ಸ್ನೇಹಿತರೇ
ಎರಡು ಮೂರು ದಿನಗಳಿಂದ ಬರೆಯಬೇಕು ಅಂದುಕೊಂಡದ್ದು ಸಾಧ್ಯವಾಗಿರಲಿಲ್ಲ. ಇಂದು ಸಾಧ್ಯವಾಯಿತು.ಯತೀಶ್ ಸರ್ ಅವರು ಆಫೀಸ್ ಮ್ಯಾನಜ್ಮೆಂಟ್ ಆಂಡ್ ಕಮ್ಯುೂನಿಕೇಶನ್ ತರಗತಿಯಲ್ಲಿ ಪಾಠ ಮಾಡಿದ ನೆನಪು ಒಬ್ಬ ವ್ಯಕ್ತಿಗೆ ಜಾಸ್ತಿ ಅಂದರೆ ಏಕಕಾಲದಲ್ಲಿ 6 ಮಂದಿಯನ್ನು ಮಾತ್ರ ನಿಯಂತ್ರಿಸಲು ಅಥವಾ ಮ್ಯಾನೇಜ್ ಮಾಡಲು ಸಾಧ್ಯ ಅಂತ. ಹೀಗಿರುವಾಗ ಒಂದು ದೊಡ್ಡ ಗ್ರೂಪಿನ 80 ಮಂದಿಯಿಂದಲೂ ನಾವು ಸಮಾನ ಮನಸ್ಕ ನಡವಳಿಕೆ ನಿರೀಕ್ಷಿಸಲು ಕಷ್ಟಸಾಧ್ಯ.
ಆದರೂ ಒಂದು ತರಗತಿಯಲ್ಲಿ ಕುಳಿತು ಮೂರು ವರ್ಷ ಕಲಿತದ್ದು, ಒಂದು ಸಬ್ಜೆಕ್ಟು, ಸಮಾನ ವಯಸ್ಕರು, ಬಹುತೇಕ ನಾವೆಲ್ಲ ಒಂದೇ ಊರಿನವರು, ಒಂದೇ ಭಾಷೆ ಮಾತನಾಡುವವರೂ ಎಂಬುದೂ ನಮ್ಮ ನಡುವಿನ ಸಮಾನತೆಗೆ ತಳಹದಿಯಾಗಿದೆ.
ಈ ನಡುವೆ ಕೇಳಿ ಬರುವ ಕೆಲವು ಅನಗತ್ಯ ಮಾತುಗಳ ಬಗ್ಗೆ ಯಾರೂ ತಲೆ ಕೆಡಿಸಬೇಡಿ ಪ್ಲೀಸ್. ಕಟ್ಟುವುದು ಕಷ್ಟದ ಕೆಲಸ, ಒಡೆಯುವುದು ವಿಘಟಿಸುವುದು ಸುಲಭ. ಯಾರೇ ಆಗಲಿ ಲೀಡ್ ತೆಗೆದುಕೊಂಡು, ಜವಾಬ್ದಾರಿ ತೆಗೆದುಕೊಂಡು ಒಂದು ಕೆಲಸ ಮಾಡಹೊರಟಾಗ ಟೀಕೆಗಳು ಬರುವುದು, ವಿಮರ್ಶೆಗಳು ಬರುವುದು, ಕಾಲೆಳೆಯುವ ಯತ್ನ, ಅಸಹಕಾರ ಬರುವುದು ಸಹಜ. ಅಧನ್ನೆಲ್ಲ ಮೀರಿ ನಿಂತಾಗಲೆ ಕಾರ್ಯಗಳು ನಡೆಯುವುದು. ಅದು ಯಶಸ್ವಿ ಅನಿಸಿದಾಗ ಇಂತಹ ಟೀಕೆಗಳು ಕಾಲೆಳೆಯುವ ಯತ್ನಗಳೆಲ್ಲ ಕ್ಷುಲ್ಲಕವಾಗಿಬಿಡುತ್ತದೆ. ಪ್ರತಿ ಗೆಲವಿನ ಹಿಂದೆಯೂ ಅಪಮಾನ, ಸೋಲಿನ ಕಥೆಗಳಿರುತ್ತವೆ ಅನ್ನುವುದನ್ನು ಮರೆಯಬಾರದು.
ಇನ್ನೊಂದೇನು ಗೊತ್ತಾ.... ನಾನು ಸರಿಯಾದ್ದನ್ನೇ ಮಾಡುತ್ತಿದ್ದೇನೆ. ನಾನು ಹೋಗುತ್ತಿರುವ ದಾರಿ ಸರಿಯಾಗಿದೆ, ನಾನು ಉದ್ದೇಶಪೂರ್ಕವಾಗಿ ಯಾರಿಗೂ ನೋವುಂಟು ಮಾಡುವ ಮನಸ್ಥಿತಿ ಹೊಂದಿಲ್ಲ ಎಂಬುದು ನಮ್ಮ ಅಂತರಾತ್ಮಕ್ಕೆ ಗೊತ್ತಿರುವ ವರೆಗೆ ಕಾರಣವೇ ಇಲ್ಲದ ಬರುವ ಅಫವಾದ ಅಥವಾ ಟೀಕೆಗಳಿಗೆ ಯಾರೂ ತಲೆ ಕೆಡಿಸಬೇಕಾಗಿಲ್ಲ. ಐದು ಬೆರಳುಗಳ ಹಾಗೆ ಐದು ಮನಸ್ಥಿತಿಗಳೂ ಬೇರೆ ಬೇರೆಯೇ ಇರುತ್ತದೆ. ವಿಷಯವನ್ನು ಸ್ವೀಕರಿಸುವುದು, ಪ್ರತಿಕ್ರಿಯಿಸುವುದು, ತಾಳ್ಮೆ, ಸಿಟ್ಟು, ಪ್ರೀತಿ, ವ್ಯಕ್ತಪಡಿಸುವ ಭಾವಗಳಲ್ಲೂ ವ್ಯತ್ಯಾಸ ಇರುತ್ತದೆ. ಹಾಗಾಗಿ ಕೆಲವೊಮ್ಮೆ ನಿರ್ಲಿಪ್ತ ಧೋರಣೆ, ಕೆಲವೊಮ್ಮೆ ಮಾರುತ್ತರ ಕೊಡುವ ಅನಿವಾರ್ಯತೆ, ಕೆಲವೊಮ್ಮೆ ಮೌನವಾಗಿ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ನಾವೆಲ್ಲ ಮಹಾತ್ಮರಲ್ಲ, ಸಾಮಾನ್ಯ ಮನುಷ್ಯರು. ಹಾಗಾಗಿ ಆತ್ಮಾಭಿಮಾನ ಹೊಂದಿರುವ ನಮಗೆ ಕೆಲವೊಮ್ಮೆ ಸಿಟ್ಟು ಬರುವುದು, ಬೇಸರವಾಗುವುದು, ಅಳು ಬರುವುದು, ಆಕ್ರೋಶ ಕಟ್ಟೆಯೊಡೆಯುವುದು ಎಲ್ಲ ಸಹಜ ಸ್ವಭಾವ.... ಆದರೆ, ಕೆಲವೊಮ್ಮೆ ಅವುಗಳನ್ನು ಸರಿದೂಗಿಸಿಕೊಂಡು ಹೋದಾಗಲೇ ಮತ್ತಷ್ಟು ಮುಂದೆ ನಡೆಯಲು ಸಾಧ್ಯವಾಗುವುದು..
ಇನ್ನು ಗ್ರೂಪಿನಲ್ಲಿ ಮೆಸೇಜುಗಳ ರಾಶಿ ಬಗ್ಗೆ ಮಾತನಾಡುವುದಾದರೆ..
ಗ್ರೂಪಿನ ಸಂಚಾಲಕರಾಗಿರುವವರು (ಅಂದರೆ ಗ್ರೂಪಿ ಮಾನಿಟರ್ ಅಂತಲ್ಲ, ಅಡ್ಮಿನ್ ಅನ್ನುವ ನೆಲೆಯಲ್ಲಿ) ಬಹುಸಂಖ್ಯಾತ ಮನೋಭಾವ ಹಾಗೂ ಅಲ್ಪಸಂಖ್ಯಾತ ಮನೋಭಾವ (ಮೆಸೇಜು ಜಾಸ್ತಿ ಬೇಕು, ಬೇಡ ಅನ್ನುವ ನೆಲೆಯಲ್ಲಿ) ಎರಡೂ ಕಡೆಯವರ ಅಹವಾಲುಗಳಿಗೆ ಕಿವಿಕೊಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ವೈಯಕ್ತಿಕವಾಗಿ ಹಲವು ಬಾರಿ ಮೈನ್ ಗ್ರೂಪಿನಲ್ಲಿ ನಾನು ಫಾರ್ವರ್ಡೆಡ್ ಮೆಸೇಜುಗಳು ಬೇಡ ಅಂತ ನಾಲ್ಕಾರು ಸಾರಿ ಹೇಳಿದ್ದೆ ಹೊರತು ಯಾರದ್ದೇ ಮೇಲಿನ ವೈಯಕ್ತಿಕ ದ್ವೇಷ ಅಥವಾ ಸಿಟ್ಟಿನಿಂದಲ್ಲ. ಆರಂಭದಲ್ಲಿ ನನಗೆ ಒಮ್ಮೇ ಜಾಸ್ತಿ ಮೆಸೇಜುಗಳು ಬರ್ತಾ ಇರುವ ಬಗ್ಗೆ ನಾಲ್ಕೈದು ಮಂದಿ ವೈಯಕ್ತಿಕವಾಗಿ ನನಗೆ ದೂರಿದಾಗ ನನಗೆ ಸಿಟ್ಟು ಬಂದಿತ್ತು. ಆಗ ನನಗೆ ತಿಳಿ ಹೇಳಿದ್ದು ನಿತಿನ್.... ಕ್ಲಾಸ್ ಮೇಟುಗಳ ಗ್ರೂಪು ಅಂದ ಮೇಲೆ ಇದೆಲ್ಲ ಸಹಜ. ಏನೂ ಆಗುವುದಿಲ್ಲ. ಎಲ್ಲರೂ ಫ್ರೀಯಾಗಿರಲಿ ಅಂತ ಹೇಳಿದರು. ನಂತರ ಫಾರೂಕ್ ಕೂಡಾ ಇದೇ ಮಾತನ್ನು ತೇಳಿ ಹೇಳಿದರು. ಈ ನಡುವೆ ಯಾವುದೋ ಒಂದು ಅಪ್ರಸ್ತುತ ಮೆಸೇಜು ಗ್ರೂಪಿನಲ್ಲಿ ಬಂದಾಗ ನನಗೂ ಸಿಟ್ಟು ಬಂದಿತ್ತು, ಹಾಗೂ ಅದನ್ನು ನಾನು ವ್ಯಕ್ತಪಡಿಸಿದ್ದೆ. ಅದೂ ಗ್ರೂಪಿನ ಹಿತಾಸಕ್ತಿಗೋಸ್ಕರ ಅಷ್ಟೇ. ಈ ನಡುವೆ ಸುಶೀಲ್ ಈ ಸಮಸ್ಯೆಗೆ ಪರಿಹಾರಕ್ಕಾಗಿ ಸ್ನೇಹಲೋಕ ಗ್ರೂಪು ಆರಂಭಿಸಿದ್ದರು. ನಾನು ಮಾರನೇ ದಿನ ಅವನೊಂದಿಗೆ ಮಾತನಾಡಿ ನಾನು ಕೂಡಾ ಅಧರ ಭಾಗವಾಗಿರುವುದಾಗಿ ಹೇಳಿ ಅಲ್ಲಿಯೂ ನಾನಿದ್ದೇನೆ....
ಇದರ ಅರ್ಥ ಇಷ್ಟೆ... ನಾನೂ ಬಿಝಿ ಇರ್ತೇನೆ, ನನಗೂ ಎಲ್ಲ ಮೆಸೇಜು ಫಾಲೋ ಮಾಡಲು ಆಗುವುದಿಲ್ಲ. ಆದರೂ ಸಾಧ್ಯವಾದಷ್ಟು ನೋಡುತ್ತೇನೆ.ವೈಯಕ್ತಿಕವಾಗಿ ನನಗೆ ಎಷ್ಟು ಮೇಸೇಜು ಗ್ರೂಪಿಗೆ ಬಂದರೂ ಕಿರಿಕಿರಿ ಆಗುವುದಿಲ್ಲ. ಆದರೆ ಮೆಸೇಜುಗಳನ್ನು ಇಷ್ಟ ಪಡದವರಿಗೂ ಕಿರಿಕಿರ ಆಗಬಾರದು, ಅವರ ಭಾವನೆಗಳಿಗೂ ಬೆಲೆ ಕೊಡಬೇಕೆಂಬ ಕಾರಣಕ್ಕೆ ನಾನು ಫಾರ್ವರ್ಡೆಡ್ ಮೆಸೇಜುಗಳನ್ನು ವಿರೋಧಿಸಿದ್ದೇನೆ ಅಷ್ಟೆ...
ಇದಾದ ನಂತರ ನಮ್ಮ ಗ್ರೂಪಿಗೆ ಒಂದು ವರ್ಷವಾದ ದಿನ ಬಂತು. ನನಗನ್ನಿಸಿತು... ಆರಂಭದಲ್ಲಿ ನಮ್ಮ ಜೊತೆಗಿದ್ದು ಬೇರೆ ಬೇರೆ ಕಾರಣಕ್ಕೆ ಗ್ರೂಪ್ ಬಿಟ್ಟವರು ಒಂದು ದಿನವಾದರೂ ಜೊತೆಗಿರಲಿ ಅಂತ. (ನಂತರ ಅವರು ಬಿಡ್ತಾರೆ ಅಂತ ಗೊತ್ತಿತ್ತು). ಹಾಗಾಗಿ ನಾನೇ ನಿರ್ಧಾರ ತೆಗೆದುಕೊಂಡು ನಾಲ್ಕೈದು ಮಂದಿಯನ್ನು ಮೊನ್ನೆ ಗ್ರೂಪಿಗೆ ಸೇರಿಸಿದೆ. ಇವರಲ್ಲಿ 2-3 ಮಂದಿ ಫೇಕ್ ಹೆಸರುಗಳಾಗಿತ್ತು, ಅದನ್ನು ನಂತರ ಫಾರೂಕ್ ಹಾಗೂ ಸುಶೀಲ್ ಗುರುತಿಸಿ ಅವರನ್ನು ರಿಮೂವ್ ಮಾಡಿದ್ದೇನೆ.
ನಂತರ ಏನೇನಾಯ್ತು ಅಂತ ನಿಮಗೆಲ್ಲ ಗೊತ್ತಿದೆ....
ನನಗೆ ಹೇಳುವುದಕ್ಕಿರುವುದಿಷ್ಟೇ... ನಿಜಕ್ಕೂ ನಿಮ್ಮೆಲ್ಲರ ಒಗ್ಗಟ್ಟು, ಲವಲವಿಕೆ ತುಂಬ ಮನಸ್ಸನ್ನು ಗೆದ್ದಿದೆ. ರೆಸ್ಟ್ರಿಕ್ಷನ್ ಗಳನ್ನು ಇರಿಸಿದ್ದು ಗ್ರೂಪಿನ ದೀರ್ಘಕಾಲೀನ ಅಸ್ತಿತ್ವ ಹಾಗೂ ಎಲ್ಲರ ಭಾವನೆಗಳಿಗೂ ಬೆಲೆ ಬೇಕು ಎಂಬ ಒಂದೇ ಕಾರಣಕ್ಕೆ. ಹಲವು ಘಟನೆಗಳ ಬಳಿಕ ನನಗೂ ಅದು ಅಷ್ಟು ಗಂಭೀರ ಅಂತ ಅನ್ನಿಸುತ್ತಿಲ್ಲ. ನಾವೆಷ್ಟೇ ಬಿಝಿ ಇದ್ದರೂ, ಟೈಮಿಲ್ಲಲದಿದ್ದರೂ ಗ್ರೂಪಿನ ಪ್ರತಿ ಮೆಸೇಜು ಒದೋದು ಕಡ್ಡಾಯ ಅಲ್ಲ, ಎಲ್ಲವನ್ನೂ ಆಟೋ ಡೈನ್ ಲೋಡ್ ಗೆ ಇಡಬೇಕಾಗಿಯೂ ಇಲ್ಲ. ಬೇಡದಿದ್ದಾಗೆ ಕ್ಲಿಯರ್ ಚಾಟ್ ಕೊಡುವ ಆಯ್ಕೆ ಇದೆ. ಇವೆಲ್ಲವನ್ನೂ ಬಳಸಿಕೊಂಡು ಬೇಕಾದಾಗ ಗ್ರೂಪನ್ನುಬಳಸಿ, ಬಿಝಿ ಇದ್ದಾಗ ಸುಮ್ಮನ್ನಿದ್ದು ಮ್ಯಾನೇಜ್ ಮಾಡಲು ಸಾಧ್ಯವಿದೆ.
ಮನಸ್ಸು ಮಾಡಿದರೆ ಎಲ್ಲರೂ ಇದನ್ನು ಪಾಲಿಸಬಹುದು. ಗ್ರೂಪು ಅಂದರೆ ಮನೆಯಿದ್ದ ಹಾಗೆ ಇಲ್ಲಿ ನಮಗಾದ ಬೇಸರ, ಸಿಟ್ಟು, ಅಕ್ಕರೆಗಳನ್ನು ಹೇಳಲು ಅವಕಾಶ ಇದೆ. ಆದರೆ ಆಧಷ್ಟು ಮಟ್ಟಿಗೆ ಯಾರನ್ನೂ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ನೋಯಿಸದಂತಿರಬೇಕು. ಆ ಬಗ್ಗೆ ಜಾಗ್ರತೆ ಬೇಕು ಅಷ್ಟೇ...
ನಾವು ಈ ಗ್ರೂಪಿನಿಂದ ಏನು ಒಳ್ಳೆಯದನ್ನು ಪಡೆದಿದ್ದೇವೋ ಅದನ್ನು ಮಾತ್ರ ಹಿಡಿದುಕೊಂಡು ಮುಂದೆ ಹೋಗೋಣ... ಕೆಟ್ಟ ನೆನಪುಗಳನ್ನು ಅಲ್ಲಿಯೇ ಸಮಾಧಿ ಮಾಡಿ ಚಲಿಸೋಣ.... ಹಿಂದೆ ಆಗಿರಬಹುದಾದ ತಪ್ಪುಗಳನ್ನು ಮತ್ತೆ ಮಾಡದಿರೋಣ (ಇಷ್ಟ ಇಲ್ಲದಿರುವವರನ್ನು ಮತ್ತೆ ಗ್ರೂಪಿಗೆ ಸೇರಿಸಿ ನಾನು ಮಾಡಿದ ತಪ್ಪು ಸಹಿತ)... ಆಗಲೇ ಹೇಳಿದ ಹಾಗೆ ನಮ್ಮ ಅಂತರಾತ್ಮಕ್ಕೆ ನಮ್ಮ ಕೆಲಸ ಪ್ರಾಮಾಣಿಕ ಅಂತ ಅನ್ನಿಸಿದರೆ ಇನ್ಯಾರನ್ನೂ ನಾವು ಕನ್ವಿನ್ಸ್ ಮಾಡಬೇಕಾದ ಅವಶ್ಯಕತೆ ಇಲ್ಲ...
ಇನ್ನೊಂದು ವಿಷಯ
ಫಾರ್ವರ್ಡೆಡ್ ಮೆಸೇಜುಗಳು, ತುಂಬ ಗೌಜಿ ಗದ್ದಲದ ಪಟ್ಟಾಂಗದ ಸಂದರ್ಭ ಬಳಸಲು ಹಾಗೂ ಮುಕ್ತವಾಗಿ ಮಾತನಾಡಲು ಅಂತ ಸ್ನೇಹಲೋಕ ಗ್ರೂಪು ಇದೆ.... ನಾನೂ ಅದರ ಸಂತೋಷದಲ್ಲಿ ಭಾಗಿ... ಆದರೆ ಮತ್ತೊಮ್ಮೆ ನಮ್ಮ ಈ ಗ್ರೂಪು ಲವಲವಿಕೆಯಿಂದ ಇರಲು ಈ ಹಿಂದಿನ ಕೆಲವು ಪ್ರವೃತ್ತಿಗಳು ಮರಳಬೇಕಾಗಿದೆ ಅನ್ನುವುದು ನನ್ನ ವೈಯಕ್ತಿಕ ಅನಿಸಿಕೆ....
1) ಉಮೇಶನ ಪೊರ್ಲುದ ಪಾತೆರ ದಿನಾ ಬರ್ತಿದೆ, ಹಾಗೆಯೇ ಬರಲಿ... ಮುಂದುವರಿಯಲಿ
2) ಹೇಮಾವತಿ ಬೇರೇನೂ ಮಾತನಾಡುವುದಿಲ್ಲ. ಹಾಗಾಗಿ ಅವಳ ಗುಡ್ ನೈಟ್ ಮೆಸೇಜು ಒಂದು ಲವಲವಿಕೆಯ ಪ್ರತೀಕ ಅಂತ ಅದೂ ಬರುತ್ತಿದೆ, ಬರಲಿ
3) ಸುಶೀಲ್ ಹಾಡುಗಳು ಈಗ ಕಡಿಮೆಯಾಗಿವೆ... ಅದೂ ಬರುತ್ತಾ ಇರಲಿ
5) ಸುಕನ್ಯಾ ಈಗ ಹಾಡುವುದೇ ಇಲ್ಲ. ಸುಕನ್ಯಾ ಸಾಧ್ಯಾವದಾಗಲೆಲ್ಲ ಹಾಡು ಹಾಕುತ್ತಲೇ ಇರಲಿ
6) ಪಾವನಾ ಒಂದೆರಡು ಸಲ ಹಾಡಿದ್ದಾಳೆ. ಅವಳದ್ದೂ ಹಾಡು ಬರಲಿ
7) ಜಗ್ಗನ ಮನವಿಗಳು ಈಗ ಸಂಕ್ಷಿಪ್ತವಾಗುತ್ತಿವೆ... ಮನವಿಗಳು ಗ್ರೂಪನ್ನು ಎಚ್ಚರಿಸುತ್ತಲೇ ಇರಲಿ...
8) ಸುದರ್ಶನ ಎಲ್ಲಿಗೆ ಹೋಗಿದ್ದಾನೆ. ಸುದರ್ಶನ, ಜಮಾಲು ಮತ್ತಿತರರ ಮೆಸೇಜುಗಳು ಗೈರು ಹಾಜರಾಗಿವೆ. ಮತ್ತೆ ಸಭೆಗೆ ಬಂದು ಮಾತನಾಡಿ
9) ಸುಮಿತ್ರ ಎಲ್ಲಿದ್ದಾಳೆ... ಯಾಕೆ ಮಾತನಾಡ್ತಾ ಇಲ್ಲ, ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಳು. ಅವಳು ಮತ್ತೆ ಆಕ್ಟಿವ್ ಆಗಬೇಕು.
10) ಫಾರೂಕ್ ವಾರಕ್ಕೊಮ್ಮೆಯಾದರೂ ಒಂದು ಅಂಕಣ ಬರೆಯಬೇಕು
11) ಸಚಿನ್, ಲೇಡಿಗೋಶನ್ ವನಿತಾ ಮತ್ತಿತರರು ಪ್ರತ್ಯಕ್ಷವಾಗುವುದು ಕಮ್ಮಿಯಾಗಿದೆ... ದಯವಿಟ್ಟು ಆಕ್ಟಿವ್ ಆಗಿರಿ... ಪುರುಸೊತ್ತು ಇರುವಾಗಲಾದರೂ ಮಾತನಾಡಿ....
12) ವಿಕ್ರಂ ಜೋಷಿ ಚಿತ್ರಗಳನ್ನು ಬರೆಯುವುದು ಕಡಿಮೆಯಾಗಿದೆ... ಮತ್ತೆ ಶುರುವಾಗಬೇಕು...
ನಮಗೆ ಮಿತಿಗಳು ಬೇಡ... ನಮ್ಮನ್ನು ನಾವೇ ಸಂಭಾಳಿಸಿಕೊಂಡು ಗ್ರೂಪು ನಡೆಸಲು ಸಾಧ್ಯವಿದೆ. ಲವಿಲವಿಕೆ ಉಳಿಸಿಕೊಳ್ಳೋಣ...
ಈ ಗ್ರೂಪಿನ ಬಗ್ಗೆ ನಿಮಗಿರುವ ಪ್ರೀತಿ, ಅಕ್ಕರೆ, ಸಲುಗೆ ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರಿಗೂ ಇರುವ ಅಧಾಕರ ಭಾವ ಹೀಗೆಯೇ ಮುಂದುವರಿಯಲಿ....
ಧನ್ಯವಾದಗಳು
-ಕೆಎಂ.ತಲೆಂಗಳ
0 Comments