Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -03



ಭಗೀರಥನಿಗೆ ಏನಾಯ್ತು?!





ನಿಲ್ಲಿಸಿ....

ಜಗನ್ನಾಥನ ಕೂಗಿಗೆ ಅಲ್ಲಿ ಸೇರಿದ್ದವರೆಲ್ಲ ಸ್ತಂಭೀಭೂತರಾದರು.

ಇನ್ನೇನು ಕಡ್ಡಿ ಗೀರಿ ಆತ್ಮಾಹುತಿ ಮಾಡಿಕೊಳ್ಳಬೇಕೆಂದಿದ್ದ ಜಗನ್ನಾಥನ ಕೈಯ್ಯಿಂದ ಬೆಂಕಿ ಕಡ್ಡಿ ದೂರ ಚಿಮ್ಮಿತು...ಕಾಕತಾಳೀಯವಾಗಿ ಮಳೆ ಬಂದು ಬೆಂಕಿಯ ಭಯ ಹೋಯ್ತು....



ವೇಗವಾಗಿ ಬಂದ ಜಗನ್ನಾಥ ಕೂಗಿ ಹೇಳಿದ...ನಿನಗೇನು ಹುಚ್ಚ ಮಾರಾಯ? ನಾರಾಯಣರು ಯಾವುದೋ ಆವೇಶದಲ್ಲಿ ಏನೋ ಎರಡು ಮಾತು ಆಡಿದ್ದಾರೆ. ಅದಕ್ಕೆ ನೀವು ಹೀಗೆಲ್ಲ ಆತುರ ಮಾಡುವುದ.... ಮರೆತು ಬಿಡಿ. ನಾರಾಯಣರದ್ದು ಮಗುವಿನಂಥಹ ಮನಸ್ಸು. ಎರಡು ಮಾತು ಆಡುತ್ತಾರೆ, ಆದರೆ ಮತ್ತೆ ಅದನ್ನೇ ಮನಸಲ್ಲಿಟ್ಟುಕೊಳ್ಳುವುದಿಲ್ಲ....


ಇಷ್ಟಕ್ಕೂ ನಿಮಗೆ ಅವರ ಬಗ್ಗೆ ಇನ್ನಷ್ಟು ತಿಳಿಯಬೇಕೆಂದಿದ್ದರೆ ಅವರಿಗೊಂದು ಮನವಿ ಕೊಡೋಣ. ಆ ಮನವಿಯನ್ನು ನಾನು ನಿಮಗೆ ಬರೆದುಕೊಡುತ್ತೇನೆ. ನಿಮ್ಮ ಬಗ್ಗೆ ಮಾಹಿತಿ ನೀಡಿ ಮಾರಾಯರೇ. ಅವರೇ ತಮ್ಮ ಸಾಧನೆಯ ಬಗ್ಗೆ ನಿಮಗೆ ಹೇಳುತ್ತಾರೆ... ಎಂದು ಸಮಾಧಾನ ಮಾಡಿದ.


ಜಗನ್ನಾಥನ ಮಾತಿಗೆ ಭಗೀರಥನ ಬೇಸರ ಕಮ್ಮಿಯಾಯಿತು. ನಾರಾಯಣರೂ ತಮ್ಮ ಆವೇಶಕ್ಕೆ ಸಾರಿ ಕೇಳಿದರು. ಅಲ್ಲಿಗೆ ಈ ಪ್ರಕರಣ ಮುಗಿಯಿತು.

ಇಷ್ಟಕ್ಕೂ ಈ ಜಗನ್ನಾಥ ಯಾರು...

ಮತ್ಯಾರೂ ಅಲ್ಲ ಈ ಚಿಗುರು ಮೀಸೆಯ ತರುಣ, ಗೌರ ವರ್ಣದ ಯುವಕನಿಗೆ ವಿದ್ಯುತ್ ಇಲಾಖೆಯಲ್ಲಿ ಕೆಲಸ. ಅವನೊಂದು ದಿವಸ ಮದುವೆ ಪಾರ್ಟಿಯಲ್ಲಿ ಸ್ವಲ್ಪ ಪಾನೀಯ ಸೇವನೆಯ ಬಳಿಕ ಒಟ್ರಾಸಿ ಹುಲಿ ವೇಷದ ಹಾಡಿಗೆ ತಾಳಹಾಕುತ್ತಿದ್ದದ್ದನ್ನು ಆ ಮದುವೆಗೆ ಅತಿಥಿಯಾಗಿದ್ದ ನಾರಾಯಣರು ಗಮನಿಸಿದ್ದರು. ಅವರಿಗೆ ಈ ಕಲೆಯನ್ನು ಈ ಯುವಕ ಕೊಲ್ಲುತ್ತಾನೆ ಅಂತ ಬೇಸರವಾಯಿತು. ಅದಕ್ಕಾಗಿ, ಯುವಕನ ಭಯಂಕರ ನೃತ್ಯ ಮುಗಿದ ಬಳಿಕ ಪಕ್ಕಕ್ಕೆ ಕರೆದು, ತಮ್ಮ ಶಿಷ್ಯತ್ವ ಸ್ವೀಕರಿಸುವಂತೆ ಹೇಳಿದರು.



ತೊಕ್ಕೊಟ್ಟಿನ ವ್ಯಾಯಾಮ ಶಾಲೆಗೆ ಕರೆದೊಯ್ದು ಜಗನ್ನಾಥನಿಗೆ ಹುಲಿ ವೇಷದ ನೃತ್ಯದಲ್ಲಿ ತರಬೇತಿ ಕೊಟ್ಟದ್ದು ಮಾತ್ರವಲ್ಲ, ತಾಲೀಮಿನ ಅಭ್ಯಾಸವನ್ನೂ ಮಾಡಿಸಿದರು. ಈ ನಡುವೆ ನಾರಾಯಣರ ವಿವಿಧ ವ್ಯವಹಾರಗಳಿಗೆ ಬೇಕಾದ ಮನವಿ ಪತ್ರವನ್ನೂ ಜಗನ್ನಾಥನೇ ಬರೆದು ಕೊಡುತ್ತಿದ್ದ... ಇದರಿಂದಾಗಿ ಜಗನ್ನಾಥನಿಗೂ ನಾರಾಯಣರಿಗೂ ಸಾಕಷ್ಟು ಗೆಳೆತನವಿತ್ತು. ಮಾತ್ರವಲ್ಲ, ನಾರಾಯಣರ ತೋಟದಿಂದ ಜಗನ್ನಾಥನಿಗೆ ಓಸಿಗೆ ಹಲಸಿನ ಹಣ್ಣೂ ಸಿಗುತ್ತಿತ್ತು....

.....


ಅದೇ ಸಮಯದಲ್ಲಿ ದೇಶದಲ್ಲಿ *ಡರೋನ-20*  ಎಂಬ ಮಹಾಮಾರಿಯ ಕಾಟ ಆರಂಭವಾಯಿತು. ಜನ ಮನೆ ಬಿಟ್ಟು ಹೊರಗೆ ಬಾರದಂತೆ ಕ್ವಾರಂಟೇನ್ ಹೇರಲಾಗಿತ್ತು... ವಿವಿಧ ವ್ಯವಹಾರಗಳು ನೆಲಕಚ್ಚಿದವು. ಸುಮಾರು ಎರಡು ವರ್ಷ ಕಾಲ ಕಾಡಿದ *ಡರೋನ-20* ಹೊಡೆತದಿಂದ ಹೊರಬರಲು ಜನಸಾಮಾನ್ಯರಿಗೆ ಕಷ್ಟವಾಯಿತು. ನಾರಾಯಣರೂ ಬೆಳೆದ ಲಕ್ಷಾಂತರ ಮೌಲ್ಯದ ಹಲಸಿಗೆ ಗಿರಾಕಿಗಳು ಸಿಗದೆ ಅವರು ಪರಿತಪಿಸುವಂತಾಯಿತು....


.....

ಈ ಕಷ್ಟದ ಪರಿಸ್ಥಿತಿಯಲ್ಲಿ ನಾರಾಯಣರ ಸ್ನೇಹಿತರು ಅವರಿಗೆ ನೆರವಾದರು. ಬೇರೆ ಬೇರೆ ಗಿಮಿಕ್ ನಡೆಸಿ, ತಂತ್ರಗಳನ್ನು ಹೆಣೆದೆ ಹಲಸಿನ ಕಾಯಿಗೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡಿದರು. ಮುಂಬೈಯಲ್ಲಿ ನಾರಾಯಣರ ಪಾಲುದಾರರಾದ ವಿನಿತಾ ಅವರು ಮೂಲತಹ ಕ್ರೀಡಾಪಟು. ಕಾಲೇಜು ದಿನಗಳಲ್ಲಿ ಅತ್ಯತ್ತಮ ಕ್ರೀಡಾಪಟು ಎಂಬ ಪ್ರಶಸ್ತಿ ಗಳಿಸಿದ್ದರು. ಅವರೊಂದು ಐಡಿಯಾ ಮಾಡಿದರು....


ವಾಲಿಬಾಲ್ ಹಾಗೂ ಫುಟ್ಬಾಲ್, ತ್ರೋಬಾಲ್ ಗಳಲ್ಲಿ ಚೆಂಡಿನ ಬದಲು ದುಂಡಗಿನ ಹಲಸಿನ ಕಾಯಿ ಬಳಸಿ ನೋಡಿ, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ತೋರಿಸಿಕೊಟ್ಟರು. ಶಾಲಾ ಕಾಲೇಜುಗಳಲ್ಲಿ ಚೆಂಡಿನ ಬದಲು ಹಲಸಿನಕಾಯಿ ಬಳಕೆಗೆ ಯುವ ಜನತೆ ಮುಂದಾಯಿತು.

ನಂತರ ಇನ್ನೊಬ್ಬ ಕೇರಳದ ಪೈವಳಿಕೆ ಸಮೀಪ ವಾಸಿಸುತ್ತಿದ್ದ ಭೀಮಾವತಿ ಎಂಬವರು ಹಲಸಿನ ಕಾಯಿಗಳಿಂದ ಪ್ರತಿದಿನ ಬೆಳಗ್ಗೆ ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಸಂದೇಶಗಳನ್ನು ಕ್ರಾಫ್ಟ್ ರೂಪದಲ್ಲಿ ಕೆತ್ತನೆ ಮಾಡಿ ಜನ ಮನ ಗೆಲ್ಲಬಹುದು ಎಂಬುದನ್ನು ನಾರಾಯಣರಿಗೆ ತೋರಿಸಿಕೊಟ್ಟರು. ಮತ್ತೆ ಮಂಗಳೂರಿನಲ್ಲಿದ್ದ ಪ್ರೀತಿಲಕ್ಷ್ಮಿ ಎಂಬವರು ತಮ್ಮ ದ್ವಿಚಕ್ರ ವಾಹನದಲ್ಲಿ ಹಲಸಿನ ಹಣ್ಣಿನ ಸೋಳೆಗಳನ್ನು ಪ್ಯಾಕ್ ಮಾಡಿ ಅಂಗಡಿಗಳಿಗೆ ತಲುಪಿಸಿ ನಾರಾಯಣರ ಮಾರುಕಟ್ಟೆ ಹೆಚ್ಚಿಸಿದರು.....

ಪಂಡಿತ್ ಹೌಸಿನ ಗುಣಲಕ್ಷ್ಮೀ ಎಂಬವರು ಹಲಸಿನ ಉಪಯೋಗದ ಕುರಿತು ಪತ್ರಿಕೆಗಳಲ್ಲಿ ಲೇಖನ ಬರೆದು ಜನಜಾಗೃತಿ ಮೂಡಿಸಿದರು. ಕಾಸರಗೋಡಿನ ಗ್ರೀಷ್ಮಾ ಎಂಬವರು ಹಣಕಾಸು ವ್ಯವಹಾರದಲ್ಲಿ ನಿಪುಣರಾಗಿದ್ದು ನಾರಾಯಣರಿಗೆ ಹಲಸಿನಿಂದ ಬಂದ ದುಡ್ಡನ್ನು ಹೇಗೆ ಶೇರುಗಳಲ್ಲಿ ಹೂಡಿಕೆ ಮಾಡಬೇಕು ಎಂಬ ಕುರಿತು ವಿವರಿಸಿದರು.


🎡🎡🎡🎡🎡

*ಡರೋನ-20* ಲಾಕ್ ಡೌನ್ ಸಂಕಷ್ಟದ ಬಳಿಕ ಸಹಜವಾಗಿ ನಾರಾಯಣರ ವ್ಯವಹಾರದಲ್ಲಿ ಚೇತರಿಕೆ ಆಯಿತು. ಅವರ ಹೆಸರು ಬಹಳ ಜನಪ್ರಿಯವಾಯಿತು. ಸಹಜವಾಗಿ ಅವರ ಆದಾಯ ಏರಿಕೆಯಾಗಿದ್ದು ಆದಾಯ ತೆರಿಗೆ ಇಲಾಖೆಯವರಿಗೆ ಗೊತ್ತಾಯಿತು.... ಅವರ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ, ಮಂಗಳೂರಿನಲ್ಲಿ ಲೆಕ್ಕ ಪರಿಶೋಧಕ ಅಧಿಕಾರಿಯೂ ಆಗಿದ್ದ ವಿದ್ಯಾರಶ್ಮಿ ಎಂಬವರಿಗೆ ನಾರಾಯಣರ ಲೆಕ್ಕಾಚಾರಗಳ ಬಗ್ಗೆ ಸಂಶಯ ಮೂಡಿತು...



ಅಸಲಿಗೆ ಆಕೆಗೆ ನಾರಾಯಣರು ಯಾರೆಂದೇ ಗೊತ್ತಿರಲಿಲ್ಲ. ಈ ಹಿಂದೆ ಭಗೀರಥ ನಾರಾಯಣರ ಕುರಿತು ಪ್ರಶ್ನೆ ಮಾಡಲು ಹೋಗಿ ಮುಖಭಂಗಕ್ಕೆ ಒಳಗಾದ್ದು ಆಕೆಗೆ ಗೊತ್ತಿರಲೇ ಇಲ್ಲ.... ಇದು ಯಾವುದರ ಅರಿವಿಲ್ಲದೆ ಆಕೆ, ನಾರಾಯಣರಿಗೆ ನೋಟಿಸ್ ಜಾರಿ ಮಾಡಿದಳು....

ನಿಮ್ಮ ವ್ಯವಹಾರಗಳಿಗೆ ನೀವು ಸೂಕ್ತ ತೆರಿಗೆ ಕಟ್ಟಿಲ್ಲ, ನಾವ್ಯಾಕೆ ನಿಮ್ಮ ಮೇಲೆ ಮೊಕದ್ದಮೆ ದಾಖಲಿಸಬಾರದು....? ಅಂತ...



ಪೋಸ್ಟಿನಲ್ಲಿ ಬಂದ ನೋಟಿಸ್ ನೋಡಿದ್ದೇ ತಡ... ಇದ್ಯಾರು ಹೆಣ್ಣು ಮಗಳು ತನ್ನಂಥ ನೇರ ನಡೆ ನುಡಿಯ ವ್ಯಕ್ತಿಯ ವ್ಯವಹಾರದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಎಂದು ಸಿಟ್ಟುಗೊಂಡ ನಾರಾಯಣರು ತಮ್ಮ ಡಬಲ್ ಬ್ಯಾರಲ್ ಗನ್ ಹಿಡಿದುಕೊಂಡು ಮಂಗಳೂರಿನ ಲೆಕ್ಕಪರಿಶೋಧನಾ ಅಧಿಕಾರಿಯನ್ನು ಸುಟ್ಟು ಬಿಡುತ್ತೇನೆ ಎಂದು ತಮ್ಮ ಹಳೆ ಅಂಬಾಸಿಡರ್ ಕಾರಿನಲ್ಲಿ ಹೊರಟರು...



ಬೀಚಿನಲ್ಲಿ ಸೂರ್ಯೋದಯ ನೋಡುತ್ತಿದ್ದ ಗುಣಶೀಲನಿಗೂ, ವ್ಯಾಯಮ ಶಾಲೆಯಲ್ಲಿ ಹುಲಿಕುಣಿತ ತಾಲೀಮು ಮಾಡುತ್ತಿದ್ದ ಜಗನ್ನಾಥನಿಗೂ ಈ ವಿಚಾರ ತಿಳಿಯಿತು... ನಾರಾಯಣರನ್ನು ಹೀಗೆಯೇ ಇರಲು ಬಿಟ್ಟರೆ ಕೆಲಸ ಕೆಡುತ್ತದೆ ಎಂದು ಅರಿತ ಅವರು. ತಕ್ಷಣ ಒಂದು ಕುದುರೆ ಗಾಡಿ ಏರಿ ಉಳ್ಳಾಲ ಸಂಕ ದಾಟಿ, ಮಹಾಕಾಳಿಪಡ್ಹು ಮೂಲಕ ಮಂಗಳೂರಿನತ್ತ ಧಾವಿಸಿದರು.....


🚜🚜🚜🚜🚜

ನಾರಾಯಣರ ಕಾರು ಫಿಶರೀಸ್ ಕಾಲೇಜು ದಾಟುವ ಹೊತ್ತಿಗೆ ಗುಣಶೀಲ ಮತ್ತು ಜಗನ್ನಾಥ ಇದ್ದ ಗಾಡಿ ಮಂಗಳಾದೇವಿ ದಾಟಿ ಆಗಿತ್ತು....



ನಾರಾಯಣರು  ತನ್ನನ್ನು ಕೊಲ್ಲಲು ಬರುತ್ತಿರುವುದು, ನಾರಾಯಣರ ತಾಕತ್ತು ಅರಿಯದ ಅಮಾಯಕ ಲೆಕ್ಕ ಪರಿಶೋಧಕಿ ವಿದ್ಯಾರಶ್ಮಿ ತನ್ನ ಮನೆಯಿಂದ ಕಚೇರಿಗೆ ಹೊರಡಲು ದ್ವಿಚಕ್ರ ವಾಹನಕ್ಕೆ ಕಿಕ್ ಕೊಟ್ಟಳು...

🛵🛵🛵🛵🛵





(ಸಶೇಷ)....

-KM

Post a Comment

0 Comments