Ticker

5/recent/ticker-posts

Header Ads Widget

MANGALORE UNIVERSITY

ಕನಸುಗಳ ಹಾದಿಗೆ ಒಂದು ವರ್ಷದ ಸಂಭ್ರಮ....

ಪ್ರೀತಿಯ ಸ್ನೇಹಿತರೇ...



ಇದೊಂದು ಕನಸಿನ ಹಾಗೆ ಭಾಸವಾಗುತ್ತಿದೆ. ನಮ್ಮ ಗ್ರೂಪಿಗೆ ಒಂದು ವರ್ಷ ಭರ್ತಿಯಾಗಿದ್ದು. ನಿನ್ನೆ ಫಾರೂಕ್ ಸ್ಕ್ರೀನ್ ಶಾಟ್ ಹಾಕಿದ ಬಳಿಕವೇ ನೆನಪಾಗಿದ್ದು. ಅಂದ ಹಾಗೆ ಈ ನಮ್ಮ ಈ ಗ್ರೂಪು ಉದ್ದೇಶಪೂರ್ವಕ ಕಟ್ಟಿದ್ದಲ್ಲ. ದೊಡ್ಡದೊಂದು ಮಹತ್ವಾಕಾಂಕ್ಷೆಯನ್ನು ಇರಿಸಿ ಮಾಡಿದ್ದೂ ಅಲ್ಲ. ಅದು ತನ್ನಿಂತಾನೆ ಆಗಿದ್ದು. ಆದರೆ, ಇದು ಬೆಳೆದದ್ದು ಮಾತ್ರ ಪವಾಡದ ಹಾಗೆ. 20 ವರ್ಷಗಳ ಬಳಿಕ ಎಲ್ಲೆಲ್ಲೋ ಚದುರಿ ಹೋಗಿದ್ದ ನಾವಿನ್ನೂ ಬದುಕಿದ್ದೇವೆ ಎಂಬಂತೆ ತೋರಿಸಿಕೊಟ್ಟಿದ್ದು ಇದೇ ನಮ್ಮ ಗ್ರೂಪು.

ಸುಮ್ಮನೆ ಕಳೆದ ವರ್ಷ ಜೂನಿನಲ್ಲಿ ಬಂದ ಐಡಿಯಾವನ್ನು ಗೆಳೆಯ ಫಾರೂಕ್ ಜೊತೆ ಹೇಳಿದ ನಂತರ ನಾಲ್ಕೈದು ಮಂದಿಯನ್ನು ಸೇರಿಸಿ ಶುರು ಮಾಡಿದ ಗ್ರೂಪು. ಇಂಥದ್ದೊಂದು ಗ್ರೂಪು ಇದೆಯೇ ಅಂತ ನನ್ನ ಸೆಕ್ಷನಿನ ದಿವ್ಯಶ್ರೀ ನನ್ನತ್ರ ಕುತೂಲಹಲಕ್ಕೆ ಕೇಳಿದ್ದೇ ಇಂಥದ್ದೊಂದು ಗ್ರೂಪು ಯಾಕೆ ಮಾಡಬಾರದು ಅಂತ ಯೋಚಿಸಲು ಪ್ರೇರಣೆ. ಅದನ್ನು ಫಾರೂಕ್ ಹತ್ರ ಹೇಳಿ ಗ್ರೂಪು ಮಾಡಿದ ಒಂದೇ ವಾರದಲ್ಲಿ ಬಹುತೇಕ ನೀವೆಲ್ಲ ಸಿಕ್ಕಿದ್ರಿ. ನನಗೆ ನೆನಪಿದ್ದ ಹಾಗೆ ಸುಮಾರು 10-20 ದಿನದೊಳಗೆ ನಮ್ಮ ಗ್ರೂಪಿಗೆ 70 ಮಂದಿ ಸೇರಿದ್ದರು.

ಮಂಗಳೂರಿನಲ್ಲೇ ಒಡಾಡುತ್ತಿದ್ದರೂ ನನಗೆ ಕಾಣಿಸದಿದ್ದವರೆಲ್ಲ ಈ ಗ್ರೂಪಿನಿಂದ ಮತ್ತೆ ಸಿಕ್ಕಿದಿರಿ. ಗ್ರೂಪು ದೊಡ್ಡದಾಯಿತು. ಎಲ್ಲರ ಪರಿಚಯ ವಾಯಿತು. ಸೈಲೆಂಟ್ ಇದ್ದವರೂ ಈಗ ಮಾತುಗಾರರಾಗಿದ್ದಾರೆ. ಮಾತುಗಾರರೂ ಪ್ರೌಢರಾಗಿದ್ದಾರೆ. ಒಂಟಿಗಳಾಗಿದ್ದವರು ಜಂಟಿಗಳಾಗಿದ್ದಾರೆ, ಇಲ್ಲಿದ್ದವರು ಮತ್ತೆಲ್ಲೆಲ್ಲಿಗೋ ಹೋಗಿದ್ದಾರೆ.... ಇಷ್ಟೆಲ್ಲ ಇದ್ದರೂ ಗ್ರೂಪಿಗೆ ಬಂದಾಗ ಎಲ್ಲರೂ ಕ್ಲಾಸ್ ಮೇಟುಗಳಾಗಿಯೇ ಇದ್ದೇವೆ. ಅದೇ ಖುಷಿಯ ವಿಷಯ. ಎಲ್ಲದಕ್ಕಿಂತ ಖುಷಿ ಏನು ಗೊತ್ತ... ಹೊಸದೊಂದು ಗ್ರೂಪು ಮಾಡಿ ನಾಲ್ಕಾರು ದಿನ ಕುಶಾಲು ಮಾತನಾಡಿ, ಮತ್ತೊಂದಿಷ್ಟು ಜಗಳ ಮಾಡಿ, ಮತ್ತೆ ಕೋಪ ಮಾಡ್ಕೊಂಡು, ಮಾತು ಬಿಟ್ಟು ಗ್ರೂಪೊಂದು ರದ್ದಿ ಕಾಗದದ ಹಾಗೆ ಮೂಲೆಯಲ್ಲಿ ಬಿದ್ದಿರುವುದನ್ನೂ ನಾವು ನೋಡಿದ್ದೇವೆ. ಆದರೆ ನಮ್ಮ ಗ್ರೂಪು ಹಾಗಿಲ್ಲ. ನೋಡ್ತಾ ನೋಡ್ತಾ ಒಂದು ವರ್ಷ ಹೋದದ್ದೇ ಗೊತ್ತಾಗಿಲ್ಲ.

ಹೌದು ಇಲ್ಲಿಯೂ ಕೆಲವೊಮ್ಮೆ ಅಸಮಾಧಾನಗಳಾಗಿವೆ, ಮೌನಗಳು ಹುಟ್ಟಿಕೊಂಡಿವೆ. ಅಭಿಪ್ರಾಯಭೇದಗಳು ಬಂದಿವೆ. ಆದರೆ ಅದೆಲ್ಲ ಆ ಹೊತ್ತಿಗೆ ಮಾತ್ರ. ನೀನು ಮಾಡಿದ್ದು ಸರಿ, ನೀನು ಮಾಡಿದ್ದು ಸರಿಯಲ್ಲ, ಇದು ನನಗೆ ಇಷ್ಟವಾಗಿಲ್ಲ ಅಂತ ನೇರವಾಗಿ ಸ್ನೇಹಿತರಲ್ಲಿ ಹೇಳಿದ ಹಾಗೆ ಇನ್ಯಾರಲ್ಲೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಪ್ರೀತಿ, ಜಗಳ, ವಾದ, ವಿವಾದ ಎಲ್ಲ ಸ್ನೇಹಿತ ನಡುವೆ ಇದ್ದದ್ದೇ. ಹಾಗಿದ್ದಾಗಲೇ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತವೆ. ಹಾಗಂತ ಜಗಳವಾಡಿಕೊಂಡೇ ಇರಬೇಕೆಂದಲ್ಲ. ಭಿನ್ನಾಭಿಪ್ರಾಯಗಳು ಬಂದಾಗ ಹೊಂದಿಸಿಕೊಂಡು ಹೋದಾಗ ಸಂಬಂಧ ಯಾವತ್ತೂ ಕಡಿಯುವುದಿಲ್ಲ ಎಂಬುದಕ್ಕೆ ವರ್ಷದ ಹೊಸ್ತಿಲಲ್ಲಿರುವ ನಮ್ಮ ಈ ಗ್ರೂಪು ಹಾಗೂ ಇದರ ಸಹೋದರ ಸ್ನೇಹಲೋಕ ಗ್ರೂಪೇ ಸಾಕ್ಷಿ.


ನಾವು ಗ್ರೂಪ್ ಕಟ್ಟಿದ ನಂತರ ಏನೆಲ್ಲ ಮಾಡಿದೆವು ಅಂತ ಪುನಹ ಹೇಳುವ ಅಗತ್ಯವಿಲ್ಲ. ನಿಮಗೆಲ್ಲ ಗೊತ್ತಿದೆ. ನಾವು ಬ್ಯಾಂಕ್ ಖಾತೆ ಮಾಡಿದ್ವಿ, ಸ್ವಲ್ಪ ಫಂಡ್ ರೈಸ್ ಮಾಡಿದ್ವಿ, ಗೆಟ್ ಟುಗೆದರ್ ಮಾಡಿದ್ವಿ, ಇಬ್ಬರು ವಿದ್ಯಾರ್ಥಿಗಳಿಗೆ ಸ್ವಲ್ಪ ದೇಣಿಗೆ ಕೊಟ್ವಿ... ಎಲ್ಲದಕ್ಕಿಂತ ಹೆಚ್ಚು ನಮ್ಮೊಳಗಿನ ಪ್ರತಿಭೆಗಳಾದ ಸುಶೀಲ್, ಸುಕನ್ಯಾರ ಹಾಡು, ಉಮೇಶನ ಬರಹ, ವಿಕ್ರಂ ಜೋಷಿಯ ಚಿತ್ರಗಳು, ಭಾಗೀರಥಿಯ ಸಾಹಿತ್ಯ, ಶುಭಾನ ಸಾಧನೆಗಳು, ಪೊಲೀಸ್ ಮಿತ್ರರ ಸಾಧನೆಗಳು ಎಲ್ಲವೂ ನಮಗೆಲ್ಲ ತಿಳಿದು ಬಂತು. ಬರ್ಥ್ ಡೇಗಳು, ಕುಟುಂಬದ ಸಂತಸದ ಕ್ಷಣಗಳು, ಹಬ್ಬಗಳು ಎಲ್ಲದಕ್ಕೂ ನಮ್ಮ ಗ್ರೂಪು ಸಾಕ್ಷಿಯಾಯಿತು.


ಬಾಂಬೇಯ ಸ್ನೇಹಿತರು, ಗಲ್ಫಿನ ಸ್ನೇಹಿತರು, ನಮ್ಮೂರಲ್ಲೇ ಇರುವ ನಿತಿನ್, ಜಗ್ಗ, ಸುಶೀಲ್, ನವೀನ, ಉಮೇಶ್, ಸಚಿನ್ ಅಲ್ಮೇಡಾ, ಗಣೇಶ ಕಾಮತ್, ವನಿತಾ ದ್ವಯರು, ಹೇಮಾವತಿ ಪಾವನಾ, ಹರಿಣಾಕ್ಷಿ, ರಶ್ಮಿ, ರೇಶ್ಮಾ, ಧನವಂತಿ ... ಸೇರಿದಂತೆ ತುಂಬ ತುಂಬ ಮಂದಿ ಪ್ರತಿನಿತ್ಯ ಗ್ರೂಪನ್ನು ಜೀವಂತವಾಗಿ ಇರಿಸಿದ್ದಾರೆ... ಈ ಲವಲವಿಕೆಗೆ ಕುಂದು ಬಂದಿಲ್ಲ. ಕೆಲವೊಮ್ಮೆ ಸೈಲೆಂಟ್ ಇದ್ದರೂ ಮತ್ತದೇ ಉತ್ಸಾಹದಿಂದ ಪುಟಿದೇಳುವ ಸಾಮರ್ಥ್ಯ ಗ್ರೂಪಿಗಿದೆ.


ಗ್ರೂಪಿಗೆ ಪ್ರತ್ಯೇಕ ಬ್ಲಾಗ್ ಮಾಡಿದ್ದೇವೆ, ಯೂಟ್ಯೂಬ್ ಚಾನೆಲ್ ಮಾಡಿದ್ದೇವೆ. ಗ್ರೂಪಿನ ವಿವರಗಳು ಬ್ಗಾಗಿನಲ್ಲಿ ದಾಖಲಾಗಿದೆ. ಇವೆಲ್ಲದರ ಹಿಂದೆ ಫಾರೂಕ್ ಕೈಚಳಕವನ್ನು ಮರೆಯುವಂತಿಲ್ಲ. ಊರಿನಲ್ಲಿ, ಪರವೂರಿನಲ್ಲೂ ಇರುವ ಸ್ನೇಹಿತರೆಲ್ಲರ ಸಹಕಾರದಿಂದ ಇವೆಲ್ಲ ಸಾಧ್ಯವಾಗಿದೆ. ಗ್ರೂಪಿನಲ್ಲಿ ಹುಡುಗಾಟಿಕೆ ಎಷ್ಟಿದೆಯೋ ಅಷ್ಟೇ ಜವಾಬ್ದಾರಿಯೂ ಇದೆ ಎಂಬುದಕ್ಕೆ ಇವೆಲ್ಲ ಸಾಕ್ಷಿ.


ಇಷ್ಟೊಂದು ತುಂಟತನ, ಖುಷಿ, ಸಂಭ್ರಮ, ದಿನದ ಒಂದಷ್ಟು ಹೊತ್ತು ಟೆನ್ಶನ್ ಮರೆತು ನಕ್ಕು ಹಗುರಾಗುವ ಅವಕಾಶ ಕೊಟ್ಟಿ ಗ್ರೂಪಿಗೂ ಗ್ರೂಪಿಗೆ ಜೀವಕಳೆ ತರುತ್ತಿರುವ ನಿಮಗೆಲ್ಲರಿಗೂ ದೊಡ್ಡದೊಂದು ಥ್ಯಾಂಕ್ಸ್ ಹೇಳುವುದು ಶಿಷ್ಟಾಚಾರ ಅಷ್ಟೇ... ಗ್ರೂಪಿನಲ್ಲಿ ಮಾತನಾಡುವವರು, ಮಾತನಾಡದೇ ಕೇವಲ ಗಮನಿಸುತ್ತಿರುವವರು, ಸಂದರ್ಭ ಬಂದಾಗ ಮಾತನಾಡುವವರು, ಎಲ್ಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡು ಮೌನವಾಗಿರುವವರು ಎಲ್ಲರಿಂದಾಗಿ ಗ್ರೂಪು ಇದೆ. ಅಡ್ಮಿನ್ ಬಳಗ ಇವರೆಲ್ಲ ಸಾಂಕೇತಿಕ ಅಷ್ಟೇ...

🌿🌿🌿🌿🌿

ಹೀಗೊಂದು ಗ್ರೂಪಿಲ್ಲದಿದ್ದರೆ.:

1) ನಮ್ಮ ಸುತ್ತಮುತ್ತಲೇ ಇಷ್ಟೊಂದು ಸ್ನೇಹಿತರಿದ್ದಾರೆ ಅಂತ ಗೊತ್ತಾಗ್ತನ ಇರಲಿಲ್ಲ.

2) 20 ವರ್ಷಗಳ ಬಳಿಕ ಇವರೆಲ್ಲ ನೋಡಲು ಹೇಗಿದ್ದಾರೋ... ಏನು ಮಾಡ್ತಾ ಇದ್ದಾರೋ, ಅದೇ ಲವಲವಿಕೆ ಇದೆಯಾ ಅಂತಲೂ ಗೊತ್ತಾಗ್ತಾ ಇರಲಿಲ್ಲ.

3) ತುಂಬ ಮಂದಿಯ ಹತ್ರ ನಾನು ಯಾವತ್ತೂ ಮಾತನಾಡಲು ಸಾಧ್ಯವೇ ಆಗುತ್ತಿರಲಿಲ್ಲ.

4) ಮತ್ತೊಮ್ಮೆ  ಕಾಲೇಜಿಗೆ ಹೋಗಿ ಅದೇ ಕ್ಲಾಸಿನಲ್ಲಿ ಕುಳಿತು ಶಿಕ್ಷಕರ ಜೊತೆ ಗ್ರೂಪು ಫೋಟೋ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ.

5) ನನ್ನ ಕಾಂಟಾಕ್ಟ್ ಲಿಸ್ಟಿನಲ್ಲಿ ಸುಮಾರು 80ಕ್ಕೂ ಹೆಚ್ಚು ಸ್ನೇಹಿತರ ನಂಬರ್ ಕಾಣಿಸಿಕೊಳ್ಳುತ್ತಿರಲಿಲ್ಲ....

ಪಟ್ಟಿ ಮಾಡುತ್ತಾ ಹೋದರೆ ತುಂಬ ಮಾಡಬಹುದು. ಸಾಧ್ಯತೆಗಳಿಗಿಂತಲೂ ಸಾಧ್ಯವಾಗಿರುವುದರ ಬಗ್ಗೆ ಹೆಚ್ಚು ಯೋಚಿಸಬೇಕು.
ಗ್ರೂಪು ಇನ್ನಷ್ಟು ಸಕ್ರಿಯವಾಗಲಿ, ಈ ಪ್ರೀತಿ ಹೀಗೆಯೇ ಇರಲಿ....

ನೀವು ಪ್ರತಿಯೊಬ್ಬರೂ ಗ್ರೂಪಿಗೆ ಒಂದು ವರ್ಷವಾದ ಸಂಭ್ರಮವನ್ನು ಹಂಚಿಕೊಳ್ಳಬೇಕು ಅಂತ ಆಶಿಸುತ್ತೇನೆ. ಈ ಬರಹಗಳನ್ನೆಲ್ಲ ನಾವು ಬ್ಲಾಗಿನಲ್ಲಿ ಜೋಪಾನವಾಗಿಡೋಣ...



ಮೊದಲನೇ ಆನಿವರ್ಸರಿ ಶುಭಾಶಯಗಳು


-ಕೆ.ಎಂ. (08.06.2020)

Post a Comment

0 Comments