Ticker

5/recent/ticker-posts

Header Ads Widget

MANGALORE UNIVERSITY

ಒಂದು ವರ್ಷದ ಸಂಭ್ರಮ-ಸಂದೇಶಗಳು





ನಾನು ಸಮೂಹದಲ್ಲಿ ಸಕ್ರಿಯವಾಗಿ ಪ್ರತಿನಿತ್ಯ ಪ್ರತಿಯೊಂದು ವಿಷಯಗಳಿಗೂ ಪ್ರತಿಕ್ರಿಯಿಸುವ ಸದಸ್ಯಳಲ್ಲ, ಹಾಗಂತ ಗುಂಪಿನಲ್ಲಿ   ಚರ್ಚಿಸುವ ಯಾವುದೇ ವಿಷಯಗಳನ್ನು  ಎರಡು  ಮೂರು ದಿನಗಳು ತಡವಾದರೂ ಗಮನಿಸಿ, ನಮ್ಮ ಗುಂಪು ಎಂದು  ಮನದಲ್ಲೇ  ಹೆಮ್ಮೆ ಪಡುವಂತಹ ಸಾಮಾನ್ಯ  ಸದಸ್ಯೆ.

       ಸರಿ ಸುಮಾರು ಇಪ್ಪತ್ತು ವರ್ಷಗಳ ಅಂತರ ದಾಟಿ ಇದೀಗ  ಕಳೆದ ಕೆಲವು ತಿಂಗಳುಗಳಿಂದ ನಾವು ಈ ಸಮೂಹದ ಸದಸ್ಯರರಾಗಿರುವುದು ನಮಗೊಂದು ದೊರೆತ  ಸುವರ್ಣವಕಾಶ ಎಂದು  ನನ್ನ ಅನಿಸಿಕೆ. ಆಡ್ಮಿನ್ ಗಳಲ್ಲೊರ್ವರಾದ ಉದಾರ ಫರೂಕ್ ರವರು ತಮ್ಮ ಸಂದೇಶದಲ್ಲಿ ಹೇಳಿರುವಂತೆ, ನಾವು  ಈ ಸಮೂಹದಲ್ಲಿ ಸೇರಿ ಓಂದು ವರ್ಷವಾಯಿತು ಹಾಗೂ  ಇದು ನಮ್ಮ ಜೀವನದ ಮಧ್ಯಂತರ ಘಟ್ಟ. ಸಾಧನೆಯ  ನಾಗಲೋಟದಲ್ಲಿ ಒಮ್ಮೆ ನಿಂತು  ಹಿಂದೆ  ಮುಂದೆ ನೋಡುವ ಸಮಯ. ಬಾಲ್ಯ, ಶಿಕ್ಷಣ, ಸಂಸಾರ ಎಂದು ಯೋಚಿಸಿ ದಡ ಮುಟ್ಟುತ್ತಲೇ ಇನ್ನೇನು ಎನ್ನುವಾಗ ಸ್ವಲ್ಪ ಬ್ರೇಕ್ ಬೀಳುವ  ಕಾಲಘಟ್ಟ.ಇದೀಗ ನಾವು ನಮ್ಮ ಮನಸ್ಸನ್ನು  warm up ಮಾಡಬೇಕಾಗಿದೆ. ಇದಕ್ಕಾಗಿ ನಮ್ಮನ್ನು ಚೆನ್ನಾಗಿ ಅರಿತಿರುವ ಎನನ್ನೂ ಬಯಸದೆ ನಿಷ್ಕಲ್ಮಶವಾಗಿ ಮನಸನ್ನು ಪ್ರಫುಲ್ಲ ಗಳಿಸಲು ಸಾಧ್ಯ ವಾಗುವುದು ಸಮಾನ ವಯಸ್ಕ ರಾದ   ನಮ್ಮ  ಸಹಪಾಠಿ  ಸ್ನೇಹಿತರಿಗೆ ಮಾತ್ರ ಎಂದು ನನ್ನ ಅನಿಸಿಕೆ.

  ಕೃಷ್ಣಮೋಹನ ಮತ್ತು  ಉಮ್ಮರ್ ಫರೂಕ್ ರವರು ಸಾರಥ್ಯವಹಿಸಿ ಇಂದು ನಮಗೆ ಸಕಾಲದಲ್ಲಿ ಇಂತಹ ಸುಂದರವಾದ ವೇದಿಕೆಯನ್ನು ನಿರ್ಮಿಸಿ ಅವಕಾಶ  ಕಲ್ಪಿಸಿರಿವರು. ಇವರ ಕನಸಿನ ಕೂಸಾದ  UCM 1997-2000   ಎಂಬ  ಈ ಸಮೂಹದ ಅತ್ಯುತ್ಸಾಹದ ಸದಸ್ಯರಾದ ಸುದರ್ಶನ್,ಸುಶೀಲ್,ಜ್ಯೋತಿ,ಜಗದೀಶ್,ಉಮೇಶ್,ಸಚಿನ್ ನಮ್ಮನ್ನು ರಂಜಿಸಿದರೆ, ಪಾವನ ಹರಿಣಿ, ವನಿತಾ, ಉಷ, ಸುಕನ್ಯಾ  ಪ್ರತಿಯೊಂದು  ವಿಷಯಕ್ಕೂ ಚೆನ್ನಾಗಿ ತಲೆಕೆಡಿಸಿ ಸಮರ್ಪಕವಾಗಿ ಪರಿಹಾರ ನೀಡುವ ನಿಸ್ಸೀಮರು, ಅವರೊಂದಿಗೆ ಪುಷ್ಪ, ದಿವ್ಯಾ, ಮ್ರುದುಲ  ಶುಭ, ದಯಾ,ಸುಮಿತ್ರ,ಧನವಂತಿ,ರಶ್ಮಿ ,ಶರ್ಮಿಳಾ ಕೈಜೋಡಿಸುವರು.ಅದರ ಜೊತೆಗೆ ನಿತಿನ್ ಮನೆಯ  ಹಿರಿಯಣ್ಣನಂತೆ ದೂರದಲ್ಲಿ ನಿಂತು ಎಲ್ಲವನ್ನೂ ಗಮನಿಸಿ ನಿರ್ವಹಿಸುವ ಕಾರ್ಯದಲ್ಲಿ ತಲ್ಲೀನರಾದಾಗ, ನವೀನ್, ರಶೀದ್, ಗಣೇಶ ಕಾಮತ್ ಸಮಯ ಸಿಕ್ಕಾಗ ಬಂದು ತಮ್ಮೆಲ್ಲಾ ಮನದ  ಮಾತುಗಳನ್ನು ಹೊರಚೆಲ್ಲುತ್ತಿರುತ್ತಾರೆ. ಅಪರೂಪದ ನಕ್ಷತ್ರಗಳಂತೆ ಹರಿಪ್ರಸಾದ್, ನಾಗೇಶ್, ಅನಿಲ್, ಮನಿತ್, ಅಶ್ವಿನ್, ಸಂದೇಶ,ತನುಶ್, ದೀಪ, ಅಮಿತ ಬಂದು ಸಮೂಹದಲ್ಲಿ ಮಿನುಗುತ್ತಾರೆ. ತನ್ನ  ಮನದ  ಮಾತುಗಳನ್ನಾಡಿ ನಮ್ಮೆಲ್ಲರಮನಮಿಡಿಯುವವಂತೆ ಮಾಡಿದ ವಿಕ್ರಮ್ ಜೋಶಿ ತನ್ನ ಅಪೂರ್ವ ಕಲಾ ನೈಪುಣ್ಯತೆಯನ್ನು ಇದೇ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ.

ಅಷ್ಟೇ ಅಲ್ಲದೆ Dec. 15   ಹಾಗೂ 150ರ ಸಂಭ್ರಮ ಸಾಧ್ಯವಿರುವವರು ಜತೆಯಾಗಿ ಖುಷಿ ಹಂಚಿಕೊಂಡಿರುವ ಅವಿಸ್ಮರಣೀಯ ಕ್ಷಣ,,,ಇದರೊಂದಿಗೆ ದಿನಾಲೂ ಸಮೂಹಕ್ಕೆ ಶುಭರಾತ್ರಿ ಎಂದು ಹೇಳುವ ಹೇಮಾರವರ ನಿಷ್ಠೆ,ಇವಲ್ಲೆದರ ಜೊತೆಗೆ ಇನ್ನೂ ಅನೇಕರು ನಮ್ಮ ಈ ಸಮೂಹದ ಯಶಸ್ವಿ ಒಂದು ವರ್ಷದ ನಡಿಗೆಗೆ ಜೊತೆಗಾರರಾಗಿ ಮುನ್ನಡಿಯುತ್ತಿರುವುದು ಸಂತೋಷದ ವಿಷಯ.

ಮುಂದೆಯೂ  ನಮ್ಮ ಜೀವನದ ಸುಖದುಃಖಗಳನ್ನು ಹಂಚಿಕೊಳ್ಳುಲು ಇರುವ ಈ ವೇದಿಕೆ ಹೀಗೆಯೇ  ನಮ್ಮೆಲ್ಲರ ಒಗ್ಗಟ್ಟಿನಲ್ಲಿ ಮುಂದುವರಿಯುತ್ತಾ, ಇಂದಿನ ಸಮಾರಂಭಕ್ಕೆ  online ಊಟದ ವ್ಯವಸ್ಥೆ with ice cream ಹಾಗೂ Tea ವ್ಯವಸ್ಥೆ  ಮಾಡಿದ ಗುಂಪಿನ  ರುವಾರಿಗಳಾದ ಕೃಷ್ಣ ಮೋಹನ್  ಹಾಗೂ ಉಮರ್ ಫರೂಕ್ ರವರು ಸಮೂಹದ ಬಗ್ಗೆ ಕಾಣುತ್ತಿರುವ ಕನಸುಗಳು ನನಸಾಗಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಮನಸಾರೆ ಬಯಸುವೆವು ಹಾಗೂ ಶುಭಹಾರೈಕೆಗಳು..
ಶುಭವಾಗಲಿ 🙏😊💐


ಬರಹ : ಭಾಗೀರಥಿ 




ನನ್ನ ಎಲ್ಲಾ UCM ಸ್ನೇಹಿತರಿಗೆ Good Morning ಹಾಗೂ 1ನೇ ವರ್ಷದ ಹಾರ್ದಿಕ ಶುಭಾಶಯಗಳು🥳🥳ಬಹುಶಃ ನಾನು ಈ ಗ್ರೂಪ್ ನಲ್ಲಿ ಆಕ್ಟಿವ್ ಇರುವಷ್ಟು ಬೇರೆ ಯಾವ ಗ್ರೂಪ್ನಲ್ಲೂ ಇಲ್ಲ..ಇಲ್ಲಿ ನಾವು ಯಾವುದೇ ವಿಷಯ share ಮಾಡತೆವೆ, nagtheve, ಜಗಳ maadtheve, Inspirational video, fun, sad, amazing ಹೀಗೆ ಎಲ್ಲಾ ರೀತಿಯ ವಿಡಿಯೋ ಗಳನ್ನು share ಮಾಡಿ ಎಂಜಾಯ್ madtheve without any hesitation ಯಾಕಂದ್ರೆ ಇದು ಫ್ರೆಂಡ್ಸ್ ಗ್ರೂಪ್ ಆದ್ರಿಂದ ಯಾವುದೇ ಸಂಕೋಚ ಇಲ್ಲ..ಈ ಒಂದು ವರ್ಷದಲ್ಲಿ ನಾನು ನಕ್ಕಷ್ಟು ಇಷ್ಟರವರೆಗೆ naglilla ಅಂತ ಹೇಳಬಹುದು.. 


ಅದಕ್ಕಾಗಿ ನಾನು ನಿಮಗೆಲ್ಲ ತುಂಬಾ ಚಿರಋಣಿ..ಮುಂದಿನ ದಿನಗಳಲ್ಲಿ ಈ ಗ್ರೂಪ್ ಇನ್ನಷ್ಟು ಉನ್ನತಿಗೇರಲಿ, ನನ್ನ ಎಲ್ಲಾ ಸ್ನೇಹಿತರಿಗೆ ಇನ್ನೊಂಮ್ಮೆ ಅಭಿನಂದನೆಗಳು💐💐💐💐💐ನಾವೂ ನಕ್ಕು ಇತರರನ್ನೂ ನಗಿಸುವ ಪ್ರಯತ್ನ ಮಾಡುವ👍ನಮ್ಮ ಅಡ್ಮಿನ್ಸ್ ಗೆ ತುಂಬು ಹೃದಯದ ಧನ್ಯವಾದಗಳು


ಬರಹ : ಪಾವನ 





Post a Comment

0 Comments