಿ ಪೇಂಟ್ ಟಿಶರ್ಟ್ ಧರಿಸಿದ್ದ.. ಉದಯ್ ಕುಮಾರ್ ರವರು ನಮ್ಮ ನ್ನು ಒಳಗೆ ಕರೆದರು.. ರೈ ಎಂದು ಹೇಳಿ ಕೈ ಕೊಡುವಾಗ ಮತ್ತು ಸಚಿನ್ ರವರನ್ನು ಸಚಿನ್ ಅಲ್ಮೇಡ ಎಂದು ಪೂರ್ಣ ಹೆಸರಲ್ಲಿ ಕರೆದಾಗ ನಮಗಂತೂ ಸ್ವರ್ಗ ಇನ್ನೆರಡು ಗೇಣು ಅನ್ನಿಸಿತು.. ಇಪ್ಪತ್ತು ವರ್ಷಗಳಲ್ಲಿ ನಮ್ಮಂತ ಇಪ್ಪತ್ತು ಸಾವಿರದಷ್ಟು ಮಕ್ಕಳು ಆ ಕಾಲೇಜಿನಲ್ಲಿ ಕಲಿತು ಹೋಗಿರಬಹುದು... ಇಷ್ಟು ವರ್ಷಗಳ ನಂತರವೂ ನಮ್ಮ ಹೆಸರು ಸಮೇತ ಅವರು ಕರೆದಾಗ ನಮಗಾದ ಖುಷಿ ಅಷ್ಟಿಷ್ಟಲ್ಲ.. ಅವರು ನಮಗೆ ಚಾ ಬಿಸ್ಕತ್ ಸಿಹಿ ತಿನಿಸಿ ಮಾತಾಡುವಾಗ ಒಂದೆರಡು ಸೆಲ್ಫಿ ಸಚಿನ್ ರವರು ತೆಗೆದರು..ಅಲ್ಲಿಂದ ಹೊರಡುವ ವೇಳೆ ಸರ್ ನಮ್ಮನ್ನು ಕರೆದು ಅವರ ಚೇರ್ ಬಳಿ ನಮ್ಮನ್ನು ನಿಲ್ಲಿಸಿ ಅವರ ಸ್ಟಾಪ್ ಮೂಲಕ ಫೋಟೋ ತೆಗೆಸಿಕೊಂಡಾಗ ನಮಗೆ ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಿತು..ಅವರ ಆ ಸರಳ ಸ್ವಭಾವ ಮೆಚ್ಚುವಂತಹದ್ದು...ಅದರೆಡೆಗೆ ಸಚಿನ್ ತನ್ನ ವ್ಯವಹಾರದ ಬಗ್ಗೆ ಮಾತಾಡುತ್ತಿದ್ದುದಲ್ಲದೆ ಸರ್ ರವರನ್ನು ಆತನ ಗ್ರಾಹಕ ಪಟ್ಟಿಗೂ ಸೇರಿಸಿಕೊಂಡು ಬಿಟ್ಟ.. 

ಅಲ್ಲಿಂದ ಸ್ವಲ್ಪ ಹೊರಗಡೆ ಬಂದು ಸೋಮಾರಿ ಕಟ್ಟೆಯಲ್ಲಿ ಕುಳಿತು ಮಾತಾಡುವಷ್ಠರಲ್ಲಿ ಒಂದು ಟೂವೀಲರ್ನಲ್ಲಿ ಮಾಡೆಲ್ ನಂತಿರುವ ಹುಡುಗಿಯ ಆಗಮನವಾಯಿತು ಹೆಲ್ಮೆಟ್ ಹಾಕಿದ್ದರೂ ನಾನು ಅದು ರಶ್ಮಿ ಆಗಿರಬಹುದೆಂದು ಸಚಿನ್ ಗೆ ತಿಳಿಸಿದೆ.. ಆ ಊಹೆ ಸರಿಯಾಗಿತ್ತು.. ರಶ್ಮಿ ಯವರನ್ನು ಭೇಟಿಆಗಬಹುದೆಂದು ನೆನೆಸಿರದ ಕಾರಣ ಆ ಭೇಟಿ ತುಂಬಾ ಖುಷಿಯನ್ನು ನೀಡಿತು..ಅಷ್ಟರಲ್ಲಿ ಉದಯ್ ಸಾರ್ ರವರು ಹೊರಡಲು ತನ್ನ ಕಾರ್ ಹತ್ತು ವುದರಲ್ಲಿದ್ದರು, ನಾವು ರವೀಂದ್ರ ಕಲಾಭವನದ ಪಕ್ಕ ಇದ್ದೆವು ಆದ್ದರಿಂದ ನಾನು ಕೈ ಸನ್ನೆ ಮೂಲಕ ರಶ್ಮಿ ಯವರನ್ನು ಅವರಿಗೆ ತೋರಿಸಿದಾಗ ಅವರು ನಮಗಾಗಿ ನಿಂತರು.. ರಶ್ಮಿ ರವರು ಅವರೊಡನೆ ಮಾತಾಡುತ್ತಿದ್ದಂತೆ ನಾನು ನನಾಲ್ಕೈದು ಸೆಲ್ಫಿ ತೆಗೆದೆ.. ಸರ್ ರವರು ನಮ್ಮನ್ನು ರವೀಂದ್ರ ಕಲಾಭವನದ ಒಳಗಡೆ ಕರೆದುಕೊಂಡು ಹೋಗಿ ಅದರಲ್ಲಿ ನಡೆದ ಎಲ್ಲ ನವೀಕರಣ ಕೆಲಸ ಗಳನ್ನು ವಿವರಿಸಿದರು.. ಸರ್ ಗೆ ಧನ್ಯವಾದಗಳನ್ನು ಹೇಳಿ ನಾವು ಹೊರಗಡೆ ಬಂದೆವು.




ರಶ್ಮಿ ರವರಿಗೆ ಅಗತ್ಯ ಕೆಲಸವಿದ್ದರಿಂದ ಬೇಗನೆ ಹೊರಟರು.. ನಾನು ಸಚಿನ್ ಜತೆ ಕಾರ್ ನಲ್ಲಿ ಪಿವಿಎಸ್ ಬಳಿ ಬಂದು ವಿಕ್ರಂ ರವರನ್ನು ಭೇಟಿಯಾದೆವು.. ಬಿಡುವಿಲ್ಲದ ಕೆಲಸದಲ್ಲಿ ಇದ್ದರೂ ವಿಕ್ರಂ ನಮಗಾಗಿ ಕಾದುಕುಳಿತ್ತಿದ್ದರು..ಅವರನ್ನು ಭೇಟಿಯಾಗಿ ಕೆಲವು ಹೊತ್ತು ಹರಟೆ ಹೊಡೆದು ಅಲ್ಲಿಂದ ಊಟಮಾಡಲೆಂದು ಹತ್ತಿರ ದ ಹೋಟೇಲೊಂದಕ್ಕೆ ಹೋಗುತ್ತಿದ್ದಾಗ ಸುಶೀಲ್ ಕಾಲ್ ಮಾಡಿದ ಆತನು ಕೂಡಾ ನಮ್ಮ ನ್ನು ಭೇಟಿಯಾಗಲೆಂದು ಆತುರವಾಗಿ ತನ್ನ ಕೆಲಸ ಮುಗಿಸಿ ಹೋಟೇಲ್ ನ ಪಾರ್ಕಿಂಗ್ ಏರಿಯಾ ಕ್ಕೆ ಬಂದು ಸೇರಿದ. ಹೋಟೆಲ್ ಗೆ ಹೋಗುವ ದಾರಿಯಲ್ಲಿ ಆಗ ತಾನೆ ಒಂದು ಇಲಿ ಗಾಡಿ ಯ ಅಡಿಗೆ ಬಿದ್ದು ಸತ್ತಿತ್ತು. ಸುಶೀಲ್ ನನ್ನು ಇಲಿ ಎಂದು ನಾವು ತಮಾಷೆ ಮಾಡುವ ಕಾರಣ ಆ ಸತ್ತು ಬಿದ್ದ ಇಲಿಯನ್ನು ಸುಶೀಲ್ ದಾಟುತ್ತಿರವಷ್ಟರಲ್ಲಿ ಆತನನ್ನು ಕವರ್ ಮಾಡಿ ನಾನು ಪೋಟೋ ಹೊಡೆದೆ ಆತ (ಸುಶೀಲ್) ತನ್ನ ಪೋಟೋ ಸತ್ತ ಇಲಿಯ ಜತೆ ಬರಬಾರದೆಂದು ಓಡಲು ಪ್ರಯತ್ನಿಸಿ ದರೂ ಆತನ ಎಸ್ಕೇಪ್ ಸತ್ತ ಇಲಿಯ ಜತೆ ಕವರಾಗಿತ್ತು..ಅದನ್ನು ಗ್ರೂಪ್ ನಲ್ಲಿ ಹಾಕಿಯೇ ಬಿಟ್ಟೆವು.. ನಂತರ ಆ ವಿಷಯ ಹಿಡಿದು ತಮಾಷೆಯ ಸುರಿಮಳೆಯಾಯಿತು..

ನಾವು ಎಲ್ಲಿದ್ದೇವೆ ಎನ್ನದ ಗೋಚರವಿಲ್ಲದೆ ನಗುತ್ತಿದ್ದೆವು..ಎಲ್ಲರೂ ನಮ್ಮನ್ನೇ ನೋಡುತ್ತಿದ್ದರು. ನಾವು ಊಟಮಾಡುವಷ್ಟರಲ್ಲಿ ಕೃಷ್ಣ ಮೋಹನರವರ ಫೋನ್ ‌ಬಂದಿತ್ತು ಅವರು ಮತ್ತು ಶುಭ ನಮಗಾಗಿ ಕಾಲೇಜಿನಲ್ಲಿ ಕಾಯುತ್ತಿದ್ದರು. ಕೃಷ್ಣ ಮೋಹನರವರಿಗೆ ಅರ್ಜೆಂಟಾಗಿ ತನ್ನ ಕೆಲಸಕ್ಕೆ ಹೋಗಬೇಕಾಗಿದ್ದರೂ ನಮಗಾಗಿ ಕಾದುಕುಳಿತಿದ್ದರು..ನಾವು ಅಲ್ಲಿ ತಲುಪಿ ಅವರಿಬ್ಬರನ್ನೂ ಭೇಟಿಯಾದೆವು. ಕಾಲೇಜಿನ ನಂತರ ಕೃಷ್ಣ ಮೋಹನ ಹಾಗೂ ಶುಭ ರವರನ್ನು ನಾನು ಮೊದಲಬಾರಿಗೆ ಭೇಟಿಯಾದೆ. ಕೃಷ್ಣ ಮೋಹನ ರವರು ನಮ್ಮ ಕೂಟಸೇರುವಿಕೆಯ ಬಗ್ಗೆ ಮಾತಾಡಿ ಹಲವರಿಗೆ ನಾನು ನಿಶ್ಚಯಿಸಿ ದ ದಿನದಂದು ಹಾಜರಾಗಲಾಗದ ಕಾರಣ ಇನ್ನೊಂದು ದಿನ ಇಡಲು ತೀರ್ಮಾನ
ಮಾಡಲಾಯಿತು.. ನಾನು ಅದು ಆದಿತ್ಯವಾರ ವಾಗಿದ್ದರೆ ಉತ್ತಮ ಎಂದು ತಿಳಿಸಿದೆ ಕೃಷ್ಣ ರವರು ಅದು ಉತ್ತಮ ಸರಹೆ ಎಂದರು..ಕೂಡುವಿಕೆಯ ಸಂದರ್ಭದಲ್ಲಿ ನಡೆಯಬೇಕಾದ ಇತರ ವಿಷಯದ ಕುರಿತು ಚಿಕ್ಕದಾಗಿ ವಿವರಿಸಿ ಸೆಲ್ಫಿ ಯೊಂದಿಗೆ ಕೃಷ್ಣ ರವರನ್ನು ಬೀಳ್ಕೊಟ್ಟೆವು.



ಆನಂತರ ನಾನು ಸಚಿನ್ ಸುಶೀಲ್ ಶುಭ ರವರು ಕೇಂಪಸ್ ಸುತ್ತಾಡಿ ಹಳೆಯ ನೆನಪುಗಳನ್ನು ಸವಿದು ಹರಟೆ ಹೊಡೆಯುತ್ತಾ ಸಂಜೆ ಆರು ಗಂಟೆಯವರೆಗೆ ಕಾಲೇಜಿನ ಕೇಂಪಸ್ ನಲ್ಲಿದ್ದೆವು ಸೆಲ್ಫಿ ಗಳ ಸುರಿಮಳೆಯಿತ್ತು.. ನಾವು ನಮ್ಮನ್ನೇ ಮರೆತು ಇಪ್ಪತ್ತು ವರ್ಷಗಳ ಹಿಂದಿನ ಕಾಲೇಜು ಜೀವನದ ಆ ಸುಮಧುರ ಕ್ಷಣ ಗಳನ್ನು ಸವಿದೆವು ಅದನ್ನು ವಿವರಿಸಲು ಅಕ್ಷರ ಗಳು ಸಾಲವು..ಅಲ್ಲಿಂದ ನಾವು ನಾಲ್ವರು ತಾಜ್ ಮಹಲ್ ಗೆ ಹೋಗಿ ಚಾ ತಿಂಡಿ ತಿಂದು ಅಲ್ಲೊಂದು ಗಂಟೆ ಹರಟೆ ಹೊಡೆದು ಸೆಲ್ಫೀ ತೆಗೆದು ಗ್ರೂಪ್  ಗೆ ಹಾಕಿದೆವು.

 ಹೊರಗೆ ಬಂದಾಗ ಸುಶೀಲ್ ರವರು ಜನುಮ ಸಂಖ್ಯೆ ಯ ಮಹತ್ವದ ಕುರಿತು ಚುಟುಕಾಗಿ ವಿವರಿಸಿದರು. ನಿಮ್ಮ ಮತ್ತು ನಿಮ್ಮ ಪತಿದೇವರ ಸಂಖ್ಯೆ ನಿಮ್ಮ ಸುಮಧುರ ಜೀವನವನ್ನು ಸೂಚಿಸುತ್ತದೆ ಎಂದು  ಶುಭ ರವರಿಗೆ ತಿಳಿಸಿದಾಗ ಆಕೆಗೆ ಖುಷಿ ಯೋ ಖುಷಿ ನನ್ನ ಮತ್ತು ಸಚಿನ್ ರವರ ಸಂಖ್ಯೆ ಗಳು ಚೆನ್ನಾಗಿದೆ ಎಂದೇ ತಿಳಿಸಿದ. ಸಮಯ ಏಳು ಆಗುವಷ್ಟರಲ್ಲಿತ್ತು ಶುಭ ರವರು ಹೊರಡಲು ಅನುವಾದಾಗ ಆಕೆ ಯನ್ನು ಸುಶೀಲ್,  ನಾನು ಸಂಖ್ಯೆ ಯ ಫಲ ಹೇಳಿದ ಖುಷಿ ಯಲ್ಲಿ ಪತಿದೇವರಲ್ಲಿಗೆ ಅರ್ಜೆಂಟಾಗಿ ಓಡುತ್ತಿದ್ದಾಳೆ ಎಂದು ತಮಾಷೆ ಮಾಡಿದಾಗ ಅದಕ್ಕಿಂತ ತಮಾಷೆ ಯಲ್ಲಿ ಉತ್ತರಿಸಿ ನಗುತ್ತಾ ನಮ್ಮನ್ನು ಬೀಳ್ಕೊಟ್ಟಲು.. 

ಅಲ್ಲಿಂದ ನಾವು ಸುಶೀಲ್ ರವರ ಗಾಡಿಯಲ್ಲಿ ಹೊರಟು ಸಚಿನ್ ರವರ ಗಾಡಿ ನಾವು ಮದ್ಯಾಹ್ನ ಊಟಮಾಡಿದ ಹೋಟೆಲ್ ನಲ್ಲಿ ಪಾರ್ಕ್ ಮಾಡಿದ ಕಾರಣ ಅಲ್ಲಿ ಆತನನ್ನು ಬಿಡಲು ಅಲ್ಲಿ ಬಂದೆವು. ಆತ ಗಾಡಿಯಿಂದ ಇಳಿದಾಗ ನನಗೇನೂ ಕಳಕೊಂಡಂತೆ ಭಾಸವಾಯಿತು. ಸಚಿನ್ ರವರಿಗೆ ಅಪ್ಪುಗೆಯ ಬೀಳ್ಕೊಡುಗೆ ಕೊಟ್ಟು ಮುಂದುವರಿದೆವು. ತೊಕ್ಕೊಟ್ಟು ತಲುಪಿದಾಗ ಸೆಲ್ಫೀ ಯೊಂದಿಗೆ ಸುಶೀಲ್ ರವರಿಗೆ ಧನ್ಯವಾದ ಹೇಳುತ್ತಾ ಗಾಡಿಯಿಂದ ಇಳಿದೆ. ಅಲ್ಲಿಂದ ಬಸ್ ಹತ್ತಿ ಕುಂಬಳೆ ತಲುಪಿ ರಾತ್ರಿ ಎಂಟುವರೆಗೆ ಮನೆ ತಲುಪಿದೆ. ಇಂದಿನ ನನ್ನ ಗೆಳೆಯ ಗೆಳತಿಯರ ಭೇಟಿ ನನ್ನನ್ನು ಇಪ್ಪತ್ತು ವರ್ಷಗಳ ಹಿಂದೆ ಗೆ ಕೊಂಡುಹೋಗಿತ್ತು. ಮನಸ್ಸಿಗೆ ಏನೋ ನೆಮ್ಮದಿ. ಕಳೆದುಕೊಂಡದ್ದನ್ನು ಪಡೆದಂತಹ ಸಂತೃಪ್ತಿ. ಎಲ್ಲ ವನ್ನು ಮರೆತು ಸಂಜೆಯ ವರೆಗೆ ಆ ಸುಮಧುರ ಕ್ಷಣ ಗಳನ್ನು ಕಳಗಯಲು ಸಾಧ್ಯ ವಾಯಿತು.. ಮನಸ್ಸಲ್ಲಿ ಈಗ ಒಂದೇ ಚಿಂತೆ ಕಾಡುತ್ತಿದೆ.. ಮುಂದಿನ ಭೇಟಿ ಯಾವಾಗ ಸಾದ್ಯ ವಾಗಬಹುದು...


ಉಮೇಶ್ ರೈ

Post a Comment

0 Comments