ಕನ್ಯಾಕುಮಾರಿ ದಕ್ಷಿಣ ಭಾರತದಲ್ಲಿ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರು. 'ಕನ್ಯಾಕುಮಾರಿ' ಎಂಬ ಹೆಸರು ಪೌರಾಣಿಕ ಕಥೆಯಿಂದ ಬಂದದ್ದು. ಇದಕ್ಕೆ ಕೇಪ್ ಕೊಮೆರಿನ್ ಎಂಬ ಹೆಸರೂ ಇದ್ದಿತು.ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ಕನ್ಯಾಕುಮಾರಿ ಇದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಇದೆ. ಇದರ ವಾಯುವ್ಯ ಮತ್ತು ಪಶ್ಚಿಮ ಭಾಗದಲ್ಲಿ ಕೇರಳ ರಾಜ್ಯವಿದ್ದು, ತಿರುನೆಲ್ವೇಲಿ ಜಿಲ್ಲೆಯು ಇದರ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬರುತ್ತದೆ. ಕೇರಳದ ರಾಜಧಾನಿ ತಿರುವನಂತಪುರಮ್ ಕನ್ಯಾಕುಮಾರಿಯಿಂದ 85 ಕಿ.ಮೀ ದೂರದಲ್ಲಿದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ.
ಮಾಹಿತಿ : ವಿಕಿಪೀಡಿಯ
ಪೌರಾಣಿಕ ವಾಗಿ ಹೇಳುವುದಾದರೆ ಯೋಗಿ ಸನ್ಯಾಸಿ ಬ್ರಾಹ್ಮಣರ ಮೇಲಿನ ಕ್ಷತ್ರಿಯ ಕ್ರೌರ್ಯ ಕ್ಕೆ ಪ್ರತಿ ದಾಳಿ ಮಾಡಿ ದಕ್ಷಿಣ ದಲ್ಲಿ ಕ್ಷತ್ರಿಯ ರನ್ನು ವಧಿಸಿದ ಪರಶುರಾಮನು ನಿರಾಯುಧ ಬ್ರಾಹ್ಮಣ ಕುಲಕ್ಕಾಗಿ ಸಮುದ್ರರಾಜನ ಅಪ್ಪಣೆ ಪಡೆದು ತನ್ನ ಕೊಡಲಿಯನ್ನು ಎಸೆದು ಅದು ಅದು ಸಂಚರಿಸಿದಷ್ಟು ಜಾಗವನ್ನು ಸಮುದ್ರರಾಜನಿಂದ ಪಡೆದು ಬ್ರಾಹ್ಮಣ ರಿಗೆ ದಾನ ಮಾಡಿದನು. ಪರಶುರಾಮ ನು ಗೋಕರ್ಣ ದಿಂದ ಎಸೆದ ಕೊಡಲಿ ಸಂಚರಿಸಿ ಬಿದ್ದ ಸ್ಥಳವೇ ಕನ್ಯಾಕುಮಾರಿ..
ಸಮುದ್ರ ರಾಜನಿಂದ ದೊರೆತ ಜಾಗ ದಿಂದ ನೀರು ಹಿಂದಕ್ಕೆ ಸರಿದು ಭೂಭಾಗವಾದರೂ ಉಪ್ಪು ನೀರಿನಿಂದ ಬಂದ ಭೂಮಿಯಾದ್ದರಿಂದ ಯಾವ ಉಪಯೋಗಕ್ಕೆ ಬರದಂತಾದಾಗ ಬ್ರಾಹ್ಮಣರ ಸರ್ಪರಾಜ ವಾಸುಕಿಯ ಮೊರೆಹೊತ್ತು ವಾಸುಕಿ ತನ್ನ ಸಮಸ್ತ ನಾಗಗಳೊಂದಿಗೆ ಪಾತಾಳದಿಂದ ಮಣ್ಣು ತರಿಸಿ ಹಾಕಿದಲ್ಲದೆ ಸಿಹಿನೀರು ಬರಿಸಿದನೆಂದೂ ಅದೇ ಕಾರಣದಿಂದ ಪರಶುರಾಮ ಸೃಷ್ಟಿ ಯ ಜಾಗದಲ್ಲಿ ನಾಗದೇವರಿಗೆ ಮಹತ್ವದ ಸ್ಥಾನ ದೊರಕಿತೆಂಬ ಕಥೆ ಚಿಕ್ಕಂದಿನಲ್ಲಿ ತಂದೆತಾಯಿ ರಾತ್ರಿ ಮಲಗುವಾಗ ಹೇಳಿದ ನೆನೆಪಿದೆ...
_ಉಮೇಶ್ ರೈ,
0 Comments