Ticker

5/recent/ticker-posts

Header Ads Widget

MANGALORE UNIVERSITY

ಅವಿಸ್ಮರಣೀಯ ದಿನವಾಗಿಸಿದ ಸೊಗಸುಗಾರರು

 


ನೀರಾಟವಾಡಿದರು ಸ್ನೇಹಿತರು, ನಡೆದಾಡಿ ದಣಿದಿಹರು ಚಿಣ್ಣರು, ಮೈಮರೆತು ಕುಣಿದಾಡಿದರು ಸುನೇತ್ರೇಯರು, ದಶಕದಿ ಬಳಿಕ ಸೇರಿದರು ಮಿತ್ರರು, ಹುಮ್ಮಸ್ಸು ಇಮ್ಮಡಿಸಿದರು ಛಲಗಾರರು ಮತ್ತು ಮಾರ್ಚ್ ಹದಿಮೂರನ್ನು ಅವಿಸ್ಮರಣೀಯ ದಿನವಾಗಿಸಿದರು ಸೊಗಸುಗಾರರು.... ಇದಕ್ಕಾಗಿ ನಮಿಸುವೆವು ಸಹೃದಯಿಗಳು ಎಂದೆದೂ🙏

ಛಲ ಎಂಬುದು  ಮನುಷ್ಯನಲ್ಲಿ  ಇರಬೇಕಾದ ಒಂದು ಸಾಮಾನ್ಯ ಗುಣ. ಇಲ್ಲದಿದ್ದಲ್ಲಿ  ಸೂತ್ರದಾರ ಇಲ್ಲದ ಗಾಳಿಪಟದಂತೆ ನಮ್ಮ ಜೀವನ.

 ನನಗೆ UCMಸಮೂಹದ ಈ ಕಿರುಪ್ರವಾಸದಲ್ಲಿ ಭಾಗವಹಿಸಲು ಅಸಾಧ್ಯ  ಎನ್ನಲು ಕಾರಣಗಳು ನೂರಾರು, ಹಾಗೂ ಅದನ್ನು  ಕೊನೆಯ ಕ್ಷಣದವರೆಗೂ ಅಂದರೆ ಮಾರ್ಚ್ 13ರಬೆಳಿಗ್ಗೆ 5.55 ಸುಕನ್ಯಾಳ  ಮಿಸ್ಡ್ ಕಾಲ್ ಬರುವವರೆಗೂ ಹೇಳುತ್ತಲೂ ಇದ್ದೆ. ಆದರೆ ಇಂತಹ ಸುದಿನ ನನ್ನ ಜೀವನದ ಪುಟಗಳಲ್ಲಿ ಅಚ್ಚಾಗುವಂತೆಮಾಡಲಿದ್ದದೂಒಂದೇ ಒಂದು ಕಾರಣ. ಅದು ನೀವೆಲ್ಲಾ ನನ್ನಲ್ಲಿಟ್ಟಿರುವ  ಸ್ನೇಹ  ಬಾಂಧವ್ಯ ಮತ್ತು  ವಿಶ್ವಾಸ.

ಸುಮಾರು ತಿಂಗಳ ಹಿಂದಿನಿಂದಲೂ ನಾವೆಲ್ಲಾ ಒಮ್ಮೆ ಜತೆಯಾಗಬೇಕು, ಒಂದು ದಿನದ ಮಟ್ಟಿಗೆ  ಸಂಸಾರದ ಜಂಜಾಟಗಳ ಮರೆತು ಕಾಲೇಜುದಿನಗಳ  ಸುಂದರದಿನಗಳ ಸವಿನೆನಪುಗಳನ್ನು ಸಮಾನ ವಯಸ್ಕರೊಂದಿಗೆ ಜತೆಗೂಡಿ ಮಗದೊಮ್ಮೆ ಸವಿ ಉಣಬೇಕು ಎಂಬುದು ಎಲ್ಲರ ಮನದ ಹಂಬಲವಾಗಿತ್ತು.

     ಅದಕ್ಕಾಗಿ  ದಿನ ಕೂಡಿಬರಲಿ ಎಂದು ಪ್ರಾರ್ಥಿಸಿದ ಮನಗಳೆಷ್ಟೋ ,ಅಂತೂ ಇಂತು ಒಂದು ಸುದಿನ ಬಂದೇ ಬಿಟ್ಟಿತು.  ನಮ್ಮ  ಜೀವನದ ಪುಸ್ತಕದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ಸುಂದರ ಕ್ಷಣಗಳ ಮಾರ್ಚ್ ಹದಿಮೂರು.

ಎಲ್ಲರಿಗೂ ಪಾಲ್ಗೊಳ್ಳ ಬೇಕೆಂಬ ಹಂಬಲ, ಅದಕ್ಕಾಗಿ  ಹಸಿಮುನಿಸು. ಮನದ ಮೂಲೆಯಲ್ಲಿ ಎಲ್ಲೋ ನಾವೆಲ್ಲರೂ ಸೇರುವುದು ನಿಜವ  ಎನ್ನುವ ಅನುಮಾನದ ತವಕ.

ಅದೆಷ್ಟು ಜನವಾದರೂ ಸರಿ ಈ ಸಾರಿ ಜತೆ ಸೇರಲೇ ಬೇಕೆಂಬ ಎನ್ನುವ ಮಹದಾಸೆ ಸಂಘಟಕರಿಗೆ ಇದ್ದುದರಿಂದ, ಮನದ ತಳಮಳದ ಹೊಯ್ದಾಟವನ್ನು ಲೆಕ್ಕಿಸದೆ, ಪ್ರತಿ ಜವಾಬ್ದಾರಿಯನ್ನು ಹಂಚಿಕೊಂಡು, ವಿಂಗಡಿಸಿ ಕ್ರೋಢೀಕರಿಸಿ ಸಂತೃಪ್ತಿ ಪಡೆದ ಹಸನ್ಮುಖ...

ಈ ಸ್ಮರಣೀಯ ದಿನಕ್ಕಾಗಿ  ಶ್ರಮಿಸಿದ  ಸ್ನೇಹಿತರೆಷ್ಟೋ, ಸಮೂಹ ಬಾತೃತ್ವಾಕ್ಕಾಗಿ ತ್ಯಾಗ ಮಾಡಿದ  ವಿಚಾರಗಳೆಷ್ಟೋ, ಇದೆಲ್ಲವಾ ದೂರದಿಂದಲೇ ನೋಡಿ ಸಂತೋಷಪಟ್ಟು, ಪ್ರಾರ್ಥಿಸಿ ಶುಭಹಾರೈಸಿದ ಮನಸುಗಳೆಷ್ಟೋ, ಇದೆಲ್ಲವನ್ನೂ ವಾಣಿಜ್ಯ ಶಾಸ್ತ್ರದ  ವಿದ್ಯಾರ್ಥಿಗಳಾಗಿ ಇಲ್ಲಿ ಲೆಕ್ಕ ಹಾಕಲು ಸಾಧ್ಯವೇ ಎನ್ನುವುದು ಒಂದು ಯಕ್ಷಪ್ರಶ್ನೆಯಂತಾಗಿದೆ.

ಸ್ನೇಹ, ವಿಶ್ವಾಸ, ಪ್ರೀತಿ ಮತ್ತು  ನಾವೆಲ್ಲಾ  ಒಂದೇ ದೊಣಿಯ ಪಯಣಿಗರು ಎನ್ನುವ ಭಾಂಧವ್ಯದ ಮುಂದೆ ಇಲ್ಲಿ ಮತ್ತೆಲ್ಲವೂ ನಗಣ್ಯ. ಈ ಕಿರು ದಣಿವರಿಯದ ಪಯಣವನ್ನು ಮುಗಿಸುವಷ್ಟರಲ್ಲಿ ಅದೆಷ್ಟೋ  ಸ್ನೇಹಿತರ ನೆನೆದು ಗುಣಗಾನ ಮಾಡಿ, ಸಹಭೋಜನದ ಸವಿಯುಂಡು, ಹರಟೆ, ಸೆಲ್ಫಿಗಳಿಗೆ ಸಾಕ್ಷೀದಾರರಾಗಿ ರಾತ್ರಿ 8.30ಕ್ಕೆ ಗಮ್ಯ ತಲುಪಿ ನಂತರ ಅನುಭವಿಸಿದ ರಸನಿಮಿಷಗಳ ಸಂತೃಪ್ತಿಯ ಭಾವನೆಯು ಮೇಸೇಜ್ ಗಳ ರೂಪದಲ್ಲಿ ಸಮೂಹದಲ್ಲಿ ಅಚ್ಚಾದನ್ನು ಓಂದೊಂದಾಗಿ ಓದಿದಾಗ ಕಣ್ಣಂಚು ತೇವಗೊಂಡು ಅಕಸ್ಮಾತ್ ನನ್ನ ಮೊಂಡುತನದಿ ತಪ್ಪಿರುತ್ತಿದ್ದಲ್ಲಿ ಈ ಅವಕಾಶ ನನಗೆ, ತುಂಬಲಾರದ ನಷ್ಟವ ನಾನು ನನಗೆಯೇ ಭರಿಸಬೇಕಿತ್ತು ಅನಿಸಿ ...ಮನದೊಲೊಮ್ಮೆ ಧನವಂತಿಯ ನೆನೆದು ಕಾರಣೀಕರ್ತರೆಲ್ಲರಿಗೂ ಶಿರಬಾಗಿದೆ....🙏💐




ಬರಹ: ಭಾಗೀರಥಿ 

 

Post a Comment

0 Comments