Ticker

5/recent/ticker-posts

Header Ads Widget

MANGALORE UNIVERSITY

ಯುಸಿಎಂ ಬಿಕಾಂ ಗೆಟ್ ಟುಗೆದರ್ ಹೇಗೆ ಆ ಥರ ನಡೀತು... (ಅವಲೋಕನ)

ಸ್ನೇಹಿತರೆ...















ನಿನ್ನೆಯ ಕಾರ್ಯಕ್ರಮವನ್ನು ನಾನು ಸಂಘಟನ ಸಮಿತಿಯಲ್ಲಿದ್ದ ನೆಲೆಯಲ್ಲಿ ತುಂಬ ಹತ್ತಿರದಿಂದ ಗಮನಿಸಿದ್ದೇನೆ. ಕಾರ್ಯಕ್ರಮ ಮುಗಿದ ಬಳಿಕ ಸುದರ್ಶನ್ ಸಹಿತ ನೀವೆಲ್ಲ ನೀಡುತ್ತಿರುವ ಫೀಡ್ ಬ್ಯಾಕ್ ಕೇಳಿಸಿಕೊಂಡ ಬಳಿಕ ಈ ಬರಹ ಬರೆಯದಿರಲು ಸಾಧ್ಯವೇ ಇಲ್ಲ.

ಕಾರ್ಯಕ್ರಮ ಹೇಗೆ ನಮಗೆ ಯಶಸ್ವಿಯಾಗಿ ಕಂಡಿತು...

1) ಕಾರ್ಯಕ್ರಮ ರೂಪುರೇಷೆ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಫಾರೂಕ್, ಸುಶೀಲ, ನಿತಿನ್, ಸಚಿನ್ ನಿಮ್ಮಷ್ಟು ಮಂದಿಯ ಯೋಚನೆ ಮತ್ತು ಯೋಜನೆಗಳು ಮತ್ತು ಯಥಾವತ್ತಾಗಿ ಅದನ್ನು ಜಾರಿಗೆ ತರಲು ನಮಗೆಲ್ಲ ಸಾಧ್ಯವಾಗಿದ್ದು ಮೊದಲನೇ ಪ್ಲಸ್ ಪಾಯಿಂಟ್. ನಿಮ್ಮನ್ನು ಸಂಘಟಕರಾಗಿ ಇರಿಸಿಕೊಂಡು ಎಷ್ಟೇ ದೊಡ್ಡ ಕಾರ್ಯಕ್ರಮವನ್ನಾದರೂ ಹೋಸ್ಟ್ ಮಾಡಬಹುದು ಎಂಬುದು ನಿನ್ನೆ ನನಗೆ ಮನವರಿಕೆಯಾಯಿತು (ನನಗೆ ನೇರವಾಗಿ ನಿಮ್ಮ ಒಡನಾಟ ಈ ತನಕ ಇಲ್ಲದ ಕಾರಣ)
2) ನಮ್ಮ ಸಂಘಟನೆಗೆ ಅಧ್ಯಕ್ಷ, ಕಾರ್ಯದರ್ಶಿ ಎಟ್ಸೆಟ್ರಾ ಎಟ್ಸೆಟ್ರಾ ಅನಗತ್ಯ ಪ್ರೋಟೋಕಾಲ್ ಗಳಿಲ್ಲದ್ದೇ ಕಾರ್ಯಕ್ರಮ ಪ್ರೀತಿಯಿಂದ ನಡೆಯಲು ಮತ್ತೊಂದು ಕಾರಣ. ಎಲ್ಲರೂ ಅವರವರಿಗೆ ವಹಿಸಿದ ಜವಾಬ್ದಾರಿಗಳನ್ನು ಶೇ.100 (ಉತ್ಪ್ರೇಕ್ಷೆ ಅಲ್ಲ) ಪ್ರೀತಿಯಿಂದ ನಿರ್ವಹಿಸಿದ್ದರಿಂದ ಅಡ್ಮಿನ್ ಗಳು ಯಾವುದೇ ಹಂತದಲ್ಲಿ ಟೆನ್ಶನ್ ಮಾಡದೆ ಕಾರ್ಯಕ್ರಮದತ್ತ ಮುಂದಡಿ ಇಡುವ ಹಾಗಾಯ್ತು. ಎಲ್ಲಿಯೂ ಇಗೋ ಕ್ಲಾಶ್, ಅಸಮಾಧಾನ, ಜಗಳ, ಮುನಿಸು ಆಗಿಲ್ಲ. ಅಧ್ಯಕ್ಷ ಇತ್ಯಾದಿ ಇತ್ಯಾದಿ ಇದ್ದರೆ ಆಯೆ ತೂವೊನಡು, ಇಂಬ್ಯೆ ತೂವೊನಡ್ ಇತ್ಯಾದಿ ಇಗೋ ಸಮಸ್ಯೆಗಳು ಅನಗತ್ಯ ಬರುತ್ತದೆ ಎಂಬುದು ನನ್ನ ಅನುಭವ.

3) ನಿತಿನ್, ಸುಶೀಲ್, ಸಚಿನ್ ನೀವು ಮೂರು ಮಂದಿ ಸ್ವಂತ ಬಿಸಿನೆಸ್ ಮಾಡುವವರು, ಫ್ಯಾಮಿಲಿ ಇದೆ... ನಾವೆಲ್ಲ ಮಂಗಳೂರಿನಲ್ಲೇ ಇದ್ದರೂ ಪರಸ್ಪರ ಮುಖತಾ ಭೇಟಿಯಾಗಿ ಮಾತನಾಡಲು ಟೈಮಿಲ್ಲ. ಆದಾಗ್ಯೂ ನೀವೆಷ್ಟು ಅಚ್ಚುಕಟ್ಟಾಗಿ ಮಾಡಿದ್ದೀರಿ ಎಂಬುದೇ ಅಚ್ಚರಿ.

4) ಹೂಗಳನ್ನು ತಂದ ಜ್ಯೋತಿಲಕ್ಷ್ಮೀ, ಲೆಕ್ಕಪತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ರೇಶ್ಮಾ, ಅತ್ಯಂತ ಬೇಗ ಬಂದು ಬ್ಯಾಕ್ ಸ್ಟೇಜಿನಲ್ಲಿ ಸಹಕರಿಸಿದ ಸುಕನ್ಯಾ, ಸುಮಿತ್ರಾ, ಧನವಂತಿ ಹಾಗೂ ಇತರ ಪ್ರತಿಯೊಬ್ಬರೂ.. ಹೇಳಿದ್ದನ್ನು ಹೇಳಿದ ತಕ್ಷಣ ಮಾಡಿದ್ದರಿಂದ ಸಮಯ ಪಾಲನೆ ಸಾಧ್ಯವಾಯಿತು. ನಾವು ಆಲ್ ಮೋಸ್ಟ್ ಅತ್ಯಂತ ಯಥಾಸಾಧ್ಯ ಸಮಯ ಪಾಲನೆ ಮಾಡಿದ್ದೇವೆ. ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಇದಕ್ಕಿಂತ ಹೆಚ್ಚು ಸಮಯಪಾಲನೆ ಸಾಧ್ಯವಿಲ್ಲ.

6) ಇಷ್ಟು ಮಾತ್ರವಲ್ಲ, ಉತ್ಸಾಹದ ಚಿಲುಮೆಗಳಾಗಿ ಇಡೀ ಗ್ರೂಪನ್ನು ಕೊನೆ ತನಕ ಲವಿಲವಿಕೆಯಲ್ಲಿಡಲು ತಮಗರಿವಿಲ್ಲದೇ ಶ್ರಮಿಸಿದ ಸುದರ್ಶನ, ಶುಭಾ, ಜ್ಯೋತಿ, ಧನವಂತಿ, ಅನಿಲ್, ನಿತಿನ್, ಸುಶೀಲ್, ಸಚಿನ್, ಜಗ್ಗ, ಸಂದೇಶ, ಉಮೇಶ... ಇವರೆಲ್ಲರಿಂದಾಗಿ ಬೆಳಗ್ಗೆ ಹಾಗೂ ಮಧ್ಯಾಹ್ನದ ಸೆಶನ್ ಗಳು ಚೇತೋಹಾರಿಯಾಗಿ ಬಂತು.

7) ಹೆತ್ತವರೊಂದಿಗೆ ಬಂದಿದ್ದ ಪುಟ್ಟ ಪುಟ್ಟ ಮಕ್ಕಳು ಕಾರ್ಯಕ್ರಮದ ಒಟ್ಟೂ ಅಂದವನ್ನು ಹೆಚ್ಚಿಸಿದರು. ಸೂಕ್ಷ್ಮವಾಗಿ ಎಲ್ಲ ವಿಡಿಯೋಗಳನ್ನು ಗಮನಿಸಿಯಂತೆ.... ಅವರು ಎಷ್ಟು ಚಂದಕೆ ಇನ್ ವಾಲ್ವ್ ಆಗಿದ್ದರು ನೋಡಿ. ಇಡೀ ಕಾರ್ಯಕ್ರಮದ ಆಡಿಯೋವನ್ನು ರೆಕಾರ್ಡ್ ಮಾಡಿ , ಕೆಲವು ವಿಡಿಯೋಗಳನ್ನು ರೆಕಾರ್ಡ್ ಮಾಡಿ ಗ್ರೂಪಿಗೆ ಹಾಕ್ತಾ ಇದ್ದದ್ದು ಸುಮಿತ್ರಾನ ದೊಡ್ಡ ಮಗಳು.. ಪ್ರತಿಭಾನ ದೊಡ್ಡ ಮಗಳು ಪಿಲಿ ನಲಿಕೆಗೆ ಎಷ್ಟು ಚಂದಕೆ ಸ್ಟೆಪ್ಸ್ ಹಾಕ್ತಾ ಇದ್ದರು ಗಮನಿಸಿ.

8) ಅಲ್ವ ಸಾರ್ ಎನ್ನುವ ಮೂಲಕ ಬೆಳಗ್ಗಿನ ಕಾರ್ಯಕ್ರಮವನ್ನು ಸ್ವಲ್ಪವೂ ಲೋಪವಿಲ್ಲದೆ ನಿರ್ವಹಿಸಿದ ಸುಶೀಲ್, ಪಾಪ, ಮಧ್ಯಾಹ್ನದ ಬಳಿಕ ಅಷ್ಟೆಲ್ಲ ಹೋಂವರ್ಕ್ ಮಾಡಿ ಬಂದು ಇಡೀ ಸಂಜೆಯನ್ನು ಗೇಮ್ಸ್ ಮೂಲಕ ಚಂದಗಾಣಿಸಿದ ಸಚಿನ್ ನಿಮ್ಮಿಬ್ಬರು ಜೋಡೆತ್ತುಗಳ ಉತ್ಸಾಹಕ್ಕೆ ಇಡೀ ಗ್ರೂಪಿನ ಪರವಾಗಿ ಧನ್ಯವಾದಗಳು. ಹೊತ್ತೊತ್ತಿನ ಊಟ, ತಂಡಿ ತರಿಸಿ, ಉಳಿದ ಆಹಾರ ಹಾಳಾಗದಂತೆ ಪಾರ್ಸೆಲ್ ಮಾಡಿ ಕೊಟ್ಟು ಕಳುಹಿಸಿ, ಲೆಕ್ಕಪತ್ರ ಮುಗಿಯುವ ತನಕವೂ ಜೊತೆಗಿದ್ದ ನಿತಿನ್... ಅನಂತಾನಂತ ಧನ್ಯವಾದಗಳು.

9) ಡೌಟು ಡೌಡು ಅಂತ ಹೇಳ್ತಾನೆ ಪ್ರೀತಿಯಿಟ್ಟು ಕಾರ್ಯಕ್ರಮಕ್ಕೆ ಬಂದು ಸ್ವಲ್ಪ ಹೊತ್ತಿನಲ್ಲಿ ಹೋಗುವುದು ಅಂತ ಹೇಳಿ ಸಾಕಷ್ಟು ಹೊತ್ತು ನಮ್ಮ ಜೊತೆ ಕಳೆದ ನಂದೀಶ, ಅಶ್ವಿನ್, ಕೊಚ್ಚಿಯಿಂದ ಬಂದ ಉಮೇಶ, ದೂರದಿಂದ ಬಂದ ಹೇಮಾವತಿ, ಸುಖಲತಾ (ಇನ್ನೂ ಕೆಲವರ ಊರು ನಂಗೆ ಗೊತ್ತಿಲ್ಲ, ಹೆಸರು ಬಿಟ್ಟಿದ್ದರೆ ಕ್ಷಮಿಸಿ), ದಿಢೀರನೆ ಬಂದ ಲತೀಫ್, ಡ್ಯೂಟಿ ಇದ್ದರೂ ಮನಸ್ಸು ಕೇಳದೆ ಬಂದ ತನುಷ್, ಕೌಟುಂಬಿಕ ಕಾರ್ಯಕ್ರಮ ಬಿಟ್ಟು ಬಂದ ಜಗ್ಗ, ಭಾಗೀರಥಿ, ಗಣೇಶ್ ಕಾಮತ್, ಕೊನೆ ಘಳಿಗೆಯಲ್ಲಿ ನಮಗೆ ಪರಿಚಿತರಾದ ಭಾರತಿ, ಶರ್ಮಿಳಾ, ಪ್ರತಿಮಾ ನಾಯಕ್....ಮಕ್ಕಳ ಜೊತೆಗೆ ಬಂದು ಕೊನೇ ತನಕ ಇದ್ದ ಜಯಲಕ್ಷ್ಮೀ, ಸುಮಿತ್ರಾ, ಲೇಡಿಗೋಶನ್ ವನಿತಾ, ರಾಮ ಮೊಗೇರ ನೀವೆಲ್ಲ ಬಂದಿದ್ದರಿಂದಲೇ ಅಷ್ಟು ಜನ ಸೇರುವಂತಾಯಿತು.

10) ಅಡ್ಮಿನ್ ಗಳು ಅವರವರ ಸಾಮರ್ಥ್ಯವನ್ನು ಗಮನಿಸಿ ಆರಿಸಿದ ಎಂಟೂ ಮಂದಿ ಟೀಂ ಲೀಡರುಗಳ ಪರಿಶ್ರಮ, ನಿನ್ನೆಯ ಎಲ್ಲಾ ಕಮಿಟಿಗಳ ಮುಖ್ಯಸ್ಥರ ಬದ್ಧತೆ.... ಕಾರ್ಯಕ್ರಮ ಮುಗಿಸಿ ಬೀಗ ಹಾಕುವ ತನಕವೂ ಜೊತೆಗಿದ್ದ ನಿಮ್ಮ ಕಮಿಟ್ ಮೆಂಟಿಗೆ ಬೆಲೆ ಕಟ್ಟಲು ಅಸಾಧ್ಯ. ಎಲ್ಲರೂ ಕೆಲಸದಲ್ಲಿರುವವರು. ಹೌಸ್ ವೈಫುಗಳು... ಆದರೂ ಒಂದು ದಿನವನ್ನು ನೀವೆಲ್ಲ ನಿಸ್ವಾರ್ಥದಿಂದ ಈ ಕಾರ್ಯಕ್ರಮಕ್ಕೆ ಮೀಸಲಿಟ್ಟಿದ್ದಕ್ಕೆ ಇದು ಸಾರ್ಥಕವಾಯಿತು.

11) ಮುಡಿಪಿನ ಗೆಳೆಯರಾದ ಜಗ್ಗ, ನವೀನ (ಮಗಳ ಸಹಿತ), ನವೀನ ಕುಮಾರ ಕೊನೇ...ಯ ತನಕ ಜೊತೆಗಿದ್ದರು. ಜಗ್ಗ ನನಗಿಂತ ಮೊದಲು ಬಂದು ಎಲ್ಲಾ ಚೇರ್ ಗಳನ್ನು ಒರಿಸಿ, ಕ್ಲೀನ್ ಮಾಡಿ, ತರಗತಿ ಅಲಂಕಾರ ಮಾಡಿ ನೆರವಾಗಿದ್ದು, ಸುಮಿತ್ರಾ ಗುಡಿಸಿದ್ದು, ಶುಭಾ, ಸುಕನ್ಯಾ ಬೋರ್ಡಿನಲ್ಲಿ ವಿವರ ಬರೆದದ್ದು, ರೇಶ್ಮಾ, ಜ್ಯೋತಿ (ಹೆಸರು ಬಿಟ್ಟಿದ್ದರೆ ಕ್ಷಮಿಸಿ) ಸನ್ಮಾನಕ್ಕಿರುವ ವಸ್ತುಗಳ ಜೋಡಣೆಯಲ್ಲಿ ನೆರವಾಗಿದ್ದು ಗಮನಾರ್ಹ.

12) ಇಷ್ಟು ಮಾತ್ರವಲ್ಲ ದೂರದಲ್ಲಿದ್ದು ಕಾರ್ಯಕ್ರಮ ಬರಲಾಗದವರು ಕೂಡಾ ಕಾರ್ಯಕ್ರಮಕ್ಕೆ ಏನು ಮಾಡುತ್ತೀರಿ...ಖರ್ಚಿಗೇನು ಮಾಡುತ್ತೀರಿ ಎಂದು ಕೇಳಿದ್ದು ಮಾತ್ರವಲ್ಲ ಸಹಾಯ ಚಾಚಿದ್ದಾರೆ. ಎಲ್ಲರಿಕ್ಕಿಂತ ಮುಖ್ಯವಾಗಿ ಗಲ್ಫಿನಲ್ಲೇ ಕುಳಿತು ಇಷ್ಟು ಚೆಂದಕೆ ಫೋಟೋಗಳನ್ನು ಬ್ಲಾಗಿನಲ್ಲಿ ಜೋಡಿಸಿದ ಫಾರೂಕ್ ದಿನಾ ಪ್ರೋತ್ಸಾಹ ನೀಡುತ್ತಾ ಬಂದ ರಷೀದ್, ಸಾಲಿ, ವನಿತಾ, ಪಾವನಾ, ಹರಿಮಾಕ್ಷಿ, ಎನ್ ಕೌಂಟರ್ ದಯಾ.... ಹಾಗೂ ಪ್ರತಿಯೊಬ್ಬ ಸ್ನೇಹಿತ, ಸ್ನೇಹಿತೆಯರಿಗೆ ಆಭಾರಿಯಾಗಿರಬೇಕಾದ್ದು ವೈಯಕ್ತಿಕವಾಗಿಯೂ ನನ್ನ ಕರ್ತವ್ಯ.

13) ಉದಯ ಸರ್ ಕೇಳಿದ ರೂಮ್ ಕೊಟ್ಟದ್ದು ಮಾತ್ರವಲ್ಲ, ಕರೆದ ಎಲ್ಲಾ ಉಪನ್ಯಾಕರು ಅತಿಥಿಗಳಾಗಿ ಬಂದದ್ದು ಮಾತ್ರವಲ್ಲ, ಕೊನೆಗೆ ಕ್ಲೀನಿಂಗಿಗೆ ಕೂಡಾ ಉದಯ ಸರ್ ವ್ಯವಸ್ಥೆ ಮಾಡಿದ್ದು ನಮಗೆ ತುಂಬಾ ಸಹಾಯ ಆಯಿತು.

14) ಕೊನೆಯದಾಗಿ ಖರ್ಚು...
ಈ ಕಾರ್ಯಕ್ರಮ ನೆನಪಿಡುವ ದಿನವಾಗಿ ಇರಬೇಕು ಹೊರತು ಯಾರಿಗೂ ಹೊರೆಯಾಗಬಾರದು ಎಂದು ನಾವು (ಕಾರ್ಯಕಾರಿ ಸಮಿತಿ) ಮೊದಲೇ ನಿರ್ಧರಿಸಿದ್ದೆವು. ಯಾರಿಗೂ ದುಡ್ಡಿನ ವಿಚಾರ ಮುಜುಗರ ತರಬಾರದು ಎಂಬುದು ನಮ್ಮ ನಿಲುವಾಗಿತ್ತು. ಹಾಗಾಗಿ ಮಧ್ಯಾಹ್ನದ ಬಳಿಕ ನಾವು ಇಷ್ಟು ಖರ್ಚಾಗಿದೆ ದುಡ್ಡು ಸಾಧ್ಯವಾದವರು ಕೊಡಿ ಎಂದು ಕೇಳಿದ್ದೆವು. 24 ಸಾವಿರ ಖರ್ಚಾದರೆ 28 ಸಾವಿರ ಕಲೆಕ್ಷನ್ ಆಗಿದೆ. ಕೇವಲ ಇಬ್ಬರು ಮಾತ್ರ ಸೇರಿ 11000 ರು. ಕೊಟ್ಟದ್ದನ್ನು ನಾನು ಮರೆಯಲಾರೆ.



---

ಇನ್ನೂ ಹೇಗೆ ಚಂದ ಮಾಡಬಹುದಿತ್ತು....

1) ಮುಖ್ಯವಾಗಿ ನಾವು ಸಂಘಟಕರು ಎಲ್ಲರೂ ಕಾರ್ಯಕ್ರಮ ಹತ್ತಿರ ಬಂದಂತೆಲ್ಲ ಬಿಝಿ ಇದ್ದದ್ದರಿಂದ ಕುಳಿತು ಚರ್ಚಿಸಲು ಸಮಯಾವಕಾಶ ಸಾಕಾಗಲಿಲ್ಲ. ಅದರಿಂದಾಗಿ ಕೆಲವು ಲೋಪಗಳೂ ಆಯಿತು. ನಾವು ಇನ್ನಷ್ಟು ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕಾಗಿತ್ತು... ಅದರ ವಿಮರ್ಶೆಗೆ ಸಮಯ ಸಾಲಲಿಲ್ಲ. ಅದಕ್ಕೆ ವಿಷಾದವಿದೆ.

2) ಆರಂಭಿಕ ಹಂತದಲ್ಲಿ ಪ್ರೊ.ನಾರಾಯಣನ್ ನಾಯರ್ ಸರ್ ಬರಲು ಒಪ್ಪಿದ್ದರು ಅವರಿಗೆ ನೆನಪಿಸಲು ಬಾಕಿ ಆಯಿತು. ವೈಯಕ್ತಿಕ ಮರೆವಿಗೆ ವಿಷಾದವಿದೆ.

3) ಸಮಯಪಾಲನೆ ಇನ್ನೂ ಶಾರ್ಪ್ ಆಗಿದ್ದರೆ ಹೊರ ಸಂಚಾರವೂ ಸಾಧ್ಯವಾಗುತ್ತಿತ್ತು....ಆದರೆ, ದೂರದೂರಗಳಿಂದ ಜನ ಬರಲಿದ್ದ ಕಾರಣ ಇದು ಕಷ್ಟವೇ ಆಯಿತು.

4) ಫೋಟೋ, ಆಡಿಯೋ, ವಿಡಿಯೋ ಇನ್ನಷ್ಟು ವ್ಯವಸ್ಥಿತವಾಗಿ ಗ್ರೂಪಿಗೆ ಬಾಕಬೇಕೆಂಬ ಆಸೆ ಇತ್ತು. ಆದರೆ, ಸಮಯಾವಕಾಶ ಕೊರತೆಯಿಂದ ಜನರನ್ನು ಹುಡುಕಿ ಅದನ್ನು ಅಸೈನ್ ಮಾಡಲು ಬಾಕಿ ಆಯಿತು. ಈ ಕೆಲಸವನ್ನು ಇನ್ನಷ್ಟು ಅಚ್ಟುಕಟ್ಟಾಗಿ ಮಾಡಬಹುದಿತ್ತು....

5) ಯೂಟ್ಯೂಬ್ ಲೈವ್ ನೀಡಲು ವ್ಯವಸ್ಥೆ ಆಗಿತ್ತು. ಆದರೆ, ಅದಕ್ಕೆ ಹೆಚ್ಚಿನ ವ್ಯವಸ್ಥೆ (ಸರಿಯಾದ ಲ್ಯಾಪ್ ಟಾಪ್, ನೆಟ್ ವ್ಯವಸ್ಥೆ ರೂಪಿಸಲು ಸಮಯ ಸಾಲಲಿಲ್ಲ. ಅದು ಸಾಧ್ಯವಾಗಿದ್ದರೆ ಇನ್ನೂ ಚೆನ್ನಾಗಿತ್ತು)

6) ಗ್ರೂಪು ಫೋಟೋ ತೆಗೆಯುವ ಹೊತ್ತಿಗೆ ಕಡಿಮೆ ಬಿಸಿಲು ಇದ್ದಿದ್ದರೆ ಆ ಫೋಟೋ ಇನ್ನೂ ಚಂದ ಬರುತ್ತಿತ್ತು. ಪಾಪ, ಸುದರ್ಶನ್ ತನ್ನ ಕ್ಯಾಮೆರಾದಲ್ಲಿ ತೆಗೆದ ಫೋಟೋದಲ್ಲಿ ಅವರೇ ಇರಲಿಲ್ಲ ಎಂಬುದು ಬೇಸರದ ಸಂಗತಿ.

7) ನನ್ನ ಪ್ರಕಾರ ಸುಮಾರು ನಾಲ್ಕು ಮಂದಿ ವೈಯಕ್ತಿಕ ಸಮಸ್ಯೆಗಳಿಂದಾಗಿ ಕೊನೆ ಘಳಿಗೆಯಲ್ಲಿ ಕಾರ್ಯಕ್ರಮಕ್ಕೆ ಬರಲಿಲ್ಲ. ಎಲ್ಲರೂ ಬಂದಿದ್ದರೆ ಸಂಖ್ಯೆ 50 ದಾಟುತ್ತಿತ್ತು. ಇನ್ನೂ ಚಂದವಾಗುತ್ತಿತ್ತು.

8) ನಮಗೆ ಮಂಗಳೂರಿನಲ್ಲಿರುವವರಿಗೆ ಒಟ್ಟಿಗೆ ಕುಳಿತು 2, 3 ಮೀಟಿಂಗ್ ಮೊದಲೇ ಮಾಡಲು ಸಮಯ ಸಿಕ್ಕಿದ್ದರೆ ನಾವು ಇನ್ನೂ ಪರ್ ಫೆಕ್ಟ್ ಆಗಿ ಮಾಡಲು ಸಾಧ್ಯವಾಗುತ್ತಿತ್ತು...


ನಾವು ಕಾರ್ಯಕ್ರಮದ ಯಶಸ್ಸನ್ನು ಹೊಗಳಿದರೆ ಸಾಲದು.... ಇಂಪ್ರೂವ್ ಮೆಂಟಿನ ಸಾಧ್ಯತೆಗಳನ್ನೂ ಗಮನಿಸಿ ಮುಂದಿನ ಸಲ ಇನ್ನಷ್ಟು ಚೆಂದಕೆ ಮಾಡೋಣ ಎಂಬ ಕಾರಣಕ್ಕೆ ಇಷ್ಟನ್ನು ಬರೆದದ್ದು..

ಥ್ಯಾಂಕ್ಸ್ ಟೂ ಆಲ್ ಎಂಬುದು ಕ್ಲೀಷೆಯ ಮಾತಾದೀತು...


-ಕೆಎಂ (16-12-2019)

Post a Comment

0 Comments