Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -06

ನಾರಾಯಣರ 'ಮಂಡೆ ಶರಬತ್ತು' ಆಗಲು ಕಾರಣವೇನು ? 




(ಸ್ಪಷ್ಟನೆ: ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶ ಕಾಲ್ಪನಿಕ. ವಾಸ್ತವಕ್ಕೆ ಹೋಲಿಕೆ ಇದ್ದರೆ ಅದು ಕಾಕತಾಳೀಯ ಮಾತ್ರ. ಲಘು ಧಾಟಿಯಲ್ಲಿ ಪ್ರಸ್ತುತ ಪಡಿಸಿದ ವಿಚಾರಗಳೆಲ್ಲ ತಮಾಷೆಗೋಸ್ಕರ ಅಷ್ಟೆ)

...................

ಏನೋ ಕನಸು ಕಟ್ಟಿದ್ದಂತೆ ಪಕ್ಕನೆ ಎಚ್ಚರವಾಯಿತು ಅಚಿನ್ ಗೆ. ಧಡಕ್ಕನೆ ಎದ್ದು ಕುಳಿತು. ಕಣ್ಣುಜ್ಜಿ ಸುತ್ತ ನೋಡುವಾಗ ಎಲ್ಲ ಕಡೆ ಜನ ನಿಂತಿದ್ದರೂ. ದಿನೇಶ್ ಕಾಮತ್ ಹಿಡಿದಿರುವ ನಾಯಿ ತನ್ನನ್ನೇ ದುರುಗುಟ್ಟಿ ನೋಡುತ್ತಾ ಇದೆ. ನಾರಾಯಣರು ಕೆಂಪು ಕಣ್ಣುಗಳಿಂದ ತನ್ನ ಕಡೆ ಕೋಪದ ದೃಷ್ಟಿ ಬೀರುತ್ತಿದ್ದಾರೆ. ಅವರ ಮಕ್ಕಳು, ಡ್ರೈವರ್ ಸಿಂಪತಿ, ಕೆಲಸದವರೆಲ್ಲ ತನ್ನನ್ನು ಅನುಕಂಪದಿಂದ ನೋಡುತ್ತಿದ್ದಾರೆ. ಅವನಿಗೆ ಕೂಡಲೇ ಫ್ಲಾಶ್ ಆಯಿತು. ಹಲಸಿನ ಹಣ್ಣು ತಿಂದದ್ದು ಗೊತ್ತಾಗಿದೆ. ತನ್ನ ಮೇಲೆ ಸಂಶಯದಿಂದ ಪೊಲೀಸ್ ಕಂಪ್ಲೇಟ್ ಕೊಟ್ಟಿದ್ದಾರೆ. ಅಂತ....


ಏನಾದರೂ ಸುಳ್ಳು ಹೇಳು, ಏನಾದರೂ ಸುಳ್ಳು ಹೇಳು ಅಂತ ನಾರಾಯಣರ ಹಿಂದೆ ನಿಂತಿದ್ದ ಗುಣಶೀಲ ಕೈಸನ್ನೆಯಲ್ಲಿ ತೋರಿಸುತ್ತಲೇ ಇದ್ದ. ಅದು ಕೂಡಲೇ ಅರ್ಥವಾಯಿತು ಅಚಿನ್ ಗೆ. ಎಂತ ಮಾಡುವುದು ಎಂದು ಯೋಚಿಸುತ್ತಾ ಅಭ್ಯಾಸಬಲದಿಂದ ಹಣೆಗೆ ಬೀಳುತ್ತಿದ್ದ ಕೂದಲನ್ನು ಕೈಯ್ಯಿಂದ ಬದಿಗೆ ಸರಿಸಿದ...


ಅಷ್ಟೊತ್ತಿಗೆ ಯಾರೂ ಊಹಿಸದ ಘಟನೆಯೊಂದು ನಡೆದು ಹೋಯಿತು...



ದಿನೇಶನ ಕೈಯ್ಯಿಂದ ಜಾರಿದ ನಾಯಿ ನೇರವಾಗಿ ಅಚಿನ್ ಮೈಮೇಲೆ ನೆಗೆಯಿತು!!!!!!!!

ಅಚಿನ್ ಹಣೆಯನ್ನು ನೆಕ್ಕಿತು... ಆತನ ಮೈಗೆ ಒರಗಿ ಪರಿಚಿತರನ್ನು ನೋಡುವಂತೆ ನೋಡಿ ಸ್ನೇಹದ ಚಿಹ್ನೇ ಬೀರತೊಡಗಿತು. ತಕ್ಷಣ ಅರ್ಥ ಮಾಡಿಕೊಂಡ ಅಚಿನ್ ಕೂಗಿದ, ಹೇ ಜಾಕಿ...


ಹೌದು ಇದು, ಜಾಕಿ ಐದು ವರ್ಷಗಳ ಹಿಂದೆ ಸ್ನೇಹಿತ ದಿನೇಶ್ ತನ್ನನ್ನು ಕೋರಿಕೊಂಡ ಮೇರೆಗೆ ತಾನು ಕೈಯ್ಯಾರೆ ಸಾಕಿದ್ದ ನಾಯಿ ಜಾಕಿಯನ್ನು ಪೊಲೀಸ್ ಇಲಾಖೆಗೆ ದಾನವಾಗಿ ನೀಡಿದ್ದ. ಅದೇ ನಾಯಿ ಐದು ವರ್ಷಗಳ ಬಳಿಕವೂ ತನ್ನನ್ನು ಗುರುತು ಹಿಡಿದಿದೆ.... ಬಹುಶಃ ಇದೇ ನಾಯಿಯನ್ನು ದಿನೇಶ ಬೇಕಂತಲೇ ತಂದಿದ್ದಾನೆ ಅಂತ ಅರ್ಥ ಆಯಿತು ಅಚಿನ್ ಗೆ...

ಜಾಕಿ, ಜಾಕಿ ಅಂತ ಅದರ ಮೈದಡವಿ ಮುದ್ದು ಮಾಡತೊಡಗಿದ... ಅಲ್ಲಿದ್ದವರ ಕಣ್ಣುಗಳಿಂದ ಆನಂದ ಬಾಷ್ಪ ಸುರಿಯಿತು..

🐕‍🦺🐕‍🦺🐕‍🦺🐕‍🦺



ಆದರೆ, ನಾರಾಯಣರ ಮಂಡೆ ಶರಬತ್ತು ಆಗತೊಡಗಿತು.

ಅಚಿನ್ ಗುರುತು ಹಿಡಿದು ನಾಯಿ ಗುಣಶೀಲನ ಮನೆಗೆ ಬಂದದ್ದು ಹೌದು.. ಆದರೆ, ಹಲಸಿ ಹಣ್ಣು ಹೂತುಹಾಕಿದಲ್ಲಿಗೆ ಅದು ಹೋಗಿದ್ದು ನಿಜ, ನೆಲದಡಿಯಲ್ಲಿ ಅವಶೇಷಗಳೂ ಸಿಕ್ಕಿದ್ದೂ ನಿಜ. ನಂತರ ಗುಣಶೀಲನ ಮನೆಗೆ ಬಂದದ್ದೂ ನಿಜ...



ಅಂದರೆ.... ಅಂದರೆ.... ಇದರರ್ಥ!

😟🤨🤨🤨😠😠😡😡

ನಿಧಾನಕ್ಕೆ ಹಿಂದೆ ತಿರುಗಿದರು ನಾರಾಯಣರು. ಗುಣಶೀಲ ಬೆವರತೊಡಗಿದ. ಕೆಲಸ ಕೆಡುತ್ತದೆ ಅಂತ ಅಂದಾಜಾಯ್ತು... ತಕ್ಷಣ ತಲೆ ಓಡಿಸಿದ....

ಛಂಗನೆ ಮುಂದೆ ನೆಗೆದು ನಾರಾಯಣರನ್ನು ಬಲವಾಗಿ ಆಲಂಗಿಸಿದ... ನಂತರ ಮಾತನಾಡತೊಡಗಿದ:



“ನಾರಾಯಣಣ್ಣ, ನಾರಾಯಣಣ್ಣ.... ಎನನ್ ಮಾಫ್ ಮಲ್ಪೊಡು ಈರ್. ಉಂದೆನ್ ಪೂರ ಮಲ್ದಿನಾಯೆ ಯಾನೇ... ಯಾನಾದೆ ಅವೆನ್ ಈರೆಡ ಪನೋಡಿತ್ತಿಂಡ್. ಆಂಡ ವಾ ಬಾಯಿಡ್ ಪನ್ಪುನೂ, ವಾ ಬಾಯಿಡ್ ಪನ್ಪುನು. ಎಂಕ ನಾಲಾಯಿಯೇ ಬೈಜ್ಜಿ. ವಿಷಯ ದಾದ ಪಂಡ... ಆನಿ ನಮ ಕುಡ್ಲಡ್ ಪೋದುಪ್ಪುನಗ, ಈಗನ ನೆತ್ತೆ ರ್ ಪರೀಕ್ಷೆಗೆ ಕೊರ್ದುತ್ತಿಂಡತ್ತೆ. ಅಯಿತ ರಿಸಲ್ಟ್ ಯಾನ್ ಕೋಡೆ ಕುಡ್ಲಗ್ ಪೋದುಪ್ಪುನಗ ತಿಕ್ಕ್ ದ್ ಡ್. ಅವೆಟ್ಟ್... ಅವೆಟ್ಟ್... ಈರೆಗೆ ಡಯಬಿಟಿಸ್ ಉಂಡುಂದ್ ವರದಿ ಬೈದ್ ಡ್ ನಾರಾಯಣಣ್ಣ.....”



ಜೋರಾಗಿ ಅಳುತ್ತಾ ನಾರಾಯಣರ ಪ್ರತಿಕ್ರಿಯೆ ನೋಡುತ್ತಾ, ಅವರು ಕರಗುತ್ತಿರುವುದನ್ನು ಗಮನಿಸಿ... ಮಾತು ಮುಂದುವರಿಸಿದ ಗುಣಶೀಲ...

 😭😭😭😭😭😭

“ಅಂಚಾದ್, ಈರ್ ಕಂಡಾವಟ್ಟೆ ಚೀಪೆದ ದಾ...ಲ ತಿನಿಯೆರೆ ಬಲ್ಲಿಂದ್ ಡಾಕ್ಟ್ರು ಪಣ್ತೆರ್. ಈರೆನ ಜಾಲ್ ದ ತುಳುವೆ ಪೆಲಕ್ಕಾಯಿ ಕಂಡಾವಟ್ಟೆ ಚೀಪೆ. ಅವು ಪಂರ್ದಿ ಬೊಕ್ಕ ಈರ್ ತಿನಾಂದೆ ಕುಲ್ಲಯರ್ ಎಂಕ್ ಗೊತ್ತು... ಅಂಚಾದ್... ಅಂಚಾದ್ ಯಾನೇ... ಎನ್ನ ಕೈಯ್ಯಾರೆ... ಎನ್ನ ಕೈಯ್ಯಾರೆ.. ಮುರಿನಿ ಈರ್ ಕುಡ್ಲೊಗ್ ಪೋದುಪ್ಪುನಗ ಅವನೆ ಕಡ್ತ್ ದ್ ಮಣ್ಣದ್ ಅಡಿಟ್ಟು ಕಂವುತ್ತು ಬುಡಿಯೇ ನಾರಾಯಣಣ್ಣ, ಕಂವುತ್ತು ಬುಡಿಯೇ... ಬೋಡಾಂಡ ಎನ್ನ ಪಾಪಿಷ್ಠ ಕೈ ಕಡ್ಪುಲೆ... ಕಡ್ಬುಲೆ... ಆಂಡ ಈ ಪಂರ್ದ್ ಪೆಲಕ್ಕಾಯಿ ತಿಂದ್ ದ್ ಆರೋಗ್ಯ ಹಾಲ್ ಮಲ್ಪೋನುನ ಎನಡ್ದ್ ತೂಯೆರ ಆವಂದ್ ನಾರಾಯಣಣ್ಣ.....”


😥😥😥😥😥



ಏನು ನಡೀತಾ ಇದೆ ಅಂತಲೇ ನಾರಾಯಣರಿಗೆ ಅರ್ಥ ಆಗಲಿಲ್ಲ... ಗುಣಶೀಲ ಮಾತು ಮುಗಿಸಿದಾಗ ಅವರ ಮನಸ್ಸು ಆರ್ದ್ರವಾಯಿತು.. ಅವರ ಕಣ್ಣುಗಳಿಂದ ನೀರು ಇಳಿಯತೊಡಗಿತು... ಅಲ್ಲಿ ಸೇರಿದ್ದ ಎಲ್ಲರ ಕಣ್ಣು ಮಂಜಾಯಿತು. ಸ್ನೇಹಿತರೆಂದರೆ ಹೀಗಿರಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡರು. ನಾರಾಯಣರ ಜೊತೆ ಅಷ್ಟು ಸಲುಗೆಯಿಂದ ಮಾತನಾಡಲು ಸಾಧ್ಯವಿರುವುದು ಗುಣಶೀಲನಿಗೆ ಮಾತ್ರ....



ಆದರೆ ಸಚಿನ್ ಮಾತ್ರ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದ “ಎಲ್ಲಾ ಮಗಾ, ಈ ಎಂಚಿನ ಬಗುಲೊಂದುಲ್ಲಾ ಪಂಡ್ದೇ ಗೊತ್ತಾಪುಜ್ಜಿ, ಸತ್ಯನ, ಸುಳ್ಳ ಒಂಜಿಲಾ ಅರ್ಥ ಆಪುಜಿ, ಯಾನ್ ಮಾತ್ರ ಬದುಕ್ಯೆ” ಅಂತ!


😢😢😢😢😢



ನಾರಾಯಣರು ಗುಣಶೀಲನ ಮೈದಡವಿ ಮಾತನಾಡತೊಡಗಿದರು....

"ಗುಣ, ಇತ್ತದ ಕಾಲೊಡು ನಮ ಪೆದ್ದಿನ ಜೋಕುಲೇ ನಮ್ಮ ಆರೋಗ್ಯದ ಬಗ್ಗೆ ಗೇನ ದೆತ್ತೊನುಜ್ಜೆರ್ ಮಗಾ... ನಿಕ್ಕೊಂದು ಎನಡ ಏತ್ ಮೋಕೆ. ಎನ್ನ ಆರೋಗ್ಯ ಆಲಾವರೆ ಬಲ್ಲಿ ಪಣ್ಪಿನ ಕಾರಣೊಗು ಎನ್ನ ಮೋಕೆದ ಪೆಲಕ್ಕಾಯಿನ್ ಕೊಯ್ದ್ ಕಂವುತ್ತನ... ಬೊಕ್ಕ ಎಂಕ್ ಬೇಜಾರಾವ್ ಪಂಡ್ದ್ ವಿಸಯೊ ತೆಂಗಾದ್ ದೀಯನ... ಮಲ್ಲೆಜ್ಜಿ... ಒಂಜಿ ಎಡ್ಡೆಪ್ಪುಗು ಬೋಡಾದ್ ಕಳ್ ಪಂಡತ್ತ, ಅವು ತಪ್ಪತ್ತ್.. ದೇವೆರ್ ಎನ್ನ ಆಯುಷ್ಯನ್ ನಿಕ್ಕೇ ಕೊರಾಡ್. ಇನಿಡ್ದ್ ಈ ಎನ್ನ ಇಲ್ಲದಾಯೆನ ಲೆಕ್ಕ... ಯಾನ್ ಎಲ್ಲೆನೇ ವಕೀಲರಾಡೆ ಪೋದ್ ಆಸ್ತಿ ಪಾಲಾಯಿನೈನ್ ಕುಡ ತಿದ್ದುಪಡಿ ಮಲ್ಪಾದ್ ನಾಲ್ ಪಾಲ್ ಮಲ್ಪುವೆ, ಮಿತ್ತದ ಬಿತ್ತಲ್ದ  ಬರಿಕ್ಕೆ ಪೆಲಕ್ಕಾಯಿ ತೋಟನ್ ನಿನ್ನ ಪುದರ್ ಗೇ ಬರೆಪ್ಪಾವೆ... ಎಂಕ್ ಒಂತೆ ವಿಶ್ರಾಂತಿ ಬೋಡು. ಎನನ್ ಎನ್ನಾತೆಗೆ ಬುಡ್ಲೆ... ಮಾತೆರ್ಲ... ದಿನೇಶೆರೇ... ಯಾನ್ ಗಡಿಬಿಡಿ ಮಲ್ತ್ ದ್ ಈರೆನ್ ಕುಡ್ಲಡ್ ಲೆಪ್ಪಾಯೆ, ಮಾಫ್ ಮಲ್ಪುಲೆ..”



ವಿನೀತರಾಗಿ ಹೇಳಿದ ನಾರಾಯಣರು ತಮ್ಮ ಮನೆಯತ್ತ ತೆರಳಿದರು...

🚶‍♂️🚶‍♂️🚶‍♂️🚶‍♂️🚶‍♂️

ಅಲ್ಲಿ ನಡೆದದ್ದು ಅರಗಿಸಿಕೊಳ್ಳಲಾಗದೆ, ಎಲ್ಲರೂ ಸ್ತಂಭೀಭೂತರಾದರು.... ನಾರಾಯಣರಿಗೆ ನಿಜವಾಗಿ ಡಯಾಬಿಟಿಸ್ ಇದೆಯ, ಇಲ್ಲವಾ, ಸತ್ಯವೋ, ಸುಳ್ಳೋ ಎಂಬುದು ಗುಣಶೀಲನಿಗೇ ಗೊತ್ತು...



..........



ಅದಾಗಿ ಎರಡು ದಿನದ ಬಳಿಕ ನಾರಾಯಣರು ಅಚಿನ್ ನನ್ನುಕರೆಸಿ ತಾವು ಕಷ್ಟಪಟ್ಟು ಹಲಸಿನ ತೋಟ ಕಟ್ಟಿದ ಕಥೆಯನ್ನು ತಾವಾಗಿ ಹೇಳುತ್ತಾ ಹೋದರು. ಅದು ಅವನ ಅಧ್ಯಯನಕ್ಕೆ ಸಾಕಷ್ಟು ಪ್ರಯೋಜನ ನೀಡಿತು..


🍐🍐🍐🍐🍐

“ನೋಡಪ್ಪ, ನನ್ನ ತಂದೆ ಪಿತ್ರಾರ್ಜಿತವಾಗಿ ನನಗೆ ಕೊಟ್ಟದ್ದು ಕೇವಲ ಒಂದು ಎಕರೆ ಜಾಗ. ಈ ಸಮುದ್ರದ ತಟದಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ ಅಂತ ಜನ ಹೇಳ್ತಾ ಇದ್ರು. ಆದರೆ, ನಾನು ಛಲಗಾರ. ಐದು ಎಕರೆ ಜಾಗ ಖರೀದಿ ಮಾಡಿದೆ. ಬೋಳು ಗುಡ್ಡವನ್ನು ತಟ್ಟುಗಳನ್ನಾಗಿ ಮಾಡಿದೆ. ಅವರಿವರಿಂದ ಕಾಡಿ ಬೇಡಿ ಹಲಸಿನ ಗಿಡಗಳನ್ನು ತಂದು ನೆಟ್ಟೆ. ಆಗ ಇಲ್ಲಿ ಬೋರ್ವೆಲ್ ಕೂಡಾ ಇರಲಿಲ್ಲ. ದೂರದಿಂದ ನೀರು ಹೊತ್ತು ತರಬೇಕು. ಈಗ ಮುಂಬೈಯಲ್ಲಿ ನನ್ನ ಉತ್ಪನ್ನಗಳ ಮಾರಾಟದಲ್ಲಿ ನೆರವಾಗುತ್ತಿರುವ ಭವ್ಯಶ್ರೀ ಇದ್ದಾರಲ್ಲ, ಪಾಪ ಒಳ್ಳೆ ಹೆಣ್ಣುಮಗಳು.. ತನ್ನ ಮನೆ ಪಕ್ಕದ ತೋಡಿಗೆ ಇಳಿದು ಅಲ್ಲಿಂದ ಬಕೆಟ್ಟಿನಲ್ಲಿ ನೀರು ತಂದು ದಿನಾ ಗಿಡಗಳಿಗೆ ಹಾಕುತ್ತಿದ್ದಳು. ಮತ್ತೆ, ವ್ಯಾಯಾಮ ಶಾಲೆಗೆ ಬರುತ್ತಿದ್ದ ಜಗನ್ನಾಥ, ಈಗ ಅರಬ್ ದೇಶದಲ್ಲಿರುವ ಫಮ್ಮರ್ ಉರೂಕ್, ರಬ್ದುಲ್ ಅಶೀದ್, ಪವಮಾನ, ವಿನಿತಾ ಶೆಟ್ಟಿ, ದಯಕರ ನಾಯಕ್, ಈಗ ಹೊಲಿಗೆ ಮಿಶನ್ ಉದ್ಯಮ ನಡೆಸುತ್ತಿರುವ ತೊಕ್ಕೊಟ್ಟಿನ ನಿಶಾ ಇವರೆಲ್ಲ ನನಗೆ ಗಿಡಗಳನ್ನು ಸಾಕಲು ದಿನಾ ಬಂದು ನೆರವಾಗುತ್ತಿದ್ದರು. ಇದೇ ಕಾರಣಕ್ಕೆ ಇವತ್ತು ಇವರೆಲ್ಲ ನನ್ನ ಉದ್ಯಮದಲ್ಲಿ ಪಾಲುದಾರರಾಗಿದ್ದಾರೆ.

ಅವತ್ತು ಪಟ್ಟ ಕಷ್ಟಕ್ಕೆ ಇಂದು ಬೆಲೆ ಸಿಕ್ಕಿದೆ, ಆದರೆ, ಜನರಿಗೆ ಹಲಸಿನ ಬೆಲೆ ಗೊತ್ತಿಲ್ಲವಪ್ಪ. ಕೊಳೆತು ಬಿದ್ದರೂ ಜನ ಕ್ಯಾರೇ ಮಾಡುವುದಿಲ್ಲ. ಒಳ್ಳೆ ಬೆಲೆ ಕೊಟ್ಟು ಸಿಗುವುದಿಲ್ಲ. ಬೆಳೆದವನಿಗೆ ತುಂಬ ಕಷ್ಟ ಇದನ್ನು ನಿರ್ವಹಣೆ ಮಾಡಲು. ಆದರೂ ನಾನು ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಮಾಹಿತಿ ಪಡೆದೆ. ತರಬೇತಿ ಪಡೆದು ಹಲಸಿನ ತಿಂಡಿಗಳನ್ನುತಯಾರಿ ಮಾಡಿ  ಹಂತಕ್ಕೆ ತಲುಪಿದ್ದೇನೆ. ನನ್ನ ಮಕ್ಕಳಿಗೆ ಇದರಮೌಲ್ಯ ಎಷ್ಟು ಗೊತ್ತಿದೆಯೋ ಗೊತ್ತಿಲ್ಲ. ಕಷ್ಟಪಟ್ಟು ಬೆಳೆಸಿದ ಹಲಸನ್ನು ಯಾರೂ ಕದಿಯಬಾರದು ಅಂತ ನಾನು ಮರದಲ್ಲಿ ಹಾಕಿಸಿದ ಬೋರ್ಡನ್ನು ಆ ದುಷ್ಟ ಪತ್ರಕರ್ತ ಬರೆದು ನನ್ನನ್ನು ಹಾಸ್ಯದ ವಸ್ತುವಾಗಿಸಿದ. ತುಂಬ ಬೇಸರವಾಗುತ್ತಿದೆ, ಏನು ಮಾಡಲಿ. ಮುಂದೆ 21ನೇ ಶತಮಾನ ಬರಲಿದೆ, ಆಗ ಹಲಸಿಗೆ ಒಳ್ಳೆ ಮರ್ಯಾದೆ ಸಿಗಲಿದೆ, ನ್ಯಾಚುರಲ್ ಐಸ್ ಕ್ರೀಂ, ಹಲಸಿನ ಜಾಮಂ ಮತ್ತಿತರ ಐಟಂಗಳ ಅನ್ವೇಷಣೆ ಆಗಲಿದೆ ಅಂತ ನನ್ನ ಒಳಮನಸ್ಸು ಹೇಳುತ್ತಿದೆ.... ” ತಮ್ಮ ತೋಟದಲ್ಲಿ ನಡೆಯುತ್ತಾ ಹೇಳುತ್ತಿದ್ದ ನಾರಾಯಣರು ನಿಧಾನಕ್ಕೆ ಅಲ್ಲಿಯೇ ಕುಸಿದು ಕುಳಿತರು.... ಅಚಿನ್ ಗಾಬರಿಯಿಂದ ಅವರ ಕೈ ಹಿಡಿದುಕೊಂಡ....

 👳‍♀️👩‍🦳👩‍🦳👩‍🦳👩‍🦳👩‍🦳

(ಸಶೇಷ)

-ಕೆಎಂ.

Post a Comment

0 Comments