Ticker

5/recent/ticker-posts

Header Ads Widget

MANGALORE UNIVERSITY

ಮತ್ತೆ ಅದೇ ಸಂಭ್ರಮವನ್ನು ಕಾಣುವ ಹಾಗಾಯ್ತು

ಮತ್ತೆ ಅದೇ ಸಂಭ್ರಮವನ್ನು ಕಾಣುವ ಹಾಗಾಯ್ತು...




 ಕಳೆದ ವರ್ಷ ಮಾ.6ರಂದು ಪುಷ್ಪಾ ಡೆಲಿವರಿ ಆದ ದಿವಸ ಆಕೆಯ ಆರೋಗ್ಯ ಸ್ಥಿತಿ ಸ್ವಲ್ಪ ಗಂಭೀರ ಇತ್ತು. ಆ ದಿವಸ ವನಿತಾ ಅವರು ಕರೆ ಮಾಡಿ ಆಕೆಯ ಆರೋಗ್ಯದ ಬಗ್ಗೆ ಕರೆ ಮಾಡಿ ತಿಳಿಸಿದಾಗ ನಿಜವಾಗಿ ತುಂಬಾ ಅಪ್ಸೆಟ್ ಆಗಿತ್ತು. ನನ್ನ ಕಳವಳವನ್ನು ಯಾರೋ ಸಹಪಾಠಿ ಜೊತೆ ಕರೆ ಮಾಡಿ ಹಂಚಿಕೊಂಡಿದ್ದೆ (ಬಹುಶಹ ವನಿತಾ ಜೊತೆ ಅಂತ ಕಾಣ್ತದೆ). ಡೆಲವರಿ ಆಗಿ ಆರೋಗ್ಯವಂತ ಕಂದನ ಜನಿಸಿದ ಬಳಿಕವೂ ಪುಷ್ಪಾಗೆ ಹಂತ ಹಂತವಾಗಿ ಚಿಕಿತ್ಸೆಗಳ ಅಗತ್ಯ ಇತ್ತು. ಮತ್ತು ಆಕೆಯ ಆರೋಗ್ಯ ಚೇತರಿಕೆಗೆ ಕೆಲವು ತಿಂಗಳುಗಳ ಕಾಲಾವಕಾಶ ಬೇಕಾಗಿತ್ತು. ಕೆಲವೇ ತಿಂಗಳುಗಳ ಹಿಂದೆ ಪರಿಚವಾಗಿದ್ದ ಸಹಪಾಠಿಯೊಬ್ಬರು ಬದುಕಿನಲ್ಲಿ ಅಷ್ಟು ನೋವು ಉಣ್ಣಬೇಕಾಗಿ ಬಂದ ಸಂದರ್ಭ ಅದೊಂದು ರೀತಿಯ ವೇದನೆಯಾಗಿತ್ತು.  ಆಸಂದರ್ಭದಲ್ಲಿ ನೀವೆಲ್ಲರೂ ಆಕೆಯ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದಿರಿ ಲೇಡಿಗೋಶನ್ನಿನ ವನಿತಾನಿಂದ ಶುರುವಾಗಿ, ನಿತಿನ್ ಸಹಿತ ಮಂಗಳೂರು, ಗಲ್ಫ್, ಮುಂಬೈಯಲ್ಲಿರುವ ಎಲ್ಲ ಸಹಪಾಠಿಗಳು ಆಕೆಗೆ ಧೈರ್ಯ ನೀಡಿದಿರಿ.....

 

ಅದೆಲ್ಲ ಮುಗಿದು ಒಂದು ವರ್ಷ ಸಂದಿದೆ. ತುಂಬ ಬೇಗ ದಿನಗಳು ಉರುಳಿದವು ಅಂತ ಭಾಸವಾಯಿತು. ಇವತ್ತು (ಮಾ.7ರಂದು) ಪುಷ್ಪಾಳ ಪುತ್ರ ಹವನ್ ಜನ್ಮದಿನದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಅವತ್ತು ಗೆಟ್ ಟುಗೆದರ್ ದಿವಸ ಕಂಡ ಪುಷ್ಪನನ್ನು ಮತ್ತೆ ಇವತ್ತು ನಾನು ನೋಡಿದೆ. ಅವಳಲ್ಲಿ ಪುನಹ ಆತ್ಮವಿಶ್ವಾಸ ಬಂದಿದೆ, ಮಾತ್ರವಲ್ಲ. ಆಕೆಯ ಬದುಕು ಮತ್ತೆ ಸಹಜವಾಗಿದೆ ಅಂತ ತಿಳಿದು ತುಂಬ ಖುಷಿಯಾಯಿತು. ಬದುಕು ಮತ್ತು ವಿಧಿ ಎಷ್ಟು ವಿಚಿತ್ರ ಅಂತ ಅನ್ನಿಸಿತು....

ಇವತ್ತು ಕಂಡ ಆ ಸಂಭ್ರಮ ಮತ್ತು ಆ ಮಗುವಿನ ಮತ್ತು ಪುಷ್ಪಾಳ ಕುಟುಂಬದ ಎಲ್ಲ ಸುಖ ಸಂತೋಷ ಸದಾ ನಳನಳಿಸುತ್ತಿರಲಿ... ಮತ್ತು ಆ ಸಂಭ್ರಮಕ್ಕೆ ನಾವೆಲ್ಲ ಸದಾ ಸಾಕ್ಷಿಗಳಾಗುವಂತೆ ದೇವರು ಅನುಗ್ರಹಿಸಲಿ...

 🙏🙏🙏🙏

 (ನನಗೆ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ನಿಮ್ಮ ಜೊತೆ ಹೇಳಬೆಕೆನ್ನಿಸಿದ ಮಾತುಗಳಿವು)...

-ಕೆಎಂ.

Post a Comment

0 Comments