ಬಂದ ಆ ಕರೆ ಯಾರದ್ದು...?!!!!!
ಬೆಳಗ್ಗೆ ಕೋಳಿ ಕೂಗಿದ ತಕ್ಷಣ ಎದ್ದ ನಾರಾಯಣರು ಇಷ್ಟ ದೇವರಿಗೆ ಕೈ ಮುಗಿದರು.
ಬಳಿಕ ಹಟ್ಟಿಗೆ ಹೋಗಿ, ತಾನು ಸಾಕಿದ ಕೋಣಗಳ ಜೋಡಿಗಳ ಮೈದಡವಿ ಒಂದಿಷ್ಟು ಹುಲ್ಲು ಹಾಕಿ ಕುಡಿಯಲು ಅಕ್ಕಚ್ಚು ಇರಿಸಿ ಬಂದರು. ಅಷ್ಟುಹೊತ್ತಿಗಾಗಲೇ ಅವರ ಧರ್ಮಪತ್ನಿ ಮಾಡಿಟ್ಟ ಬಿಸಿ ಬಿಸಿ ಕಷಾಯ ಹಾಗೂ ಹಲಸಿನ ಹಣ್ಣಿನ ಗಟ್ಟಿ ಅವರ ದಾರಿ ಕಾಯುತ್ತಿತ್ತು.... ನಾಲ್ಕು ಗಟ್ಟಿ ಹಾಗೂ ಎರಡು ಚೊಂಬು ಕಷಾಯ ಕುಡಿದು ತೋಟದತ್ತ ತಿರುಗಾಡಲು ಹೊರಟರು ನಾರಾಯಣರು ...
ತೋಟವೆಂದರೆ ಸಾಮಾನ್ಯದ್ದಲ್ಲ ಸುಮಾರು 20 ಎಕರೆಯ ವಿಶಾಲ ತೋಟ. ವಿಧ ವಿಧದ ಹಲಸಿನ ಮರಗಳು, ಸಾಕಷ್ಟು ನೆರಳು ಹಾಗೂ ಹರಡಿದ ಹಲವು ವಯೋಮಾನದ ಮರಗಳು. ಸಾಕಷ್ಟು ಫಸಲು ಕೊಡುತ್ತಿದ್ದವು. ವಿಶ್ವದ ವಿವಿಧೆಡೆಯಿಂದ ಸ್ವಗ ನಾರಾಯಣರೇ ಆಯ್ದು ತದ ವಿವಿಧ ತಳಿಗಳ ಗಿಡಗಳು ಈಗ ಮರವಾಗಿ ಫಲ ನೀಡುತ್ತಿದ್ದವು. ಅದನ್ನು ನೋಡಿ ನಾರಾಯಣರ ಕಣ್ಣಿನಿಂದ ಆನಂದ ಬಾಷ್ಪ ಸುರಿಯುತ್ತಿತ್ತು...
ಪ್ರತಿದಿನ ಅವರ ಮನೆಯಲ್ಲಿ ಹಲಸಿನ ಏನಾದರೂ ತಿಂಡಿ ಇರಲೇಬೇಕು. ಹಸಲಿನ ಹಣ್ಣಿನ ಗಟ್ಟಿ, ಪಾಯಸ, ಚಿಪ್ಸು, ಪಲ್ಯ, ಗಸಿ ಹೀಗೆ... ಏನಾದರೂ ಪದಾರ್ಥ ಇದ್ದೇ ಇರುತ್ತಿತ್ತು...ಮಧ್ಯಾಹ್ನ ತೋಟ ತಿರುಗಿ ಬಂದ ಬಳಿಕ ಸಣ್ಣ ನಿದ್ರೆಗೆಂದು ಆರಾಮ ಖುರ್ಚಿಯಲ್ಲಿ ನಾರಾಯಣರು ಪವಡಿಸಿದ್ದರು. ಆಗ ಅವರ ಲ್ಯಾಂಡ್ ಲೈನ್ ರಿಂಗಾಯಿತು.
ಹಲೋ... ಅತ್ತಲಿನಿಂದ ಒಂದು ಧ್ವನಿ ಕೇಳಿಸಿತು...
ಇದು ನಾರಾಯಣರಲ್ವ....
ಹೌದು... ಗಡಸು ದನಿಯಲ್ಲಿ ಉತ್ತರಿಸಿದರು ನಾರಾಯಣರು ..
ನಾನು ಭಗೀರಥ ಅಂತ ಕುತ್ತಾರುಪದವಿನಿಂದ... ಎಲ್ಲಾ ಕಡೆ ನಿಮ್ಮದೇ ಹೆಸರು ರಾರಾಜಿಸುತ್ತಿದೆ.. ಅಸಲಿಗೆ ನೀವು ಯಾರು... ನಿಜ ಹೇಳಿ...
ಆ ಧ್ವನಿ ಕೇಳಿದ ತಕ್ಷಣ ನಾರಾಯಣರ ಮೈ ಕಂಪಿಸಲು ಆರಂಭಿಸಿತು... ಕಣ್ಣು ಕೆಂಪಾಯಿತು... ಮುಷ್ಟಿ ಬಿಗಿಯಾಗತೊಡಗಿತು... ರಿಸೀವರ್ ಹಿಡಿದೇ ಧಡಕ್ಕನೆ ಎದ್ದು ನಿಂತರು ನಾರಾಯಣರು ...
ಮುಂದೇನಾಯಿತು....???
🚶♂️🚶♂️🚶♂️🚶♂️
(ಸಶೇಷ)
- ಕೆಎಂ.
1 Comments
😀
ReplyDelete