Ticker

5/recent/ticker-posts

Header Ads Widget

MANGALORE UNIVERSITY

ಎರಡು ವರುಷದ ಹರುಷ




 ನಮ್ಮ ಗ್ರೂಪಿಗೆ ಇಂದಿಗೆ ಎರಡು ವರ್ಷ ತುಂಬಿತು!

OUR GROUP COMPLETED TWO YEARS TODAY

🌳🌳🌳🌳🌳

ಸಹಪಾಠಿ ಮಿತ್ರರೇ,

ನಮ್ಮ ಯುಸಿಎಂ 2ಕೆ ಬಿಕಾಂ ವಾಟ್ಸಪ್ ಗ್ರೂಪು ಆರಂಭಿಸಿ ಇಂದಿಗೆ (ಜೂ.9) ಎರಡು ವರ್ಷ ಭರ್ತಿಯಾಯಿತು. 2019ರಲ್ಲಿ ಜೂ.9ರಂದು ಸಂಜೆ ಆರಂಭಿಸಿದ ಗ್ರೂಪ್ ಇದು. ನೋಡನೋಡುತ್ತಿದ್ದಂತೆ 730 ದಿನಗಳು ಕಳೆದು ಹೋದವು. ಗ್ರೂಪು ಶುರುವಾಗಿ ಎರಡು ವರ್ಷಗಳಾದ ನಂತರ ಈಗ ಗ್ರೂಪಿನಲ್ಲಿ 93 ಮಂದಿ ಸದಸ್ಯರು ಇದ್ದಾರೆ. ಬಹುತೇಕ 100 ಮಂದಿ ನಮಗೆ ಈ ಗ್ರೂಪಿನ ಮೂಲಕ ಸಿಕ್ಕಿದ್ದರೂ 93 ಮಂದಿ ಉಳಿದುಕೊಂಡಿದ್ದಾರೆ.

ವಿ.ವಿ.ಕಾಲೇಜಿನಲ್ಲಿ ಮೂರು ವರ್ಷ ಎರಡು ಪ್ರತ್ಯೇಕ ಸೆಕ್ಷನ್ ಗಳಲ್ಲಿ ಒಟ್ಟಿಗೇ ಬಿಕಾಂ ಕಲಿತಿದ್ದೇವೆ ಎಂಬುದು ನಮ್ಮ ನಡುವಿನ ಸಾಮಾನ್ಯ ಸಮಾನಮನಸ್ಸಿಗೆ ಕಾರಣ. ಜೊತೆಗೆ ನಮ್ಮೆಲ್ಲರ ಈಗಿನ ಸರಾಸರಿ ವಯಸ್ಸು 41 ವರ್ಷಗಳು. ಈ ಎರಡು ಕಾರಣದಿಂದ ನಾವೆಲ್ಲರೂ ಸಮಾನ ಮನಸ್ಕರು ಹಾಗೂ ಸಮಾನ ವಯಸ್ಕರೂ ಹೌದು.

ಇದನ್ನು ಹೊರತುಪಡಿಸಿ ನಾವೆಲ್ಲ ಬೇರೆ ಬೇರೆ ಪ್ರಾದೇಶಿಕ ಹಿನ್ನೆಲೆ, ಪರಿಸರದಲ್ಲಿ ದುಡಿಯುತ್ತಿರುವ, ಬೇರೇ ಬೇರೆ ಕೆಲಸ (ವೃತ್ತಿ) ನಿರ್ವಹಿಸುತ್ತಿರುವ, ಬೇರೆ ಬೇರೆ ಕೌಟುಂಬಿಕ ಸ್ಥಾನಮಾನ, ಹಿನ್ನೆಲೆಗಳನ್ನು ಹೊಂದಿದ್ದೇವೆ. ಹಾಗಾಗಿ ನಮ್ಮ ನಮ್ಮ ಚಿಂತನೆಗಳು, ಯೋಚನಾ ಲಹರಿ ಸಹಜವಾಗಿಯೇ ಬೇರೆ ಬೇರೆ ಇರುತ್ತದೆ. ಆದರೂ ನಮ್ಮನ್ನು ಈ ಗ್ರೂಪಿನಲ್ಲಿ ಒಟ್ಟಾಗಿರಿಸಿದ್ದು, ನಾವು ಒಟ್ಟಿಗೆ ಕಲಿತಿದ್ದೇವೆ ಎಂಬ common factor ಆಗಿದೆ 

ಗ್ರೂಪಿನ ಮೂಲಕ ಏನೇನು ಮಾಡಿದ್ದೇವೆ ಅಂತ ವರದಿ ಒಪ್ಪಿಸುವ ಅಗತ್ಯ ಇಲ್ಲ. ನಿಮಗೆಲ್ಲ ಗೊತ್ತಿದೆ. ನಮ್ಮ ಸೀಮಿತ ಚಟುವಟಿಕೆಗಳ ಕುರಿತು. ನಮ್ಮ ಬ್ಲಾಗ್ ಸೈಟ್ ಓಪನ್ ಮಾಡಿದರೆ ನಿಮಗೆ ಪ್ರತಿ ಚಟುವಟಿಕೆಯ ವರದಿ ಚಿತ್ರ,ವಿಡಿಯೋ ಸಹಿತ ಸಿಗುತ್ತದೆ. ನಮಗೊಂದು ಸೇವಿಂಗ್ಸ್ ಅಕೌಂಟ್ ಇದೆ, ಅದರಲ್ಲಿ ಸದ್ಯ 61344 ರು. ಉಳಿತಾಯದ ಮೊತ್ತ ಇದೆ. ನಮ್ಮದೇ ಆದ ಬ್ಲಾಗ್ ಇದೆ. ನಮ್ಮದೇ ಆದ ಯೂಟ್ಯೂಬ್ ಚಾನೆಲ್ ಇದೆ. ಪ್ರಧಾನ ಗ್ರೂಪಿನ ಜೊತೆ ಸ್ನೇಹಲೋಕ ಎಂಬ ಇನ್ನೊಂದು ಗ್ರೂಪ್ ಇದೆ. ಗಲ್ಭಿನಲ್ಲಿ, ಮುಂಬೈಯಲ್ಲಿ, ಬೆಂಗಳೂರಿನಲ್ಲಿ, ಗಡಿನಾಡು ಕೇರಳದಲ್ಲೂ ಗ್ರೂಪಿನ ಸದಸ್ಯರಿದ್ದಾರೆ.

ಗ್ರೂಪು ಶುರು ಮಾಡುವುದು ಐತಿಹಾಸಿಕ ವಿಚಾರವೇನಲ್ಲ. ಒಂದೆರಡು ಕ್ಲಿಕ್ ಮಾಡಿದರೆ ಗ್ರೂಪು ಕ್ರಿಯೇಟ್ ಮಾಡಬಹುದು. ಆದರೆ ಅದು ಹೇಗೆ ಉಳಿದಿದೆ, ಹೇಗೆ ಬೆಳೆದಿದೆ ಎಂಬುದೇ ಮುಖ್ಯ, ಈ ಗ್ರೂಪನ್ನು ಬೆಳೆಸಿದವರು ನೀವೆಲ್ಲರೂ. ಹಾಗಾಗಿ ಆರಂಭದಿಂದಲೂ ಗ್ರೂಪಿನಲ್ಲಿ ಇರುವವನಾಗಿ ನಿಮಗೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು...

ನನ್ನ ಕೆಲಸದ ಒತ್ತಡಗಳಿಂದಾಗಿ ಗ್ರೂಪಿನಲ್ಲಿ ಮೊದಲಿನಷ್ಟು ಸಕ್ರಿಯನಾಗಿರಲು, ಚರ್ಚೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ವಿಷಾದ ಇದೆ.  ಯಾರಿಗೆಲ್ಲ ಸಾಧ್ಯವಿದೆಯೋ, ಅವಕಾಶವಿದೆಯೋ ಎಲ್ಲರೂ ಗ್ರೂಪಿನಲ್ಲಿ ಸಕ್ರಿಯರಾಗಿರಿ ಅಂತ ಹಾರೈಸುತ್ತೇನೆ.

ಗ್ರೂಪಿನ ಬೆಳವಣಿಗೆಗೆ ಸಹಯೋಗ ನೀಡಿದ ಎಲ್ಲರಿಗೂ ಧನ್ಯವಾದಗಳು.

-ಕೃಷ್ಣಮೋಹನ.


******************************************************************************


ಮುಂಜಾನೆಯ ಶುಭಾಶಯಗಳು ಗೆಳೆಯರೇ..


ಈ ಗುಂಪು create ಆಗಿ 2 ವರ್ಷ ಕಳೆಯಿತ ಅನ್ನಿಸ್ತಾ ಇದೆ.ನಾವೆಲ್ಲರೊ 20 ವರ್ಷ ಬಿಟ್ಟು ಜೊತೆಯಗಲು ಈ ನಮ್ಮ ಈಗಿನ ತಂತ್ರಜ್ಞಾನ watsap ಕಾರಣ😊👍🏻.ಈ ಗುಂಪಿನಲ್ಲಿ ನಾವು ಕಾಲೇಜು ಮಕ್ಕಳಂತೆ ವರ್ತಿಸುತ್ತಿದ್ದೇವೆ.😊👍🏻.

ಎಲ್ಲೂ ಇದ್ದ ನಾವುಗಳು ಇವತ್ತು ಪರಸ್ಪರ ಭೇಟಿಯಾಗಲು ಈ ಗುಂಪು ತುಂಬಾ ಆಧಾರವಾಯಿತು.😊👍🏻

ಮಗದೊಮ್ಮೆ ಈ ಗ್ರೂಪ್ create ಮಾಡಿದ KM /FAROOK ಗೆ ಹೃತ್ಪೂರ್ವಕ ವಂದನೆ ಸಲ್ಲಿಸುತ್ತಾ ಈ ಗುಂಪು ಇದೇ ರೀತಿ ಇನ್ನು 25/30 ವರುಷಗಳು ಜೀವನ ಪರ್ಯಂತ ಉಳಿಯಲಿ ಹಾಗೂ ಇದಕ್ಕೆ ನಮ್ಮೆಲ್ಲರ ಕೊಡುಗೆನೂ ಇರಲಿ ಎಂದು ಹಾರೈಸುತ್ತಿದ್ದೇನೆ.😊🙏

ಸುಶೀಲ್ ಕುಮಾರ್

Bcom B

 ******************************************************************************


ನಮ್ಮೆಲ್ಲಾ ಸಹಪಾಠಿಗಳಿಗೆ ಸಮೂಹದ ಎರಡನೇ ವಾರ್ಷಿಕ ಸಂಭ್ರಮಾಚರಣೆಯ ದಿನದ ಶುಭಾಶಯಗಳು ...💐

 ಒಂದೆರಡು ದಿನಗಳ ಹಿಂದೆಯೇ ಸಮೂಹದಲ್ಲಿ ಎರಡು ವರುಷಗಳು ತುಂಬಿದ ಸುದ್ದಿಯನ್ನು ವಿಡಿಯೋ ಮುಖಾಂತರ ಬಿತ್ತರಿಸಿ ಪಾವನ ನೆನಪಿಸುವ ಕಾರ್ಯವ ಮಾಡಿದರೆ 

,ಇಂದು ಆಡ್ಮಿನ್ ಗಳು ತಮ್ಮ ಬರಹಗಳ ಮೂಲಕ ಹಾಗೂ ಸ್ನೇಹಿತರೆಲ್ಲರೂ ಸೇರಿ ತಮ್ಮ ಮಾತುಗಳಲ್ಲಿ ಸ್ನೇಹದ  ಹಾಗೂ ಸಮೂಹ ಜವಾಬ್ದಾರಿಯ ಸವಿಯಾದ ನೆನಪುಗಳ ಬುತ್ತಿಯ ಬಿಚ್ಚಿಡುವ ಪರಿಯ ಓದಿ ಮನದಲ್ಲಿ ಸಂತೋಷವಾಗುತ್ತದೆ.

ಮುಂದಿನ ದಿನಗಳಲ್ಲೂ ಎಲ್ಲಾ ಮರೆತು ಲವಲವಿಕೆಯಿಂದ ಬೆರತು ಮಾತಾಡಿ ಖುಷಿಯಿಂದ ಇರೋಣ. 

ಅನೇಕಾನೇಕ ವಾರ್ಷಿಕ ದಿನಗಳನ್ನು ಒಟ್ಟಾಗಿ ಆಚರಿಸುವ ದಿನಗಳು ನಮ್ಮ ಸಮೂಹಕ್ಕೆ ಇರಲಿ ಎಂದು ಬಯಸುತ್ತಾ  ಮಗದೊಮ್ಮೆ ಎಲ್ಲರಿಗೂ ಶುಭಾಶಯಗಳು.. ಶುಭವಾಗಲಿ 💐💐🙏

-ಭಾಗೀರಥಿ 


*****************************************************************************


UCM-2K(B.com) ಗ್ರೂಪ್ ಎರಡು ವರ್ಷ ಕಳೆದು ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಈ ಸಂಧರ್ಭದಲ್ಲಿ ಸಹಕರಿಸಿದ  ಎಲ್ಲಾ ಸಹಪಾಠಿ ಶುಭಾಶಯಗಳು💐💐

ಮುಂದೆಯೂ ಇದೇ ರೀತಿ ಸೌಹಾರ್ದತೆ  ಇಂದ ಎಂದು ಅಶಿಸುವೆ💥💫


-ವನಿತಾ ಮುಂಬೈ 


****************************************************************************



ಆತ್ಮೀಯ ಸಹಪಾಠಿಗಳೇ🙏 


ಇಂದು ನಮ್ಮ ಗುಂಪಿಗೆ ಎರಡು ವರುಷ ತುಂಬಿದ ಹರುಷ.  ಮೊನ್ನೆ ಮೊನ್ನೆ ಆರಂಭಿಸಿದ ಈ ಗುಂಪಿಗೆ ಎರಡು  ವರ್ಷ ತುಂಬಿದ್ದು ಕನಸಿನಂತೆ ಭಾಸವಾಗುತ್ತಿದೆ.  ಎಲ್ಲೆಲ್ಲೋ ಹಂಚಿ ಹೋಗಿದ್ದ ನಾವೆಲ್ಲಾ ಈ ಗುಂಪಿನ ಮೂಲಕ ಒಂದು ಸೇರಿದ್ದು ಪವಾಡವೇ ಸರಿ. ಈ ಗುಂಪಿನ ಮೂಲಕ ಯಶಸ್ವಿಯಾಗಿ  ಒಂದು ಸಮ್ಮಿಲನ, ಒಂದು ಪಿಕ್ನಿಕ್ , ಒಂದು ಬೀಳ್ಕೊಡುಗೆ ಸಮಾರಂಭ, ನಡೆದಿದೆ. ಸಹಪಾಠಿಗಳು ಪರಸ್ಪರ ಅರಿಯಲು ಸೇರಲು ಕಷ್ಟ ಸುಖ ಮಾತಾಡಿಕೊಳ್ಳಲು ಅವಕಾಶ ಒದಗಿದೆ.  ನಮ್ಮ ಕಾಲೇಜಿಗೆ, ಅಲ್ಲಿನ ಬಡ  ವಿದ್ಯಾರ್ಥಿಗಳಿಗೆ ನಮ್ಮಿಂದ ಸಹಾಯ ಮಾಡಲು ಸಾಧ್ಯವಾಗಿದೆ  ಎಂಬುದೇ ಸಂತೋಷದ ಸಂಗತಿ. 


ಕೃಷ್ಣ ಮೋಹನ ಈ ದಿನದ  ಮೊತ್ತ ಮೊದಲಿನ ಸಂದೇಶದಲ್ಲಿ  ಹೇಳಿದಂತೆ ಗುಂಪಿನ ಆರಂಭಕ್ಕೆ ಅಡ್ಮಿನ್ ಗಳು ನಿಮಿತ್ತವಾದರೂ ಇದರ ನೆಲೆ ನಿಲ್ಲುವಿಕೆಯಲ್ಲಿ ನಿಮ್ಮೆಲ್ಲರ ಪ್ರಾಮಾಣಿಕತೆ , ಪ್ರೀತಿ,ಅಭಿಮಾನದ ಪಾತ್ರವಿದೆ. ನಮ್ಮ ಕಾರ್ಯ ಚಟುವಟಿಗಳ ಬಗ್ಗೆ ನೆನೆಪಿಸಿ ಕೊಳ್ಳಲು ಅಥವಾ ನೆನಪಾದಾಗ ನೋಡಲು  ಬ್ಲಾಗ್ ಯು ಟ್ಯೂಬ್ ಚಾನೆಲ್  ತಯಾರಾಗಿ ನಿಂತಿದೆ.  


೨೧ ವರ್ಷಗಳ ಹಿಂದೆ ಸಹಪಾಠಿ ಸ್ನೇಹಿತರಾಗಿದ್ದ ನಾವೆಲ್ಲಾ ಈಗ ಒಂದು ಕುಟುಂಬದಂತೆ ಒಂದಾಗಿದ್ದೇವೆ . ಈ ಸ್ನೇಹ ಸಂಬಂಧ ನಿರಂತರ ಮುಂದುವರಿಯಲಿ. 


ಹಾರ್ದಿಕ ಶುಭಾಶಯಗಳು 💐🤝


--ಫಾರೂಖ್ 


Post a Comment

0 Comments