Ticker

5/recent/ticker-posts

Header Ads Widget

MANGALORE UNIVERSITY

ಗುರುಗಳ ಆ ದಿವ್ಯ ಚರಣಗಳಿಗೆ ಸಾಷ್ಟಾಂಗ ಪ್ರಣಾಮಗಳು

 ಮನುಜನು ಹುಟ್ಟಿ ಬೆಳೆದು ಈ ಸಮಾಜದಲ್ಲಿ ಬೆರೆದು ಬಾಳುವ ಹಂತಕ್ಕೆ ತಲುಪುವ ಹಾದಿಯ ಪ್ರತಿಯೊಂದು ಹೆಜ್ಜೆಯಲ್ಲೂ  ತನ್ನ ಸೃಷ್ಟಿಗೆ ಕಾರಣರಾದ ಹೆತ್ತವರು, ತನ್ನ ಹಿತೈಷಿಗಳಾದ ತನ್ನ ಬಂಧು ಬಳಗ , ತನ್ನ ಮಾರ್ಗದರ್ಶಕರಾದ ಗುರು ಹಿರಿಯರು, ತನ್ನ ಉತ್ತಮ ಭವಿಷ್ಯ ದ ಆಕಾಂಕ್ಷಿಗಳಾದ ಆಪ್ತ ಮಿತ್ರರು ಮತ್ತಿತರರ ಪರಿಣಾಮಕಾರಿ ಪಾತ್ರವಿದೆ.  ಬಾಲ್ಯ ಜೀವನದಲ್ಲಿ  ಸಂಸ್ಕೃತಿ ಸಂಸ್ಕಾರದ ಪಠಣ ತನ್ನ ಮನೆಯಿಂದಲೇ ತನ್ನ ಹೆತ್ತವರು ಬಂಧುಬಳಗದಿಂದ ತೊಡಗಿಕೊಂಡು ಬರುವುದು ನಮ್ಮ ಭಾರತೀಯ ಸಂಸ್ಕೃತಿ.  




ಮುಂದೆ ಶಾಲಾ ವಿದ್ಯಾಭ್ಯಾಸ ದ ಸಮಯದಲ್ಲಿ ಶಾಲೆಯ ಶಿಕ್ಷಕರೇ ನಮ್ಮ ತಪ್ಪುಗಳನ್ನು ತಿದ್ದಿ ನಮಗೆ ಉತ್ತಮ ಹಾದಿಯಲ್ಲಿ ನಡೆಯಲು ದಾರಿದೀಪವಾಗಿ, ನಮ್ಮ ಜೀವನಕ್ಕೆ ಸದೃಡ ಬುನಾದಿಯನ್ನು ಹಾಕುವ ಶ್ರೇಷ್ಠ ಕಾರ್ಯಕರ್ತರ ಪಾತ್ರ ನಿರ್ವಹಿಸುತ್ತಾರೆ. ಈ ವರೆಗಿನ ಸಮಯದಲ್ಲಿ ನಮ್ಮ ಪ್ರಾಯಪಕ್ವತೆ ಎಲ್ಲವನ್ನೂ ಅರಗಿಸಿಕೊಳ್ಳಲು ಯೋಗ್ಯವಾಗಿರುತ್ತದೆ ಮತ್ತು ಆ ಸಮಯಕಾಲದಲ್ಲಿ ನಾವು  ಗುರುಹಿರಿಯರಿಗೆ ಹೆಚ್ಚು ಗೌರವ ಮರ್ಯಾದೆ ನೀಡಿವಂತಹ ಪ್ರಾಯದವರಾಗಿದ್ದು  ಅನುಪಾಲನೆಗೆ ಯೋಗ್ಯ ವಂತರಾಗಿರುತ್ತೇವೆ. ಈ ಹಂತದಲ್ಲಿ ಶಿಕ್ಷಕರಿಗೆ ಹೆಚ್ಚು ಜವಾಬ್ದಾರಿ ಇದ್ದರೂ ವಿದ್ಯಾರ್ಥಿ ಗಳನ್ನು ಅನುಕರಿಸುವಂತೆ ಮಾಡುವುದು ಕಾಲೇಜು ವಿದ್ಯಾರ್ಥಿಗಳನ್ನು ಹೋಲಿಕೆ ಮಾಡಿದರೆ ಸ್ವಲ್ಪ ಮಟ್ಟಿಗೆ ಸುಲಭವಾಗಿರಬಹುದು.


ಆದರೆ ಮುಂದೆ ಕಾಲೇಜು ಜೀವನದ ಹಂತದಲ್ಲಿ ನಮ್ಮ ಲ್ಲಿ ಯೌವನದ ಆಗಮನವಾಗಿರುತ್ತದೆ, ತನ್ನದೇ ನಿರ್ಧಾರಗಳಿಗೆ ನಾವು ಮಾನ್ಯತೆ ನೀಡುವ ಹಂತದಲ್ಲಿರುತ್ತದೆ. ಈ ಹಂತದಲ್ಲಿ ನಮಗೆ ಸರಿಯಾದ ಹಾದಿಯಲ್ಲಿ ಜೀವನ ನಡೆಸಲು ಬೇಕಾದ ಮಾರ್ಗದರ್ಶನ ಹಾಗೂ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿ ಯಾಗಿ ಬಾಳಲು ನಮ್ಮನ್ನು ಯೋಗ್ಯವಂತರಾಗಿಸಿ, ನಮ್ಮನ್ನು ಈ ದೇಶದ ಅಮೂಲ್ಯ ಸಂಪತ್ತಾಗಿ ಬೆಳೆಸುವ ಕಾರ್ಯವನ್ನು ಕಾಲೇಜು ಜೀವನದಲ್ಲಿ ವಹಿಸುಕೊಳ್ಳುವ ಕಾಲೇಜು ಶಿಕ್ಷಕರ ಪಾತ್ರ ಅತೀ ಮಹತ್ವಪೂರ್ಣವಾದುದು. ಯೌವನಕ್ಕೆ ಪಾದಾರ್ಪಣೆ ಮಾಡಿ ಕಾಲೇಜು ಮೆಟ್ಟಲೇರಿ ಬರುವ ಯುವ ಸಮುದಾಯವನ್ನು ತಿದ್ದಿ   ಸರಿಯಾದ ಹಾದಿಗೆ ತರುವುದು ಸುಲಭದ ಕಾರ್ಯವಲ್ಲ. ಅಂತಹ ಅಮೂಲ್ಯ ಸೇವೆಯನ್ನು ಮಾಡುತ್ತಿರುವ ಗುರುವೃಂದಕ್ಕೆ ಶತಕೋಟಿ ಪ್ರಣಾಮಗಳು. 


ಅಂತೆಯೆ 1997 -2000 ಇಸವಿಯಲ್ಲಿ ಮಂಗಳೂರಿನ ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ನಾವು ಬಿಕಾಂ ಅದ್ಯಯನ ಮಾಡಿದವರು. ಆ ಅದ್ಯಯನ ಕಾಲದಲ್ಲಿ ನಮಗೆ ಶಿಕ್ಷಕರಾಗಿದ್ದ ಎಲ್ಲರಿಗೂ ಗೌರವದ ವಂದನೆಗಳು.


ಆಕೂಟದಲ್ಲಿ ಒಬ್ಬರಾದ ನಮ್ಮ ನೆಚ್ಚಿನ ಗೌರವಾನ್ವಿತ ಮೀನಾ ಮೇಡಮ್ ರವರು ತಮ್ಮ ಅಮೂಲ್ಯ ವಾದ ಸುಧೀರ್ಘ ಸೇವಾಕಾಲಾವಧಿಯನ್ನು ಯಾವುದೇ ಲೋಪದೋಷಗಳಿಲ್ಲದೆ ಯಶಸ್ವಿಯಾಗಿ ಪೂರೈಸಿ ಈ ಕಳೆದ ಸೆಪ್ಟೆಂಬರ್ ತಿಂಗಳು  ಸೇವಾನಿವೃತ್ತರಾದುದು ನಮಗೆಲ್ಲ ತಿಳಿದಿದೆ. ನಮ್ಮ ಕೂಟದ ಹಲವು ಸದಸ್ಯರು ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಮಾಡಿ ಆದರಿಸಿದುದು ನಮ್ಮ ಈ ಕೂಟದ ಸಂಸ್ಕಾರ ಹಾಗೂ ಗೌರವಾರ್ಪಣಾಭಾವದ ಪ್ರತೀಕ. ಅದರಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಹೃದಯಾಳದ ಧನ್ಯವಾದಗಳು. 


ಸರಳ ಸ್ವಭಾವದ  ವಿನಮ್ರಭಾವದ ಪ್ರತೀಕವಾದ ಗುರುಗಳು ನಮ್ಮ ಮೀನಾ ಮೇಡಮ್ ರವರು.  ಯಾವ ವಿದ್ಯಾರ್ಥಿಯೂ ಅವರ ಬಗ್ಗೆ ಋಣಾತ್ಮಕ ಮಾತುಗಳನ್ನು ಆಡಲಾರರು. ತನ್ನ  ಕಾರ್ಯವನ್ನು ಶತ ಶೇಕಡಾ ಪರಿಪೂರ್ಣವಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಮನಗಂಡು ಅವರ ಭಾವನೆ ಗಳಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ಶಿಕ್ಷಣ ವನ್ನು ಧಾರೆ ಎರೆದ ಆ ಮಹಾಮಾತೆಯ ಚರಣಗಳಿಗೆ ಸಾಷ್ಟಾಂಗ ಪ್ರಣಾಮಗಳು. ತನ್ನ ಶೈಕ್ಷಣಿಕ ಸೇವಾಕಾಲವನ್ನು ಪೂರೈಸಿ ಸೇವಾ ನಿವೃತ್ತಿ ಹೊಂದಿರುವ ಆ ಮಹಾತಾಯಿ ಮೀನಾ ಮೇಡಮ್ ರವರಿಗೆ ಶ್ರೀ ದೇವರು ಆಯುರಾರೋಗ್ಯ ಸುಖ ಸೌಭಾಗ್ಯ ಸಂಪತ್ತನ್ನು ನೀಡಿ ನೆಮ್ಮದಿ ಶಾಂತಿಯ ಜೀವನವನ್ನು ಅನುಗ್ರಹಿಸಿ ಎಲ್ಲಾ ಕಷ್ಟ ನಷ್ಟ ಗಳನ್ನು ದೂರಮಾಡಿ ಉಜ್ವಲ ಭವಿಷ್ಯ ವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಿ ಆ ದಿವ್ಯ ಚರಣಗಳಿಗೆ ಮಗದೊಮ್ಮೆ ನಮಿಸುತ್ತಾ ಮನದಾಳದ ಶುಭ ಹಾರೈಕೆಗಳು.


-ಕುಂಡಾಪುಗುತ್ತು ದೇರಣ್ಣ ರೈಗಳ ಮಗ ಪೆರ್ವತ್ತೋಡಿ ಗುತ್ತು ಉಮೇಶ್ ರೈ

Post a Comment

0 Comments