Ticker

5/recent/ticker-posts

Header Ads Widget

MANGALORE UNIVERSITY

ರಾಷ್ಟ್ರಮಟ್ಟದ ಯುವ ಸಂಸತ್ತು ಸ್ಪರ್ಧೆ ಗೆದ್ದಿದ್ದ ಮಂಗಳೂರು ವಿ.ವಿ.ತಂಡ

ಅದು 1998-99ರ ಅವಧಿ ಅಂತ ನೆನಪು. ಭಾರತ ಸರ್ಕಾರದ ಸಂಸದೀಯ ವ್ಯವಹಾರ ಸಚಿವಾಲಯ ನಡೆಸುವ ರಾಷ್ಟ್ರಮಟ್ಟದ ಯುವ ಸಂಸತ್ತು ಸ್ಪರ್ಧೆ ಯಲ್ಲಿ ಮಂಗಳೂರು ವಿ.ವಿ.ಪದವಿ ಕಾಲೇಜು ತಂಡ ಪ್ರಥಮ ಸ್ಥಾನ ಗಳಿಸಿತ್ತು.

ಆರಂಭಿಕ ಹಂತದಲ್ಲಿ ಮಂಗಳೂರು ವಿ.ವಿ.ವ್ಯಾಪ್ತಿಯ ವಿವಿಧ ಕಾಲೇಜುಗಳ ನಡುವೆ ಇದೇ ನಮ್ಮ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಸ್ಪರ್ಧೆ ನಡೆಯಿತು. ಆ ಸ್ಪರ್ಧೆಯಲ್ಲಿ ಉತ್ತಮ ನಿರ್ವಹಣೆ ತೋರಿದ ಆಯ್ದ ವಿದ್ಯಾರ್ಥಿಗಳ ಮೂಲಕ ಮಂಗಳೂರು ವಿ.ವಿ. ಪದವಿ ತಂಡವನ್ನು ರಚಿಸಲಾಯಿತು. ಇದಕ್ಕೆ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದವರು ಆಗ ರಾಜ್ಯಶಾಸ್ತ್ರ ವಿಭಾಗ ಪ್ರಾಧ್ಯಪಕರಾಗಿ ಪ್ರೊ.ಪಾರ್ವತಿ ಅಪ್ಪಯ್ಯ ಅವರು (ಈಗ ಮಡಿಕೇರಿ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರು, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು).

ಈ ಸ್ಪರ್ಧೆಯ ವಿಶೇಷತೆ ಎಂದರೆ ಪಾರ್ಲಿಮೆಂಟಿನಲ್ಲಿ ನಡೆಯುವ ನಡಾವಳಿಗಳನ್ನು ನಿಯಮ ಪ್ರಕಾರವೇ ನಡೆಸಿ ತೋರಿಸಬೇಕಾಗುತ್ತದೆ. ಸ್ಪರ್ಧೆ ನಡೆಯುವುದು ದೆಹಲಿಯಲ್ಲಿ ಅಲ್ಲ. ಆಯಾ ಊರುಗಳಲ್ಲಿ ಸ್ಪರ್ಧಿಗಳು ಪ್ರದರ್ಶನ ನೀಡುತ್ತಾರೆ. ಸಂಸದೀಯ ವ್ಯವಹಾರ ಸಚಿವಾಲಯದ ತಜ್ಞರು ಅಲ್ಲಿಗೇ ಬಂದು ಮಾರ್ಕ್ ಹಾಕುತ್ತಾರೆ.







ಇಂತಹ ರಾಷ್ಟ್ರಮಟ್ಟದ ಸ್ಪರ್ಧೆಯ ಪ್ರದರ್ಶನ ನಡೆದದ್ದೂ ಇದೇ ರವೀಂದ್ರ ಕಲಾಭವನದಲ್ಲಿ. ಆ ತಂಡ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಬಳಿಕ 2001ರಲ್ಲಿ ಅಷ್ಟೂ ವಿದ್ಯಾರ್ಥಿಗಳನ್ನು ದೆಹಲಿಗೆ ಪ್ರೊ.ಪಾರ್ವತಿ ಅಪ್ಪಯ್ಯ ನೇತೃತ್ವದಲ್ಲಿ (ಉಚಿತವಾಗಿ, ಪ್ರಯಾಣ ಭತ್ಯೆ ನೀಡಿ) ಕರೆಸಿ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಬಹುಮಾನ ನೀಡಲಾಯಿತು. ಪಾರ್ಲಿಮೆಂಟ್ ಭವನವನ್ನೂ ವಿಜೇತರಿಗೆ ತೋರಿಸಲಾಯಿತು.

ಈ ತಂಡದಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೆ. ನಮ್ಮ ಕಾಲೇಜಿನ ಉಮ್ಮರ್ ಫಾರೂಕ್, ಬಷೀರ್ ಕಲ್ಕಟ್ಟ, ನಯನಾ ಭಟ್, ಸಂಪತ್ ಆಳ್ವ (ಎಲ್ಲರ ಹೆಸರು ನೆನಪಿಲ್ಲ) ಮತ್ತಿತರು ಜೊತೆಗಿದ್ದರು. ಆಗ ಪ್ರಧಾನಿ ಪಾತ್ರ ನಿರ್ವಹಿಸಿದವರು ನನ್ನ ಸಹಪಾಠಿ ಸಂಪತ್ ಆಳ್ವ, ವಿರೋಧ ಪಕ್ಷದ ನಾಯಕಿ ಆಗಿದ್ದವರು ನಯನಾ ಭಟ್ (ಬಿ.ಎ.). ಆಗಿನ ನೆನಪುಗಳನ್ನು ನೆನಪಿಸುವ ಫೋಟೋಗಳನ್ನು ಇದರೊಂದಿಗೆ ಪೋಸ್ಟ್ ಮಾಡಿದ್ದೇನೆ.

-ಕೃಷ್ಣಮೋಹನ (1999-2000ದ ಬಿ.ಕಾಂ.ಬ್ಯಾಚ್ ಅಲ್ಯೂಮ್ನಿ).

Post a Comment

0 Comments