Ticker

5/recent/ticker-posts

Header Ads Widget

MANGALORE UNIVERSITY

ವಯಸ್ಸಿನ ಬಗ್ಗೆ ಚಿಂತನೆ

 ವಯಸ್ಸು ಮತ್ತು ದೃಷ್ಟಿಕೋನ ಡ್ರೋನ್ ಕ್ಯಾಮೆರಾದ ಹಾಗಲ್ವ?

🌸🌸🌸🌸🌸

-ಕೃಷ್ಣಮೋಹನ. (17.09.2020)



ಬಹುಶಃ 20 ವರ್ಷಗಳ ಹಿಂದೆ ನಮಗೆ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಈಗ ನಮಗಾಗಿದ್ದಷ್ಟು (40ರ ಆಸುಪಾಸು) ವಯಸ್ಸಾಗಿದ್ದಿರಬಹುದು. ಯಾಕೆಂದರೆ ಈಗ ಅವರೆಲ್ಲ 50-60ರ ಆಸುಪಾಸಿನಲ್ಲಿದ್ದಾರೆ. ಆಗ ನಮಗೆ ಅವರು ತುಂಬ ಹಿರಿಯರ ಥರ ಕಾಣಿಸುತ್ತಿದ್ದರು. ಯಾಕಂದರೆ ನಾವು ಆಗ ಕಿರಿಯರಾಗಿದ್ದೆವು. ಈಗ 20 ವರ್ಷ ಕಳೆದು ನಾವು ಅವರದ್ದೇ ಪ್ರಾಯವನ್ನು ತಲುಪಿದ್ದೇವೆ. ಆದರೆ, ಈಗಲೂ ನಮಗೆ ಅವರು ತುಂಬ ಹಿರಿಯರು ಅನ್ನಿಸ್ತಾ ಇದೆ. ಆದರೆ, ನಾವು ಈ ಗ್ರೂಪಿಗೆ ಬಂದಾಗ ಮತ್ತೆ ನಾವು ಕಿರಿಯರು ಅಂತವೇ ಅನ್ನಿಸ್ತಾ ಇದೆ (ಗ್ರೂಪಿನಲ್ಲಿರುವ ಶಿಕ್ಷಕರಿಗೆ ಹಾಗನ್ನಿಸದೇ ಇರಬಹುದು).


ಯಾಕೆ ಇದನ್ನು ಹೇಳುತ್ತಿದ್ದೇನೆ ಅಂದರೆ, ವಯಸ್ಸು ಮತ್ತು ಹಿರಿತನ ನಾವು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದೇವೆ ಎಂಬುದನ್ನೂ ಅವಲಂಬಿಸಿರುತ್ತದೆ. ನಾವು ಕ್ಲಾಸಿನಲ್ಲಿ ವಿದ್ಯಾರ್ಥಿಗಳಾಗಿ ಕುಳಿತಿದ್ದಾಗ ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ನಮಗೆ ಈಗ ಆದಷ್ಟೇ ಪ್ರಾಯವಾಗಿದ್ದಿರಬಹುದು. ಈಗ ನಾವು ಅದೇ ಪ್ರಾಯಕ್ಕೆ ಬಂದಾಗ ನಮ್ಮ ಬೌದ್ಧಿಕತೆ, ಮತ್ತು ವಯಸ್ಸಿನ ಗಾಂಭೀರ್ಯ ಖಂಡಿತಾ ಜಾಸ್ತಿ ಆಗಿದೆ. ಗ್ರೂಪಿನಲ್ಲಿ ನಾವು ತಮಾಷೆಯಾಗಿ ಮಾತನಾಡಿದರೂ ಸಹ ಪ್ರತಿಯೊಬ್ಬರಲ್ಲೂ ವಯಸ್ಸಿಗೆ ತಕ್ಕ ಮೆಚ್ಯೂರಿಟಿ ಇದ್ದೇ ಇರುತ್ತದೆ.


ಆದರೆ, ವಯಸ್ಸು ನಮ್ಮನ್ನು ಎಷ್ಟು ಮಾಗಿಸುತ್ತದೆ. ವಯಸ್ಸಿನ ಜೊತೆಗೆ ಹೆಚ್ಚಾಗುವ ಜವಾಬ್ದಾರಿಗಳು, ಪರಿಸ್ಥಿತಿಗಳು, ನಾವು ದಾಟಿ ಬರುವ ಸಂದರ್ಭಗಳು ನಮ್ಮನ್ನು ಬದಲಾಯಿಸುತ್ತದೆ ಅಥವಾ ಬದಲಾಯಿಸಲು ಪ್ರಚೋದಿಸುತ್ತದೆ , ಅಥವಾ ಎಲ್ಲಕ್ಕಿಂತ ಹೆಚ್ಚಾಗಿ ಬಹುತೇಕ ಸಂದರ್ಭ ಪರಿಸ್ಥಿತಿಗೆ ತಕ್ಕಂತೆ ವರ್ತಿಸುವುದು ನಮ್ಮ ಪಾಲಿಗೆ ಉಳಿದಿರುವ ಏಕೈಕ ಆಯ್ಕೆಯೂ ಆಗಿರುತ್ತದೆ...


ಅವತ್ತು ನಮಗೆ ಪಾಠ ಮಾಡುತ್ತಿದ್ದವರು ಇಂದು ನಿವೃತ್ತಿಯ ಹಂತದಲ್ಲಿದ್ದಾರೆ. ನಾವೊಂದು ರೀತಿ ಮಧ್ಯಮ ಸ್ಥಿತಿಯಲ್ಲಿದ್ದೇವೆ. ಈ 40ರ ಹಂತ. ಯೌವ್ವನದಿಂದ ನಿಧಾನವಾಗಿ ಕಳಚಿಕೊಳ್ಳುತ್ತಾ ಹಿರಿಯ ವಯಸ್ಕರ ಸಾಲಿಗೆ ಸೇರುವುದು, ಜವಾಬ್ದಾರಿಯುತ ಪೋಷಕರಾಗುವುದು, ನಮಗಿಂತ ಮುಂದಿರುವ ಹಿರಿಯರು ಹಾಗೂ ನಮಗಿಂತ ಹಿಂದಿರುವ ಈಗಿನ ವಿದ್ಯಾರ್ಥಿಗಳ ವಯಸ್ಸಿನವರ ನಡವಳಿಕೆಗಳನ್ನು ಕಂಡು ಅಚ್ಚರಿಪಡುವುದು. ಅತ್ತ ತೀರಾ ಮುಂದುವರಿದವರೂ ಆಗದೆ, ತೀರಾ ಹಿಂದೆ ಉಳಿದವರೂ ಆಗದೆ ಮಧ್ಯಮ ಸ್ಥಿತಿಯಲ್ಲಿರುವವರು ನಾವೆಲ್ಲ.... 


ಅದಕ್ಕೇ ನಮಗೆ ನಮ್ಮದೇ ವಯಸ್ಸಿನವರು, ನಮ್ಮದೇ ಸಹಪಾಠಿಗಳ ಒಡನಾಟ ಹೆಚ್ಚು ಆಪ್ಯಾಯಮಾನವಾಗುತ್ತದೆ.... ಒಂದೇ ಕಾಲಮಾನದ ಚಿಂತನೆಗಳನ್ನು ಹಂಚಿಕೊಂಡವರು ಎಂಬ ಕಾರಣಕ್ಕೆ.... ಹೊರತು ಮತ್ತೇನೂ ಅಲ್ಲ..


ವಯಸ್ಸು, ಯೋಚನೆ, ಬದುಕಿನ ಬಗೆಗಿನ ದೃಷ್ಟಿಕೋನ ಎಲ್ಲ ಡ್ರೋಣ್ ಕ್ಯಾಮೆರಾದಿಂದ ಸೆರೆ ಹಿಡಿದ ಚಿತ್ರಗಳ ಹಾಗೆ.... ಕ್ಯಾಮೆರಾ ಭೂಮಿಯಿಂದ ಮೇಲೆ ಹೋಗ್ತಾ ಹೋಗ್ತಾ ಚಿತ್ರವನ್ನು ಹೆಚ್ಚು ನಿಖರವಾಗಿ ತೋರಿಸ್ತಾ ತೋರಿಸ್ತಾ ಹೋಗುತ್ತದೆ... ದೂರ ಹೆಚ್ಚಾದ ಹಾಗೆ ಚಿತ್ರ ಮಸುಕಾಗುತ್ತಾ ಹೋಗುತ್ತದೆ. ಡ್ರೋಣ್ ಚಿತ್ರಗಳನ್ನು ನೋಡಿದಾಗ, ಈ ಜಾಗ ಹೀಗಿರುತ್ತದಾ ಅಂತ ಭಾಸವಾಗುತ್ತದೆ... ದೂರ ನಿಂತು ನೋಡಿದಾಗ ಎಲ್ಲದರದ್ದೂ ಆಯಾಮ ಬೇರೆಯೇ ಕಾಣುತ್ತದೆ. ಎಲ್ಲವೂ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ ಅಲ್ವ...

...



ಸುಶೀಲ್ ಕುಮಾರ್  ಅಭಿಪ್ರಾಯ 

ವಯಸ್ಸಿನ ಬಗ್ಗೆ ಚಿಂತನೆಯನ್ನು KM ಅದ್ಭುತವಾಗಿ ಬರೆದಿದ್ದಾರೆ. ತರಂಗ ಓದಿದ ಹಾಗೆ ಆಯಿತು.  ಕಾಲೇಜು life ನಲ್ಲಿ ಇರುವಾಗ ಎದುರು ಬಂದು ಸಂಕೋಚ ಪಡುತ್ತಿದ್ದ KM ಇವತ್ತು ಎಷ್ಟು mature ಆಗಿದ್ದಾರೆ ಎಂದು ಈ draft ನೋಡುವಾಗ ಗೊತ್ತಾಗುತ್ತೆ.


ಸುಮಾರು 20/21 ವರ್ಷಗಳ ಹಿಂದೆ ಜೊತೆಗಿದ್ದ ನಾವು 20 ವರ್ಷಗಳ ನಂತರ ಜೊತೆಯಾಗಿದ್ದೇವೆ. ಸುಮಾರು ಒಂದು ವರ್ಷಗಳ ಹೆಚ್ಚು ಕಾಲ ನಾವು ಗ್ರೂಪಿನಲ್ಲಿ chat ಮಾಡುವಾಗಲೂ ನಮಗೆ 40 ವರ್ಷ ಆಗಿದೆ, ನಮಗೆ ಮಕ್ಕಳಿದ್ದಾರೆ ಎಂಬ ಕಿಂಚಿತ್ತೊ ವಿಷಯ ಮನಸ್ಸಿಗೆ ಬರುತ್ತಿಲ್ಲ.


ಇಲ್ಲೂ ನಾವು ಜಗಳ ಆಡುತ್ತೇವೆ, ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತೇವೆ. ಉಪದ್ರ ಕೊಡ್ತೇವೆ, ಹಾಗೇನೇ ನಾಚಿಕೆನೂ ಕೆಟ್ಟುತ್ತೇವೆ. ಆದರೆ ನಮಗೆ ಒಂಚೂರು ಬೇಜಾರು ಆಗುತ್ತಿಲ್ಲ.


ಇದಕ್ಕೆ ಮೂಲ ಕಾರಣ ನಮ್ಮ ಮುಗ್ಧ ಮನಸ್ಸು. ಈ ಗ್ರೂಪಿನಲ್ಲಿ X ಮಿಲಿಟರಿ ಯವರಿದ್ದಾರೆ, ಪೊಲೀಸ್ ಅಧಿಕಾರಿ ಯವರಿದ್ದಾರೆ, ಸರಕಾರಿ ನೌಕರರು ಇದ್ದಾರೆ, nurse staff ಇದ್ದಾರೆ, ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿಯವರಿಗೆ ಕಲಿಸುತ್ತಿರುವ ಶಿಕ್ಷಕರು, profeesor ಇದ್ದಾರೆ, ಕಂಪನಿಯಲ್ಲಿ ಕೆಲಸಮಾಡುವವರು, accountent, ಫಾರ್ಮಸಿ, ಸ್ವಂತ ಉದ್ಯೋಗ, ಸ್ವಂತ ವ್ಯವಹಾರ ಹಾಗೆ 10 ದಿವಸದ ಹಿಂದೆ ಈ ಗ್ರೂಪಿಗೆ ಸೇರಿದ ನಮ್ಮೆಲ್ಲರ ನೆಚ್ಚಿನ ಪ್ರೀತಿಯ ಬ್ಯಾಂಕ್ officer ನಾಗರಾಜ್ ಹಾಗೆ ಗ್ರಹಿಣಿಯರೂ ಇದ್ದಾರೆ😊.


ಎಲ್ಲರೂ ಹೊರಪ್ರಪಂಚದಲ್ಲಿ mature ಇದ್ದರೂ ಈ ಗ್ರೂಪಿಗೆ ಬಂದಾಗ ನಾವೆಲ್ಲರೂ 20 ವರ್ಷ ಹಿಂದೆ ಹೋಗಿ ಬಿಡುತ್ತೇವೆ.😊


ಗ್ರೂಪ್ ಆಗುವ ಮೊದಮೊದಲು ಈ ಗ್ರೂಪಿಗೆ adjust ಆಗದೆ ಹೇಳದೆ left ಆದವರೂ ಇದ್ದಾರೆ ಹಾಗೂ KM ರ ಪ್ರೀತಿಯ ತಾಳ್ಮೆಇಂದ ಹೆಚ್ಚಿನವರು ಹಿಂದೆ ಬಂದು ನಮ್ಮ ಜೊತೆ ಸೇರಿ ಸಹಪಾಠಿಗಳ ಪ್ರೀತಿ ಹಂಚುತ್ತಿದ್ದಾರೆ😊👍🙏.


ನಮಗೆಲ್ಲರಿಗೂ ತಮ್ಮದೇ ಆದ buzy shedule ಇದ್ದೇ ಇದೆ. ಕೆಲವರಿಗೆ adjust ಮಾಡಿ ಗ್ರೂಪಿಗೆ ಬರಲು ಆಗುತ್ತಿದೆ, ಇನ್ನೂ ಕೆಲವರಿಗೆ ಕಷ್ಟ ಸಾಧ್ಯ. ಆದರೂ ನಮ್ಮ ಬ್ಯಾಚಿನ ಮೇಲಿನ ಪ್ರೀತಿ ಯಾವತ್ತೂ ಇದೆ😊.


ನಮಗೆಲ್ಲರಿಗೂ personal tention ಇದ್ದಾಗ ಅದನ್ನು ದೂರ ಮಾಡಲು ಈ ಗ್ರೂಪ್ ತುಂಬಾ ಸಹಕಾರಿಯಾಗಿ ಬಿಟ್ಟಿದೆ. ಈ ಗ್ರೂಪಿನಲ್ಲಿ ನಾನು ಇದ್ದ ಹಾಗೆ ಬೇರೆ ಗ್ರೂಪಿನಲ್ಲಿ ಇರಲು ಸಾಧ್ಯವಿಲ್ಲ. ಅಲ್ಲಿ ನನ್ನದೇ ವ್ಯವಹಾರದ attitude maintain ಮಾಡಲೇ ಬೇಕು. ಇಲ್ಲಿ ನಾವು ನಮ್ಮ proffesional ನ್ನು ಬಿಟ್ಟು teenage ತರ ಗಮ್ಮತ್ತು ಮಾಡುತ್ತಿರುತ್ತೇವೆ.


ಒಂದು ವಿಜ್ಞಾಪಣೆ😊🙏. ಇಲ್ಲಿ ನಾವು ಇನ್ನೊಬ್ಬರ ಕಾಲು ಎಳೆಯುವಾಗ ಯಾರಿಗಾದರೂ personal ಬೇಸರವಾಗಿದ್ದಲ್ಲಿ ದಯವಿಟ್ಟು ಕ್ಷಮೆ ಇರಲಿ🙏😊. ಇಲ್ಲಿ ನಾವು ಯಾರ personal ವಿಷಯಕ್ಕೆ ಹೋಗಲ್ಲ, ಹೋಗಲೂ ಬಾರದು ಕೂಡ. Just funny ಅಷ್ಟೇ. ಜಾಸ್ತಿಯಾಗಿದ್ರೆ ನಮ್ಮ ಪ್ರೀತಿಯ ಅಡ್ಮಿನ್ DIRECT KM ಗೆ ವಿಷಯ ತಿಳಿಸಿ. KM ಅದನ್ನು ಸರಿಪಡಿಸುವಲ್ಲಿ ನಿರತರಾಗಿ ಮುಂದೆ ಅಂತಹ ಅವಘಡ ಆಗದ ಹಾಗೆ maintain ಮಾಡುತ್ತಾರೆ🙏😊.


ನಾಳೆ ನಾವು ಇರುತ್ತೇವೋ ನಮಗೆ ತಿಳಿದಿಲ್ಲ. ಇರುವಷ್ಟು ದಿನ ಖುಷಿ ಖುಷಿಯಾಗಿ ಇದ್ದು ಸಹಪಾಠಿಗಳ ಚೇಷ್ಟೆ, ಪ್ರೀತಿ ಹಂಚುತ್ತಿರೋಣ.


ನಮ್ಮ ಕಾಲೇಜಿಗೆ, ಕಷ್ಟದಲ್ಲಿ ಇದ್ದವರಿಗೆ ನಮ್ಮಿಂದಾದ ಸಹಾಯ ಮಾಡುತ್ತಾ ಇರೋಣ🙏. 


ನಮ್ಮ ಪ್ರೀತಿಯ lecurer ಮೀನ ಮೇಡಂ ಈ ತಿಂಗಳು ಅಂತ್ಯಕ್ಕೆ retire ಆಗುತ್ತಿದ್ದಾರೆ.  ಮೀನ madam ಗೆ ಚಿಕ್ಕ ಸನ್ಮಾನ ಕಾರ್ಯಕ್ರಮ ಏರ್ಪಡಿಸಿ ಅವರ ಪ್ರೀತಿಗೆ ಪಾತ್ರರಗೊಣ, ಮಂಗಳೂರಿನಲ್ಲಿರುವ ಹೆಚ್ಚಿನ ಸಹಪಾಠಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗೋಣ. Km ಇದರ ಬಗ್ಗೆ ಬರುವ ವಾರ ಮಾತನಾಡುತ್ತಾರೆ👍.


ಆಯಸ್ದು ಇರೋ ತನಕ ಈ ಗ್ರೂಪಿನಲ್ಲಿ ಖುಷಿ, ಸಂತೋಷ, ದುಃಖ, ಇತ್ಯಾದಿ ಹಂಚುತ್ತಿರೋಣ.


ಇಷ್ಟು  ಸಮಯ ಕೊಟ್ಟು ಓದಿದಿದಕ್ಕೆ ನಿಮಗೆ ಧನ್ಯವಾದಗಳು🙏😊


Post a Comment

0 Comments