Ticker

5/recent/ticker-posts

Header Ads Widget

MANGALORE UNIVERSITY

ನೆನಪುಗಳ ಮಾತು ಮಧುರ...



ಕಾಲೇಜಿನಿಂದ ನಡೆದು ಬಂದ ದಾರಿಗೆ 2 ದಶಕ ಕಳೆಯಿತು...!!!!



ಸ್ನೇಹಿತರೇ..

ನಿಮಗೆ ನೆನಪಿದೆಯಾ, ನಾವು ನಮ್ಮ ಕಾಲೇಜು ಪದವಿ ವ್ಯಾಸಂಗ ಮುಗಿಸಿ ಈಗ ಸರಿಯಾಗಿ ಎರಡು ದಶಕ, ಅಂದರೆ 20 ವರ್ಷ ಪೂರ್ತಿಯಾಗಿದೆ. 

2000ನೇ ಇಸವಿಯ ಜೂನ್-ಜುಲೈ ಹೊತ್ತಿಗೆ ನಮ್ಮ ಫಲಿತಾಂಶ ಬಂದ ನೆನಪು. ಬಳಿಕ ಉನ್ನತ ವ್ಯಾಸಂಗಕ್ಕೆ ಹೋಗುವವರು, ಉದ್ಯೋಗ ಹುಡುಕುವವರು, ಮದುವೆ ಆಗುವವರೆಲ್ಲ ಮುಂದಿನ ಹಂತಕ್ಕ ತಯಾರಾಗಿದ್ದ ಹಂತವದು. ಕಾಕತಾಳೀಯವಾಗಿ ಕಳೆದ ವರ್ಷ ಇದೇ ದಿನಗಳಲ್ಲಿ ನಾವು ಪುನಃ ಒಟ್ಟು ಸೇರಿದೆವು...

ಅಬ್ಬ,
ಇಪ್ಪತ್ತು ವರ್ಷವೆಂದರೆ ಸರಿಸುಮಾರು ನಮ್ಮ ಕಾಲು ಭಾಗ ಆಯುಷ್ಯ ಅಂತವೇ ಹೇಳಬಹುದು. ಈ ಸುದೀರ್ಘ ಅವಧಿ ನಮ್ಮಲ್ಲಿ ಎಷ್ಟು ಬದಲಾವಣೆಗಳನ್ನು ಮಾಡಿದೆ. ಅಲ್ವ... ಎಷ್ಟೊಂದು ಪಡೆದುಕೊಂಡಿದ್ದೇವೆ, ಎಷ್ಟೊಂದನ್ನು ಕಳೆದುಕೊಂಡಿದ್ದೇವೆ... ಎಲ್ಲಿಯೋ ಇದ್ದವರು ಎಲ್ಲಿಗೋ ತಲುಪಿದವರು, ಇದ್ದಲ್ಲಿಯೇ ಇದ್ದವರು, ಹೀಗಿದ್ದವರು ಹಾಗಾಗಿದ್ದು, ಹಾಗಿದ್ದವರು ಹೀಗಾಗಿದ್ದು, ಕುಡ್ಲ ಬಿಟ್ಟವರು, ರಾಜ್ಯ ಬಿಟ್ಟವರು, ದೇಶ ಬಿಟ್ಟವರು... ಬದುಕು ಕರೆದಲ್ಲಿಗೆ, ಪರಿಸ್ಥಿತಿ ಆಹ್ವಾನಿಸಿದಲ್ಲಿದೆ ಕರೆ ಕೊಟ್ಟು ಹೋದವರು... ಉಳಿದವರು... ಬಂದವರು... ಎಷ್ಟೊಂದು ಬದಲಾವಣೆಗಳಲ್ವ....

....


ಬದಲಾವಣೆ ಎಂದರೆ ಹಣಕಾಸು ಸ್ಥಿತಿಗತಿ, ಕೌಟುಂಬಿಕ, ಔದ್ಯೋಗಿಕ ಮಾತ್ರವಲ್ಲ. ನಮ್ಮ ಚಿಂತನೆ, ನಮ್ಮ ದೃಷ್ಟಿಕೋನ, ನಮ್ಮೊಳಗಿನ ಮುಗ್ಧತೆ, ನಮ್ಮೊಳಗಿನ ವ್ಯಾವಹಾರಿಕ ಪ್ರಜ್ಞೆ, ನಮ್ಮೊಳಗಿನ ಚಿಂತನಾಶೀಲ ಪ್ರವೃತ್ತಿ, ವಿಮರ್ಶೆಯ ಬುದ್ಧಿ, ಭಾವನಾತ್ಮಕ ಅಂಶಗಳು... ಎಲ್ಲವೂ ಅಷ್ಟಿಷ್ಟು ಬದಲಾಗಿಯೇ ಆಗಿರುತ್ತದೆ. ನಾವು ಒಂದಷ್ಟು ಪ್ರೌಢರಾಗಿದ್ದೇವೆ. ನಮ್ಮಲ್ಲಿ ಹಲವರು ಸಂಸಾರಸ್ಥರಾಗಿದ್ದೇವೆ. ನಾವು ಕೇವಲ ನಾವಾಗಿ ಉಳಿದಿಲ್ಲ... ಹುಡುಗಾಟಿಕೆಯವರಾಗಿದ್ದ ನಾವೀಗ ಹಿಂದಿರುಗಿ ನೋಡಿದರೆ, ಎಷ್ಟೊಂದು ಜವಾಬ್ದಾರಿಗಳೊಂದಿಗೆ ಬೇರೆಯದೇ ಮಜಲನ್ನು ದಾಟಿ ಬಂದಿದ್ದೇವೆ ಅನ್ನಿಸುತ್ತದೆ...

ಕಾಲೇಜಿನಲ್ಲಿ, ಕಚೇರಿಯಲ್ಲಿ ಮನೆಯಲ್ಲಿ, ಸಮಾಜದಲ್ಲಿ ಬೇರೆ ಬೇರೆ ಪಾತ್ರ ನಿರ್ವಹಿಸುತ್ತಿರುವ ನಾವು ಈ ಗ್ರೂಪಿನಲ್ಲಿ ಮತ್ತದೇ ಹುಡುಗರು, ಮತ್ತದೇ ಹುಡುಗಾಟ, ಮತ್ತದೇ ಕುಶಾಲು, ತಮಾಷೆ, ಹಳೆ ನೆನಪುಗಳು ಅಲ್ವ....

ವಾಸ್ತವವಾಗಿ ಬದಲಾಗುವುದು, ಪ್ರೌಢರಾಗುವುದು ಅಂದರೇನು ಅಂತ ಯೋಚಿಸಿದರೆ, ಜವಾಬ್ದಾರಿಗಳು ಹೆಚ್ಚಾಗುವುದಾ, ಬದುಕು ನಮಗೆ ಹಲವಷ್ಟು ಪಾಠ ಕಲಿಸುವುದಾ, ನಾವು ಉದ್ಯೋಗದಲ್ಲಿ ದೊಡ್ಡ ದೊಡ್ಡ ಸ್ಥಾನಗಳಿಗೆ ಹೋಗುವುದಾ, ಹೆಚ್ಚಿನ ವಹಿವಾಟು, ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವುದಾ... ಬದಲಾವಣೆಯ ಓಟದೊಂದಿಗೆ ವೇಗಕ್ಕೆ ಸಮಾನವಾಗಿ ಹೆಜ್ಜೆ ಹಾಕುವುದಾ... ಯಾವುದೋ ಆಗಿರಬಹುದು. ಎಲ್ಲವೂ ಆಗಿರಬಹುದು....

ನನ್ನ ಪ್ರಕಾರ, ನಾವು ಬದುಕಿನಲ್ಲಿ ಸೋತಿದ್ದೇವೆ, ಗೆದ್ದಿದ್ದೇವೆ, ಸರಿ ದಾರಿಯಲ್ಲಿದ್ದೇವೆ, ತಪ್ಪು ದಾರಿಯಲ್ಲಿದ್ದೇವೆ, ಬುದ್ಧಿವಂತನಾಗಿದ್ದೇನೆ, ದಡ್ಡನಾಗಿದ್ದೇನೆ... ಇದೆಲ್ಲ ಅನ್ನಿಸುವುದು ಹೋಲಿಕೆಯಿಂದ... ಹೋ ಅವನಿಗೆ ಹೋಲಿಸಿದರೆ ನಾನು ಮೇಲಿದ್ದೇನೆ, ಕೆಳಗಿದ್ದೇನೆ, ಚಂದ ಇದ್ದೇನೆ, ಬುದ್ಧಿವಂತನಿದ್ದೇನೆ, ತಾಳ್ಮೆಯಿಂದ ಇದ್ದೇನೆ, ಮುಂಗೋಪಿಯಿದ್ದೇನೆ, ಸುಖವಾಗಿದ್ದೇನೆ, ಕಷ್ಟದಲ್ಲಿದ್ದೇನೆ.. ಇದೆಲ್ಲ ಅವರಿವರ ಜೊತೆಗಿನ ಬದುಕನ್ನು ನಮ್ಮೊಂದಿಗೆ ಹೋಲಿಸಿದಾಗ ತೀವ್ರವಾಗಿ ಅನ್ನಿಸುವ ಭಾವಗಳು ಅಂತ ನಾನು ತುಂಬ ಸಲ ಯೋಚಿಸುತ್ತೇನೆ....

🌳🌳🌳🌳

ಬದುಕಿನ ವಿಪರ್ಯಾಸವೆಂದರೆ, ತಾಂತ್ರಿಕವಾಗಿ ಇಷ್ಟೊಂದು ಕಂಡುಹಿಡಿದಿರುವ ಮಾನವನಿಗೆ, ಚಂದ್ರನ ಮೇಲೆಯೂ ಕಾಲೂರಲು ಸಾಧ್ಯವಾಗಿರುವ ಮನುಷ್ಯನಿಗೆ ತನ್ನ ಭವಿಷ್ಯ ಮತ್ತು ಭೂತ ಕಾಲದ ಬದುಕಿಗೆ ಫಾರ್ವರ್ಡ್ ಆಗಲು, ರಿವೈಂಡ್ ಆಗಲು ಆಗುವುದೇ ಇಲ್ಲ...
ನೆನಪುಗಳು, ಅನುಭವಗಳ ಮೆಲುಕುಗಳು ಮಾತ್ರ ನಮ್ಮನ್ನು ಮತ್ತೆ ಮತ್ತೆ ಎಳೆಯರನ್ನಾಗಿಸಬಹುದು. ಮನಸ್ಸನ್ನು ಉಲ್ಲಾಸದಿಂದ ಇರಿಸಲು ಹರಟೆ, ಮಾತುಕತೆ, ನಿರಾಳತೆಗೆ ತಮಾಷೆ ಎಲ್ಲ ನೆರವಾಗುತ್ತದೆ. ಅಧಕ್ಕೆ ನಮ್ಮ ಎರಡೂ ಗ್ರೂಪುಗಳು ಅವಕಾಶ ಕಲ್ಪಿಸುತ್ತಿವೆ ಎಂಬುದು ತುಂಬ ನೆಮ್ಮದಿ ಕೊಡುವ ವಿಷಯ....

ಬದುಕು ವ್ಯಸ್ತವಾಗಿದೆ, ಟೈಮಿಲ್ಲ, ಪುರುಸೊತ್ತಿಲ್ಲ... ಅನ್ನುವ ಒತ್ತಡದ ನಡುವೆಯೂ ನಾವು ಗ್ರೂಪುಗಳಲ್ಲಿ ಕಾಣಿಸಿಕೊಂಡು, ಒಂದು ಬಾರಿ ಮುಖತಾ ಭೇಟಿಯಾಗಿ, ಮತ್ತೆ ಹತ್ತು ಹಲವು ಹಳೆಯ ಕ್ಲಾಸ್ ಮೇಟ್ ಗಳ ನಂಬರ್ ಪಡೆದು ಪುನಃ ನಾವು ಅವರ ಜೊತೆ ಮಾತನಾಡುವಂತಾಗಿದ್ದು ನಮ್ಮ ಒಂದು ಸುಯೋಗ.... ದುಡಿಮೆ, ಗಳಿಕೆ, ಅಂತಸ್ತು ಎಲ್ಲ ಬದುಕಿನ ಯಾಂತ್ರಿಕ ಪ್ರಕ್ರಿಯೆಗಳಲ್ಲಿ ಸೇರಿ ಹೋಗಿದೆ. ಆದರೆ ಸ್ನೇಹ, ಸಂಬಂಧ, ಆತ್ಮೀಯತೆ, ಸಲುಗೆಯ ಒಡನಾಟದ ಸುಖ ಅದು ಸಹಪಾಠಿಗಳಲ್ಲಿ, ಸ್ನೇಹಿತರಲ್ಲಿ ಸಿಗುತ್ತದೆ... ಅಂತಹ ಒಂದು ವೇದಿಕೆಯ ಭಾಗಗಳಾಗಿರುವ ನಾವು ದೀರ್ಘಕಾಲಕ್ಕೊಂದು ದಾರಿಯಾಗಿ ಈ ಗ್ರೂಪನ್ನು ಜಾಗರೂಕತೆಯಿಂದ ನಡೆಸೋಣ...

20 ವರ್ಷಗಳ ನಂತರದ ಒಂದು ಪುಟ್ಟ ಅವಲೋಕನ, ಈ ನಡುವಿನ ಏಳು ಬೀಳುಗಳು, ಕಾಣದೇ ಇರುವ ನಾಳೆಗಳು... ಎಲ್ಲದರ ನಡುವಿನ ಕೊಂಡಿಯಾಗಿರಲಿ ಈ ಪುಟ್ಟದೊಂದು ಗ್ರೂಪು... ಎಲ್ಲರಿಗೂ 2 ದಶಕದ ನಂತರ ಬದುಕಿನ ಹೊಸ ಮಜಲಿಗೆ ಸುಸ್ವಾಗತ....

🌱🌱🌱🌱🌱🌱

✍️ -ಕೃಷ್ಣಮೋಹನ.

------------------------------------------------------------------------------------------------


ಸುಶೀಲ್ ಅನುಭವ ಮತ್ತು ಪ್ರತಿಕ್ರಿಯೆ 


ಒಮ್ಮೆಗೆ 20 ವರ್ಷ ಹಿಂದೆ ಹೋದ ಅನುಭವವಾಯಿತು. ಈ ಗ್ರೂಪ್ create ಆಗಿ 1 ವರ್ಷ ದಾಟಿದೆ. ಗೊತ್ತೇ ಆಗಿಲ್ಲ ಈ ಒಂದು ವರ್ಷ ಹೇಗೆ ಹೋಯಿತು ಎಂದು.

ನನ್ನಲ್ಲಿ ಉಮೇಶ್, ಸಚಿನ್, ರಾಜೇಶ್ ಪೈ, ಚರಣ್, ಶುಭಾ, ಸುದರ್ಶನ್, ಮೃದುಲ.ಸಾಗರ್.  Fb ಯಲ್ಲಿ ರಾಜೇಶ್ ಪೈ, ವನಿತಾ ಮುಂಬೈ, ರೇಷ್ಮಾ, ಫಾರೂಕ್.ಉಳಿದವರ number ಇದೇ ಗ್ರೂಪ್ ಆದ ಬಳಿಕವೇ ಸಿಕ್ಕಿತು. UCM NSS ವಾಟ್ಸಾಪ್ ಗ್ರೂಪ್ create ಆಗಿ 3 ವರ್ಷ ಕಳೆಯಿತು. ಅದರಲ್ಲಿ ನಾನು ಸಚಿನ್, ಉಮೇಶ್, ಸುದರ್ಶನ್ ಮೊದಲೇ ಇದ್ವಿ. ಆಗಲೇ ನನ್ನ ಮನಸ್ಸಿಗೂ ಹೊಳೆದಿತ್ತು ನಮ್ಮ classmates ಗ್ರೂಪ್ create ಮಾಡಲು.

ಈಗ ಸ್ವಲ್ಪ ಆದರೂ free ಇದ್ದೇನೆ. ಕಳೆದ 3 ವರ್ಷಗಳಿಂದ ಸರಿಯಾಗಿ ಉಳ್ಳಾಲದಲ್ಲೂ ಇರಲಿಲ್ಲ. Roaming ಜಾಸ್ತಿಯೇ ಇದ್ದ ಕಾರಣ ಗ್ರೂಪ್ create ಮಾಡುವ ಗೋಜಿಗೆ ಹೊಗೇ ಇರಲಿಲ್ಲ. ಅಮವಾಸೆ/ ಹುಣ್ಣಿಮೆಗೊಮ್ಮೆ ಫಾರೋಕ್ ಅಲ್ಲಿ, ವನಿ ಯಲ್ಲಿ fb ಯಲ್ಲಿ chat ಮಾಡುದನ್ನು ಬಿಟ್ರೆ ನಾನು ತನ್ನದೇ ವ್ಯವಹಾರ, ಸಂಸಾರದಲ್ಲಿ buzy ಆಗಿದ್ದೆ.

ಆದರೆ ಯಾವಾಗ ಈ ಗ್ರೂಪ್ create ಆಯಿತೋ.. ನಾನು 19/20 ವರ್ಷ ಹಿಂದೆ ಹೋಗಿ class ನಲ್ಲಿ ನಾನು ಯಾವ ರೀತಿ ಇದ್ದೆ ಅದೇ ರೀತಿ ಇರುತ್ತಲೇ ಹೋಯಿತು. ಈ ಗ್ರೂಪ್ ಗೆ ಬಂದಾಗ ನನಗೂ ಮದುವೆ ಆಗಿದೆ, ಮಕ್ಕಳಿದ್ದಾರೆ ಗೊತ್ತೇ ಆಗುತ್ತಿರಲಿಲ್ಲ, ಅಷ್ಟು enjoy ಈ ಗ್ರೂಪ್ ನಲ್ಲಿ ಮಾಡುತ್ತಿದ್ದೆ.

ಈ ಗ್ರೂಪಿನಿಂದ ನಮ್ಮ ಎಲ್ಲಾ lecturer ರನ್ನು  ಕೃಷ್ಣ ಮೋಹನ್, ರೇಷ್ಮಾ, ಧನವಂತಿ, ಪುಷ್ಪಲತಾ, ನಿತಿನ್ ರವರ ಜೊತೆ meet ಆಗುವ ಅವಕಾಶ ಸಿಕ್ಕಿತು. ಸಚಿನ್ ಉಮೇಶ್, ರಾಜೇಶ್ ಪೈ ರ ಜೊತೆ ಹೋಟೆಲ್ ನಲ್ಲಿ ಜೊತೆಗೆ ಊಟ ಮಾಡುವ ಅವಕಾಶ ಸಿಕ್ಕಿತು.  ಸೆಪ್ಟೆಂಬರ್ 2nd week ಮುಂಬೈ ಯಲ್ಲಿ ವನಿ, ಪಾವನಾ, ಹರಿಣಾಕ್ಷಿ ಯವರ ಜೊತೆ meet ಆಗಿ ಕಾಲ ಕಳೆಯುವ ಅವಕಾಶ ಸಿಕ್ಕಿತು. ದಿವ್ಯಾ, ಬೇಬಿರೇಖಾ, ದಯಾ ಸ್ವಲ್ಪದರಲ್ಲೇ ಮಿಸ್ ಆದರು.

ಡಿಸೆಂಬರ್ 15, 2019 ರಂದು ನಾವು ಮರೆಯದ ದಿನವೂ ಆಯಿತು. 1997/2000 batch ನ getogether/ ನಮ್ಮ ಸಹಪಾಠಿಗಳಾದ ಅಶ್ವಿನ್, ಶುಭಾ, ಉಮೇಶ್ ರವರ achivement ಕಾರ್ಯಕ್ರಮ ಕೂಡ ಒಳ್ಳೇದರಲ್ಲೇ ಬಂತು. ಅವತ್ತು ಆಯೋಜಿಸಿದ ಸಚಿನ್ ರ games ಮರೆಯಲು ಸಾಧ್ಯವಿಲ್ಲ.

ಅಮಿತಾ ರ ಗ್ರಹಪ್ರವೇಶಕ್ಕೂ ಹೋಗೋ ಅವಕಾಶ ಕೃಷ್ಣಮೋಹನ್, ರೇಷ್ಮಾ, ಪುಷ್ಪ, ನಿತಿನ್, ನನಗೂ ಒದಗಿ ಬಂತು.

ಮೊದಮೊದಲು ದಿನಕ್ಕೆ 4,580 chat ಮಾಡಿದ ದಾಖಲೆ ಈ ಗ್ರೂಪ್ ಗೆ ಸಲ್ಲುತ್ತೆ. Daily 1500 ಕ್ಕಿಂತ ಜಾಸ್ತಿ chating ಆಗ್ತಿತ್ತು. Chat start ಆದ್ರೆ 19/20 ವರ್ಷಗಳ ಹಿಂದೆ ಎಲ್ಲರೂ ಹೋಗುತ್ತಿದ್ದೆವು. ಆದರೆ ಗ್ರೂಪ್ ಅಂದರೆ ಎಲ್ಲರೂ ಒಂದೇ ರೀತಿ ಇರಲ್ಲ. ಗ್ರೂಪ್ ನಲ್ಲಿ ಚಿಕ್ಕಪುಟ್ಟ ಘರ್ಷಣೆಗಳೂ ಬರತೊಡಗಿದವು. ಮಕ್ಕಳ ಹಾಗೆ ಜಗಳ ಕೂಡ ಮಾಡಿದ್ದುಂಟು, ಎಷ್ಟೋ ಜನರು left ಆಗಿ ಮತ್ತೆ add ಆದದ್ದೂ ತುಂಬಾ ಉದಾಹರಣೆಗಳೂ ನಮ್ಮೆದುರಿಗಿವೆ😊.

Chating ನಲ್ಲಿ forwd msg ಜಾಸ್ತಿ ಆದಾಗ ಈ ಗ್ರೂಪ್ create ಮಾಡಿದ KM ರಿಗೂ ತುಂಬಾ ಬೇಸರವಾಗಿ ಅವರೂ left ಆದ situation ಬಂದಾಗ daily chat ಮಾಡುವವರ ಗ್ರೂಪ್ ಬೇರೇನೇ ಇರಲಿ ಎಂಬ ಕೂಗು ಬಂದಾಗ ಸ್ನೇಹಲೋಕ 1997/2000 ಎಂಬ ಹೊಸ ಚಾಟಿಂಗ್ ಗ್ರೂಪ್ create ಆಯಿತು. ಇದರಲ್ಲೂ ಒಳ್ಳೇ ರೀತಿಯಿಂದ ಚಾಟಿಂಗ್, fighting, laughing, etc ಆಗುತ್ತಿದೆ..

ಈ ಗ್ರೂಪ್ ಕೇವಲ time pass ಆಗದೆ ರಕ್ತದ ಅವಶ್ಯಕತೆ ಇದ್ದಾಗ, ನಮ್ಮ ಸಹಪಾಠಿಗಳು ಕಷ್ಟದಲ್ಲಿ ಇರುವಾಗ ಸಾಕಷ್ಟು ನೆರವಾಗಿದೆ🙏😊.

ಇದೇ ರೀತಿ ಈ ಗ್ರೂಪ್ ಮುಂದುವರೆಯುತ್ತಾ ಸಾಗಲಿ.  ಕೊರೊನ ಎಂಬ ಹೆಮ್ಮಾರಿ ಇರದೇ ಇರುತಿದ್ದಲ್ಲಿ may 1st week ನಲ್ಲಿ one day tour ಕೂಡ ಆಯೋಜಿಸಿದ್ದೆವು. ಅದು ತಪ್ಪಿ ಹೋಯಿತು.

ಮುಂದೆ ಕೊರೊನ ನಿಯಂತ್ರಣ ಬಂದ ಮೇಲೆ ವರ್ಷಕ್ಕೊಮ್ಮೆ ಆದರೂ getogether ಮಾಡುತ್ತಿರೋಣ. ಇದೇ december ನಲ್ಲಿ ಇನ್ನೊಂದು getogether ಇಡೋಣ ಎಂಬುದು ನನ್ನ ಭಾವನೆ🙏

ನಿಮ್ಮೆಲ್ಲರ ಸಹಮತ ಇದ್ದಲ್ಲಿ ಈ ಬರುವ getogether ಕೂಡ ಹೋದ december ನಂತೆ success ಆಗುವಲ್ಲಿ ಸಂಶಯವಿಲ್ಲ.


ಮಗದೊಮ್ಮೆ ಈ ಗ್ರೂಪ್ create ಮಾಡಿದ KM, ಫಾರೂಕ್ ಗೆ ವಂದನೆಗಳು ಹಾಗೂ ಸಮಯ ಮಾಡಿ ಓದಿದ ನಿಮಗೂ ವಂದನೆಗಳು🙏😊🍫✋🏻👍🏻👍🏻👍🏻💐

Post a Comment

0 Comments