ಸ್ನೇಹಿತರೇ.. ಈ ಬರಹ ಓದಿದ ಬಳಿಕ ದಯವಿಟ್ಟು ಯಾರೂ ಥಂಬ್ ರೈಸ್ 👍 ಮಾಡಬೇಡಿ.
ನೀರಸವಾದ ಇಂತಹ ಇಮೋಜಿ ಹೆಚ್ಚಿನ ಭಾವನೆಯನ್ನೇನೂ ಸ್ಫುರಿಸುವುದಿಲ್ಲ. ಸಾಧ್ಯವಾದರೆ ಎರಡು ವಾಕ್ಯದಲ್ಲಿ ನಿಮ್ಮ ಅನಿಸಿಕೆ ಹಂಚಿಕೊಂಡರೆ ಅದು ಹೆಚ್ಚಿನ ಸಂತೋಷ ಕೊಡುತ್ತದೆ.
ಅಂದು ಬಿಕಾಂನಲ್ಲಿ ಸುಧಾ ಮೇಡಂ ಪಾಠ ನಡೆಯುತ್ತಿದ್ದಾಗ.... ಅವರಿಗೆ ಕ್ಲಾಸಿನಲ್ಲಿ ಸಣ್ಣ ಸಣ್ಣ ಇರಿಟೇಶನ್ ಮಾಡಿದರೆ (ಹರಟೆ, ಪಿಸುಪಿಸು ಮಾತನಾಡುವುದು ಇತ್ಯಾದಿ) ಬೇಗ ಸಿಟ್ಟು ಬರುತ್ತಿತ್ತು. ಅಂತಹ ಸಂದರ್ಭ ಐದು ಹತ್ತು ನಿಮಿಷ ಪಾಠ ನಿಲ್ಲಿಸಿ ಕ್ಲಾಸಿನ ನಡುವೆ ಬಂದು ಸೀರಿಯಸ್ಸಾಗಿ ಬೈತಾ ಇದ್ರು. ಆಗ ಎಲ್ಲ ನಿಶ್ಯಬ್ಧ ಆಗ್ತಾ ಇತ್ತು. ಅವರು ಬೈಯ್ಯುವ ನಡುವೆ ಸ್ವಲ್ಪ ಗ್ಯಾಪ್ ಕೊಡುವಾಗ... ಹಿಂದಿನ ಬೆಂಚಿನಿಂದ ಯಾರಾದರೂ ಹೇಳ್ತಾ ಇದ್ರು... ಆರೆಗ್ ಕೋಪ ಬೈದ್ಂಡುಂಬೆ ಪಾತೆರೊಡ್ಚ್ಯ ಅಂತ.... ಅದು ಅವರಿಗೆ ಕೇಳಿಸಿ ಕಿಸಕ್ಕನೆ ನಗು ಬರ್ತಾ ಇತ್ತು. ಅಲ್ಲಿಗೆ ಬೈಗಳು ಸ್ಟಾಪ್. ಈ ದೃಶ್ಯ ಈಗಲೂ ನನಗೆ ಚೆನ್ನಾಗಿ ನೆನಪಿದೆ.
---
ಮತ್ತೆ ಅನಸೂಯಾ ಮೇಡಂ ಪಾಠ ಮಾಡಿ ಕೊನೆಯ ಅರ್ಧ ಗಂಟೆಯೋ ಏನೋ ನೋಟ್ಸ್ ಡಿಕ್ಟೇಟ್ ಮಾಡ್ತಾ ಇದ್ರು. ಬರೆದು ಬರೆದು ಸಾಕಾದರೆ ಇನ್ನು ಸಾಕು ಮೇಡಂ ಅಂತ ರಿಕ್ವೆಸ್ಟ್ ಮಾಡ್ತಾ ಇದ್ದೆವು. ಅವರು ಸ್ವಲ್ಪ ಬರೀರಪ್ಪ ಅಂತ ಪುನಹ ರಿಕ್ವೆಸ್ಟ್ ಮಾಡ್ತಾ ಇದ್ರು. ಆದರೂ ಕೊನೆಯ ಹತ್ತು ನಿಮಿಷ ರೆಸ್ಟ್ ಕೊಡ್ತಾ ಇದ್ರು.
--
ಇವೆಲ್ಲ ಪುಟ್ಟ ಪುಟ್ಟ ಘಟನೆಗಳು. ನೆನಪಿಸುತ್ತಾ ಹೋದರೆ ನೂರಾರು ಇವೆ. ಬದುಕಿನಲ್ಲಿ ಮತ್ತೊಮ್ಮೆ ಅದೇ ತರಗತಿಯಲ್ಲಿ ಕುಳಿತು ಮತ್ತೊಮ್ಮೆ ಯುವಕರಾಗಿ ಪಾಠ ಕೇಳಲು ಅಸಾಧ್ಯ. ಅದೇ ಥರ ಟೆನ್ಶನ್ ರಹಿತರಾಗಿ, ಭವಿಷ್ಯದ ಬಗ್ಗೆ ದೊಡ್ಡ ಹೊರೆ ಹೊತ್ತವರಂತೆ ಇರದೆ, ಹುಡುಗಾಟಿಕೆಯ ಹುಡುಗರಾಗಿ ಇಂದಿನ ಚಿಂತೆ ಮಾತ್ರ ಇಂದಿಗೆ ಎಂಬ ಭಾವದಿಂದ ಇರುವ ಹಂತವನ್ನು ನಾವಿಂದು ದಾಟಿ ಬಂದಿದ್ದೇವೆ. 20 ವರ್ಷಗಳ ಈ ದೊಡ್ಡ ಅವಧಿ ನಮ್ಮ ಬದುಕನ್ನು, ಭಾವಗಳನ್ನು, ಜವಾಬ್ದಾರಿಗಳನ್ನು ಸಾಕಷ್ಟು ಹೆಚ್ಚಿಸಿದೆ....
ಆಯುಷ್ಯದ ಸಿಂಹಪಾಲನ್ನು ಬಹುಶಹ ನಾವೆಲ್ಲ ದಾಟಿ ಬಂದಿದ್ದೇವೆ. ಹಿಂದಿನ ಯಾವುದೇ ಅನುಭವಗಳನ್ನು ಸೇವ್ ಮಾಡಿ, ಡೌನ್ ಲೋಡ್ ಮಾಡಿ ತರುವ ಅವಕಾಶವನ್ನು ದೇವರು ನಮಗೆ ನೀಡಿಲ್ಲ. ನಮಗಿರುವ ಸಾಧ್ಯತೆ ಎಂದರೆ ನೆನಪುಗಳನ್ನು ಮೆಲುಕು ಹಾಕುವುದು ಮಾತ್ರ.
ಆದರೂ...
🌿🌿🌿🌿🌿
20 ವರ್ಷಗಳ ಬಳಿಕ ನಾವು ಮತ್ತೊಮ್ಮೆ ನಾವು ಕಲಿತ ಅದೇ ಕಾಲೇಜಿನಲ್ಲಿ ಮತ್ತೆ ಸೇರಲು ಪ್ರಯತ್ನಿಸ್ತಾ ಇದ್ದೇವೆ. ನಾವು ಕಲಿತ ಅದೇ ಕ್ಲಾಸ್ ರೂಮಿನಲ್ಲಿ ಕುಳಿತು ಒಂದಷ್ಟು ಹೊತ್ತು ಕಳೆಯುವ ಕನಸು ಕಾಣುತ್ತಿದ್ದೇವೆ.ಇದರಿಂದ ಏನು ಸಿಕ್ಕುತ್ತದ್ದೋ, ಏನು ಕಳೆದುಕೊಳ್ಳುತ್ತೇವೋ... ಎಂಬ ಪ್ರಾಕ್ಟಿಕಲ್ ಪ್ರಶ್ನೆ ಇಲ್ಲಿ ಅನಗತ್ಯ. ಯಾಕಂದರೆ ಬದುಕು, ಸಂಸಾರ, ಜವಾಬ್ದಾರಿ, ಸಂಪಾದನೆ, ಅಂತಸ್ತು... ಇತ್ಯಾದಿ ಇತ್ಯಾದಿಗಳನ್ನು ಮೀರಿದ ಭಾವವೊಂದಿದ್ದರೆ ಅದು ಸ್ನೇಹ. ಎಲ್ಲ ಜವಾಬ್ದಾರಿಗಳಿಗಿಂತ ಆಚಿನ ಸಂಬಂಧವದು. ಅದು ತುಂಬಾ ಬೆಲೆ ಕಟ್ಟಲಾಗದ ಮೋಹವೂ ಹೌದು. ಬದುಕಿನ ಜಂಜಾಟಗಳ ನಡುವೆ ಒಂದಷ್ಟು ಹೊತ್ತು ಗೆಟ್ ಟುಗೆದರ್ ನೆಪದಲ್ಲಿ ನಾವು ಒಂದು ಕಡೆ ಸೇರಿದರೆ ಮತ್ತೊಮ್ಮೆ ರಿಫ್ರೆಶ್ ಆಗಿ ಒಂದಷ್ಟು ಉತ್ಸಾಹದ ಚಿಲುಮೆಗಳಾಗಿ ನಾವೇ ಕಟ್ಟಿದ ಈ ಹೊಸ ತಂಡಕ್ಕೆ ಹೊಸ ಕಳೆ ಬಂದೀತು ಅಂದುಕೊಳ್ಳುತ್ತೇನೆ...
ಡಿಸೆಂಬರ್ 15, ಆದಿತ್ಯವಾರ ಈ ಶುಭ ಘಳಿಗೆಗೆ ನೀವೆಲ್ಲರೂ ಸಾಕ್ಷಿಗಳಾಗುತ್ತೀರಿಲ್ಲವೇ...
ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ. ನಮ್ಮ ಮನವಿಗಳಿಗೆ ಸ್ಪಂದಿಸಿ.... ಕಾರ್ಯಕ್ರಮವನ್ನು ಐತಿಹಾಸಿಕ ಆಗಿಸಿ...
ಇತಿ ನಿಮ್ಮ ವಿಶ್ವಾಸಿ
🙏🙏🙏
ಕೆಎಂ (04.12.2019)

0 Comments