ಪುಷ್ಪಲತಾ ಚಿಕಿತ್ಸೆಗೆ ನೆರವಿಗೆ ಮನವಿ
ಆತ್ಮೀಯ ಸ್ನೇಹಿತರೇ...
ನಮ್ಮೇಲ್ಲರ ಪ್ರೀತಿಯ ಸ್ನೇಹಿತೆ ಪುಷ್ಪಲತಾ ಅವರು ಇತ್ತೀಚೆಗೆ ಹೆರಿಗೆ ಸಂದರ್ಭ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹಲವು ದಿನಗಳ ಹೋರಾಟದ ಬಳಿಕ ಚೇತರಿಸಿಕೊಂಡಿರುವುದು ನಿಮಗೆಲ್ಲ ತಿಳಿದೇ ಇದೆ. ಇದೀಗ ಆಕೆಯನ್ನು ಕಾಡುತ್ತಿರುವ ಅನಾರೋಗ್ಯದ ಚಿಕಿತ್ಸೆಯ ಮುಂದುವರಿದ ಭಾಗವಾಗಿ ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ಕಿಮೋ ಥೆರಪಿ ಚಿಕಿತ್ಸೆಗೆ ಆಕೆ ಒಳಗಾಗಬೇಕಾಗಿದೆ. ಇದಕ್ಕೆ ಆರಂಭಿಕವಾಗಿ ಸುಮಾರು ಆರು ಕಂತುಗಳಲ್ಲಿ ತಲಾ 20 ಸಾವಿರ ರು.ನಂತೆ ಸುಮಾರು 1,20,000 ಖರ್ಚಿಗೆ ಹಾಗೂ ನಂತರದ ಇತರ ಖರ್ಚು ವೆಚ್ಚಗಳನ್ನು ಸೇರಿಸಿದಾಗ ಅಂದಾಜು (ನಿಖರ ಅಲ್ಲ) 3 ಲಕ್ಷ ರು.ಗಿಂತಲೂ ಹೆಚ್ಚು ಖರ್ಚಾಗಬಹುದು. ಈಗಾಗಲೇ ಆಕೆ ತನ್ನ ಹೆರಿಗೆಯ ಸಂದರ್ಭ ಬಹಳಷ್ಟು ಖರ್ಚುಗಳನ್ನು ಸರಿದೂಗಿಸಿ ಈ ಹಂತ ತಲುಪಿದ್ದಾಳೆ. ಆಕೆಗೆ ತಕ್ಷಣ ಚಿಕಿತ್ಸೆ ಸಿಗಬೇಕಿದೆ.
ಆರೋಗ್ಯ ರಕ್ಷಣೆಗೆ ಈ ಹಂತದಲ್ಲಿ ತುರ್ತು ಚಿಕಿತ್ಸೆ ಬೇಕು. ಆಕೆಗೆ ಈ ಹಣಕಾಸು ಖರ್ಚು ನಿಭಾಯಿಸಲು ಆಗುತ್ತಿಲ್ಲ. ಈ ವಿಷಯ ತಿಳಿದ ನಮ್ಮ ಅಡ್ಮಿನ್ ಟೀಂ ಸುಶೀಲ್ ಜೊತೆ ಚರ್ಚಿಸಿದ್ದು, ನಾವೆಲ್ಲ ಮಾತನಾಡಿ, ನಮ್ಮ ಬ್ಯಾಂಕ್ ಖಾತೆ ಬಳಸಿ ಹಣ ಸಂಗ್ರಹಿಸಿ ಅದರ ಮೂಲಕ ನಮ್ಮಿಂದ ಆದಷ್ಟು ಗರಿಷ್ಠ ಸಹಾಯ ಮಾಡೋಣ ಅಂತ ನಿರ್ಧಿರಿಸಿದ್ದೇವೆ. ಆದ್ದರಿಂದ ಮಾನವೀಯ ದೃಷ್ಟಿಯಿಂದ ನಿಮ್ಮಲ್ಲಿ ಯಾರಿಗೆಲ್ಲ ಸಾಧ್ಯವಿದೆಯೋ ಅವರೆಲ್ಲ ಕೈಲಾದಷ್ಟು ಧನ ಸಹಾಯ ನೀಡಿ ಸಹಕರಿಸಬೇಕು ಅಂತ ಅಡ್ಮಿನ್ ಟೀಂ ಕಡೆಯಿಂದ ವಿನಂತಿಸುತ್ತಿದ್ದೇನೆ.
ಇಂತಹ ಅನಿರೀಕ್ಷಿತ ಅನಾರೋಗ್ಯ ಯಾರನ್ನೂ ಯಾವಾಗಲೂ ಕಾಡಬಹುದು. ಪರಿಸ್ಥಿತಿ ನಮ್ಮ ಕೈಮೀರಿ ಹೋದಾಗ ನಾವೆಲ್ಲ ಅಸಹಾಯಕರಾಗುತ್ತೇವೆ. ನಮ್ಮ ಗೆಳತಿಯೇ ಸಂಕಷ್ಟದಲ್ಲಿರುವಾಗ ಸಹಾಯ ಮಾಡುವುದು ನಮ್ಮ ಧರ್ಮ. ಆದ್ದರಿಂದ ಎಷ್ಟಾಗುತ್ತದೋ ಅಷ್ಟು ದುಡ್ಡನ್ನು ನಮ್ಮ ಬ್ಯಾಂಕ್ ಖಾತೆಗೆ ನೆಫ್ಟ್ ಮಾಡುವ ಮೂಲಕ ಸಹಾಯ ನೀಡಬೇಕೆಂದು ಎಲ್ಲರ ಪರವಾಗಿ ವಿನಂತಿಸುತ್ತಿದ್ದೇನೆ.
ನಮ್ಮ ಗ್ರೂಪಿನ ಅಕೌಂಟ್ ವಿವರ
NAME: KRISHNAMOHANA T
BANK: PUNJAB NATIONAL BANK
BRANCH: MANGALORE BALMATA ROAD
ACCOUNT NUMBER: 3623000109324005
IFSC CODE: PUNB0362300
-ಕೆಎಂ.
0 Comments