ಕೆ ಎಂ ಟಿ ಮೇಲೆ ಕಳುಹಿಸಿದ ಪಟ್ಟಿ ನೋಡಿದ ಮೇಲೆ ಇದನ್ನು ಇಲ್ಲಿ ಹಂಚೋಣ ಅನಿಸಿತು . ನಮ್ಮ ಸೈಲೆಂಟ್ ಬಳಗದ ಸದಸ್ಯ .ನನ್ನ ಚೆಸ್ ಗುರು , ನಮ್ಮ ಆತ್ಮೀಯ ಸ್ನೇಹಿತ ಹರೀಶನ ಬಗ್ಗೆ ಆರು ವರ್ಷದ ಹಿಂದೆ FB ಯಲ್ಲಿ ಬರೆದ ಒಂದು ನೆನಪನ್ನು ಅದೇ ರೀತಿ ಇಲ್ಲಿ ಹಂಚಿದ್ದೇನೆ . ಅಗಲಿದ ನಮ್ಮ ಮಿತ್ರನ ಪವಿತ್ರ ಆತ್ಮಕ್ಕೆ ಚಿರ ಶಾಂತಿ ಕೋರಲು ಬಯಸುತ್ತೇನೆ
ನನ್ನ ಆತ್ಮೀಯ ಮಿತ್ರನೊಬ್ಬನನ್ನು ಕಳೆದುಕೊಂಡು ಇಂದಿಗೆ ಆರು ವರ್ಷವಾಯಿತು.ಅವನು ತೀರಿ ಹೋಗುವ ಒಂದು ವಾರ ಮುನ್ನ ಫೋನ್ ಮಾಡಿ " ಸ್ವಲ್ಪ ಜ್ವರ ಇದೆ. ಎಡೆಬಿಡದೆ ಮಳೆ ಬೇರೆ ಸುರಿಯ್ತಾ ಇದೆ . ನಿನ್ನ ಮದುವೆಗೆ ಬರಲಾಗುತ್ತಿಲ್ಲ ,ಬೇಸರ ಮಾಡ್ಬೇಡ'' ವಿಷಾದ ವ್ಯಕ್ತ ಪಡಿಸಿದ್ದ.ನಾನು ಪ್ರೀತಿಯಿಂದ ಬಯ್ದು ಫೋನ್ ಇಟ್ಟಿದ್ದೆ .ಅವನದ್ದೇ ಮೊಬೈಲ್ ನಿಂದ ಬಂದ harisha expired ಎಂಬ ಮೆಸೇಜ್ ನೋಡಿ ಜೋಕ್ ಮಾಡುತ್ತಿದ್ದಾನೋ ಎಂದಂದು ಕೊಳ್ಳುತ್ತಿದ್ದಾಗಲೇ ನನ್ನ ಇನ್ನೊಬ್ಬಆತ್ಮೀಯ ಮಿತ್ರ ಕೃಷ್ಣ ಫೋನ್ ಮಾಡಿ ಹರೀಶನ ಸಾವಿನ ಸುದ್ದಿ ದ್ರಡೀಕರಿಸಿದ್ದ.
ಅವನನ್ನು ನೋಡಲು ಹೋದಾಗ ಅನಿರೀಕ್ಷಿತವಾದ ಸಾವಿಗೆ ಶರಣಾಗಿ ಕಣ್ಣು ಮುಚ್ಚಿ ಮಲಗಿದ್ದನಾದರೂ , ಕಣ್ ಕಣ್ಬಿಟ್ಟು ನೋಡುತ್ತಿದ್ದ ನಮಗೆ ನಂಬುವುದೇ ಅಸಾಧ್ಯವಾಗಿತ್ತುಯಂಡಮೂರಿ ವೀರೇಂದ್ರನಾಥ ರವರ ಹಿಮ ಪರ್ವತ ಕಾದಂಬರಿಯಿಂದ ಪ್ರೇರಿತರಾಗಿ ಅದೇ ಹೆಸರಿನ ಮಿತ್ರ ಬಳಗ ಕಟ್ಟಿಕೊಂಡು ಕಾಲೇಜ್ ನ ಸಾಂಸ್ಕೃತಿಕ ಚಟುವಟಿಕೆಯಲ್ಲಿ , ಚರ್ಚಾ ಗೋಷ್ಠಿಯಲ್ಲಿ ಸಕ್ರೀಯನಾಗಿದ್ದ ನಮ್ಮ ಮಿತ್ರ ಯಾವ ಸದ್ದಿಲ್ಲದೇ ಇಲಿ ಜ್ವರಕ್ಕೆ ಬಲಿಯಾಗಿದ್ದ .
ಸ್ನಾತಕೋತ್ತರ ಪದವಿ ಮುಗಿಸಿ ಅರೆ ಕಾಲಿಕ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ಹರೀಶ, ಪೂರ್ಣಕಾಲಿಕ ಉಪನ್ಯಾಸಕನಾಗಿ ಸರಕಾರಿ ಹುದ್ದೆಯನ್ನು ಇನ್ನೇನೋ ಕೆಲವೇ ದಿನಗಳಲ್ಲಿ ಸೇರಬೇಕಾದವನು ಅಕಾಲಿಕ ಸಾವಿಗೆ ತುತ್ತಾಗಿ ಪೂರ್ಣ ಕಾಲಿಕವಾಗಿ ಈ ಲೋಕದಿಂದ ಮರೆಯಾಗಿ ಹೋಗಿದ್ದ .
ಈಗ ಅವನಿಲ್ಲವಾದರೂ ಅವನು ಬಿಟ್ಟು ಹೋದ ನೆನಪುಗಳು ಕಾಡಿಸುತ್ತೆ. ಆಟೋಗ್ರಾಫ್ನಲ್ಲಿ ಅವನು ಬರೆದ ಮಾತುಗಳು , ಆಲ್ಬಮ್ ನಲ್ಲಿನ ಅವನ ಚಿತ್ರಗಳು ಅಣಕಿಸುತ್ತೆ..
ಅವನಿಗಾಗಿ ಈ ಅಕ್ಷರಾಂಜಲಿ .... ೧೮. ೦೮. ೨೦೧೪
ಹರೀಶ ಮರಣ ಹೊಂದಿ ಇಂದಿಗೆ ಹನ್ನೆರಡು ವರ್ಷ ಆಯಿತು

0 Comments