Ticker

5/recent/ticker-posts

Header Ads Widget

MANGALORE UNIVERSITY

ಜೀವನದಲ್ಲಿ ಆಚ್ಚಳಿಯದೆ ಉಳಿಯುವ ದಿನ.

ಆತ್ಮೀಯ ನಮ್ಮ ಸಹಪಾಠಿ ಸ್ನೇಹಿತರೆ,




ಮಾರ್ಚ್ 13, 2021.  ಈ ದಿನಾಂಕ ನಮ್ಮೆಲ್ಲರ ಜೀವನದಲ್ಲಿ ಆಚ್ಚಳಿಯದೆ ಉಳಿಯುವ ದಿನ.ಒಂದು ದಿವಸದ ನಮ್ಮ ಪ್ರವಾಸ 21 ವರ್ಷಗಳ ಹಿಂದೆ ಇದ್ದಂತ ಮನಸ್ಥಿತಿಗೆ ಕೊಂಡು ಹೋಗಿತ್ತು.ಮಾರ್ಚ್ 13 ನೇ ದಿನ ಯಾವಾಗ ಬರುತ್ತೆ ಎಂದು ಕೊಳ್ಳುವಷ್ಟರಲ್ಲಿ ಆ ದಿನ ಕಳೆದು ಇನ್ನು ನೆನಪು ಮಾತ್ರ ಎಂಬುದು ಗೊತ್ತಾಗಿ ಬಿಟ್ಟಿತು.

 ನಿನ್ನೆಯ ಅವಿಸ್ಮರಣೀಯ ದಿನವನ್ನು ಜೀವನ ಪೂರ್ತಿ  ಮೆಲುಕು ಹಾಕುತ್ತಾ ಇರುಬೇಕು ಅಷ್ಟೇ.Feb 18 ನೇ ತಾರೀಕಿಗೆ ಕೃಷ್ಣ ಮೋಹನ್ call ಮಾಡಿ 2nd saturday ಮಾರ್ಚ್ 13 ಕ್ಕೆ ನಮ್ಮ ಪ್ರವಾಸ ಇಟ್ಟರೆ ಹೇಗೆ? ಎಂದು ಮೊದಲು ನನಗೆ call ಮಾಡಿ ಅಭಿಪ್ರಾಯ ಮಂಡಿಸಿದ್ರು. ಕೂಡಲೇ ಹಿಂದೆ ಮುಂದೆ ನೋಡದೆ ಒಪ್ಪಿ ಬಿಟ್ಟು ಈ ಪ್ರವಾಸಕ್ಕೆ ಬೇಕಾಗುವ ತಯಾರಿಯನ್ನು ಅವತ್ತಿನಿಂದಲೇ  ಶುರು ಮಾಡಿದ್ದೆವು.


 ಉಮೇಶ್ 4am ಗೆ ಮಂಗಳೂರಿಗೆ ಬಂದು pic ಹಾಕಿದ್ದು ನೋಡಿ ತುಂಬಾ ಖುಷಿಯಾಗಿ ನಾನು ಮನೆಯಿಂದ 6:32am ಗೆ ಹೊರಟಿದ್ದೆ. Friday ಮನೆಯಲ್ಲಿ tour ವಿಷಯ discuss ಆಗುತ್ತಿರುವಾಗ ನನ್ನ ಎರಡೂ ಮಕ್ಕಳು ಮಲಗಲು ಬಿಡಲೇ ಇಲ್ಲ. ನಿಮ್ಮ tour ನಲ್ಲಿ ನಮಗೂ ಅವಕಾಶ ಕೊಡಿ ಎಂದು ಹಠ ಮಾಡಿದರು. ಅವರ ಹಠಕ್ಕೆ ಸೋತು ನಿನ್ನೆ ನನ್ನ ಎರಡೂ ಮಕ್ಕಳೂ ಪ್ರವಾಸಕ್ಕೆ ಬಂದು ಖುಷಿ ಪಟ್ಟಿದ್ದರು.

 ನಾನು ಉಳ್ಳಾಲದಿಂದ 6:32am ಗೆ ಹೊರಟಿದ್ದೆ. ಮಾರ್ಗದಲ್ಲಿ (pompwel ಬಳಿ)ಶರ್ಮಿಳಾ ರನ್ನು pic ಮಾಡಿ ಹಂಪನಕಟ್ಟೆ ಹಳೇ bustand ಹತ್ತಿರ 6:58am ಗೆ ಬಂದಿಳಿದಾಗ ಯಾರೂ ಇರಲಿಲ್ಲ. ಕಾರಿನಿಂದ ಇಳಿದು ಹುಡುಕಾಡಲು ಶುರುಮಾಡಿದಾಗ ಉಮೇಶ್ ರೈ ಹಾಗೂ ರಾಜೇಶ್ ಪೈ ಯನ್ನು ಕಂಡ ಕೂಡಲೇ ಸಂತೋಷವಾಗಿತ್ತು.

 ಹತ್ತಿರ ಬಂದು ಮಾತಾಡಲು ಶುರು ಮಾಡಿದಾಗ ಉಮೇಶ್ ನಮ್ಮನ್ನೆಲ್ಲರನ್ನು ಭೇಟಿ ಮಾಡಲು ಬಂದಿದ್ದ ಹಾಗೂ ಅವನ ಕೆಲಸದಲ್ಲಿ ಕೂಡಲೇ ಕಣ್ಣೂರು (ಕೇರಳ) ಮುಟ್ಟಲೇ ಬೇಕು ಅಂದಾಗ ಬೆಳಬೆಳಗ್ಗನೆ shocking news ಎದುರಾಗಿತ್ತು.  ಉಮೇಶ್ ಕೆಲಸ ಕಾರ್ಯದಲ್ಲಿ strict ಇದ್ದರೊ ನನ್ನಲ್ಲಿ joke ಮಾಡುತ್ತಿದ್ದಾನೆ ಅಂದಿದ್ದೆ ಹಾಗೂ ನಾವು ಮೂವರು ಸೀದಾ fresh room ಗೆ ಹೋಗಿದ್ದೆವು. ಅದರ amount ಉಮೇಶ್ ರೆ ಕೊಟ್ಟಿದ್ದ. ಮತ್ತೊ daubt ಆಗಿ ಪೈ ಯಲ್ಲಿ ಕೇಳಿದೆ. ನಿಜ ಅಂದ. ಉಮೇಶ್, ಸುದರ್ಶನ್, ಸಚಿನ್, ನನ್ನ combination ನಾವು class ನಲ್ಲಿ NSS camp ನಲ್ಲಿ ಎತ್ತಿದ ಕೈ. 


ಸಚಿನ್ ಅವನ health issue ನಿಂದ ಬರಲು ಆಗುತ್ತಿಲ್ಲ ಹೇಳಿದ್ದ, ಇಲ್ಲಿ ಉಮೇಶ್ ಕೂಡ return ಹೋಗುತ್ತಿದ್ದಾನೆ. ನಾನು &  ಸುಧಾ entertain ಮಾಡಲು ಸಾಧ್ಯವ ಎಂಬ ಹೆದರಿಕೆನೋ ಒಮ್ಮೆಲೇ ಬಂದು ಬಿಟ್ಟಿತ್ತು. ಆದರೆ ಉಮೇಶ್ ತನ್ನ ಕರ್ತವ್ಯದ midl ನಲ್ಲಿ ನಮ್ಮನ್ನು ನೋಡಲು ಕೇರಳದಿಂದ 4am ಗೆ ಬಂದಿದ್ದನಾಲ್ವ, ಅದೇ ನಮಗೆಲ್ಲರಿಗೆ ಸಂತೋಷದ ಕ್ಷಣ ಎಂದು ನಾವು ನನ್ನ ಕಾರ್ ಕಡೆ ಹೋಗುವಾಗ ನಿತಿನ್, ಅನಿಲ್ ಚರಣ್ ಹಾಗೂ ನಿತಿನ್ ರ ಮಗಳ entry ನೋಡಿದೆವು. ಕ್ಷಣಮಾರ್ಧದಲ್ಲಿ ಜ್ಯೋತಿ, ಮಮತಾ, ಕಿಶೋರ್, ಧನವಂತಿ, ರಶ್ಮಿ, ಕೃಷ್ಣಮೋಹನ್ ರ ಆಗಮನವಾಯಿತು,2 min ನಲ್ಲಿ ನಮ್ಮ ಪ್ರವಾಸದ bus ಕೂಡ ಬಂದಿತ್ತು.


 ಎಲ್ಲರೊ bus ಎದುರು pic ತೆಗೆದು bus ನೊಳಗೆ ಪ್ರವಾಸಕ್ಕೆ ಬೇಕಾಗುವ ಸಾಮಾನುಗಳನ್ನು ಇಟ್ಟು ನಮಗೆ ಬೇಕಾಗುವ ಸ್ಥಳವನ್ನು ಆಯ್ಕೆ ಮಾಡಿ ಕುಳಿತುಕೊಂಡಾಗ ನನ್ನ second son bus ನೋಡಿ ತುಂಬಾ ಖುಷಿ ಪಟ್ಟು bus ಬಗ್ಗೆ ಖುಷಿ ಹಂಚಿದ. ಕೂಡಲೇ ನವೀನ್ ಗೆ ಮನಸಲ್ಲೇ thanks ಅಂದಾಗ ನವೀನ್, ನವ್ಯಶ್ರೀ, ಪುಷ್ಪ ಹಾಗೂ ಇವರ ಅಣ್ಣನ ಮಗಳೂ ಬಂದು ಆಗಿತ್ತು. ಎಲ್ಲರೊ ಖುಷಿಯಿಂದ ಸಮಯಕ್ಕೆ ಸರಿಯಾಗಿ ಬಂದಿದ್ದರಿಂದ 7:26am ಗೆ ಬಸ್ಸು ಹಂಪನಕಟ್ಟೆಯಿಂದ ಕಂಕನಾಡಿ ಬುಸ್ಟ್ಯಾಂಡ್ ಕಡೆ ಹೊರಟಿತು. 7:38am ನಲ್ಲಿ ಉಷಾ ಹಾಗೂ ಅವರ ಮಗಳು ಭೂಮಿಕ ನಮ್ಮ ಜೊತೆ ಸೇರಿ ಕೊಂಡರು. 


Pompwel ನಲ್ಲಿ 7:40am ಗೆ ಭಾಗೀರಥಿ, ಸುಕನ್ಯಾ, ಸುಮಂಗಳ, ರೇಶ್ಮಾ ಹಾಗೂ ಅವರ ಮಗಳು ನಮ್ಮ ಪ್ರವಾಸದ ಬಸ್ ಗೆ ಹತ್ತಿದ್ರು. ನಂತರ ಅಲ್ಲಿಂದ ನಾಗುರಿಯಲ್ಲಿ ಸುಮಿತ್ರ ಹಾಗೂ ಅವರ ಇಬ್ಬರು ಪುತ್ರಿಯರು ಶ್ರಾವ್ಯ ಹಾಗೂ ಶ್ರೇಯ 7:45am ಗೆ ನಮ್ಮನ್ನು ಸೇರಿಕೊಂಡರು. 7:48am ಗೆ ಪಡೀಲು bustand ನಲ್ಲಿ ನಮ್ಮ ಸಂಪತ್  ಆಳ್ವಾ ಕಾಯುತಿದ್ರು. ಅವರನ್ನು ನಮ್ಮ ಜೊತೆ bus ಗೆ ಸೇರಿಸಿ 7:50am ಗೆ ಪಡೀಲಿನ OLKSWAGEN CAR SERVICE STATION ನಲ್ಲಿ ಸುದರ್ಶನಗೋಸ್ಕರ ಕಾದು ಕುಳಿತಿದ್ದೆವು. ಆಗ ಕೇವಲ 2 ನಿಮಿಷ ತಡ ಆದರೊ 2 ಗಂಟೆ late ಆಯಿತೋ ಎನ್ನುವ ಭಾವನೆ ಮೂಡಿತ್ತು. ಯಾಕೆಂದರೆ ಉಳಿದ ಸಹಪಾಠಿಗಳನ್ನು ಕಾಣುವ ಖುಷಿ ನಮ್ಮೆಲ್ಲರಲ್ಲಿತ್ತು. ಕೂಡಲೇ bus 7:53am ಗೆ ಸುದರ್ಶನ್ ರನ್ನು ನಮ್ಮ ಜೊತೆ ಸೇರಿಸಿ ಹೊರಟಿತು. Next bus ನಿಲ್ಲಿಸಿದ್ದು ಮೇಲ್ಕಾರ್ ನಲ್ಲಿ. ಈ stop ನಲ್ಲಿ ಫಾರೂಕ್,ಜಗದೀಶ್, ಶರೀಫ್ ಹಾಗೂ ಅವನ ಮಗ n brother ಮಗ ಕೂಡ ಸೇರಿ ಕೊಂಡರು. ಕಲ್ಲಡ್ಕದಲ್ಲಿ ನಮ್ಮ ರಾಮಮುಗೇರ 10 ನಿಮಿಷದ ಮುಂಚೆನೇ ಕಾಯುತ್ತಿದ್ದ. ಸರಿಯಾಗಿ 8:41am ಗೆ ನಾವು ಕಲ್ಲಡ್ಕದಿಂದ 35 plus ಸಹಪಾಠಿ ಹಾಗೂ ಮಕ್ಕಳ ಪ್ರವಾಸದ bus  ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹೊರಟಿತು😊👍🏻.

 

10:15am ಗೆ ನಾವು ಸೌತಡ್ಕ ದೇವಸ್ಥಾನ ತಲುಪಿದೆವು. ಕಾಲು ತೊಳೆದು ದೇವಸ್ಥಾನದ ಒಳಗೆ ಬರುವಾಗನೆ ಪೂಜೆ ಶುರುವಾದದ್ದು ವಿಶೇಷವಾಗಿತ್ತು. ಶ್ರೀ ದೇವರ ಆಶೀರ್ವಾದ ಹಾಗೂ ಪ್ರಸಾದ ಪಡೆದು ಅಲ್ಲಿ ಫೋಟೋಸ್ ಕ್ಲಿಕ್ಕಿಸಿ ದೇವಸ್ಥಾನದ ಅವಲಕ್ಕಿ ಹಾಗೂ ಅಪ್ಪ ಪ್ರಸಾದ ತಿಂದು bus ಕಡೆ ಹೊರಟೆವು. ಅಲ್ಲಿಂದ ಸೀದಾ ಶಿಶಿಲ ದೇವಸ್ಥಾನ. ಎಲ್ಲರಿಗೂ ಹಸಿವು ಇದ್ದರಿಂದ ಆ ಸಮಯದಲ್ಲಿ ಅವಲಕ್ಕಿ ಹಾಗೂ ಅಪ್ಪ ಪ್ರಸಾದ ಉಪಯೋಗಕ್ಕೆ ಬಂತು😊. ಸುಧಾ ಹಾಗೂ ನಾನು bus ನ ಮೈಕದಲ್ಲಿ ಎಲ್ಲರ ಪರಿಚಯಿಸುತ್ತಾ ಯಾರೂ ನಿದ್ದೆಗೆ ಜಾರಾದ ಹಾಗೆ  ಹಾಡುತ್ತಾ, ಕಾಮಿಡಿ ಮಾಡುತ್ತಾ ಅಂತ್ಯಾಕ್ಷರಿ ಹಾಡಿ ಆಗಿನ envoirement way ಯನ್ನೇ ಬದಲಿಸಿದೆವು. 


ಸುದರ್ಶನ್ ತಂಡ 2 ಅಂಕ ಹಾಗೂ ಸುಶೀಲ್ ತಂಡ 4 ಅಂಕ ಗಳಿಸಿ ಅಂತ್ಯಾಕ್ಷರಿಯಲ್ಲಿ ಜಯಿಸಿದೆವು. ನಂತರ ಅದರ midl ನಲ್ಲಿ ಸುದರ್ಶನ್ bus ನಿಲ್ಲಿಸಿ ಹೌಸಿ ಹೌಸಿ book fancy ಯಲ್ಲಿ puchase ಮಾಡಿ ಆಟ ಆಡುವ ಅಷ್ಟರಲ್ಲಿ ಅದರ numbers ಬಿಟ್ಟು ಬಂದಿದ್ದರಿಂದ ಎಲ್ಲರೊ ಜೋರಾಗಿ ನಕ್ಕು ಬಿಟ್ಟಿದ್ರು.Rs. 5/- ಗೆ ತೆಗೆದ ಹೌಸಿ ಹೌಸಿ ticket waste ಆಯಿತು ಅನ್ನುವಷ್ಟರಲ್ಲಿ ನಾನು ನನ್ನಲ್ಲಿದ್ದ ticket ಹಿಂದಿರುಗಿಸಿ number ನನ್ನ ಇಷ್ಟದ number ಕರೆಯುವೆ. ಎಂದು ಈ ಆಟಕ್ಕೆ ಪುಷ್ಟಿ ಕೊಟ್ಟು ಇದರಲ್ಲಿ ನಿತಿನ್, ಚರಣ್, ನವೀನ್, ಶರೀಫ್ price ಪಡಕೊಂಡರು. ರಶ್ಮಿ full ಹೌಸ್ Rs.90/- ಪಡಕೊಂಡು bag ನೊಳಗೆ ಬಚ್ಚಿಟ್ಟದ್ದು ವಿಶೇಷವಾಗಿತ್ತು🤪.

 

ಶಿಶಿಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಮಕ್ಕಳು, ದೊಡ್ಡವರು ನೀರಿನ ಮೀನಿನಲ್ಲಿ ಆಟವಾಡಿ ನಂತರ ಟೀ, ಕಾಫೀ, ಇಡ್ಲಿ, buns ತಿಂದು ಹೊಟ್ಟೆ ತುಂಬಿಸಿದೆವು.

 

ನಂತರ ನಮ್ಮ 5 km trucking start ಆಯಿತು. ನೀರು, ಕೆಲವು ತಿನಸು ಪದಾರ್ಥಗಳನ್ನು ಹೊತ್ತುತ್ತಾ 1km ದೂರ ಪ್ರಯಾಣಿಸಿದಾಗ ಹೆಚ್ಚಿನವರಿಗೆ ಸುಸ್ತು ಬರತೊಡಗಿತು. ಅಲ್ಲೇ ಹತ್ತಿರದ ಬಂಡೆಯಲ್ಲಿ ಕೂತು rest ಮಾಡುವ ಎಂದು ಕುಳಿತರು. ಮಕ್ಕಳು ಹತ್ತಿರದ ನೀರಿನಲ್ಲಿ ಸ್ನಾನ ಮಾಡಲು ಶುರು ಮಾಡಿದ್ರು. ಕೆಲವರಿಗೆ ಇನ್ನೂ trucking ಮಾಡಬೇಕೆಂದು ಎನಿಸಿ ಅದರಲ್ಲಿ ಕೆಲವರು, ಅಂದರೆ ನಾನು, km, ಸುಮಿತ್ರ, ಅವರ ಮಕ್ಕಳು, ಜ್ಯೋತಿ, ರಶ್ಮಿ, ರಶ್ಮಿ ಮಗ ಚಿರಾಗ್, ಧನು, ಭಾಗೀ, ರೇಷ್ಮಾ, ಪೈ, ರಾಮ್, ಸಂಪತ್, ಫಾರೂಕ್, ಶರೀಫ್,ಸುಮಂಗಳ,ರೇಶ್ಮಾ, ಮುಂತಾದವರು 4 km ಹೆಚ್ಚು ನಡೆಯುತ್ತ ಮುಂದೆ ಸಾಗಿದೆವು. ಈ ಖುಷಿಯನ್ನು ಬಣ್ಣಿಸಲು ಸಾಧ್ಯವಿಲ್ಲ. ಈ ಸಂಧರ್ಭ ಉಮೇಶ್ ರನ್ನು, ಸಚಿನ್ ಅನ್ನು ತುಂಬಾ miss ಮಾಡಿದ್ದೆ. ನಾವು ಮೂವರು nss ನಲ್ಲಿ ತುಂಬಾ trucking ಮಾಡಿದ ದಾಖಲೆ ನಮ್ಮ ಮೂವರಲ್ಲಿದೆ. ಈಗ miss ಮಾಡಿದ ಆ ನೋವು ಕಣತೊಡಗಿತ್ತು.

 

ನಂತರ ಹಿಂತಿರುಗಿ ಉಳಿದ ಸಹಪಾಠಿಗಳನ್ನು ಮುಂಚೆನೇ ತಂಗಿದ್ದ ಸ್ಥಳಕ್ಕೆ ಬಂದು ಜೊತೆಗೆ ನಾವು ಟೀ ಕುಡಿದ ಸ್ಥಳಕ್ಕೆ ಆಗಮಿಸಿ ಅಲ್ಲಿ ಕೆಲವರು ಕಬ್ಬಿನ ಹಾಲಿನ ರಸ, ಇನ್ನು ಕೆಲವರು lime ಸೋಡಾ ಕುಡಿಯಲು ಕೂತರು. ಆಗಲೇ ದಣಿದಿದ್ದ ನಮಗೆ ಸ್ವರ್ಗ ಸಿಕ್ಕಿದಂತಾಗಿತ್ತು. ನಾನು 1 lime ಸೋಡಾ , 2 ಕಬ್ಬಿನ juice ಕುಡಿದಿದ್ದೆ🤪😜.

 

ಅಲ್ಲಿಂದ bus ಹತ್ತಿ ಸುಮಾರು 7km ದೂರ ಹೋಗಿ ಅಲ್ಲಿ ನದಿ ಪಕ್ಕ ಊಟ ಮಾಡಿ, ಕೆಲವರು ನೀರಲ್ಲಿ ಸ್ನಾನ ಮಾಡಿ, rest ಮಾಡಿ ಎಲ್ಲರ ಗ್ರೂಪ್ ಫೋಟೋ ತೆಗೆದು ಸರಿ ಸುಮಾರು 5:21pm ಗೆ ಮಂಗಳೂರು ಕಡೆ ಪಯಣಿಸಿದೆವು.

 

ಇಲ್ಲಿಂದ ನಮ್ಮ bus ನಲ್ಲಿ dj ಡ್ಯಾನ್ಸ್ ಮಾಡಲು ಶುರು ಮಾಡಿದೆವು. ನಾನು ಸುದರ್ಶನ್ ಶುರು ಮಾಡಿದ್ದೇ ಮಾಡಿದ್ದು. ಪ್ರತೀಯೊಬ್ಬರು include ಮಕ್ಕಳೂ ಕುಣಿದರು. Midl ನಲ್ಲಿ ಕಾಫೀ, ಟೀ ಗೆ ನಿಲ್ಲಿಸಿ ಅರ್ಧ ಗಂಟೆ ಬಳಿಕ ಅಲ್ಲಿಂದ ಸೀದ ಮಂಗಳೂರು ಕಡೆ ಮುಖ ಮಾಡುತ್ತಾ dj ಯಲ್ಲಿ ಡ್ಯಾನ್ಸ್ ಮಾಡುತ್ತಾ ಸಾಗಿದೆವು. Network prb ನಿಂದ ಯೂಟ್ಯೂಬ್ ಹಾಡು ಗಡಿ ಗಡಿ ನಿಂತಾಗ ನಾನು ಬೈಸಿ ಕೊಂಡದ್ದೂ ಇದೆ.😒.

 

ಕಲ್ಲಡ್ಕ, ಮೇಲ್ಕಾರ್ ಸಮೀಪಿಸುತ್ತಿದ್ದಂತೆ ಹಾಡು ನಿಲ್ಲಿಸಿ ಮೈಕಾ on ಮಾಡಿ ಅವರವರ experince share ಮಾಡಲು ಶುರು ಮಾಡಿದೆವು. ಮೊದಲಿಗೆ 16 ನಿಮಿಷದ ಫಾರೂಕ್ ರ ಭಾವನೆ ತುಂಬಿದ ಮಾತು ಇನ್ನೇನು ಕೆಲವೇ ಗಂಟೆಯಲ್ಲಿ ನಾವೆಲ್ಲರೊ ಬೇರೆ ಬೇರೆ ಆಗುತ್ತೇವೆ ಎನ್ನುವ ವಿಷಾದ ನಮ್ಮ ಮನಸ್ಸಿಗೆ ಬಂದಾಗ ಎಲ್ಲರೊ silent mode ಗೆ ಹೋಗತೊಡಗಿದರು. ಫಾರೂಕ್ ರ ಆ ಭಾವನೆಯ ಮಾತು ಗಳು ನಾನು ಜೀವನ ಪೂರ್ತಿ ಮರೆಯುವಂತಿಲ್ಲ. ನಂತರ km ಹಾಗೆ ಒಬ್ಬಬ್ಬರು ಅವರವರ experince ಮಾತಾಡಿ ಕಲ್ಲಡ್ಕ, ಮೇಲ್ಕಾರ್, ಪಡೀಲ್, pompwel ಕಂಕನಾಡಿ , ಕೊನೆಗೆ old bustabd ಬಳಿ ನಮ್ಮ bus 8:46pm ಗೆ ಬಂದಿಳಿದಿತ್ತು. ನಾನು, ನಿತಿನ್, ರಶ್ಮಿ, ಮಮತಾ, ಜ್ಯೋತಿ, ಧನು, km, ಚರಣ್, ಶರ್ಮಿಳಾ,ನವೀನ್, ಸುಮ, ಭಾಗೀ, ಸುಕನ್ಯಾ ಎಲ್ಲರೊ ಕೈ shake ಮಾಡುತ್ತಾ ಬೀಳ್ಕೊಟ್ಟೆವು.

 

ನಮಗೂ ತುಂಬಾ ಸ್ನೇಹಿತರು ಇದ್ದಾರೆ. ಆದರೆ ನಮ್ಮ UCM ಸಹಪಾಠಿ ಸ್ನೇಹಿತರ ಪ್ರೀತಿ ಅಪಾರ. ಕ್ಷಣ ಕ್ಷಣ enjoyment ಮಾಡುತ್ತೇವೆ.ಆದಷ್ಟು ಬೇಗ ನಾವೆಲ್ಲರೂ ಇನ್ನೊಂದು ಪ್ರವಾಸ ಕೈಗೊಳೋಣ. ನಮ್ಮೀ ಪ್ರವಾಸದಲ್ಲಿ 2 ಜೋಡಿಗಳು ಇದ್ದರು.

 

1. ಮಮತಾ ಜ್ಯೋತಿ

2. ಭಾಗೀರಥಿ ಸುಮಂಗಳ.

 

ಈ ಎರಡು ಜೋಡಿ bus ಹೊರಡುವಾಗದಿಂದ ಹಿಡಿದು ಕೊನೆ ತನಕ ಜೊತೆಯಲ್ಲಿದ್ರು. ನಿಮ್ಮ ಈ ಪ್ರೀತಿಯ ಸ್ನೇಹ life time ಇರುವಂತಾಗಲಿ😊🙏.

 ನಾನು ಹಾಗೂ ಸುದರ್ಶನ್ ಎಲ್ಲರನ್ನು ನಗಿಸುತ್ತಾ ಪ್ರವಾಸದಲ್ಲಿ ಎಲ್ಲರೊ alert ಆಗಿರುವ ಹಾಗೆ ನಮ್ಮಿಂದಾದ ಪ್ರಯತ್ನ ಮಾಡಿದೆವು.ಅದಕ್ಕೆ ಸುದರ್ಶನ್ ರವರಿಗೆ ಕೂತಲ್ಲಿಂದಲೇ ಚಪ್ಪಾಳೆ ಕೊಡಿ.

 ಈ ಪ್ರವಾಸ ಆಯೋಜಿಸಿದ ನಮ್ಮ ಅಡ್ಮಿನ್ leader KM ಹಾಗೂ ಹಿಂದೆ ಸಹಕಾರ ನೀಡಿದ ನವೀನ್, ನಿತಿನ್ ಧನು, ಇವರಿಗೂ ಕೂತಲ್ಲಿಂದಲೇ ಚಪ್ಪಾಳೆ ತಟ್ಟಿ.

ಯಾರದಾದರೊ ಹೆಸರು miss ಆಗಿದ್ರೆ ಕ್ಷಮಿಸಿ. ಇವತ್ತು ನನ್ನ ವ್ಯವಹಾರದಲ್ಲಿ training ಇತ್ತು. ನಾನೇ training full day ಕೊಟ್ಟಿದ್ದರಿಂದ ಅವಸರವಾಸರದಲ್ಲಿ ಏನಾದರೊ spelling miss ಆಗಿದ್ರೆ ದಯವಿಟ್ಟು ನಿಮ್ಮ ಕ್ಷಮೆ ಇರಲಿ ಎಂದು ಬೇಡುತ್ತಾ ನಿನ್ನೆಯ ಪ್ರವಾಸದ ದಿನದ ದಿನಚರಿಯನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ.

 Shortly ಇನ್ನೊಂದು ಪ್ರವಾಸ ಇಡುವವರು ಇದ್ದೇವೆ. ಇದಕ್ಕೆ ಎಲ್ಲರೊ ತಮ್ಮ ತಮ್ಮ ಪರಿವಾರ ಸಮೇತ ಬನ್ನಿ. ಸಮಯ ಯಾರನ್ನೂ ಕಾಯೋಲ್ಲ. ನಾವೇ ನಿರ್ಧಾರ ಕೈಗೊಂಡು ಮನೆಯವರನ್ನು ಒಪ್ಪಿಸಿ ಮುಂದಿನ ದಿನಗಳಲ್ಲಿ ಎಲ್ಲರೊ ಜೊತೆಯಾಗಿ ಫ್ಯಾಮಿಲಿ tour ಇಡೋಣ. ಏನಂತೀರಾ?😊🙏

 ಓದಿದ ನಿಮಗೆಲ್ಲರಿಗೂ ಧನ್ಯವಾದಗಳು😊👍🏻🙏

 ಬರಹ : ಸುಶೀಲ್ ಕುಮಾರ್ ಎಸ್.

 


Post a Comment

0 Comments