Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -08


ಮೂರ್ಛೆ ಹೋದ ಅಚಿನ್ 


(ಸ್ಪಷ್ಟನೆ: ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶ ಕಾಲ್ಪನಿಕ. ವಾಸ್ತವಕ್ಕೆ ಹೋಲಿಕೆ ಇದ್ದರೆ ಅದು ಕಾಕತಾಳೀಯ ಮಾತ್ರ. ಲಘು ಧಾಟಿಯಲ್ಲಿ ಪ್ರಸ್ತುತ ಪಡಿಸಿದ ವಿಚಾರಗಳೆಲ್ಲ ತಮಾಷೆಗೋಸ್ಕರ ಅಷ್ಟೆ. ಈ ಕಂತನ್ನು ಮುಂದುವರಿಸಿ ಕಥೆಯನ್ನು ವಿಸ್ತರಿಸಿದವರು ಸಹಪಾಠಿ ಸುಶೀಲ್ ಕುಮಾರ್ ಉಲ್ಳಾಲ.)



🍐🍐🍐🍐🍐🍐



ಮೈಕ್ ಹಿಡಿದು ದಯಕರ ನಾಯಕ್ ಬಳಿ ಬಂದ ನಾರಾಯಣರು ಹೇಳಿದರು... ನೋಡಪ್ಪ, ನಿಮಗೆಲ್ಲ ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅಂತ ನನಗೆ ಗೊತ್ತು, ಆದರೆ ಹಳಸಿದ ಹಣ್ಣು ಕೊಟ್ಟರು ಅಂತ ಮಾತ್ರ ಹೇಳಬೇಡ. ಅದು ಹಳಸಿದ ಹಣ್ಣಲ್ಲ, ಹಲಸಿನ ಹಣ್ಣು.... ಹೊಲಸಾಗಿ ಬೆಳೆದದ್ದಲ್ಲ, ಹುಲುಸಾಗಿ ಬೆಳದದ್ದು... ಇಷ್ಟು ಹೇಳುತ್ತಾ ಹೇಳುತ್ತಾ ನಾರಾಯಣರು ಕಂಗಾಲಾದರು.

ಕೊನೆಗೂ ಸರಿಯಾಗಿ ಮಾಲಾರ್ಪಣೆ, ಅಭಿನಂದನಾ ಕಾರ್ಯಕ್ರಮ ಅಷ್ಟು ಸರಿಯಾಗಿ ಬಾರದೆ ಇದ್ದರಿಂದ ನಾರಾಯಣ್ ರು ವೇದಿಕೆಯಲ್ಲೇ ಕುಸಿದು ಬೀಳುವ ಪರಿಸ್ಥಿತಿ ಎದುರಾಯಿತು. ಕೂಡಲೇ ಅವರನ್ನು ಡಾ.ಕರುಣಾಕರ್ ಹೆಬ್ಬಾರ್ ಪರೀಕ್ಷಿಸಿದಾಗ ಇವರಿಗೆ ವಿಶ್ರಾಂತಿ ಯ ಅವಶ್ಯಕತೆ ಇದೆ ಎಂದು ಸೀದಾ ವೇದಿಕಿಯಿಂದಲೇ ಮನೆಗೆ ಎತ್ತಿನ ಗಾಡಿಯಲ್ಲಿ ಕರ್ಕೊಂಡು ಹೋಗಬೇಕಾಯಿತು. ದೂರದಲ್ಲಿ ಇದನ್ನೆಲ್ಲ ನೋಡುತ್ತಿದ್ದ ಅಚಿನ್ ಗೆ ಒಂದು ಕಡೆ ಬಾರೀ ಖುಷಿ, ಯಾಕೆಂದರೆ ಖುಷಿಯಲ್ಲಿ ತಿಂದ ತುಲ್ವೆ ಸರಿಯಾಗಿ ಹೊಟ್ಟೆಯೊಳಗೆ ಅರಗಿಸಿಕೊಳ್ಳಲು ಸಾಧ್ಯವಾಗದೇ ಇದ್ದದ್ದು.



ಅವರನ್ನು ಮನೆಗೆ ಎತ್ತಿನ ಗಾಡಿಯಲ್ಲಿ ಕರಕೊಂಡು ಮನೆ ಮಂಚದಲ್ಲಿ ಮಲಗಿಸಿ ಡಾ.ಕರುಣಾಕರ್ ಹೆಬ್ಬಾರ್ ಪರೀಕ್ಷೆ ಮಾಡಿದರು. ಪರೀಕ್ಷಿಸಿದಾಗ ರಕ್ತದೊತ್ತಡ ತುಂಬಾ ಏರಿಕೆ ಕಂಡಿತ್ತು. ಹೃದಯಾಘಾತ ಆಗಬಹುದೇನೋ ಎಂದು ಹೆದರಿದ ಕರುಣಾಕರ್ ಗುಣಶೀಲನಿಗೆ ಹೇಳಿದ್ರು, ಎಲ್ಲಿಯಾದರೂ ವಜ್ರಾಕಾಯ ಗಿಡದ ಎಲೆ ಹುಡುಕಿ ತನ್ನಿ, ಇದರ ರಸ ಕುಡಿಸಿದರೆ ಮುಂದೆ ಆಗುವ ಹೃದಯ ಸಂಬಂಧಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಮುಂದೆ ಹಾಕಬಹುದು ಅಂತ.


.....

ನಂತರ ನಡೆದದ್ದೆಲ್ಲ ಫಾಸ್ಟ್ ಫಾರ್ವರ್ಡ್ ಥರ ನಾಟಕೀಯ ಬೆಳವಣಿಗೆಗಳು....


ಹೆಬ್ಬಾರರ ಮಾತನ್ನು ಮನೆಯೊಳಗಿನಿಂದ ಕೇಳಿಸಿದ ನಾರಾಯಣ್ ರ ಪತ್ನಿ ಒಂದೇ ಸಮನೆ ಕಿರುಚಾಡತೊಡಗಿದರು.  ಸಭೆಯಿಂದ ಮನೆಗೆ ನಾರಾಯಣ್ ರನ್ನು ಕರೆತರುವ ವೇಳೆ ಆ ಸಭೆಯಲ್ಲಿದ್ದ 60ಕ್ಕಿಂತಲೂ ಹೆಚ್ಚು ಮಂದಿ ನಾರಾಯಣ್ ರ ಮನೆಯನ್ನು ಮೊದಲೇ ತುಂಬಿಕೊಂಡದ್ದರಿಂದ ಒಳಗೆ ನಾರಾಯಣ್ ರ ಪತ್ನಿಯ ಕಿರುಚಾಟ ಸಹಾ ಕೇಳಿದ್ದರಿಂದ ಅಲ್ಲಿ ಹೊರಗಡೆ ನಿಂತ ಜನರು ನಾರಾಯಣ್ ರು ಹೋಗಿಯೇ ಬಿಟ್ರ ಅಂತ ಮಾತನಾಡತೊಡಗಿದರು.


ನಾರಾಯಣ್ ರ ಪತ್ನಿಯ ಬಳಿ ಬಂದು, ಏನೂ ಹೆದರಬೇಡಿ, ಏನೂ ಆಗಲ್ಲ ಎಂದು ಸಮಾಧಾನ ಪಡಿಸಿದ ದಯಕರ ನಾಯಕ್, ನಾರಾಯಣ ಮನೆಯಲ್ಲೇ ತನ್ನ ಸ್ವಾಗತ ಭಾಷಶಣವನ್ನು ಇಂಗ್ಲಿಷಿನಲ್ಲೇ ಮುಂದುವರಿಸತೊಡಗಿದರು. !


ಈ ಇಂಗ್ಲಿಷ್ ವಾಕ್ಯ ಕೇಳಿದ ನಾರಾಯಣ್ ರ ಪತ್ನಿ ಇನ್ನೂ ಜಾಸ್ತಿ ಕೂಗಲು ಶುರು ಮಾಡಿದ್ರು, ಪತ್ನಿಯ ಪ್ರಕಾರ, ದಯಕರರ ಇಂಗ್ಲಿಷ್ ಮಾತುಗಳು ನಾರಾಯಣರಿಗೆ ನಕಾರಾತ್ಮಕ ರೀತಿಯಲ್ಲಿ ಅರ್ಥವಾಗಿ ಅವರ ಉಸಿರೇ ನಿಂತು ಹೋಯಿತು ಎಂಬರ್ಥದಲ್ಲಿ ಕೂಗಾಡತೊಡಗಿದರು!!!



😥😥😥😥😥

ಇವರ ಒಳಗಿನಿಂದ ಕಿರುಚಾಟ ಕೇಳಿದ ಹೊರಗಿನ ಜನತೆ ತುಂಬಾ ಬೇಸರದಿಂದ, ದುಃಖದಿಂದ ಅಂತ್ಯಸಂಸ್ಕಾರದ ಸಿದ್ಧತೆಯಲ್ಲಿ ತೊಡಗಿದರು.



ಗುಣಶೀಲ ಡಾಕ್ಟರ್ ಹೇಳಿದಂತೆ ವಜ್ರಕಾಯದ ಎಲೆಯನ್ನು ತರಲು ಹೊರಗೆ ಹೋದಾಗ ಹೊರಗಿನಿಂದ ಜನರ ಬೇಸರದ, ಕಣ್ಣೀರಿನ ಮುಖ ನೋಡತೊಡಗಿದ ಹಾಗೂ ಮನಸಲ್ಲೇ ಗುನುಗುನಿಸತೊಡಗಿದ, ಯಬ್ಬ ಈ ಊರಿನವರಿಗೆ ನಾರಾಯಣರ ಮೇಲೆ ಎಷ್ಟು ಪ್ರೀತಿ ಅಂತ


ಮನೆಯ ಹೊರಗಿನ ಬಲ ಮೂಲೆಯಲ್ಲಿ ಜನರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡುವುದನ್ನು ಕಂಡು ಗಾಬರಿಯಿಂದ ಆ ಸ್ಥಳಕ್ಕೆ ಓಡಿ ಹೋಗಿ ಯಾಕೋಸ್ಕರ  ಚಟ್ಟ ಕಟ್ಟುತ್ತಿದ್ದಾರೆ ಎಂದು ಆ ಜನರಲ್ಲೀಯೇ ಕೇಳಿ ಬಿಟ್ಟ ಗುಣಶೀಲ.


ಜನರು ಬೇಸರದಿಂದ ನಾರಾಯಣ್ ರು ಇಷ್ಟು ಬೇಗ ನಮ್ಮನ್ನೆಲ್ಲಾ ಅಗಲಬಾರದಿತ್ತು, ಊರಿಗೆ ಇವರಿಂದ ತುಂಬಾ ಉಪಕಾರವಾಗಿತ್ತು ಎಂದು ಅಳತೊಡಗಿದರು.


ಇದನ್ನು ನೋಡಿದ ಗುಣಶೀಲ ಒಮ್ಮೆಲೇ ಬೊಬ್ಬೆ ಹಾಕಿ, ಯಾರು ತೀರಿ ಹೋದರು ಹೇಳಿದರು? ಅವರು ತಲೆ ತಿರುಗಿ ಕುಸಿದಿದ್ದಾರೆಯೇ ಹೊರತು ನಮನ್ನು ಬಿಟ್ಟು ಹೋಗಿಲ್ಲ ಮಾರಾಯ್ರೇ... ನೀವೇನು ನಾರಾಯಣರನ್ನು ಜೀವಂತ ಕೊಲ್ಲುತ್ತೀರ ಎಂದು ಬೊಬ್ಬೆ ಹೊಡೆದ.



ಎಲ್ಲರೂ  ಒಂದು ಕ್ಷಣ ಮೌನವಾದರು!!!


ಡಾಕ್ಟ್ರೇ ಹೊರಗೆ ಬನ್ನಿ, ಜನರಿಗೆ ನಿಜ ಅಂಶ ಹೇಳಿ ಎಂದು ಕೂಗುತ್ತ ಬೊಬ್ಬೆ ಹೊಡೆದ ಗುಣಶೀಲ.


ಇದನ್ನು ಕೇಳಿದ ದಯಕರ್ ನಾಯಕ್, ನಾರಾಯಣ್ ಪತ್ನಿ, ಡಾಕ್ಟರ್ ಮನೆ ಹೊರಗಡೆ ಬಂದರು. ಡಾಕ್ಟರ್ ಹೇಳಿದರು, ನಿಮ್ಮ ನಾರಾಯಣರಿಗೆ ನಿಮ್ಮ ಪ್ರೀತಿ ಇರೋ ತನಕ ಏನೂ ಆಗಲ್ಲ, ನಿತ್ರಾಣ, ರಕ್ತದೊತ್ತಡ ಜಾಸ್ತಿ ಆಗಿದೆ, ವಜ್ರಾಕಾಯ ಗಿಡದ ಎಲೆಯನ್ನು ಆದಷ್ಟು ಬೇಗ ತನ್ನಿ, ನನ್ನಿಂದಾದ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.



ಇದನ್ನು ಕೇಳಿದ ಜನರು, ಪತ್ನಿ, ದಯಕರ ನಾಯಕ್ ನಿಟ್ಟುಸಿರುಬಿಟ್ಟರು. ಗುಣಶೀಲರ ಜೊತೆ ಜಗನ್ನಾಥ್ ಹಾಗೂ ಇಬ್ಬರು ಊರಿನ ಜನರು ವಜ್ರಾಕಾಯ ಗಿಡದ ಎಲೆಯನ್ನು ಹುಡುಕಲು ಉಚ್ಚಲಿ ಕೋಟೆಗಾರಿನ ಕಾಡಿಗೆ ಓಡುತ್ತಾ ಹೋದರು. ಇತ್ತ ದಯಕರ ನಾಯಕ್, ಡಾ.ಹೆಬ್ಬಾರ್ ಇಬ್ಬರೂ ನಾರಾಯಣ್ ರ ಪತ್ನಿಗೆ ಹಾಗೂ ಅಲ್ಲಿದ್ದ ಜನರಿಗೆ ಧೈರ್ಯ ತುಂಬಲು ಮುಂದಾದರು.



ಇಲ್ಲಿ ಒಳಗಿನಿಂದ ಮಲಗಿದಲ್ಲೇ ಎಚ್ಚರವಾದ ನಾರಾಯಣ್ ರು ಬಚ್ಚಲು ಕೋಣೆಗೆ ಹೋದರು. ನಾರಾಯಣ್ ರಿಗೆ ಆ ಸಂಧರ್ಭದಲ್ಲಿ ಏನೆಲ್ಲಾ ಆಗಿತ್ತು ಎಂಬುದೇ ಮರೆತು ಹೋಗಿತ್ತು. ಬಚ್ಚಲು ಕೋಣೆ ಬಂದ್ ಮಾಡಿದಾಗ ಹೊರಗಿದ್ದ ಪತ್ನಿ, ನಾಯಕ್, ಹೆಬ್ಬಾರ್ ಕೊಠಡಿಗೇ ಬಂದವರೇ ಅಲ್ಲಿ ನಾರಾಯಣರನ್ನು ಕಾಣದೆ ಆತಂಕಕ್ಕೊಳಗಾದರು. ಯಾರೂ ಬಚ್ಚಲು ಮನೆಯೊಳಗೆ ಹುಡುಕದೆ ಎಲ್ಲಾ ಕಡೆ ಹುಡುಕಲು ಶುರು ಮಾಡಿದರು.


ಬಚ್ಚಲು ರೂಮಿನಿಂದ ನಾರಾಯಣ್ ರು ಹಿಂದಿನ ಬಾಗಿಲಿನಿಂದ ಹೊರಗೆ ಬಂದಾಗ ಎದುರಲ್ಲಿ ಅಚಿನ್ ಒಮ್ಮೆಲೇ ಪ್ರತ್ಯಕ್ಷನಾದ.

 🔥🔥🔥🔥🔥🔥

ಸತ್ತೆ ಹೋಗಿದ್ದರು ಎಂದುಕೊಂಡಿದ್ದ ನಾರಾಯಣರು ಏಕಾಏಕಿ ಪ್ರತ್ಯಕ್ಷರಾಗಿದ್ದು ಕಂಡು ಅಚಿನ್ ಅಲ್ಲಿಯೇ ಮೂರ್ಛಾಗತನಾದ.

ಇದನ್ನು ಅರಿಯದ ನಾರಾಯಣ್ ರು ಸೀದಾ ಹೊಲಕ್ಕೆ ಹೋದರು.

ಮನೆಯೊಳಗೆ , ಹೊರಗಡೆ ಹುಡುಕುತ್ತಿದ್ದ ಜನರಿಗೆ ಹೆದರಿಕೆ ಇಮ್ಮಡಿಯಾಗತೊಡಗಿತು.


ಪೊಲೀಸಪ್ಪನಿಗೆ ದೂರು ಕೊಡುವ ಎಂದು ದಯಕರ ನಾಯಕ್ ದಿನೇಶ್ ಕಾಮತ್ ರಿಗೆ ಕಾಲ್ ಮಾಡಿ ಕರೆಸಿದರು.


ಇಲ್ಲಿಂದ ವಜ್ರಾಕಾಯ ಗಿಡದ ಎಲೆಯನ್ನು ತಂದ ಗುಣಶೀಲ, ಜಗನ್ನಾಥ್, ಇನ್ನಿಬ್ಬರು ಮನೆಯ ನಾರಾಯಣ್ ರು ಇರದ ವಿಚಾರ ಕಂಡು ಗಾಬರಿಗೊಳಗಾದರು..



 ಮೂರ್ಛೆ ಹೋದ ಅಚಿನ್ ನನ್ನು ಜಗನ್ನಾಥ ನೋಡಿ ಕಣ್ಣಿಗೆ ನೀರು ಹಾಕಿ ಎಬ್ಬಿಸಿದ.

 💥💥💥💥💥💥

ಅಚಿನ್ ಗಾಬರಿಂದ ಒಮ್ಮೆಲೇ ಎದ್ದು ನಾರಾಯಣ್ ಭೂತ ಭೂತ ಎಂದು ಹುಚ್ಚರ ಹಾಗೆ ಕಿರುಚಾಡಿದ, ಇವನ ಕಿರುಚಾಟ ಕಂಡು ಜಗನ್ನಾಥ ಮೂರ್ಛೆ ಹೋದ. ಗುಣಶೀಲ, ಡಾಕ್ಟರ್ ಹೊರಗೆ ಬಂದು ಬೊಬ್ಬೆ ಹೊಡೆದ ಸ್ಥಳ ನೋಡಿದಾಗ ಒಳಗಿನಿಂದ ನಾರಾಯಣ್ ರ ಪತ್ನಿ ಮೂರ್ಛೆ ಹೋದರು. ದಯಕರ ನಾಯಕ್ ನಾರಾಯಣ್ ರ ಪತ್ನಿ ಯನ್ನು ಹಿಡಿಯಲು ಒಳಗೆ ಹೋದರು, ಗುಣಶೀಲ, ಡಾಕ್ಟರ್ ಜಗನ್ನಾಥ ಮೂರ್ಛೆ ಹೋದ ಸ್ಥಳಕ್ಕೆ ಧಾವಿಸಿದರು. ಅಚಿನ್ ನ ಬೊಬ್ಬೆ ಹೊಡೆಯುವ ಸ್ಥಿತಿ ಕಂಡು ಒಳಗಿನಿಂದಲೇ ನಡುಕ ಶುರುವಾಗಿ ಗುಣಶೀಲ ಮೂರ್ಛೆ ಬಿದ್ದ. ದಯಕರ ನಾಯಕ್ ಮೇಲೆ ನಾರಾಯಣ್ ರ ಪತ್ನಿಯ ದೇಹದ ಭಾರದಿಂದ ದಯಕರ ನಾಯಕ್ ಕುಸಿದು ಬಿದ್ದರು.


ವೈದ್ಯರಿಗೆ ಆ ಸಂದರ್ಭ ಏನೂ ಮಾಡಲು ಆಗಲೇ ಇಲ್ಲ. ಪರಿಸ್ಥಿತಿ ಕೈ ಮೀರಿತ್ತು.


ಸ್ವಲ್ಪ ಹೊತ್ತಿನ ಬಳಿಕ, ಹಿಂದಿನ ಬಾಗಿಲ ಮೂಲಕ ಹೊಲಕ್ಕೆ ಹೋಗಿದ್ದ ನಾರಾಯಣ್ ರು 2 ಹಣ್ಣಾದ ಹಲಸಿನ ಹಣ್ಣನ್ನು ಬೆನ್ನಿಗೆ ಹಾಕುತ್ತಾ ಮನೆಗೆ ಬರುತ್ತಿದ್ದರು.


ಒಂದು ಕಡೆ ಅಚಿನ್ ರ ಬೊಬ್ಬೆ, ಇನ್ನೊಂದು ಕಡೆ ಗುಣಶೀಲ ರ ಮೂರ್ಛೆ ಬಿದ್ದ ಸ್ಥಿತಿ, ಒಳಗೆ ನೋಡುವಾಗ ದಯಕರ ನಾಯಕ್, ಪತ್ನಿ ಬಿದ್ದ ಸ್ಥಿತಿ ಕಂಡು ಬೆರಗಾದರು. ಹೊರಗಿನಿಂದ ಬಂದ ದಿನೇಶ್ ಕಾಮತ್ ನಾರಾಯಣರನ್ನು ನೋಡಿದಾಗ ಹೆದರಿ ಪೊಲೀಸ್ ನಾಯಿ ಯನ್ನು ಗಟ್ಟಿ ಹಿಡಿದು ಆಶ್ಚರ್ಯದಿಂದ ಡಾಕ್ಟರ್ ಬಳಿ ಬಂದ ..…..

🏠🏠🏠🏠🏠🏠



ಪತ್ನಿ, ಗುಣಶೀಲ ಮೂರ್ಛೆ ಇಂದ ಎದ್ದೇಳುತ್ತಾರ?



ಗುಣಶೀಲ, ಜಗ್ಗನ್ನಾಥ್ ತಂದ ತಂದ ವಜ್ರಾಕಾಯ ಗಿಡದ ಎಲೆಯನ್ನು ಡಾಕ್ಟರ್ ನಾರಾಯಣ್ ರಿಗೆ ಕುಡಿಸುತ್ತಾರ?  ಮೇಲೆ ಬಿದ್ದ ನಾರಾಯಣ್ ರ ಪತ್ನಿ ಇಂದ ದಯಕರ ನಾಯಕ್ ಹುಷಾರಾಗುತ್ತಾರ??



 🔜🔜🔜🔜🔜🔜

(ಸಶೇಷ)

-ಸುಶೀಲ್ ಕುಮಾರ್.

Post a Comment

1 Comments