Ticker

5/recent/ticker-posts

Header Ads Widget

MANGALORE UNIVERSITY

ಟೀಂ ಲೀಡರುಗಳು

ಸ್ನೇಹಿತರೇ...


ನಿಮಗೆಲ್ಲ ಗೊತ್ತಿದೆ. ಡಿ.15 ಆದಿತ್ಯವಾರ ನಮ್ಮ ಗೆಟ್ ಟುಗೆದರ್ ನಾವು ಕಲಿತ ಕಾಲೇಜಿನ ಆವರಣದಲ್ಲೇ ಫಿಕ್ಸ್ ಆಗಿದೆ... ಈ ದಿನವನ್ನು ನಾವೆಲ್ಲ ಹೇಗೆ ಕಳೆಯುತ್ತೇವೆ ಎಂಬ ಕುರಿತು ನಿಮ್ಮಲ್ಲಿ ಪ್ರಶ್ನೆಗಳಿರಬಹುದು....

ಪ್ರಾಥಮಿಕ ಚರ್ಚೆಯ ಬಳಿಕ ಅಮಿತಾನ ಗೃಹಪ್ರವೇಶದ ದಿನ ನಾವು ಚರ್ಚಿಸಿದ ರೂಪುರೇಶೆ ಹೀಗಿದೆ....


ಅಂದು ಬೆಳಗ್ಗೆ 10 ಗಂಟೆಗೆ ನಾವೆಲ್ಲ ನಮ್ಮ ಕಾಲೇಜಿನಲ್ಲಿ ಸೇರಲಿದ್ದೇವೆ.
ಆ ದಿನ ನಮ್ಮ ಲೆಕ್ಚರರ್ಸ್ ಹಾಗೂ ಪ್ರಾಂಶುಪಾಲರನ್ನೂ ಆಹ್ವಾನಿಸಲಿದ್ದೇವೆ (ಈ ಪ್ರಕ್ರಿಯೆ ನಡೆಯಬೇಕಷ್ಟೆ)
ನಾವು ಬಿಕಾಂ ಕಲಿತ ತರಗತಿಯಲ್ಲೇ ಕುಳಿತು ಸುಮಾರು ಎರಡು ಗಂಟೆ ಕಾಲ ಅನೌಪಚಾರಿಕ ಸಂವಾದ ಅಥವಾ ಸಮ್ಮಿಲನದ ಅವಧಿಯನ್ನು ಮಾತಿನ ಮೆಲುಕುಗಳ ಮೂಲಕ ಕಳೆಯಲಿದ್ದೇವೆ. ಉಪನ್ಯಾಸಕರನ್ನು ಸರಳವಾಗಿ ಅಭಿನಂದಿಸಲಿದ್ದೇವೆ.

ಈ ನಡುವೆ ಪುಟ್ಟದೊಂದು ಲಘು ಉಪಹಾರ ಇರಲಿದೆ.


ಮಧ್ಯಾಹ್ನ ಊಟ (ಹೊಟೇಲ್ ಅಥವಾ ಸುತ್ತಾಟದ ವೇಳೆ) ಇರಲಿದೆ.
ಮಧ್ಯಾಹ್ನದ ಬಳಿಕ ನೀವೆಲ್ಲ ಓಕೆ ಮಾಡುವ ಮಂಗಳೂರು ಸುತ್ತಮುತ್ತಲಿನ ಜಾಗವೊಂದಕ್ಕೆ ಹೊರ ಸಂಚಾರ ವ್ಯವಸ್ಥೆ ಇರುತ್ತದೆ. ಇದಕ್ಕೆ ಇಂತಿಷ್ಟೇ ಸಮಯದ ಮಿತಿ ಇಲ್ಲ. ಆ ಸ್ಥಳದಲ್ಲಿ ಓಡಾಡಿ ಮತ್ತೆ ಸಂಜೆ ವೇಳೆಗೆ ನಮ್ಮ ನಮ್ಮ ಮನೆಗೆ ಮರಳಲಿದ್ದೇವೆ.

ನೀವು ನಿಮ್ಮ ಕುಟುಂಬದ ಸದಸ್ಯರನ್ನೂ ಕರೆ ತರಬಹುದು. ಆದರೆ ಮುಂದಿನ ಭಾನುವಾರ (8ನೇ ತಾರೀಕು)ದ ಮೊದಲು ನೀವೆಷ್ಟು ಮಂದಿ ಬರುತ್ತೀರಿ ಎಂದು ನಮಗೆ (ಸಂಘಟನಾ ಸಮಿತಿ) ತಿಳಿಸಿದರೆ ನಾವು ಮುಂದಿನ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತದೆ.

🌸🌸🌸🌸

ಈ ಕಾರ್ಯಕ್ರಮದ ಸಂಚಾಲಕನ ನೆಲೆಯಲ್ಲಿ ನಾನು ಸುಮಾರು 6-7 ಮಂದಿ ಟೀಂ ಲೀಡರ್ ಗಳನ್ನು ಆಯ್ಕೆ ಮಾಡುತ್ತೇನೆ, ಮಂಗಳೂರಿನಲ್ಲಿ ಸಕ್ರಿಯರಾಗಿರುವವರನ್ನು. ಪ್ರತಿಯೊಬ್ಬರಿಗೂ ನಿಮ್ಮ ನಿಮ್ಮ ಸ್ನೇಹಿತ ವಲಯದ ಸುಮಾರು 10 ಮಂದಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಜವಾಬ್ದಾರಿ ನೀಡಲಾಗುವುದು. ಈ ಪಟ್ಟಿಯನ್ನು ನಾನು ಗ್ರೂಪಿನಲ್ಲಿ ಪ್ರಕಟಿಸಲಿದ್ದೇನೆ. ಟೀಂ ಲೀಡರ್ ಗಳ ಕೆಲಸವೇನೆಂದರೆ ನಾನು ನೀಡಿದ ಪಟ್ಟಿಯಲ್ಲಿರುವ ನಿಮ್ಮ ಸ್ನೇಹಿತರಿಗೆ ವೈಯಕ್ತಿಕವಾಗಿ ಕರೆ ಮಾಡಿ ಗೆಟ್ ಟುಗೆದರ್ ಬಗ್ಗೆ ತಿಳಿಸಬೇಕು (ಗ್ರೂಪಿನಲ್ಲಿ ಇರುವವರು, ಗ್ರೂಪು ಬಿಟ್ಟವರು, ಸೈಲೆಂಟ್ ಗ್ರೂಪಿನಲ್ಲಿ ಇರುವವರಿಗೂ ಸೇರಿಸಿ). ನಂತರ ಅವರು ಕಾರ್ಯಕ್ರಮಕ್ಕೆ ಬರುತ್ತಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಬೇಕು. ಬರುವುದಾದರೆ ಎಷ್ಟು ಮಂದಿ ಬರುತ್ತಾರೆ ಎಂಬುದನ್ನು ದೃಢಪಡಿಸಿ, ನಮಗೆ ಸಂಘಟನಾ ಸಮಿತಿಯವರಿಗೆ ತಿಳಿಸಬೇಕು. (ಸಂಘಟನಾ ಸಮಿತಯದ್ದು ಪ್ರತ್ಯೇತ ವಾಟ್ಸಪ್ ಗ್ರೂಪ್ ಈಗಾಗಲೇ ರಚಿಸಲಾಗಿದೆ). ಅಂತಿಮವಾಗಿ ಈ ಟೀಂ ಲೀಡರ್ ಗಳು ತಮಗೆ ವಹಿಸಿದ ಅಷ್ಟೂ ಸ್ನೇಹಿತರ ಜೊತೆ ನಿರಂತರ ಸಂಪರ್ಕ ಇರಿಸಿ ಕಾರ್ಯಕ್ರಮಕ್ಕೆ ಕರೆ ತರುವ ಜವಾಬ್ದಾರಿ ವಹಿಸಬೇಕು. ಬೇಕಿದ್ದರೆ ನಿಮ್ಮಗೆ ವಾಟ್ಸಪ್ ಗ್ರೂಪ್ ಮಾಡಿ ಫಾಲೋ ಅಪ್ ಮಾಡಬೇಕು.

ಗೆಟ್ ಟುಗೆದರಿಗೆ ಬರಲಾಗದ ದೂರದ ಸ್ನೇಹಿತರಿಗೆ ಇಲ್ಲಿನ ಎಲ್ಲ ಆಗುಹೋಗುಗಳನ್ನು ನಮ್ಮ ಗ್ರೂಪಿನ ಮೂಲಕ ಆಡಿಯೋ, ವಿಡಿಯೋ, ಫೋಟೋಗಳ ಮೂಲಕ ತಲುಪಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗುವುದು.

ದಯವಿಟ್ಟು ಟೀಂ ಲೀಡರುಗಳು ನಿಮ್ಮನ್ನು ಸಂಪರ್ಕಿಸಿದಾಗ ನಿಮ್ಮ ಆಗಮನದ ಸಾಧ್ಯತೆಯನ್ನು ಖಚಿತಪಡಿಸಿ...

🌿🌿🌿


ಟೀಂ ಲೀಡರುಗಳು

1) ಕೆಎಂ
2) ಸುಶೀಲ್ ಕುಮಾರ್
3) ಜಗ್ಗ
4) ಸುಕನ್ಯಾ
5) ರೇಶ್ಮಾ
6) ವನಿತಾ (ಬಾಂಬೆ)
7) ಜ್ಯೋತಿಲಕ್ಷ್ಮೀ
8) ಸುಮಿತ್ರಾ

(ಇನ್ನಷ್ಟು ಟೀಂ ಲೀಡರ್ ಗಳ ಅವಶ್ಯಕತೆ ಕಂಡರೆ ಮುಂದೆ ಸೇರಿಸಲಾಗುವುದು)
---

ನೀವು ಯಾರನ್ನೆಲ್ಲ ಸಂಪರ್ಕಿಸಬೇಕು ಎಂಬ ಪಟ್ಟಿ ನಂತರ ನೀಡುತ್ತೇನೆ.

ಧನ್ಯವಾದಗಳು.

🙏🙏🙏
-ಕೆಎಂ.

Post a Comment

0 Comments