Ticker

5/recent/ticker-posts

Header Ads Widget

MANGALORE UNIVERSITY

ನನ್ನ ಹುಟ್ಟು ಹಬ್ಬ- ಸುಶೀಲ್ ಕುಮಾರ್

12/11/2020 ನನ್ನ ಇಷ್ಟು ವರ್ಷದ ಹುಟ್ಟು ಹಬ್ಬ ಆಚರಣೆಗಿಂತ ತುಂಬಾ ವಿಭಿನ್ನವಾಗಿತ್ತು.

ಮದುವೆಯ ಮುಂಚೆ ನನ್ನ ತಂದೆ ತಾಯಿ, ಅಕ್ಕ, ತಮ್ಮನ ಜೊತೆ ಹುಟ್ಟು ಹಬ್ಬ ಆಚರಿಸುತ್ತಿದ್ದೆ. ಮದುವೆಯ ನಂತರ ಹೆಂಡತಿ, ಮಕ್ಕಳು, ಬಾವಾಜಿ, ಅತ್ತೆ, ಮಾವ ರ ಜೊತೆ ಆಚರಿಸುತ್ತಿದ್ದೆ. 

ಆದರೆ ಈ ಸಲ ಹಾಗೆ ಆಗಲಿಲ್ಲ. ನನ್ನ ಪ್ರೀತಿಯ ಸಹಪಾಠಿ ಸ್ನೇಹಿತರ ಜೊತೆ ಆಚರಿಸುವ ಅದ್ಭುತ ಅವಕಾಶ ಒಲಿದು ಬಂತು😊🙏. ಇಂತಹ ಸಮಯ ಎಲ್ಲರಿಗೂ ಬರಲ್ಲ.  ತುಂಬಾ ಖುಷಿ, ಸಂತೋಷ ಕೊಟ್ಟಿತು.












ನಿನ್ನೆಯ ಸಹಪಾಠಿಗಳೊಂದಿಗೆ ಆಚರಿಸಲು ಮೊದಲು ಕಾರಣಕರ್ತರೆ ಪಾವನಾ.

ಪಾವನಾ ದೀಪಾವಳಿಗೆ ಊರಿಗೆ ಬರುವೆ, ನಿನ್ನ birthday ಗೆ ನಮಗೆ party ಕೊಡಲೇ ಬೇಕು ಎಂದು ಸುಮಾರು 3/4 ವಾರದಿಂದ ಹೇಳುತಿದ್ರು. ನೋಡೋಣ ನೋಡೋಣ, ನೀವು ಮೊದಲು ಊರಿಗೆ ಬನ್ನಿ,    ಆಮೇಲೆ plan ಮಾಡೋಣ ಎಂದು ಹೇಳುತ್ತಿದ್ದೆ.  ಸಮಯ ಹೇಗೆ adjust ಆಯಿತು ಅಂದರೆ ನಿನ್ನೆ ಬೆಳಿಗ್ಗೆನೇ ಊರು ತಲುಪಿದ್ರು. ನಾಳೆ ದೀಪಾವಳಿ ಬೇರೆ.

Last 2 days ಇಂದ plan ಮಾಡಿದೆ. ಈ ಸಲ ನಮ್ಮ ಸಹಪಾಠಿಗಳ ಜೊತೆ ಆಚರಿಸಿದ್ರೆ  ನನ್ನ ಹುಟ್ಟು ಹಬ್ಬದ ದಿನ ನೆನಪಾಗಿ ಉಳಿಯಬಹುದು ಎಂದು ಆಲೋಚಿಸಿ ನಿನ್ನೆ ಈ ಗ್ರೂಪ್ ಗೆ ಸಂಜೆಯ getogether ಬಗ್ಗೆ ಪಬ್ಬಾಸ್ ನಲ್ಲಿ ಆಚರಿಸೋಣ ಎಂದು ಬರೆದಿದ್ದೆ.

ಆ MSG ಗೆ ಓ ಗೊಟ್ಟು ತನ್ನ BUSY ಶೆಡ್ಯೂಲ್ ಲೆಕ್ಕಿಸದೆ ಕೃಷ್ಣಮೋಹನ್, ನಿತಿನ್, ಶುಭಾ, ರಶ್ಮಿ, ಶರ್ಮಿಳಾ, ಅವರ ಮಗಳು ಶೀತಲ್, ಜ್ಯೋತಿ, ಸುಮಂಗಳ, ಪಾವನಾ ಹಾಗೂ ಅವರ ಮಗ ಸ್ಪರ್ಶ್ ಬಂದಿದ್ರು.

ಸಚಿನ್, ಧನವಂತಿ, ಸಂಪತ್, ಭಾಗೀ, ಪ್ರತಿಭಾ, ಸುಷ್ಮಾ, ಮನಿತ್,ಜಗ್ಗ, ಉಷಾ, ಮಮತಾ ಶೆಟ್ಟಿ, ಮಮತಾ ಕಾವೂರ್, ಅಮಿತಾ,ಗಣೇಶ್, ವಿಕ್ರಂ ಜೋಶಿ, ಅನಿಲ್ ಚರಣ್ , ರಾಜೇಶ್ ಪೈ, ಇನ್ನೂ 7/8 ಮಂದಿ ನನಗೆ call ಮಾಡಿ sorry, ತಮ್ಮ ತಮ್ಮಕೆಲಸದ ನಿಮಿತ್ತ ಬರಲು ಅಸಾಧ್ಯವಾಗುತ್ತಿದೆ, ನೀವು ಮುಂದುವರಿಸಿ ಹೇಳಿದ್ರು. ಉಮೇಶ್ ಕೊಚ್ಚಿಯಲ್ಲಿದ್ದೇನೆ ಹೇಳಿದ್ರು.



5:30ಕ್ಕೆ ಸೇರಬೇಕು ಯೆಂದವನೆ 5:45ಕಳೆದಿತ್ತು. ಕಂಕನಾಡಿ, ಜ್ಯೋತಿ n ಬಂಟ್ಸ್ ಹಾಸ್ಟೆಲ್ ನಲ್ಲಿ peeking hr ಆದ್ದರಿಂದ block ಸಿಕ್ಕಿತ್ತು.ನನ್ನಕ್ಕಿಂತ ಮೊದಲೇ ಪಾವನಾ, ಸ್ಪರ್ಶ್, ಹಾಗೂ ನಿತಿನ್ wait ಮಾಡುತಿದ್ರು. ಕೆಲವು ನಿಮಿಷದಲ್ಲೇ ಇವರನ್ನು ಸೇರಿದೆ. 1 ವರ್ಷ ಕಳೆದು ಪಾವನಾ ರನ್ನು ನೋಡಿ ಖುಷಿ ಆಯಿತು. ನಿತಿನ್, ಪಾವನಾ, ಸ್ಪರ್ಶ್ wish ಮಾಡಿದ್ರು. 10 ನಿಮಿಷಗಳ ಬಳಿಕ ಶರ್ಮಿಳಾ, ಶೀತಲ್ ಆಗಮನವಾಯಿತು. ಇವರೂ wish ಮಾಡಿದ್ರು.  ಕೃಷ್ಣಮೋಹನ್ರ ಆಗಮನವಾಯಿತು. ಮಾಸ್ಕನ್ನು ತೆಗೆಯದೆ ನಮ್ಮೊಡನೆ ಬೆರೆತರು. ಪಾವನಾ, ನಿತಿನ್ ಶರ್ಮಿಳಾ ರನ್ನು ನೋಡಿ ಖುಷಿ ಯಾಗಿ ಇನ್ನು 15 min ಮಾತ್ರ ಇರುತ್ತೇನೆ, ಕೆಲಸದಲ್ಲಿ adjust ಮಾಡಿ ಬೇರೆಯವರಿಗೆ responsible ಕೊಟ್ಟು ಬಂದೆ ಅಂದಾಗ ಗೆಳೆತನಕ್ಕೆ ಕೊಡುವ respect ನೋಡಿ ಮನದೊಳಗೆ ನನಗೆ  ಸಂತೋಷವಾಗತೊಡಗಿತು. 


ಸ್ವಲ್ಪದರಲ್ಲೇ ಓಡುತ್ತಾ ನಮ್ಮ ಕಡೆ ಒಬ್ಬರು ಬಂದ್ರು, ಅವರೇ PT ಉಷಾ ಖ್ಯಾತಿಯ ಶುಭಾ. ನನಗೆ ಹೋಗುಚ್ಚೆ ಕೊಟ್ಟು wish ಮಾಡಿದ್ರು🙏😊.

ನಂತರ ಜ್ಯೋತಿ ಕೂಡ ಕೆಲಸ ಮುಗಿಸಿ 10 ನಿಮಿಷ ಕೆಲಸದಿಂದ ಬೇಗ ಬಂದು ನಮ್ಮ ಗ್ರೂಪಿಗೆ JOIN ಆದ್ರು. ವಿಶಾಲ್ ಬರುತ್ತೇನೆ ಹೇಳಿದ್ರು, but ಬರಲು ವಿಶಾಲ್ ಗೆ ಆಗಿರಲಿಲ್ಲ.


ನಾವು ಪಬ್ಬಾಸ್ ನೊಳಗೆ ಹೋಗುವ ಮುಂಚೆ10 ನಿಮಿಷ ಕಾದೆವು, ಯಾರಾದರೊ ಸಹಪಾಠಿಗಳು JOIN ಆಗುವರಾ  ಎಂದು....

ನಂತರ ತಡ ಮಾಡದೆ ಒಳಗೆ TABLE ನಲ್ಲಿ ಕೂತಾಗ ರಶ್ಮಿ ಯವರ ಆಗಮನವಾಗಿ ಎಲ್ಲರಿಗೂ WISH ಮಾಡಿದ್ರು. 5 ನಿಮಿಷ ಬಳಿಕ ತನ್ನ ಮಗನ ಸ್ಕೂಟಿ ಯಲ್ಲಿ ಸುಮಂಗಳರ ಆಗಮನ ನೋಡಿ ಒಂದು ಕಡೆ SHOCK ಹಾಗೂ ಖುಷಿನೂ ಆಯಿತು. ಸುಮಂಗಳ ನಮ್ಮ ಯಾವುದೇ getogether ಗೆ ಬಂದಿರಲಿಲ್ಲ. 22 ವರ್ಷಗಳ ಬಳಿಕ ಇದೇ ಮೊದಲ ಸಲ ನೋಡುವಂತಾಯಿತು. ಅವರೊ ನಮ್ಮ ಜೊತೆ ಸೇರಿ ಎಲ್ಲರಿಗೂ WISH ಮಾಡಿದ್ರು.

ಗ್ರೂಪಿನಲ್ಲಿ ನ ಹಾಕಿದ MSG ಓದಿ ಕೂಡಲೇ "ಕಾಲೇಜು BATCH ನ ಸುಶೀಲ್ ನ BIRTHDAY, ನ ಹೋಗಲೇ ಬೇಕು" ಎಂದು ಸುಮ HUSBAND ರಲ್ಲಿ ಹೇಳಿದಾಗ ಸಂಜೆ ಬರುವಾಗ LATE ಆಗುತ್ತೆ. ಬೇಡ, ಹಗಲಾದರೆ ಹೊಗಬಹುದಿತ್ತು ಎಂದು husband ಹೇಳಿದರೂ ಸುಮ ಹಠ ಮಾಡಿ ಮಗನ ಜೊತೆ ಬಂದ್ರು. ಇದನ್ನು ಅವರ ಬಾಯಲ್ಲೇ ನ ಕೇಳಿದಾಗ ಒಮ್ಮೆಗೆ ಸ್ತಬ್ದನಾದೆ.... ಇಂಥ ಸಹಪಾರಿ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ ಅನ್ನಿಸ್ತು.

ಏನೇ reason ಇರಲಿ, getogether ಆಗುತ್ತಾ ಇರಬೇಕು ಎಂದು ಅನ್ನಿಸ್ತು.


ಸ್ವಲ್ಪದರಲ್ಲೇ ರಶ್ಮಿಯವರ ಆಗಮನ. Mask ಹಾಕಿದ್ದರಿಂದ ಯಾರು ಎಂದು ಒಮ್ಮೆಲೇ ಯಾರಿಗೋ ಪರಿಚಯ ಸಿಕ್ಕಿರಲಿಲ್ಲ. Mask ತೆಗೆದ ಬಳಿಕ ನೆ ಪರಿಚಯ ಸಿಕ್ಕಿ ನಮ್ಮ ಜೊತೆ ಸೇರಿ wish ಮಾಡಿದ್ರು.


ಎಲ್ಲರೊ ಅವರನ್ನವರು ಪರಿಚಯಿಸಿದ ಮೇಲೆ icecream ಗೆ order ಕೊಟ್ಟೆವು.

ಕೊಟ್ಟ 2 ನಿಮಿಷದಲ್ಲಿ ಪಾವನಾ 1 box open ಮಾಡಿದ್ರು, ಶರ್ಮಿಳಾ ರು ಅವರು ತಂದ box open ಮಾಡಿದ್ರು. ನೋಡುವಾಗ ಆಶ್ಚರ್ಯ !! ಎರಡೆರಡು cake, ಅದನ್ನು ನೋಡಿ ನಿತಿನ್ ಕೂಡಲೇ ಹೇಳಿದ್ರು, ನಾನೂ ತರುವವ, ಪಾವನಾ ರ hand bag ನೋಡಿ ಗೊತ್ತಾಗಿ ಬಿಟ್ಟು ಬಂದೆ ಅಂದರು.

ನನ್ನ life ನಲ್ಲಿ ಹುಟ್ಟುಹಬ್ಬದ ದಿನ 1 cake cut ಮಾಡಿದ್ದೆ. ಆದರೆ ಎರಡೆರಡು cake ನೋಡಿದಾಗ ಖುಷಿಯಲ್ಲಿ ಒಮ್ಮೆ ಮೂಕವಿಸ್ಮಿತನಾದೆ. ಪಾವನಾ choklate cake n ಶರ್ಮಿಳಾ ಹಲಸಿನ ಹಣ್ಣಿನ ಆಕೃತಿಯ cake ನೋಡಿ ಎಲ್ಲರೊ ಖುಷಿ ಪಟ್ಟು cake cut ಮಾಡಿದೆವು. ಈ ಸಮಯದ ಖುಷಿ life time ಮರೆಯಲು ಸಾಧ್ಯವಿಲ್ಲ🙏😊.


ಸಚಿನ್ ಈಗ ಬರುವ, ಅವ ಬರುವುದರೊಳಗೆ cake cut ಮಾಡಿ ನಾವೆಲ್ಲ ತಿನ್ನೋಣ ಎಂದು ಹೇಳಿ ಎಲ್ಲರೊ ನಕ್ಕು ಬಿಟ್ರು. ಸಚಿನ್ ನ dec25th ದು cake ಇನ್ನೂ ಬಾಕಿ ಇದೆ😟.


Cake cut ಮಾಡಿ ಹಂಚಿ ತಿಂದ ಬಳಿಕ ನಾವು order ಮಾಡಿದ icecream ಬಂತು. ಅದರಲ್ಲಿ ಒಂದು ನಗು ಕೂಡ ಬಂದಿತ್ತು. ಎಲ್ಲರೊ ಅವರವರ choice order ಮಾಡಿದ್ರು, ನಿತಿನ್ ಕೂಡ ideal ದು menu card ನೋಡಿ ಅದರಲ್ಲಿನ emage ನೋಡಿ order ಮಾಡಿದ್ರು. But order ಬಂದಾಗ ಅರ್ಧ glass ನಷ್ಟು ಮಾತ್ರ ಇದ್ದದ್ದು ನೋಡಿ ಎಲ್ಲರೊ ಆ glas ನೋಡಿ ನಕ್ಕು ಬಿಟ್ರು😂.


Icecream, sandwich ತಿಂದ ಬಳಿಕ ಕೂಡಲೇ ಮೊದಲು ಕೃಷ್ಣಮೋಹನ್ ಹೊರಟರು, ಈ ಸಂಧರ್ಭ ಯಾರಿಗೋ ಮನೆಗೆ ಹೋಗೋಕೆ ಬೇಡ ಇತ್ತು, ಆ ಕ್ಷಣದ ಖುಷಿ ಅನುಭವಿಸಿದವರಿಗೆ ತಿಳಿಯುತ್ತೆ... ಮೃದುಲ ಊರಲ್ಲೇ ಇದ್ದು ಬೆಳಿಗ್ಗೆ call ಮಾಡಿ ಬರ್ತೇನೆ ಅಂದವರು ಮಕ್ಕಳು ಚಿಕ್ಕದು ಇರುವುದರಿಂದ ಅವರನ್ನು ನೋಡಲು pabbas ನಲ್ಲಿ ಕಷ್ಟ ಆಗುವುದರಿಂದ ಕೊನೇ ಕ್ಷಣಕ್ಕೆ cancel ಮಾಡಿದ್ದು ಸ್ವಲ್ಪ ಬೇಸರ ತಂದಿತು.


ಎಲ್ಲರೊ parlor ನಿಂದ ಹೊರಗೆ ಬಂದ ಬಳಿಕ ರಶ್ಮಿ, ಜ್ಯೋತಿ, ಶುಭಾ, ಸುಮಾ, ನಿತಿನ್ ಅವರವರ vehicle ನಲ್ಲಿ ಹೋದರು. ಪಾವನಾ-ಸ್ಪರ್ಶ್, ಶರ್ಮಿಳಾ-ಶೀತಲ್ ರನ್ನು ಅವರವರ ಮನೆಗೆ ಬಿಟ್ಟು ನಾ ಮನೆ ಸೇರಿಕೊಂಡೆ.


ನನ್ನ ಹುಟ್ಟುಹಬ್ಬಕ್ಕೆ ಹೃದಯಪೂರ್ವಕವಾಗಿ wish ಮಾಡಿದ ಎಲ್ಲಾ ಸಹಪಾಠಿಗಳಿಗೊ, getogether ನಲ್ಲಿ ಸೇರಿರುವ ಎಲ್ಲಾ ಸಹಪಾಠಿಗಳಿಗೋ ನಾ ಚಿರಋಣಿ😊🙏.


40 ಕಳೆದು 41 ನೆ ವರ್ಷಕ್ಕೆ ಕಾಲಿಡುವ ಈ ಸಂಧರ್ಭದಲ್ಲಿ ಸಹಪಾಠಿಗಳಿಡನೆ ಹಂಚಿದ ಕ್ಷಣ ಯಾವತ್ತೋ ಮರೆಯೋಲ್ಲ. 😊🙏


Ice cream, cake ತಿನ್ನೋದು just ನೆಪ ಅಷ್ಟೇ.  ನಾವೆಲ್ಲರೊ ನಮ್ಮ ನಮ್ಮ ಕೆಲಸದಲ್ಲಿ busy ಇರುತ್ತೇವೆ. ಆ buzy ಯ ಮರೆಯಲು ಹಿರಿಯರು ವರ್ಷದ ಮಧ್ಯದಲ್ಲಿ mothers day, fathers day , rakshabandhan day, yogaday, birthday ಎಂದು ಆ ದಿನ ನಿಗಂಟು ಮಾಡಿ ಆಚಸುತ್ತಿದ್ದಾರೆ. ಯಾವ day ನೋ ಆಚರಿಸದಿದ್ರೆ ಖಾಲಿ ದುಡಿದು ಏನು ಪ್ರಯೋಜನ😊.


ಈ ಗ್ರೂಪ್ create ಆದ ಬಳಿಕ ನಾವೆಲ್ಲ2/3 ಸಲ ಮಾತ್ರ ಸೇರಲು ಸಾಧ್ಯವಾಗಿದೆ. ಅದಕ್ಕೆ ಹುಟ್ಟುಹಬ್ಬವನ್ನು ಈ ರೀತಿ ಆಚರಿಸಲು ನಿಶ್ಚಿಸಿದೆ. ಪಾವನಾ, ನಿಮಗೆ ಅನಂತ ಧನ್ಯವಾದಗಳು😊🙏.



ಇದೇ ರೀತಿ Birthday ಆಗಲಿ, ಇನ್ನಿತರ ಆಚರಣೆಯನ್ನು ನಾವೆಲ್ಲರೊ ಸೇರಿ celebrate ಮಾಡೋಣ🙏😊. ಇದರಿಂದ ನಮ್ಮ ಸಂಬಂಧ ಇನ್ನೂ ಗಟ್ಟಿಯಾಗುತ್ತೆ🙏😊.


ಪ್ರತೀ ವರ್ಷ ಈ ರೀತಿ celebrate ಮಾಡ್ಕೋಬೇಕು ಅಂದಿದ್ದೇನೆ🙏😊. ನಿಮ್ಮೆಲ್ಲರ ಪ್ರೋತ್ಸಾಹ, ಆಶೀರ್ವಾದ ಅಗತ್ಯ ಇದೆ🙏😊.


ಸಮಯಕೊಟ್ಟು ಓದಿದಕ್ಕೆ ಅನಂತ ಧನ್ಯವಾದಗಳು🙏😊


ಸುಶೀಲ್ ಕುಮಾರ್😊🙏

Post a Comment

0 Comments