Ticker

5/recent/ticker-posts

Header Ads Widget

MANGALORE UNIVERSITY

ಸವಿ ಸವಿ ನೆನಪು... ಇದು ಮಾಸದ ನೆನಪು ನಮ್ಮಯ ಬದುಕಿನ.. ಚಿರ ನೂತನ ನೆನಪು.



ಮೀನಾ ಎಸ್. ಕಜಂಪಾಡಿ, ನಮ್ಮ ಆತ್ಮೀಯ ಉಪನ್ಯಾಸಕ ವರ್ಗದಲ್ಲಿ ಒರ್ವರಾಗಿದ್ದು ನಿನ್ನೆ(29-09-2020),ನಮ್ಮ ಸಮೂಹದ ಪರವಾಗಿ ಅವರ ಕರ್ತವ್ಯದ ಬದುಕಿಗೆ ವಿದಾಯ ಹೇಳಿದ ಸಂದರ್ಭ. ಮೀನಾ ಮ್ಯಾಡಮ್ ರವರಿಗೆ ವಿದಾಯ ಕೋರುವುದು ಒಂದು ನಮಗೆ ನೆಪವಾಗಿತ್ತಷ್ಟೆ ಎಂದು ಕೃಷ್ಣ ಮೋಹನ್  ತಮ್ಮ ಮಾತಿನಲ್ಲಿ ಹೇಳಿದ್ದು, ಅದು ಅಕ್ಷರಶಃ ದಿಟವಾಗಿತ್ತು.

ನಮ್ಮ  ಈ ಸಮೂಹವು ರೂಪುಗೊಂಡ ಮೇಲೆಸದಸ್ಯರೆಲ್ಲರೂ ಆನೇಕ  ವರ್ಷಗಳ ನಂತರ ದೊರಕಿದ ಸ್ನೇಹವನ್ನು ಅತ್ತ್ಯುತ್ತಮ  ರೀತಿಯಲ್ಲಿ ಬಳಸಿಕೊಂಡು ಆತ್ಮೀಯ ಬಾಂಧವ್ಯ  ಬೆಳೆಸಿಕೊಂಡು ಮುಂದುವರಿಯುತ್ತಿರುವುದು ನಮಗೆಲ್ಲಾ ತಿಳಿದಿರುತ್ತದೆ.

ತಿಂಗಳ  ಹಿಂದೆ ಕೃಷ್ಣ ಮೋಹನ್ ಗೆ ಮೀನಾ ಮ್ಯಾಡಮ್  ನಿವೃತ್ತಿ  ಹೊಂದುವುದು ಹಾಗೂ ಅನುಸೂಯಾ ಮೇಡಂ  ಭಡ್ತಿ ಹೊಂದುವ ವಿಷಯವನ್ನು ಸಮೂಹದಲ್ಲಿ ಹಂಚಿಕೊಂಡರು. ನಂತರ ಅನುಸೂಯ ಮೇಡಂ  ದುಃಖಿತರಾದ ವಿಷಯವೂ ತಿಳಿಯಿತು. ನಂತರದ ದಿನಗಳಲ್ಲಿ zoom meetingನ ವ್ಯವಸ್ಥೆ ನಮ್ಮ ಸಮೂಹದಲ್ಲಿ  ಬಂತು ಅದರಲ್ಲೂ ವಿದಾಯ ಸಮಾರಂಭದ ವಿಷಯ ಮುಖ್ಯ ವಾಗಿತ್ತು. 30.09.2020ರಂದು ಅವರ ಕೊನೆಯ ಕಾರ್ಯದ ದಿನ  ಎಂದು ಗೊತ್ತಾಗಿ ನಾವು ಒಂದು ಚಿಕ್ಕ ರೀತಿಯಲ್ಲಿ ಬೀಳ್ಕೊಡುವ ಹಾಗೂ  ನಾವೆಲ್ಲರೂ ಆದಷ್ಟು ಸೇರುವ ಎಂದು ತಿಳಿಸಲಾಗಿತ್ತು.

ನಾನೂ ಸ್ವಲ್ಪ  ಆತುರಪಟ್ಟು 30.09.2020ಕ್ಕೆ ಇದ್ದ ಎಲ್ಲಾ  ಕೆಲಸಗಳನ್ನು ಸರಿದೂಗಿಸಿ ಮುಂದಿನ announcement ಗೆ ಕಾಯುತ್ತಿದ್ದೆ. ನಂತರ ಅದು 29.09.2020ಕ್ಕೆ ಕೇವಲ  ಒಂದು ಗಂಟೆಯ  ಸರಳ  ಕಾರ್ಯಕ್ರಮ ಎಂದು ತೀರ್ಮಾನಿಸಲಾಯಿತು. ಇಷ್ಟು ಕೇಳಿದ ಮೇಲೆ ನನ್ನ ಆಸೆಗೆ  ಎಳ್ಳು ನೀರು ಬಿಟ್ಟು  ಸುಮ್ಮನೆ ಕುಳಿತೆ. 

ಆದರೆ  ಅದೇನು  ಪವಾಡವೋ ಎನೋ ಬೆಳಿಗ್ಗೆ 9.45ಕ್ಕೆನನಗಿದ್ದ ಕೆಲಸವು ತನ್ನಿಂದ ತಾನೇ  ಮಾಯವಾಗುವ ಲಕ್ಷಣ..... ತಕ್ಷಣ ಒಂದು ಕಾಲ್ ಕೃಷ್ಣ ಮೋಹನಗೆ ನಾನೂ ಕಾರ್ಯ ಕ್ರಮಕ್ಕೆ ಬರಬಹುದಾ.... ಎಂದು. ಆದರೂ 10.30ರ ಮೇಲೆಯೇ ಹೊರಹೋಗಬಹುದು ಎಂದು ಮೇಲಾಧಿಕಾರಿಗಳ ತಾಕೀತು, ಆದರೂ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗುವ ಆಕಸ್ಮಿಕ ಸಂದರ್ಭ ಒದಗಿಬರುವುದು ಎಂದು ನಿಮಿಷ ನಿಮಿಷಗಳನ್ನು ಲೆಕ್ಕ ಹಾಕುತ್ತಾ  ಕಾತುರದಿಂದ ಕಾಯುತ್ತಿದ್ದೆ.

11.00ಕ್ಕೆ ಮತ್ತೆ  ಕೃಷ್ಣ ಮೋಹನರಿಂದ ಫೋನ್ ಕರೆ ನನಗೆ  ರಿಸೀವ್ ಮಾಡಲಿಕ್ಕೆ. ಬೇಡ ಯಾಕೆಂದರೆ  ಕಾರ್ಯಕ್ರಮ  ಬಹಳ ಸಣ್ಣದು ಹಾಗಾಗಿ  ಮುಗಿಯಿತು ಬರುವುದು ಬೇಡ ಎನ್ನುತ್ತಾರೆ ಅಂತ ಯೋಚನೆ, ಮತ್ತೂ ಒಂದೆರೆಡು ನಿಮಿಷದ ಬಳಿಕ ಕಾಲ್ ಮಾಡಿದೆ. ಈಗ ತಾನೇ ಬಸ್ಸು ಹತ್ತಿದ್ದೇನೆ ಎಂದೆ,  ಆವಾಗ  ಬನ್ನಿ ಬನ್ನಿ  ಹತ್ತು ಹದಿನೈದು ನಿಮಿಷದಲ್ಲಿ ಕಾರ್ಯಕ್ರಮ ಶುರುಮಾಡುತ್ತೇವೆ. ನೀವು ಡೈರೆಕ್ಟ್ ಆಗಿ final Bcom A section ಗೇ ಬನ್ನಿ, ಒಂದು ವೇಳೆ ಇಲ್ಲಿ ಮುಗಿದರೂ ನಾವೆಲ್ಲಾ townhall ನ ಹೂದೋಟದಲ್ಲಿ ಇರುತ್ತೇವೆ... ಅಲ್ಲಿ ಬನ್ನಿ ಎಂದು, ಅಷ್ಟರಾಗಲೇ ಬಸ್ಸು ತೋಕ್ಕೋಟು ತಲುಪಿತ್ತು. ನಾನು ಲೆಕ್ಕ ಹಾಕಲು ಶುರುಮಾಡಿದೆ..ಇನ್ನು 25or30ನಿಷಕ್ಕೆ ಮುಟ್ಟುತ್ತೇನೆ. ನನಗಾಗಿ ಖಂಡಿತ ಅವರು ಕಾಲೇಜಲ್ಲೇ ಇರುವರು,ಕ್ಯಾಂಪಸ್ ಗೆ ಹೇಗೂ ಹೋಗಲು ಅವಕಾಶ  ಸಿಗಬಹುದೆಂದು ಖಾತರಿ ಆಯಿತು.
ಸರಿಯಾಗಿ 25ನಿಮಿಷಕ್ಕೆ NSಬಸ್ಸು  ಮಿಲಾಗ್ರಿಸ್ ತಲುಪಿತು. ಅಂದರೆ ಆವಾಗ 11.33ಅಲ್ಲೇ ಇಳಿಯುವುದು ಬೇಡ ಮುಂದಿನ ಸ್ಟಾಪ್ RTOದಲ್ಲಿ  ಇಳಿದರೆ ಒಳ್ಳೆ ಯದೆಂದು ಯೋಚಿಸಿದೆ.
ಆದರೆ ಬಸ್ಸು  ಕಾಲೇಜು ದಾಟಿ ಮುಂದೆ ಹೋಗುವಾಗ ಗೇಟ್ ಮುಂದೆ ಹಾರುವಷ್ಟು ಕಾತರ ಕಂಡ ಕಂಡಕ್ಟರ್ ಅಕ್ಕಾ  ಕಾಲೇಜ್ ಅವುಲೇ ಇಪ್ಪುಂಡು...(ಕಂಡಕ್ಟರ್ ಪರಿಚಯ ಇದ್ದವರು) ಅಂದರು.

ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದಾಗಿ ಎಲ್ಲಾ ಅಲ್ಲೋಲ ಕಲ್ಲೋಲ ಆಗಿ ಬಿದ್ದಿರುವ ಕಲ್ಲು ಮಣ್ಣಿನ ರಾಶಿ ನೋಡಿ ನಾನು ಹೇಳಿದೆ ಕಂಡಕ್ಟರ್ ಗ್ ನನ್ನನ್ನು ಅಲ್ಲಿಯೇ ಇಳಿಸಬಹುದಿತ್ತಲ್ಲಾ ಎಂದು. ಇದರಿಂದಾಗಿ ನನಗೆ ಇನ್ನೂ 14ನಿಮಿಷ ಜಾಸ್ತಿ ಆಯಿತೆಂದು. ಅಂತೂ ಹೇಗೋ ಕ್ಯಾಂಪಸ್ ಒಳಗೆ ಬಂದಾಗ 11.55ಮೊದಲು Susheel ಅವರ ಕಾರು ನಂತರ ಅನನ್ಯ  ಎಂದು ಬರೆದ ಕಾರು.... ಅಷ್ಟು ನೋಡಿದೆ. ಎಲ್ಲಾ ಅಲೋಚನೆಗೂ ಬ್ರೇಕ್ ಬಿತ್ತು.

ಎನೋ ದೊಡ್ಡ ಸಾಧನೆ ಮಾಡಿದಾಗೆ ಅನುಭವ, ಮುಂದೆ ಹೋದಾಗ ಕೃಷ್ಣ ಮೋಹನ ಮೇಲಿನ ಫ್ಲೊರಲ್ಲಿ ಕೈತೊಳೆದು ಬರುವ  ಹಾಗೆ ಕಾಣಿಸಿತು, ಮಾಸ್ಕ್ ಸರಿಸಿ ಮೆಲ್ಲನೆ (ಕೆಳಗಿನಿಂದಲೇ)  ಕೇಳಿದೆ.. ಹೋಗೋದಾ ಮುಗಿಯಿತಾ ಎಂದು, ಇಲ್ಲಾ ಬನ್ನಿ ಎಂದಾಗ  ಸ್ವರ್ಗಕ್ಕೆ ಮೂರೇ ಗೇಣು... ಅಷ್ಟರಲ್ಲಿ ಅಲ್ಲಿ ಸೇರಿದ್ದ  ಮೀನ ಮ್ಯಾಮ್, ಸುನಂದ ಮ್ಯಾಮ್ ಸುಧಾ ಮ್ಯಾಮ್, ಕೃಷ್ಣ ಮೋಹನ, ಸುಶೀಲ್, ನಿತಿನ್, ಅನಿಲ್, ಸಂಪತ್, ಮಮತ, ಜ್ಯೋತಿ, ರೇಷ್ಮ, ಶುಭ, ಶರ್ಮಿಳ ರೆಲ್ಲಾ ಸೇರಿ ಕೇವಲ ಟೀಪಾರ್ಟಿ ಮಾತ್ರ ಮುಗಿಸಿದ್ದರು. ಕಾರ್ಯಕ್ರಮ ಆರಂಭವಾಗಿದ್ದು ಮತ್ತೇಯೇ

ಕೃಷ್ಣ ಮೋಹನ ಸವಿಸ್ತಾರವಾಗಿ ಮಾತಾಡಿ ಕೊನೆಯ ಒಂದು ವಾಕ್ಯದಲ್ಲಿ ಸ್ವಾಗತಿಸಿದರು. ನಂತರ ಮೀನ ಮ್ಯಾಡಮ್ ಗೆ ನೆನಪಿನ ಕಾಣಿಕೆ ಕೊಡುವ ಕಾರ್ಯ ಪ್ರಾರಂಭ,  ತುಂಬಾ ನೀಟಾಗಿ  ರೇಷ್ಮ ಮತ್ತು ಶುಭ ಮಲ್ಲಿಗೆ  ಮುಡಿಸಿದರು ಫೊಟೋಗಾಗಿ ಮತ್ತೊಮ್ಮೆ ಒಂದು ಸಾರಿ ನಟಿಸಲಾಯಿತು. ಶಾಲು ಹೊದೆಸಿದಾಗ ಕಾಣಿಕೆ ಕೊಟ್ಟಾಗ ವಿಧವಿಧವಾಗಿ ನಿತಿನ್ ನವರ ಹೊಸ ಮೊಬೈಲ್ ಅಲ್ಲಿ ಕ್ಲಿಕ್ ಮತ್ತೆಲ್ಲರ ಕೈಯಲ್ಲೂ ವಿಡಿಯೋ ರೆಕಾರ್ಡಿಂಗ್  ಆಗುತಿತ್ತು,.ನಂತರ ಮೀನ ಮಾತಾಡಲು ಶುರುಮಾಡಿದರು ನಡುನಡುವೇ ಡೌಟು ಕೇಳುತ್ತಿದ್ದ ವಿದ್ಯಾರ್ಥಿಗಳು ಒಂದೆಡೆ ಅದರ ಮಧ್ಯೆ  ಧನವಂತಿಯ ಎಂಟ್ರೀ...
ಅವರ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಚಿತ್ರಣವನ್ನು ನಮ್ಮ ಮುಂದೆ ತೆರೆದಿಟ್ಟರು.ನಂತರ ನಮ್ಮಲ್ಲಿ  ಯಾರಿಗಾದರೂ ಎರಡು ನಿಮಿಷ  ಮಾತಾಡುವ  ಅವಕಾಶ ಅದನ್ನು ಸುಶೀಲ್  ಕುಮಾರ್  ಬಳಸಿಕೊಂಡರು.


ನಂತರ ಮೀನ  ಮ್ಯಾಡಮ್ ಅತ್ಯಂತ ಪ್ರೀತಿಯಿಂದ ನಮ್ಮ ಸಮೂಹಕ್ಕೆ ಕೃತಜ್ಞತೆ ಸಲ್ಲಿಸಿದರು. ಅವರ ನೆನಪಿಗಾಗಿ ನಮಗೆ ಅವರ ಪ್ರಸ್ತುತ ವಿದ್ಯಾರ್ಥಿಗಳಿಗೆ ತಂದಿಟ್ಟಿದ್ದkey chain ನ್ನು ಕೊಟ್ಟರು. 
ವರುಷಗಳ ನಂತರ ದೊರಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಕ್ಯಾಂಪಸ್ ಸುತ್ತಿ ಜೊತೆಗೆ  ಊಟ ಮಾಡಿ ಬೀಚ್ಗೆ ಹೋಗಿ  ಹರಟೆ ಹೊಡೆದು ದಿನವನ್ನು ಪಾವನಗೊಳಿಸಿದೆವು.


-ಭಾಗೀರಥಿ

.........................................................................................

ಹಾಗೆಯೇ JD ಯಲ್ಲಿ ಊಟ ಮುಗಿಸಿ ಎಲ್ಲರ ಅಭಿಪ್ರಾಯದ ಮೇರೆಗೆ BEACH ಗೆ ಹೋಗುವ, ಮನೆಗೆ, OFC ಗೆ ಹೋದರೆ ಈ ದಿನ ಮಗದೊಮ್ಮೆ ದೊರಕದು ಎಂದು ಮನಗಂಡು ಸುರತ್ಕಲ್ beach ಗೆ ಹೋಗಲು ready ಆದೆವು.Km ಹೇಳಿದ್ರು ನನಗೆ duty join ಆಗಲೇ ಬೇಕು,  ನಿಮ್ಮ ಜೊತೆ ತಿರುಗಾಡಲು ಮೂಗು ತನಕ ಮನಸ್ಸು ಇದೆ, but ಆಗಲ್ಲ ಅಂದ್ರು. ಕೂಡಲೇ ಧನವಂತಿಯವರೊ ಧ್ವನಿಗೂಡಿಸಿ ನನಗೋ ಹೋಗೋಕಿದೆ ಅಂದ್ರು.


Dec15 ನಾನು miss ಮಾಡಿದೆ, ofc ಗೆ leave ಹಾಕಿದ್ದೇನೆ, 20 years ನಂತರ ನಿಮ್ಮನ್ನೆಲ್ಲ ಸಿಗುತ್ತಿದ್ದೇನೆ, ಸುಶೀಲ್, opportunity miss ಆಗೋದು ಬೇಡ ಉಳಿದವರು ಹೋಗೋಣ, ನೀನಿದ್ರೆ ಸಾಕು, ಒಂದೇ car ನಲ್ಲಿ ಹೋಗೋಣ ಎಂದು ಮಮತಾ ಭಾವನಾತ್ಮಕ ಮನಸ್ಸಿನಿಂದ ಹೇಳಿದರು. ಹೇಳಿದೊಡನೆ ಕೆಲಸ ದಿನಾಲು ಇದ್ದದ್ದೇ ಎಂದು ನಾನೂ ಹೇಳಿದೆ ಚಲೋ ಹೋಗೋಣ ಎಂದು..


ಜ್ಯೋತಿ, ಶರ್ಮಿಳಾ, ಭಾಗೀರಥಿ, ರೇಷ್ಮಾ, ಮಮತಾ, ನಾನು ಒಂದು car ನಲ್ಲಿ ಹೊರಟೆವು. Km ರ ಹಲಸಿನ ಹಣ್ಣಿನ ಕಥೆಬಗ್ಗೆ ಮಾತಾಡುತ್ತಾ ಸುರತ್ಕಲ್ ಬೀಚ್ ಬಂದದ್ದೇ ಗೊತ್ತಿಲ್ಲ, ಬಿಸಿಲು ಜಾಸ್ತಿ ಇದ್ದರಿಂದ car ನೊಳಗೆ ಕೂತು ಕೆಲವು ಕಥೆಗಳನ್ನು ಕೇಳುವ ಅವಕಾಶ ಸಿಕ್ಕಿತು. ಮಮತಾ ರ ಕಥೆ, ಜ್ಯೋತಿಯ ಕಥೆ ಕೇಳುತ್ತಾ ನಗುತ್ತಾ ಕಾಲ ಕಳೆದೆವು. 5 ಗಂಟೆಗೆ return ಬಂದೆವು. ರೇಶ್ಮಾ ರನ್ನು NITK BUSTAND,ಮಮತಾ ರನ್ನು ಕಾವೂರು bustand, ಜ್ಯೋತಿಯನ್ನು pvs, ಶರ್ಮಿಳಾ ರನ್ನು ಕಂಕನಾಡಿ, ಕೊನೆಗೆ ಭಾಗೀರಥಿಯನ್ನು ತೊಕ್ಕೊಟ್ಟಿನಲ್ಲಿ ಬಿಟ್ಟು ನಾನು ನನ್ನ ಮನೆಗೆ ಹೋದೆ.


September 29th 2020 ಅವಿಸ್ಮರಣೀಯ ದಿನವನ್ನಾಗಿ ಮಾಡಿದೆವು.ಅನಿಲ್ ಚರಣ್, ಸಂದೇಶ್, n ನಿತಿನ್ urgency ಕೆಲಸಕ್ಕೆ ಹೊದ್ದರಿಂದ ಅವರ ಜೊತೆ ಊಟ ಮಾಡಲು ಆಗಿಲ್ಲ.ಮುಂದೆ ಯಾವುದೇ getogether ಇದ್ರೆ ಯಾರೂ miss ಮಾಡದ ಹಾಗೆ ನೋಡಿ ಎಂದು ನನ್ನ ಕಳ ಕಳೀಯ ಪ್ರಾರ್ಥನೆ🙏 .


ಯಾಕೆಂದರೆ ಎಲ್ಲರೂ ಸೇರುವ ಅವಕಾಶ ತುಂಬಾ ವಿರಳ🙏


- ಸುಶೀಲ್ ಕುಮಾರ್ 


Post a Comment

0 Comments