Ticker

5/recent/ticker-posts

Header Ads Widget

MANGALORE UNIVERSITY

ಮುಖ್ಯ ಸಂದೇಶ...

ಎಲ್ಲ ಸದಸ್ಯರ ಗಮನಕ್ಕೆ....


ಆತ್ಮೀಯ ಸ್ನೇಹಿತರೇ....



ನಿಮಗೆಲ್ಲ ಗೊತ್ತಿರುವ ಹಾಗೆ, ನಮ್ಮ ಈ ಗ್ರೂಪಿನ ಸಹ ಅಡ್ಮಿನ್ ಹಾಗೂ ನಮ್ಮ ಸ್ನೇಹಿತೆ ಪುಷ್ಪಲತಾ ಅವರ ಚಿಕಿತ್ಸೆ ವೆಚ್ಚ ಭರಿಸಲು ನಮ್ಮ ಗ್ರೂಪಿನಿಂದ ಕಿಂಚಿತ್ ನೆರವಾಗುವ ಉದ್ದೇಶದಿಂದ ನಾವು ನಿಮ್ಮ ಬೆಂಬಲ ಯಾಚಿಸಿದ್ದೆವು. ನೀವೆಲ್ಲ ಸಕಾಲದಲ್ಲಿ ನೆರವಾಗಿ ನಮ್ಮ ಬ್ಯಾಂಕ್ ಖಾತೆಗೆ ಧನಸಹಾಯ ನೀಡಿದ್ದಿರಿ. ಈ ಮೊತ್ತವನ್ನು ನಾವೀಗ ಆಕೆಗೆ ಹಸ್ತಾಂತರಿಸಲಿದ್ದೇವೆ. ಇಂದು ಮಧ್ಯಾಹ್ನ ನಮ್ಮ ಖಾತೆಯ ಸಿಗ್ನೇಚರ್ ಅಥಾರಿಟಿಗಳಾದ ನಿತಿನ್ ಮತ್ತು ನಾನು ಮಿಲಾಗ್ರಿಸ್ಸಿನ ನಮ್ಮ ಉಳಿತಾಯ ಖಾತೆಯ ಇರುವ ಪಂಜಾಬ್ ನ್ಯಾಶನಲ್ ಬ್ಯಾಂಕಿನ ಹೆಸರಿಗೆ 40 ಸಾವಿರ ರು.ಗಳ ಚೆಕ್ ಸಿದ್ಧಪಡಿಸಿದ್ದೇವೆ. ಈ ಚೆಕ್ ನ್ನು ಪುಷ್ಪಲತಾಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ನಮ್ಮ ಅಡ್ಮಿನ್ ನಿತಿನ್ ವಹಿಸಿದ್ದಾರೆ. ಬ್ಯಾಂಕ್ ಪಕ್ಕದಲ್ಲೇ ಇರುವ ನಿತಿನ್ ಅವರನ್ನು ಮಧ್ಯಾಹ್ನ ಭೇಟಿಯಾಗಿ ನಾವು ಈ ಕೆಲಸ ಪೂರೈಸಿದೆವು.





ಪುಷ್ಪಾಗೆ ಮುಂದಿನ ಎರಡು ಟ್ರೀಟ್ ಮೆಂಟಿಗೆ (ಈ ತಿಂಗೆಳು ಹಾಗೂ ಮುಂದಿನ ತಿಂಗಳು) ಈ 40 ಸಾವಿರ ರು. ದುಡ್ಡು ನೆರವಾದೀತು ಎಂಬ ಭರವಸೆ ನಮ್ಮದು. ದುಡ್ಡಿಗಿಂತ ಮಿಗಿಲಾಗಿ ಆಕೆಯ ಅನಾರೋಗ್ಯದ ಸಂದರ್ಭ ನೈತಿಕ ಧೈರ್ಯ ತುಂಬಿದ ಹಾಗೂ ಆಕೆಗಾಗಿ ಪ್ರಾರ್ಥಿಸಿದ ನಿಮಗೆಲ್ಲ ಆಭಾರಿಯಾಗಿದ್ದೇನೆ. ಹಣಕಾಸು ನೆರವಿನಷ್ಟೇ ಧೈರ್ಯ ತುಂಬುವ ಕಾರ್ಯ ಕೂಡಾ ಜವಾಬ್ದಾರಿಯುತವಾಗಿದ್ದು. ನೀವೆಲ್ಲ ನಮ್ಮ ಒಬ್ಬ ಸಹಪಾಠಿಯ ಕಷ್ಟದ ದಿನಗಳಲ್ಲಿ ಭರವಸೆ ತುಂಬಿದ್ದು ತುಂಬಾ ಮಾನವೀಯ ಕಾರ್ಯ. ನಮ್ಮೆಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಾಗಿ ವನಿತಾ (ಲೇಡಿ ಗೋಶನ್) ಹಾಗೂ ನಿತಿನ್ ಅವರು ಸಕಾಲದಲ್ಲಿ ಹೆಚ್ಚಿನ ನೆರವು ನೀಡಿದ್ದಾರೆ. ಎಲ್ಲರ ಪ್ರಾರ್ಥನೆ ಹಾಗೂ ನೆರವಿನ ಕಾರಣದಿಂದ ಇವತ್ತು ಪುಷ್ಪಾ ಚೇತರಿಸುತ್ತಿದ್ದಾರೆ. ಈ ಗ್ರೂಪಿನ ಸದಸ್ಯರ ಬಗ್ಗ ಎಲ್ಲರ ಪ್ರೀತಿ ಹಾಗೂ ವಿಶ್ವಾಸ ಇದೇ ರೀತಿ ಮುಂದುವರಿಯಲಿ...
ಧನ್ಯವಾದಗಳು.

🙏🙏🙏

ನಾವೇನೂ ದೊಡ್ಡ ಸಹಾಯ ಮಾಡಿದ್ದೇವೆಂಬ ಹೆಗ್ಗಳಿಕೆ ಅಲ್ಲ ಇದು. ಈ‌ ಕಾರ್ಯ ಸದಾ ಪ್ರೇರಕವಾಗಿರಲಿ ಎಂಬ ಆಶಯ ಅಷ್ಟೆ

🙏🙏🙏🙏

-ಕೆಎಂ ಹಾಗೂ ನಿತಿನ್

(10-08-2020)

Post a Comment

0 Comments