ಮಂಗಳೂರು ವಿ.ವಿ. ಕಾಲೇಜಿನಲ್ಲಿ 1982ರಿಂದ ಆರಂಭಿಸಿ ನಿರಂತರ 38 ವರ್ಷಗಳಿಂದ ವಾಣಿಜ್ಯ ವಿಭಾಗ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ 2020ರ ಸೆ.30ರಂದು ನಿವೃತ್ತರಾಗಲಿರುವ ಶ್ರೀಮತಿ ಮೀನಾ ಎಸ್.ಕಜಂಪಾಡಿ ಅವರನ್ನು ಯುಸಿಎಂ 2ಕೆ (ಬಿ.ಕಾಂ.) ವಾಟ್ಸಪ್ ಗ್ರೂಪು ವತಿಯಿಂದ ಸೆ.29, 2020 ಮಂಗಳವಾರದಿಂದ ಆತ್ಮೀಯವಾಗಿ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
ವಿ.ವಿ.ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 1997-2000ನೇ ಬ್ಯಾಚಿನ ವಿದ್ಯಾರ್ಥಿಗಳ ಗ್ರೂಪಿನ 12 ಮಂದಿ ಈ ಅನೌಪಚಾರಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಂಗಳೂರು ವಿ.ವಿ.ಯ ಆಗಿನ ವಾಣಿಜ್ಯ ವಿಭಾಗದ ಅಂತಿಮ ಬಿ.ಕಾಂ. ಎ ಸೆಕ್ಷನ್ ಕೊಠಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೀನ್ ಎಸ್.ಕಜಂಪಾಡಿ ಅವರಿಗೆ ಸ್ಮರಣಿಕೆ ನೀಡಿ, ಶಾಲು ಹೊದೆಸಿ, ಮಲ್ಲಿಗೆ ಮುಡಿಸಿ, ಗುಲಾಬಿ ಹೂವು ಹಾಗೂ ಸೀರೆ ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು. ನಿತಿನ್ ಹಾಗೂ ಶರ್ಮಿಳಾ ಅವರು ಪ್ರತ್ಯೇಕ ಸ್ಮರಣಿಕೆಗಳನ್ನು ನಿವೃತ್ತರಾಗುತ್ತಿರುವ ಉಪನ್ಯಾಸಕಿಗೆ ಸಮರ್ಪಿಸಿದರು.
ಕೃಷ್ಣಮೋಹನ ಕಾರ್ಯಕ್ರಮ ನಿರ್ವಹಿಸಿದರು. ಸುಶೀಲ್ ಕುಮಾರ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಲ್ಲ ಹಳೆ ವಿದ್ಯಾರ್ಥಿಗಳು ಸೇರಿ ಸನ್ಮಾನವನ್ನು ನೆರವೇರಿಸಿದರು.
ನಿವೃತ್ತರಾಗುತ್ತಿರುವ ಉಪನ್ಯಾಸಕಿ ಮೀನಾ ಮೇಡಂ ಅವರು 2000ನೇ ಬ್ಯಾಚಿನ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದ ಸೂಚಿಸಿದರು. 1982ರಿಂದ ಕಾಲೇಜಿನಲ್ಲಿ ಉದ್ಯೋಗ ಅವಧಿಯ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಿವೃತ್ತಿ ಜೀವನವನ್ನು ಕುಟುಂಬದವರೊಂದಿಗೆ ಕಳೆಯಲು ಇಚ್ಛಿಸುವುದಾಗಿ ಹೇಳಿದರು.
ಹಿರಿಯ ಉಪನ್ಯಾಸಕಿಯರಾದ ಶ್ರೀಮತಿ ಸುನಂದಾ ಹಾಗೂ ಶ್ರೀಮತಿ ಸುಧಾ ಅವರೂ ಸಮಾರಂಭದಲ್ಲಿ ಹಾಜರಿದ್ದರು.
ಎಲ್ಲ ಹಳೆ ವಿದ್ಯಾರ್ಥಿಗಳಿಗೆ ಮೇಡಂ ವತಿಯಿಂದ ಲಘು ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೇಡಂ ಅವರು ತಾವು ತರಗತಿ ನಡೆಸುತ್ತಿದ್ದ ದಿನಗಳನ್ನು ನೆನಪಿಸುತ್ತಾ ಹಾಜರಿ ಪುಸ್ತಕ, ಚಾಕ್ ಪೀಸ್ ಹಾಗೂ ಡಸ್ಟರ್ ಜೊತೆಗೇ ತರಗತಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮ ಸಂಘಟನೆಗೆ ಕಾಲೇಜಿನ ಬೋಧಕೇತರ ಸಿಬ್ಬಂದಿ ಸಹಕಾರವನ್ನೂ ಯುಸಿಎಂ ಬಿಕಾಂ 2ಕೆ ಗ್ರೂಪು ವಿಶೇಷವಾಗಿ ಸ್ಮರಿಸುತ್ತದೆ. ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಪ್ರಾಂಶುಪಾಲರ ಸಹಕಾರವನ್ನೂ ನಮ್ಮ ಗ್ರೂಪು ವಿಶೇಷವಾಗಿ ಸ್ಮರಿಸುತ್ತದೆ.
ಸಮಾರಂಭದಲ್ಲಿ ಪಾಲ್ಗೊಂಡ ಸ್ನೇಹಿತರು:
1) ಸುಶೀಲ್ ಕುಮಾರ್
2) ಕೃಷ್ಣಮೋಹನ
3) ಸಂದೇಶ್
4) ಅನಿಲ್ ಚರಣ್
5) ನಿತಿನ್
6) ಮಮತಾ ಕಾವೂರು
7) ಜ್ಯೋತಿಲಕ್ಷ್ಮೀ
8) ಶುಭಾ
9) ಧನವಂತಿ
10) ಭಾಗೀರತಿ
11) ರೇಶ್ಮಾ
12) ಶರ್ಮಿಳಾ
0 Comments