Ticker

5/recent/ticker-posts

Header Ads Widget

MANGALORE UNIVERSITY

ಕಳೆದು ಹೋದ ಕಾಲ ಮರುಕಳಿಸಿಬಾರದೆಂಬ ಮಾತು ಸುಳ್ಳಾಯಿತೇ ?


ಹೌದು, 1997-2000 ರಲ್ಲಿ ಬಿ. ಕಾಂ ಪದವಿ  ವ್ಯಾಸಂಗವನ್ನು ಮುಗಿಸಿ ಯೂನಿವರ್ಸಿಟಿ ಕಾಲೇಜು ಮಂಗಳೂರನ್ನು ಬಿಟ್ಟು ಜೀವನದ ಹಾದಿ ಹುಡುಕಿ ಹೊರಟ ನಮಗೆ ಆ ಕಾಲೇಜು ಜೀವನ ಮರುಕಳಿಸಿ ಬಾರದೆಂಬ ಪೂರ್ಣ ಪ್ರಜ್ಞೆ ಇತ್ತು. ಆದರೆ ಇಂದಿನಂತೆ ತಾಂತ್ರಿಕ ಜಗತ್ತು ಆ ಸಮಯದಲ್ಲಿ ಮುಂದುವರಿದಿರದ ಸಮಯವಾದ್ದರಿಂದ ಕಾಲೇಜು ಮುಗಿದಾಗಲೇ ಒಟ್ಟಿಗೆ ವ್ಯಾಸಂಗ ಮಾಡಿದ ನಮ್ಮ ಗೆಳೆಯ ಗೆಳತಿಯರ ನಡುವಿನ ನಂಟು ಮುರಿದು ಹೋಯಿತು.



ಹೊಟ್ಟೆ-ಬಟ್ಟೆ ಯ ಓಟದಲ್ಲಿ ಊರುಬಿಟ್ಟವರೆಷ್ಟೋ, ನಾಡು ಬಿಟ್ಟವರೆಷ್ಟೋ, ಹೊರದೇಶಕ್ಕೆ ಯಾತ್ರೆ ಯಾದವರೆಷ್ಟೋ ಯಾರಿಗೂ ಏನೂ ತಿಳಿಯದ ಸ್ಥಿತಿ. ಕೇವಲ ಒಬ್ಬಿಬ್ಬರ ಸಂಪರ್ಕ ಬಾಕಿಯಾಗಿತ್ತು. ಕಾಲ ಚಕ್ರ ಎಷ್ಟು ವೇಗವಾಗಿ ತಿರುಗುತ್ತಿತ್ತೆಂದರೆ 19 ವರ್ಷಗಳು ದಾಟಿದ್ದೇ ತಿಳಿಯದೆ ಹೋಯಿತು. ಕಾಲೇಜು ಮಕ್ಕಳಾಗಿದ್ದ ನಾವು ಮಕ್ಕಳ ಹೆತ್ತವರಾಗಿಬಿಟ್ಟಿದ್ದೆವು. ಕಾಲೇಜು ಮುಂದೆಗಡೆಯಿಂದ ಯಾವಾಗಲಾದರೂ ಸಾಗುತ್ತಿದ್ದಾಗ ಆ ಹಳೆಯ ನೆನಪುಗಳು ಮನಸ್ಸಿನೊಳಗೆ ಮೂಡಿಬರುತ್ತಿದ್ದುವು. ಆದರೆ ಆದೆಲ್ಲಾ ಎಂದಿಗೂ ಮರುಕಳಿಸಿಬಾರದೆಂಬ ಗೋಚರವಿತ್ತು. ಮತ್ತೊಮ್ಮೆ ಆ ಕಾಲೇಜಿನಲ್ಲಿ ಆ ಕ್ಲಾಸ್ನಲ್ಲಿ ಅದೇ ಸಹಪಾಠಿಗಳ ಜತೆ ಕುಳಿತು ಅದೇ ಉಪನ್ಯಾಸಕರುಗಳ ಮಾತುಗಳನ್ನು ಕೇಳಬೇಕೆನಿಸುತ್ತಿದ್ದರೂ ಅದು ಕೇವಲ ಕನಸು ಆಗಿತ್ತು. ಆದರೆ ನಾವು ತಿಳಿಯದೆಯೇ ಈ ಕನಸನ್ನು ನನಸುಮಾಡಲು ಇಬ್ಬರು ತೊಡಗಿದ್ದರು. ಅವರುಗಳೇ ಮಾನನೀಯ ಮಿತ್ರರಾಗಿರುವ ಕೃಷ್ಣ ಕುಮಾರ್ ಮತ್ತು ಉಮ್ಮರ್ ಫಾರೂಖ್ ಸಾಹೇಬರು. 

ಮೊದಲಾಗಿ ಇವರುಗಳು ನಮ್ಮ ಸಹಮಿತ್ರರನ್ನು ಒಂದು ಛತ್ರಿ ಯ ಕೆಳಗೆ ತರಲು UCM B.Com 1997-2000 ಎಂಬ ವಾಟ್ಸಾಪ್ ಗ್ರೂಪ್ ಅನ್ನು ಕಳೆದ ಜೂನ್ನಲ್ಲಿ ಶುರುಮಾಡಿ ಸುಶೀಲ್, ಪುಷ್ಪಲತಾ, ನಿತಿನ್  ಮತ್ತಿತರರ ಸಹಾಯದಿಂದ ನಮ್ಮ ಬಿಕಾಂ ಬ್ಯಾಚ್ ನ 80 ಕ್ಕಿಂತ ಹೆಚ್ಚಿನ ಸಹಪಾಠಿ ಮಿತ್ರ ರನ್ನು ಆ ಗ್ರೂಪಿಗೆ ಸೇರಿಸಿದರು. ಅವರೆಲ್ಲರೂ ಸೇರಿ ನಮ್ಮೆಲ್ಲರನ್ನು ಒಟ್ಟು ಸೇರಿಸುವ ಯೋಜನೆಯನ್ನು ನಮ್ಮೊಂದಿಗೆ ಚರ್ಚಿಸಿ ಇಂದು ದಿನಾಂಕ 15.12.2019 ಆದಿತ್ಯವಾರ 19 ವರ್ಷ ದ ಬಳಿಕದ ನಮ್ಮ ಸಮ್ಮಿಳನ ಕ್ಕೆ ಮುಹೂರ್ತ ನಿಗದಿಪಡಿಸಿ ತುಂಬಾ ಶ್ರಮ ಪಟ್ಟು ಅವರುಗಳು ತಯಾರಿ ನಡೆಸಿದರು. 




ಅಂತೆಯೇ ಇಂದು ಸಮ್ಮಿಲನ ಕಾರ್ಯಕ್ರಮ ದ ನಿರ್ವಹಣಾ ಕಮಿಟಿಯವರ ಆತ್ಮಿಯ ಬೇಡಿಕೆ ಮೇರೆಗೆ ನಮ್ಮ H.O.D   ಆಗಿದ್ದ ಮಾನನೀಯ ಸೀತಾರಾಮ್ ಪೂಜಾರಿ ಸರ್, ಪ್ರಸ್ತುತ ಪ್ರಾಂಶುಪಾಲರಾಗಿರುವ ಪೂಜ್ಯ ಡಾ. ಉದಯ್ ಕುಮಾರ್ ಸಾರ್,  ನಮ್ಮ ಉಪನ್ಯಾಸಕರುಗಳಾಗಿದ್ದ ಪೂಜ್ಯ  ಯತೀಶ್ ಕುಮಾರ್ ಸರ್, ಪೂಜ್ಯ ಸುನಂದಾ ಮೇಡಮ್, ಪೂಜ್ಯ ಅನಸೂಯ ಮೇಡಮ್, ಪೂಜ್ಯ ಮೀನ ಮೇಡಮ್, ಪೂಜ್ಯ ಸುಧಾ ಮೇಡಮ್, ಪೂಜ್ಯ ರಾಜಲಕ್ಷ್ಮೀ ಮೇಡಮ್ ರವರುಗಳೂ ಕಾಲೇಜಿಗೆ ಆಗಮಿಸಿದರು. ನಾವು ಒಟ್ಟು 43 ಸಹಪಾಠಿ ಮಿತ್ರ ರೂ ಕಾಲೇಜಿಗೆ ಆಗಮಿಸಿ ನಾವು 19 ವರ್ಷಗಳ ಹಿಂದೆ ಕುಳಿತು ಪಾಠ ಕೇಳಿದ ಅದೇ ಕ್ಲಾಸ್ ನಲ್ಲಿ ಕುಳಿತೆವು.


ಕಾರ್ಯಕ್ರಮ ದ ಆರಂಭ,  ಇಡ್ಲಿ ಚಪಾತಿ ಚಾ ದೊಂದಿಗಿನ ಲಘು ಉಪಹಾರದ ನಂತರ ಶುರುವಾಯಿತು. ಕೃಷ್ಣ ಕುಮಾರ್ ರವರು ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆ ವಹಿಸಿದ್ದರು ಸುಶೀಲ್ ನಿತಿನ್ ಶುಭ ರೇಶ್ಮಾ ಸುಮಿತ್ರಾ ಜಗ್ಗ ಇವರೂ ಸಹಕಾರ ದಲ್ಲಿ ತೊಡಗಿದ್ದರು.  ಸುಕನ್ಯಾ ರವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ನಂತರ ಶುಭರವರಿಂದ ಅತಿಥಿಗಳಾದ ಗುರುಗಳನ್ನು ಸ್ವಾಗತಿಸಿ ಸಹಪಾಠಿ ಮಿತ್ರರ ಮೂಲಕ ಶಾಲು ಹೊದಿಸಿ ಹಾರಹಾಕಿ ಹೂಹಣ್ಣು ಕಾಣಿಕೆ ಮಾಡಿ ಗೌರವಿಸಲಾಯಿತು. ತದನಂತರ ಕಾರ್ಯಕ್ರಮವನ್ನು  ಸುಶೀಲ್ ಮುಂದುವರಿಸಿದರು. ಸುಶೀಲ್ ರವರ ಕಾರ್ಯ ನಿರ್ವಹಣೆ ಎಷ್ಟು ಚೆನ್ನಾಗಿ ತ್ತೆಂದರೆ ಯಾವುದೋ ಟಿವಿ ಶೋ ದಲ್ಲಿ ಕುಳಿತ ಅನುಭವ ವಾಯಿತು. ಎಡೆಎಡೆಗೆ ಒಬ್ಬೊಬ್ಬ ಉಪನ್ಯಾಸಕರ ಬಗ್ಗೆ ಆತನ ಮರೆಯಲಾರದ ನೆನಪುಗಳನ್ನು ಹೇಳಿ ಕಾರ್ಯಕ್ರಮವನ್ನು ಇನ್ನಷ್ಟು ಮಧುರಮಯವಾಗಿಸಿದರು. ಸುದರ್ಶನ್, ನಿತಿನ್, ಸುಮಿತ್ರಾ, ರಾಜೇಶ್ ಪೈ ಮತ್ತಿತರರು ಕಾರ್ಯಕ್ರಮದ ಪೊಟೋ ಹಾಗೂ ವಿಡಿಯೋ ಮಾಡುವಲ್ಲಿ ಪಾತ್ರ ವಹಿಸಿದರು ಉಪನ್ಯಾಸಕರುಗಳು ಒಬ್ಬೊಬ್ಬರಾಗಿ ತಮ್ಮ ಮಾತುಗಳನ್ನು ನಮ್ಮ ಮುಂದಿಟ್ಟುಕೊಂಡು ನಮ್ಮೆಲ್ಲರನ್ನು ಹರಸಿದರು. ತದನಂತರ ಈ ಬ್ಯಾಚ್ ನ ಸಾಧಕರೆಂಬ ಹೆಸರಲ್ಲಿ ಗೆಳತಿ ಶುಭ, ಅಶ್ವಿನ್ ಕುಮಾರ್ ಹಾಗೂ ನನ್ನನ್ನು ನಮ್ಮ ಪೂಜ್ಯ ಗುರುವೃಂದ ದವರು  ಶಾಲು ಹೊದಿಸಿ ಹಾರ ಹಾಕಿ, ಹೂ ಹಣ್ಣು ನೀಡಿ ಗೌರವಿಸಿದರು. ಸಾಧಕರ ಎರಡು ಮಾತು ಮುಂದಿಡುವ ಸಮಯದಲ್ಲಿ  ಅಶ್ವಿನ್ ಚುಟುಕಾಗಿ ಮಾತು ಮುಗಿಸಿದರು.




ನಾನು ಮೊದಲಬಾರಿಗೆ ಕೆಲಸಕ್ಕೆ ಅರ್ಜಿ ಹಾಕುವ ಸಮಯದಲ್ಲಿ 20 ರೂಪಾಯಿ ಗೆ ಕಷ್ಟ ವಾಗಿ ಅದನ್ನು ಗೆಳೆಯ ಸತ್ಯರಾಜರವರು ವಹಿಸಿದ್ದರೆಂದು ಹೇಳುತ್ತಿದ್ದಂತೆ ದುಗುಡ ತುಂಬಿ ಕಣ್ಣಲ್ಲಿ ನೀರುಹರಿದು ಬಂತು ಮಾತಾಡಲಾರದೆ ಒಂದು ಕ್ಷಣ ಸುಮ್ಮನಾದೆ ಎಲ್ಲರೂ ಮೌನವಾಗಿದ್ದರು ಆಗ ಗೆಳೆಯ ಸಚಿನ್ ನೀರು ತಂದು ಕೊಟ್ಟ ಮಾತು ಮುಂದುವರಿಸಿದೆ ನಾನು ಕಾರ್ಯ ನಿರ್ವಹಿಸುತ್ತಿರುವ NIA ಎಂಬ ಸಂಸ್ಥೆ ಅಂದರೇನು ಅದರ ಕಾರ್ಯವೇನು ಎಂಬುದರ ಬಗ್ಗೆ ಚಿಕ್ಕ ವಿವರಣೆ ನೀಡಿದೆ. ಶುಭ ತನ್ನ ಸಾಧನೆಯ ಬಗ್ಗೆ ವಿವರಿಸಿ ಆಕೆ ಅನುಭವ  ನೋವುಗಳನ್ನು ನಮ್ಮ ಮುಂದಿಟ್ಟು ಕಣ್ಣಲ್ಲಿ ನೀರುತುಂಬಿಕೊಂಡು ಮಾತು ನಿಲ್ಲಿಸಿದಳು. ಈ ಗ್ರೂಪನ್ನು ಸ್ಥಾಪನಾ ವ್ಯಕ್ತಿ ಯಾಗಿ ಕೃಷ್ಣ ಕೂಡ ಮಾರ್ರವರನ್ನೂ ಗುರುಗಳ ಮುಖೇನ ಶಾಲುಹೊದೆಸಿ ಹಾರಹಾಕಿ ಹೂಹಣ್ಣು ನೀಡಿ ಗೌರವಿಸಲಾಯಿತು. ಈ ಹಂತದಲ್ಲಿ ವಿದೇಶದಲ್ಲಿ ಕರ್ತವ್ಯ ದಲ್ಲಿರುವ ಫಾರೂಖ್ ಸಾಹೇಬರ ಅಪಾರ ಕೊಡುಗೆಯನ್ನು  ಮಾತಿನ ಮುಖೇನ ಸನ್ಮಾನಿಸಲಾಯಿತು. ಗಂಟೆ ಸುಮಾರು ಒಂದೂವರೆ ಆಗಿತ್ತು, ನಂತರ ಧನ್ಯವಾದ ಸಮರ್ಪಣೆ ಯನ್ನು ನಡೆಯಿತು. ಅನಂತರ  ಉಪನ್ಯಾಸಕ ವೃಂದದೊಂದಿಗೆ ಎಲ್ಲರೂ ಸೇರಿ ಗ್ರೂಪ್ ಫೋಟೋ ತೆಗೆಸಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಭರ್ಜರಿ ಊಟ ಸವಿದು ಗುರುವೃಂದವನ್ನು ಬೀಳ್ಕೊಟ್ಟೆವು. 




ನಾವೆಲ್ಲರೂ ನಮ್ಮ ಕ್ಲಾಸ್ ರೂಂ ಗಳಲ್ಲಿ ಕುಳಿತು ಸಚಿನ್ ರವರ ನಿರ್ವಹಣೆಯಲ್ಲಿ  ನಿತಿನ್ ಶುಭ ಜಗ್ಗರವರ ಸಹಾಯ ದಿಂದ ಮಕ್ಕಳಿಗೆ ಆಟ ನಡೆಸಿ ನಂತರ ನಾವು ಅಂತಾಕ್ಷರಿ, ಬಲೂನ್ ಗೇಮ್ ಮತ್ತು ಹತ್ತು ಹಲವು ಬಗೆಯ ಆಟವಾಡಿ ಪಿಲಿ ಡಾನ್ಸ್, ಗ್ರೂಪ್ ಡಾನ್ಸ್, ರೈಲ್ ಡಾನ್ಸ್ ಮಾಡಿ ಕ್ಲಾಸ್ ನಲ್ಲೇ ಸಂಜೆವರೆಗೆ ಸಮಯ ಕಳೆದೆವು. ಸುಶೀಲ್ ನ ಗಾನಮೇಳ ಎಲ್ಲರನ್ನು ಸಂಜೆಯವರೆಗೆ ಕೂರುವಂತೆ ಮಾಡಿತ್ತು. ಕೆಲವರು ಕಾರಣಾಂತರಗಳಿಂದ ನಿದಾನವಾಗಿ ಹೊರಡಲು ಶುರುಮಾಡಿದರು. ತಮ್ಮ ಕಾರ್ಯದಲ್ಲಿ ಬಿಡುವುದಿಲ್ಲ ದಿದ್ದರೂ ತನುಷ್ ಹಾಗೂ ಸತ್ಯರಾಜ  ಕೂಡಾ ಕೆಲವು ಸಮಯ ನಮ್ಮೊಂದಿಗೆ ಕಳೆದರು. ರಾಜೇಶ್ ಪೈ, ಜಯಲಕ್ಷ್ಮಿ ಹಾಗೂ ಸುಶೀಲ್ ರವರ ಕೊನೆಯ ಹಾಡಿನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. 



ರೇಶ್ಮಾ ರವರು  ಇದರೆಡಗೆ ಉತ್ತಮ ಖಜಾಂಚಿ ಯ ಕಾರ್ಯ ನಿರ್ವಹಣೆ ಯನ್ನು ಕಾರ್ಯ ಕ್ರಮ ದಲ್ಲಿ ಸಕ್ರಿಯ ಭಾಗವಹಿಸುವ ಮೂಲಕ ಮಾಡಿದುದು ಶ್ಲಾಘನೀಯ. ಸನ್ಮಾನ ಕಾರ್ಯಕ್ರಮ ದ ತಯಾರಿಯಲ್ಲಿ  ಸುಮಿತ್ರಾ, ನಿತಿನ್, ಶುಭ, ಜಗ್ಗ, ನವೀನ್, ಪ್ರತಿಭ, ಜ್ಯೋತಿ, ಧನವಂತಿ, ಮತ್ತಿತರರ ಕೊಡುಗೆಯೂ ಅಪಾರವಾಗಿತ್ತು. ಇಂದು ಕಾಲೇಜಿನಲ್ಲಿ ಕಳೆದು ಆ ಮಧುರ ಕ್ಷಣಗಳು ನಮ್ಮನ್ನು 19 ವರ್ಷ ಹಿಂದಕ್ಕೆ ಕೊಂಡುಹೋಗಿತ್ತು. ಎಲ್ಲರು ಕಾಲೇಜು ಮಕ್ಕಳಂತೆ  ವರ್ತಿಸುತ್ತಿದ್ದರು ಯಾರಿಗೂ ಅಹಂಭಾವವಿರಲಿಲ್ಲ. ಮನಸ್ಸಿಗೆ ಎಷ್ಟು ಖುಷಿ ಆಗಿತ್ತೆಂದರೆ ಅದನ್ನು ಪದ ವಾಕ್ಯ ಗಳಲ್ಲಿ ಬಣ್ಣಿಸಲಾಗದು. ಈ ವಾಟ್ಸಾಪ್ ಗ್ರೂಪ್ ನ ಉಗಮದೊಂದಿಗೆ ಈ ಒಂದು ಕಾರ್ಯಕ್ರಮ ಕ್ಕೆ  ಕಾರಣಕರ್ತರಾದ ಕೃಷ್ಣ ಮೊಹನ್ ಮತ್ತು ಫಾರೂಖ್ ಸಾಹೇಬರಿಗೆ ಹೃದಯದಾಳದಿಂದ ಕೋಟಿ ಕೋಟಿ ನಮನಗಳು. ಅಂತೆಯೇ ಈ ಕಾರ್ಯಕ್ರಮ ದ ನಿರ್ವಹಣೆ ಯಲ್ಲಿ ತೊಡಗಿದ್ದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ಇಂದಿನ ದಿನ ದಲ್ಲಿ ಈ ಸಮ್ಮಿಲನ ಕಾರ್ಯಕ್ರಮ ಮುಗಿದಾಗ ನನಗನಿಸಿದ್ದೇನೆಂದರೆ ಕಳೆದು ಹೋದ ಕಾಲ ಮರುಕಳಿಸಿಬಾರದೆಂಬ ಮಾತು ಸುಳ್ಳಾಯಿತೇ ?



--- ಕುಂಡಾಪುಗುತ್ತು ದೇರಣ್ಣ ರೈ ಕ್ಲೆನ ಮಗೆ ಪೆರ್ವತ್ತೋಡಿ ಗುತ್ತು ಉಮೇಶ್ ರೈ-----


Post a Comment

0 Comments