ನಾನು ಕಾಲೇಜು ಕ್ಯಾಂಪಸ್ ಗೆ ಬಂದ ಕೂಡಲೇ ನನ್ನ ಎಲ್ಲಾ ಸಹಪಾಠಿಗಳನ್ನು ನೋಡಿ ತುಂಬಾ ಖುಷಿ ಪಟ್ಟೆ, ನನ್ನ ಕ್ಲಾಸ್ ರೂಮಿನಲ್ಲಿ ನನ್ನ ,ಬೆಂಚಿನಲ್ಲಿ ನಲ್ಲಿ ಕುಳಿತಾಗ ಆದ ಸಂತೋಷ ಅಪಾರ... ಜಗ್ಗ ಅಲ್ಲಿಗೆ ಬಂದು ಡೆಸ್ಕ್ ನಲ್ಲಿ ತಲೆ ಇಟ್ಟು ಕುಳಿತುಕೋ ನಾನು ಸೆಲ್ಪಿ ತೆಗೀತೇನೆ ಅಂದಾಗ ನಗೆ ಬಂತು😍😃😃ಹಳೆಯ ನೆನಪುಗಳು ಮರುಕಳಿಸಿತು...
ಮುಂದಿನ ಬೆಂಚನ್ನು ಮಮತಾಳಿಗೆ ತೋರಿಸಿ ಇದು ನೀನು ಕುಳಿತು ಕೊಳ್ಳುತ್ತಿದ್ದ ಸ್ಥಳ ಎಂದು ನೆನಪಿಸಿಕೊಂಡೆ. ಯಾರಾರು ಎಲೇಲ್ಲಿ ಕುಳಿತ್ತಿದ್ದರು ಎಂದು ಮನಸ್ಸಿನಲ್ಲೇ ಅಂದುಕೊಂಡೇ. ಎಲ್ಲರೊಂದಿಗೆ ಚಿಕ್ಕ ಮಕ್ಕಳಂತೆ ಆಟ ಆಡುವಾಗ ಆದ ಸಂತೋಷ ಅಪಾರ....ಕೊನೆಗೆ ಎಲ್ಲರೂ ನನ್ನ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಕೋರಿದಾಗ ನಾನು ಧನ್ಯೆ ಅಂದು ಕೊಂಡೆ. ಎಲ್ಲಾ ಮುಗಿದು ಹೊರಡುವಾಗ ತುಂಬಾ ಬೇಸರ ವಾಯಿತು., ಛೇ.. ಇ ದಿನ ಯಾಕೇ ಇಷ್ಟು ಬೇಗ ಮುಗಿಯಿತು ಎಂದು... ಒಮ್ಮೆ ಹೊರಟು ಗೇಟಿನ ಹತ್ತಿರ ಬಂದು ಪುನಃ ಹಿಂದಿರುಗಿ ಕ್ಲಾಸ್ ಗೆ ಬಂದು ಸುಶೀಲ್ ಗ್ರೂಪ್ ನೊಟ್ಟಿಗೆ ಒಂದು ಹಾಡು ಹಾಡಿ.. ಎಲ್ಲರಿಗೂ ಬ್ಯಾ ಮಾಡಿ ಅಲ್ಲಿಂದ ಹೊರಟೇ ಬಿಟ್ಟೆ
- ಜ್ಯೋತಿ
0 Comments